ಅಂಕಣಗಳು

ವಿಶ್ವ ಸಿನಿಮಾ ರಂಗ, ಸಿನಿಮಾ ವಿಶ್ವದ ಗೊಂದಲ, ಗೋಜಲುಗಳು

ಬಾ.ನಾ.ಸುಬ್ರಹ್ಮಣ್ಯ 

ಕಳೆದ ವರ್ಷ ತಮಿಳು ಚಿತ್ರ ನಿರ್ಮಾಪಕರ ಸಂಘ ಭಾರೀ ನಿರ್ಧಾರವೊಂದನ್ನು ಪ್ರಕಟಿಸಿತ್ತು. ಅದೆಂದರೆ, ೨೦೨೪ರ ನವೆಂಬರ್ ತಿಂಗಳ ೧ನೇ ತಾರೀಖಿನಿಂದ ಹೊಸ ತಮಿಳು ಚಿತ್ರಗಳ ನಿರ್ಮಾಣ ಇಲ್ಲ, ಹಿಂದಿನ ಒಪ್ಪಂದಗಳನ್ನು ಜನಪ್ರಿಯ ನಟರು ಪೂರೈಸಬೇಕು, ಸಂಭಾವನೆ ಕಡಿಮೆ ಮಾಡಿಕೊಳ್ಳಬೇಕು, ಇವೇ ಮೊದಲಾದ ಷರತ್ತುಗಳು ಅಲ್ಲಿದ್ದವು. ಹಾಗಂತ ತಮಿಳು ಚಿತ್ರೋದ್ಯಮ ಬಂದ್ ಆಗಿಲ್ಲ ಎನ್ನುವುದು ಬೇರೆ ಮಾತು. ಇದೀಗ ಇದೇ ಮಾದರಿಯ ನಿರ್ಧಾರದ ಪ್ರಕಟಣೆ ಕೇರಳದಿಂದ ಆಗಿದೆ. ಅಲ್ಲಿನ ನಿರ್ಮಾಪಕರ ಸಂಘಟನೆ, ಜೂನ್ ಒಂದರಿಂದ ಮಲಯಾಳ ಚಿತ್ರೋದ್ಯಮದಲ್ಲಿ ನಿರ್ಮಾಣ ಕಾರ್ಯವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ನಿರ್ಧಾರ ಮಾಡಿದೆ. ಅದಕ್ಕೆ ಅದರದೇ ಆದ ಕಾರಣಗಳನ್ನೂ ಅದು ಹೇಳಿದೆ. ೨೦೨೪ರಲ್ಲಿ ತೆರೆಕಂಡ ಮಲಯಾಳ ಚಿತ್ರಗಳಲ್ಲಿ ಗೆದ್ದವು ಕಡಿಮೆ. ಮಲಯಾಳ ಎಂದಲ್ಲ, ವಿಶ್ವದ ಯಾವುದೇ ದೇಶದ, ಭಾಷೆಯ ಚಿತ್ರರಂಗವನ್ನು ಕೇಳಿದರೂ ಬಹುಶಃ ಇದೇ ಉತ್ತರ ಸಿಗುತ್ತದೆ.

ಪ್ರಸ್ತುತ ಮನರಂಜನೋದ್ಯಮ ಡಿಜಿಟಲ್ ದಿನಗಳ ನಂತರ ಹಲವು ಟಿಸಿಲುಗಳ ಮೂಲಕ ವಿಸ್ತರಿಸಿಕೊಂಡಿದೆ. ಚಿತ್ರಮಂದಿರಗಳಿಗೆ ಬಂದು ಚಿತ್ರಗಳನ್ನು ನೋಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಆದರೆ ಇದನ್ನು ಒಪ್ಪಲು ಉದ್ಯಮ ತಯಾರಿಲ್ಲ. ಕಿರುತೆರೆಯ ಆಗಮನವಾಗುತ್ತಲೇ, ನಡುಮನೆಯಲ್ಲೇ ಮನರಂಜನೆ ಸಿಗಲು ಆರಂಭವಾದ ನಂತರ ಮಹಿಳಾ ಪ್ರೇಕ್ಷಕರು ಅಲ್ಲಿಗೇ ಅತುಕೊಂಡದ್ದು ಎಲ್ಲರಿಗೂ ಗೊತ್ತು. ಮನೆಯೊಳಗೇ ಚಿತ್ರಮಂದಿರಗಳ ಅನುಭವ ನೀಡುವ ಹೋಂ ಥಿಯೇಟರ್ ಕಲ್ಪನೆ, ಒಟಿಟಿ ಮೂಲಕ ತಮಗೆ ಬೇಕಾದ, ತಮ್ಮ ಅಭಿರುಚಿಯ ಕಾರ್ಯಕ್ರಮಗಳನ್ನು ನೋಡುವ ಅವಕಾಶ ಇವೆಲ್ಲವೂ, ಚಿತ್ರ ನಿರ್ಮಾಪಕರಿಗೆ ಅನುಕೂಲಕ್ಕಿಂತ ನಷ್ಟದ ಬಾಬತ್ತಾದದ್ದು ಹೌದು. ಆದರೆ ಇದನ್ನು ಉದ್ಯಮದ ಮಂದಿ ನೇರವಾಗಿ ಸ್ವೀಕರಿಸಲಾರರು. ಹೊಸದಾಗಿ ಅಂಟಿಕೊಂಡ ರೀಲ್ಸ್, ಟ್ರೋಲ್‌ಗಳ ಚಾಳಿಯಂತೂ ಸಿನಿಮಂದಿಯ ಪಾಲಿಗೆ ಬಿಸಿತುಪ್ಪ.

ಮಲಯಾಳ ಚಿತ್ರರಂಗದ ನಿರ್ಧಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಅಲ್ಲಿ ಕಳೆದ ವರ್ಷ ಬಿಡುಗಡೆಯಾದ ಚಿತ್ರಗಳ ಬಂಡವಾಳ ಒಂದು ಸಾವಿರ ಕೋಟಿ ರೂ.ಗಳಷ್ಟು; ಅದರಲ್ಲಿ ಮುನ್ನೂರು ಕೋಟಿ ರೂ. ಗಳಿಕೆ ಆಗಿದೆ. ಏಳು ನೂರು ಕೋಟಿ ರೂ. ನಷ್ಟ ಕಳೆದ ವರ್ಷ ಮಲಯಾಳ ಚಿತ್ರರಂಗಕ್ಕೆ ಆಗಿದೆ. ಅಲ್ಲೂ ತಾರೆಯರ ಸಂಭಾವನೆ ಹೆಚ್ಚು; ಚಿತ್ರನಿರ್ಮಾಣದ ಒಟ್ಟು ವೆಚ್ಚದ ಪ್ರತಿಶತ ಐವತ್ತಕ್ಕಿಂತ ಹೆಚ್ಚು ಮುಖ್ಯಪಾತ್ರಧಾರಿಯ ಸಂಭಾವನೆ ಇರುತ್ತದೆ ಎನ್ನುತ್ತದೆ ಸಂಘಟನೆ. ಅವರು ಸಂಭಾವನೆ ಇಳಿಸಬೇಕು ಎನ್ನುವ ಒತ್ತಾಯ. ಜೊತೆಗೆ ಜಿಎಸ್‌ಟಿ ಕೂಡ ಅಽಕ. ಈ ಹಿನ್ನೆಲೆಯಲ್ಲಿ ಉದ್ಯಮವನ್ನು ಸ್ಥಗಿತಗೊಳಿಸುವ ನಿರ್ಧಾರ. (ತಮಿಳು ಚಿತ್ರರಂಗ ಕಳೆದ ವರ್ಷ ಒಂದು ಸಾವಿರ ಕೋಟಿ ರೂ. ನಷ್ಟವಾಗಿದೆ ಎನ್ನುತ್ತಿದೆ). ಕಳೆದ ವರ್ಷ, ಮಲಯಾಳದಲ್ಲಿ ಸಾಕಷ್ಟು ಒಳ್ಳೆಯ ಚಿತ್ರಗಳು ತಯಾರಾಗಿ ತೆರೆಕಂಡಿದ್ದವು. ಇತರ ಭಾರತೀಯ ಭಾಷಾ ಚಿತ್ರರಂಗಗಳಿಗಿಂತ ಹೆಚ್ಚು ಒಳ್ಳೆಯ ಚಿತ್ರಗಳನ್ನು ನೀಡಿದ ಖ್ಯಾತಿ ಅದರದ್ದಾಗಿತ್ತು. ಹೀಗಿದ್ದೂ ಅಲ್ಲಿನ ಪರಿಸ್ಥಿತಿ ಇದು.

ಅದಷ್ಟೇ ಅಲ್ಲ, ಒಟಿಟಿ ತಾಣಗಳಲ್ಲಿ ಮಲಯಾಳ ಚಿತ್ರಗಳ ವ್ಯವಹಾರ ಸಾಕಷ್ಟು ಆಗುತ್ತಿಲ್ಲ. ಅಲ್ಲೊಂದು, ಇಲ್ಲೊಂದು ಚಿತ್ರಗಳು ಗೆಲ್ಲುತ್ತವೆ, ಒಟಿಟಿಯಲ್ಲಿ ಅಂತಹ ಚಿತ್ರಗಳುಬೇಡಿಕೆಯಲ್ಲಿ ಇರುತ್ತವೆ. ಆದರೆ ಇಡೀ ಉದ್ಯಮದ ದೃಷ್ಟಿಯಿಂದ ಈ ತಾಣಗಳು ನೆರವಾಗುತ್ತಿಲ್ಲ ಎನ್ನುವ ಆರೋಪ, ಮಲಯಾಳ ಚಿತ್ರರಂಗದ್ದು ಮಾತ್ರವಲ್ಲ, ಇತರ ಭಾರತೀಯ ಭಾಷೆಗಳದೂ ಹೌದು. ಒಟಿಟಿ ತಾಣಗಳಲ್ಲಿ ಸಿನಿಮಾ ಮಾತ್ರವಲ್ಲದೆ, ರಿಯಾಲಿಟಿ ಶೋಗಳು, ವೆಬ್ ಸರಣಿಗಳೇ ಮೊದಲಾದ ಇತರ ಕಾರ್ಯಕ್ರಮಗಳು ಹೆಚ್ಚು ಜನಪ್ರಿಯವಾಗಿವೆ; ಹೆಚ್ಚು ಹೆಚ್ಚು ಮಂದಿ ವೀಕ್ಷಕರನ್ನು ಅವು ಸೆಳೆಯುತ್ತವೆ.

ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಬರುವಂತೆ ಮಾಡಲು ಜನಪ್ರಿಯ ನಟರ ಚಿತ್ರಗಳು ಬೇಕು ಎನ್ನುವುದು ಚಿತ್ರೋದ್ಯಮಿಗಳ ಅಂಬೋಣ. ಯಾರು ನಟಿಸುತ್ತಾರೆ ಎನ್ನುವುದಕ್ಕಿಂತ ಎಂತಹ ಚಿತ್ರಗಳನ್ನು ನೀಡುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಜನಪ್ರಿಯ ನಟರು ನಟಿಸಿ ತೆರೆಕಂಡ ಎಲ್ಲ ಚಿತ್ರಗಳೂ ಗೆಲ್ಲುವುದು ಅಪರೂಪ. ಚಿತ್ರ ಗೆಲ್ಲಲಿ, ಗೆಲ್ಲದೆ ಇರಲಿ, ಅದು ತೆರೆಕಂಡ ಮೂರನೇ ದಿನವೇ ಅದು ಗೆದ್ದಿದೆ ಎಂದು ಸಂತೋಷಕೂಟ ನಡೆಸುವ ಹೊಸ ಸಂಪ್ರದಾಯ ಕನ್ನಡ ಚಿತ್ರರಂಗದಲ್ಲಿ ಆರಂಭವಾಗಿದೆ. ಮೊದಲೆಲ್ಲ, ಚಿತ್ರ ತೆರೆಕಂಡು ಯಶಸ್ವಿಯಾಗಿ ನೂರು ದಿನ ಪ್ರದರ್ಶನ ಕಂಡಾಗ ಶತಮಾನೋತ್ಸವ ನಡೆಸುವುದಿತ್ತು. ಈಗ ನೂರು ದಿನಗಳ ಮಾತಿರಲಿ, ಕೆಲವು ಅಪವಾದಗಳನ್ನು ಹೊರತುಪಡಿಸಿದರೆ, ಮೂರು ದಿನ ಪ್ರದರ್ಶನ ಕಾಣುವುದೂ ಅಪರೂಪ; ಮೂರೇ ಪ್ರದರ್ಶನಗಳಿಗೆ ಸೀಮಿತವಾಗುವುದೂ ಇದೆ! ಜೂನ್ ವೇಳೆಗೆ ಮಲಯಾಳ ಚಿತ್ರರಂಗದ ನಿರ್ಧಾರ ಬದಲಾದರೂ ಆಗಬಹುದು.

ಉಳಿದ ಚಿತ್ರೋದ್ಯಮಗಳ ಮಾತು ಒತ್ತಟ್ಟಿಗಿರಲಿ, ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ೧೬ನೇ ಆವೃತ್ತಿಯ ಸಿದ್ಧತೆ ಭರದಿಂದ ನಡೆದಿದೆ. ಮೊನ್ನೆ ಬುಧವಾರ ಸಿದ್ಧತೆಗಳ ಕುರಿತಂತೆ ವಿವರ ನೀಡುವ ಪತ್ರಿಕಾಗೋಷ್ಠಿ ಇತ್ತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಬಿ.ಬಿ.ಕಾವೇರಿ, ಆಯುಕ್ತ ಹೇಮಂತ ನಿಂಬಾಳ್ಕರ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಮತ್ತು ರಿಜಿಸ್ಟ್ರಾರ್ ಹಿಮಂತರಾಜು ಅವರು ಪತ್ರಿಕಾ ಗೋಷ್ಠಿಯಲ್ಲಿದ್ದರು. ಈಗಾಗಲೇ ಹೇಳಿದಂತೆ ‘ಸರ್ವ ಜನಾಂಗದ ಶಾಂತಿಯ ತೋಟ’ ಘೋಷವಾಕ್ಯದೊಂದಿಗೆ ನಡೆಯಲಿರುವ ಈ ಚಿತ್ರೋತ್ಸವದ ಏಷ್ಯನ್, ಭಾರತೀಯ ಮತ್ತು ಕನ್ನಡ ಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ಸ್ಪಽಸಲಿರುವ ಚಿತ್ರಗಳ ಆಯ್ಕೆಯೂ ಆಗಿದೆ. ‘ಯಾವುದೇ ಆಯ್ಕೆ ವಿವಾದಾತೀತ ಆಗಿರಲು ಸಾಧ್ಯವೇ ಇಲ್ಲ’ – ಇದು ಸಾರ್ವತ್ರಿಕ ಮಾತು. ಅವರವರ ಭಾವಕ್ಕೆ, ಅವರವರ ಭಕುತಿಗೆ ಆಯ್ಕೆಗಳ ಕುರಿತಂತೆ ಪ್ರತಿಕ್ರಿಯೆಗಳಿರುತ್ತವೆ. ಹಾಗಂತ ಆಯ್ಕೆಗಳು ಟೀಕೆಗೆ ಅತೀತ ಎಂದೇನಲ್ಲ. ಢಾಳಾಗಿ ಕಾಣುವ ಕೊರತೆಗಳೂ ಇರುತ್ತವೆನ್ನಿ. ಆಯ್ಕೆಯ ಕುರಿತ ವಿವಾದ ಅದು ಇಲ್ಲಿನ ಆಯ್ಕೆಗೆ ಮಾತ್ರ ಸೀಮಿತವಲ್ಲ, ರಾಷ್ಟ್ರೀಯ, ರಾಜ್ಯ ಪ್ರಶಸ್ತಿಗಳ ಆಯ್ಕೆಗೂ ಇದು ಹೊರತಲ್ಲ. ಇತ್ತೀಚೆಗೆ ೨೦೧೯ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ ಆದಾಗ ಅಲ್ಲೂ ಸಾಕಷ್ಟು ಪರ-ವಿರೋಧ ಪ್ರತಿಕ್ರಿಯೆಗಳಿದ್ದವು.

ಯಾವುದೇ ಆಯ್ಕೆಗೆ ಸಮಿತಿಯನ್ನು ರಚಿಸಿದಾಗ ಅದರ ವ್ಯಾಪ್ತಿ, ಉದ್ದೇಶ ಮತ್ತು ನಿಯಮಾವಳಿಗಳ ಕುರಿತ ವಿವರಗಳನ್ನು ಸದಸ್ಯರಿಗೆ ತಿಳಿಹೇಳುವ ಕೆಲಸ ಆಗಬೇಕು. ಚಿತ್ರರಂಗದಲ್ಲಿ ಯಾವುದೋ ವಿಭಾಗದಲ್ಲಿ ಕೆಲಸ ಮಾಡುವ ಮಂದಿಯನ್ನು ಇಂತಹ ಸಮಿತಿಗೆ ನಾಮಕರಣ ಮಾಡುವುದು ತಪ್ಪೇನಲ್ಲ, ಆದರೆ ಆಯ್ಕೆಯ ವೇಳೆ ಅವರ ಜವಾಬ್ದಾರಿಯ ಕುರಿತಂತೆ ತಿಳಿವಳಿಕೆ ನೀಡಬೇಕು. ಆದರೆ ಅಂತಹ ಪ್ರಕ್ರಿಯೆ ಇಲ್ಲಿಲ್ಲ.

ಈ ಬಾರಿ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸ್ಪರ್ಧಿಸಲು ೧೩೦ಕ್ಕೂ ಹೆಚ್ಚು ಕನ್ನಡ ಚಿತ್ರಗಳು ಕನ್ನಡದಲ್ಲೇ ಇದ್ದವು. ಅವುಗಳಲ್ಲಿ ಮನೋಹರ್‌ರ ‘ಮಿಕ್ಕ ಬಣ್ಣದ ಹಕ್ಕಿ’, ಮಹದೇವ ಹಡಪದರ ‘ಪರಜ್ಯ’, ಗುರುರಾಜ್‌ರ ‘ಕೆರೆಬೇಟೆ’, ಸೆಬಾಸ್ಟಿನ್ ಡೇವಿಡ್‌ರ ‘ಬೇಲಿ ಹೂ’, ದಯಾನಂದ್ ಜಿ ಅವರ ‘ದಡ ಸೇರದ ದೋಣಿ’, ನವೀನ್ ದೇಸಬೋಯಿನರ ‘ಅಂತಿಮ ಯಾತ್ರೆ’, ಅನೀಶ್ ಪೂಜಾರಿಯವರ ‘ದಸ್ಕತ್’ (ತುಳು), ಕೃಷ್ಣೇಗೌಡರ ‘ಲಚ್ಚಿ’, ಪ್ರಕಾಶ್ ಕಾರ್ಯಪ್ಪರ ‘ಕಾಂಗತ ಮೂಡ್’ (ಕೊಡವ), ಸಂತೋಷ್ ಮಾಡ ಅವರ ‘ಪಿದಾಯಿ’(ತುಳು), ನಾಗರಾಜ ಸೋಮಯಾಜಿಯವರ ‘ಮರ್ಯಾದೆ ಪ್ರಶ್ನೆ’, ಪುಷ್ಪರಾಜ ರೈ ಅವರ ‘ಆರಾಟ’, ಸಾಗರ್ ಪುರಾಣಿಕರ ‘ವೆಂಕ್ಯ’ ಮತ್ತು ಅವಿನಾಶ್ ವಿಜಯಕುಮಾರ್‌ರ ‘ಮೈ ಹೀರೋ’ ಕನ್ನಡ ಸ್ಪರ್ಧೆಗೆ ಆಯ್ಕೆಯಾಗಿವೆ. ‘ಬೇಲಿ ಹೂ’ ಮತ್ತು ‘ಪಿದಾಯಿ’ ಚಿತ್ರಗಳು ಇತರ ಭಾರತೀಯ ಚಿತ್ರಗಳ ಜೊತೆ ಕೂಡ ಸ್ಪರ್ಧಿಸಲಿವೆ.

ದೇಶ ಕೇಂದ್ರಿತ ಚಿತ್ರಗಳಲ್ಲಿ ಜಾರ್ಜಿಯಾ ಮತ್ತು ಬ್ರೆಜಿಲ್ ದೇಶಗಳ ಚಿತ್ರಗಳಿದ್ದು, ಪುನರಾವಲೋಕನ ವಿಭಾಗದಲ್ಲಿ ಜರ್ಮನಿಯ ವಿಮ್ ವೆಂಡರ್ಸ್ ಮತ್ತು ಪೋಲೆಂಡ್‌ನ ಕ್ರಿಸ್ತಾಫ್ ಕಿಸ್ಲವ್‌ಸ್ಕಿ ಮತ್ತು ಭಾರತದ ಶ್ಯಾಮ್ ಬೆನಗಲ್ ಅವರ ಆಯ್ದ ಚಿತ್ರಗಳಿರುತ್ತವೆ. ಕನ್ನಡದ ‘ಘಟಶ್ರಾದ್ಧ’ ಮತ್ತು ‘ಪಲ್ಲವಿ’ ಹಾಗೂ ಇತರ ಭಾಷೆಗಳ ಸಂರಕ್ಷಿಸಲ್ಪಟ್ಟ ಮಹಾನ್ ಚಿತ್ರಗಳು, ಭಾರತದ ಉಪಭಾಷಾ ಚಿತ್ರಗಳು, ಶತಮಾನೋತ್ಸವ ಸ್ಮರಣೆ, ಶ್ರದ್ಧಾಂಜಲಿ ವಿಭಾಗಗಳಲ್ಲಿ ಆಯ್ದ ಚಿತ್ರಗಳ ಪ್ರದರ್ಶನ ಮಾತ್ರವಲ್ಲದೆ ತಜ್ಞರ ಜೊತೆ ಸಂವಾದ, ಉಪನ್ಯಾಸ ಇತ್ಯಾದಿ ವಿವಿಧ ವಿಷಯಗಳ ಕುರಿತಂತೆ ನಡೆಯಲಿದೆ.

ಚಿತ್ರೋತ್ಸವ ಸಿದ್ಧತೆ ವೇಳೆ ಉದ್ಯಮದ ಎಲ್ಲ ಸಂಘಟನೆಗಳನ್ನೂ ಒಳಗೊಳ್ಳುವಂತೆ ನೋಡಿಕೊಳ್ಳಬೇಕು ಎನ್ನುವ ಒತ್ತಾಯ ಒಂದೆಡೆ, ಸಿನಿಮಾ ಮಾಧ್ಯಮದ ಕುರಿತಂತೆ ನಿರಾಸಕ್ತಿ ಇನ್ನೊಂದೆಡೆ, ಇದರ ನಡುವೆ ಚಿತ್ರೋತ್ಸವದ ಸಿದ್ಧತೆಯಂತೂ ಭರದಿಂದ ನಡೆದಿದೆ.

” ಮಾರ್ಚ್ ಒಂದರಂದು ವಿಧಾನಸೌಧದ ಬೃಹತ್ ಮೆಟ್ಟಲುಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಿತ್ರೋತ್ಸವವನ್ನು ಉದ್ಘಾಟಿಸಲಿದ್ದು, ಎಂಟರಂದು, ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಬಯಸುವವರು ಚಿತ್ರೋತ್ಸವದ ಜಾಲತಾಣ biffes.org ಗೆ ಹೋಗಿ ನೀತಿ ನಿಯಮಗಳನ್ನು ಅನುಸರಿಸಿ ಪ್ರತಿನಿಧಿ ನೋಂದಣಿ ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳಬಹುದು.”

ಆಂದೋಲನ ಡೆಸ್ಕ್

Recent Posts

ಉಪಟಳ ನೀಡುತ್ತಿದ್ದ ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಜನತೆ

ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…

2 hours ago

ಮೃಗಾಲಯದ ಬೇಟೆ ಚೀತಾ ‘ಬ್ರೂಕ್’ ಇನ್ನಿಲ್ಲ

ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…

3 hours ago

ಸಿಲಿಂಡರ್‌ ಸ್ಫೋಟ ಪ್ರಕರಣ : ತನಿಖೆ ತೀವ್ರ ; ಮೈಸೂರಲ್ಲಿ ಖಾಕಿ ಕಟ್ಟೆಚ್ಚರ

ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…

3 hours ago

ಎಚ್.ಡಿ.ಕೋಟೆ | ತಾಲ್ಲೂಕಿನ ಶೈಕ್ಷಣಿಕ ಪ್ರಗತಿಗೆ ಮಾದರಿ ಕಾರ್ಯಕ್ರಮ

ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…

3 hours ago

ಹೊಗೇನಕಲ್‌ ಜಲಪಾತಕ್ಕೆ ಪ್ರವಾಸಿಗರ ದಂಡು

ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…

3 hours ago

ಪುಷ್ಪ-2 ಕಾಲ್ತುಳಿತ ಪ್ರಕರಣ ; ವರ್ಷದ ಬಳಿಕ ಚಾರ್ಜ್‌ಶೀಟ್‌ ಸಲ್ಲಿಕೆ

ಹೈದರಾಬಾದ್‌ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…

3 hours ago