ಅಂಕಣಗಳು

ಚೀನಾ ಗಡಿ: ಒಂದು ಹೆಜ್ಜೆ ಮುಂದೆ ಮತ್ತಷ್ಟು ಬಲವಾದ ಬ್ರಿಕ್ಸ್‌

ಡಿ.ವಿ.ರಾಜಶೇಖರ

ಸಂಘರ್ಷಕ್ಕೆ ಕಾರಣವಾಗಿದ್ದ ಪೂರ್ವ ಲಡಾಕ್ ಗಡಿಯ ಕಾವಲು ವಿಚಾರದಲ್ಲಿ ಭಾರತ ಮತ್ತು ಚೀನಾ ಒಂದು ಒಪ್ಪಂದಕ್ಕೆ ಬಂದಿರುವುದು ಇತ್ತೀಚಿನ ಒಂದು ಮಹತ್ವದ ಬೆಳವಣಿಗೆ ಹಲವಾರು ತಿಂಗಳ ಕಾಲ ಭಾರತ ಮತ್ತು ಚೀನಾದ ಮಿಲಿಟರಿ ಅಧಿಕಾರಿಗಳು ಮತ್ತು ಪ್ರತಿನಿಧಿಗಳು ನಡೆಸುತ್ತ ಬಂದ ಮಾತುಕತೆಗಳ ಫಲವಾಗಿ ಪೂರ್ವ ಲಡಾಕ್‌ ಗಡಿಯಲ್ಲಿ ಭಾರತದ ಸೇನೆ 2020ಕ್ಕೆ ಮೊದಲು ಇದ್ದಂತೆ ಅಂದರೆ ಮತ್ತೆ ಕಾವಲು ಜವಾಬ್ದಾರಿ ಹೊತ್ತುಕೊಳ್ಳಲಿದೆ. 2020ರಲ್ಲಿ ಲಡಾಕ್‌ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20 ಸೈನಿಕರು ಮತ್ತು ಚೀನಾದ ನಾಲ್ವರು ಸೈನಿಕರು ಹುತಾತ್ಮರಾದ ಹಿನ್ನೆಲೆಯಲ್ಲಿ ಆಗಿರುವ ಈ ಒಪ್ಪಂದ ಎರಡೂ ದೇಶಗಳ ನಡುವಣ ಬಾಂಧವ್ಯ ಸುಧಾರಿಸುವ ಸಾಧ್ಯತೆಯನ್ನು ಹೆಚ್ಚಿಸಿದೆ.

ರಷ್ಯಾದ ಕಜಾನ್ ನಗರದಲ್ಲಿ ನಡೆದ ಬ್ರಿಕ್ಸ್‌ ಶೃಂಗಸಭೆಯ ಹೊರಗೆ ಚೀನಾ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾಗಿ ಪರಸ್ಪರ ಮಾತುಕತೆ ನಡೆಸಿರುವುದು ಮತ್ತು ಆ ಮಾತುಕತೆಯಲ್ಲಿ ಈ ಒಪ್ಪಂದವನ್ನು ಸ್ವಾಗತಿಸಿರುವುದು ಉಭಯ ದೇಶಗಳ ನಡುವಣ ಗಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ದಿಸೆಯಲ್ಲಿ ಉತ್ತಮ ವಾತಾವರಣ ನಿರ್ಮಿಸಲಿದೆ. ಕ್ಷಿ ಮತ್ತು ಮೋದಿ ಅವರು ಕಳೆದ ನಾಲ್ಕು ವರ್ಷಗಳಲ್ಲಿ ಹಲವು ಬಾರಿ ಭೇಟಿಯಾಗಿದ್ದರೂ ಉಭಯ ದೇಶಗಳ ನಡುವಣ ಸಮಸ್ಯೆಗಳನ್ನು ಚರ್ಚಿಸಿರಲಿಲ್ಲ. ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದ್ವಿಪಕ್ಷೀಯ ಮಾತುಕತೆ ನಡೆದು ಉಭಯ ದೇಶಗಳ ನಡುವಣ ಸಮಸ್ಯೆಗಳನ್ನು ರಾಜತಾಂತ್ರಿಕವಾಗಿ, ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ನಿರ್ಧರಿಸಲಾಗಿರುವುದು ಒಂದು ಪ್ರಮುಖ ಹೆಜ್ಜೆ.

ಸದ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ, ಭಾರತದ ಗಡಿಭದ್ರತಾ ಪಡೆಗಳು 2020ಕ್ಕೆ ಮುಂಚೆ ಹೇಗೆ ಪೂರ್ವ ಲಡಾಕ್‌ನ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಕಾವಲು ನಡೆಸುತ್ತಿದ್ದವೋ ಅದೇ ರೀತಿ ಮುಂದೆಯೂ ಕಾವಲು ನಡೆಸಲಿವೆ. ಇದಕ್ಕಿಂತ ಹೆಚ್ಚಿನ ಮಾಹಿತಿ ಬಹಿರಂಗ ಮಾಡಿಲ್ಲ. ಒಪ್ಪಂದ ಹೇಗೆ ಜಾರಿಗೊಳಿಸಬೇಕು ಎಂಬುದನ್ನು ಎರಡೂ ದೇಶಗಳ ಮಿಲಿಟರಿ ಅಧಿಕಾರಿಗಳು ಮತ್ತು ಪ್ರತಿನಿಧಿಗಳು ನಿರ್ಧರಿಸಲಿದ್ದಾರೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ. ಯಥಾಸ್ಥಿತಿ ಅಂದರೆ ಗಡಿ ಭದ್ರತಾ ಪಡೆಗಳು ಅಲ್ಲಿ ಕಾವಲು ಕಾಯುತ್ತವೆ ಎಂದರ್ಥ. ಅಂದರೆ ವಿವಾದ ಇದ್ದೇ ಇದೆ ಎಂದರ್ಥ. ಲಡಾಖ್‌ನ ಗಡಿ ಎಂದರೆ ಎಲ್ಲಿಯವರೆಗೆ ಎಂಬುದು ಸ್ಪಷ್ಟವಿಲ್ಲ. ಅಲ್ಲಿ ಎರಡೂ ಕಡೆಯಲ್ಲಿ 50ಸಾವಿರಕ್ಕೂ ಹೆಚ್ಚು ಸೈನಿಕರು ಬೀಡುಬಿಟ್ಟಿದ್ದಾರೆ. ಅವರೆಲ್ಲರೂ ಹಿಂದಕ್ಕೆ ಹೋಗುತ್ತಾರೋ ಅಥವಾ ಅಲ್ಲಿಯೇ ಗಡಿಯ ಆಚೆ-ಈಚೆ ಇರುತ್ತಾರೋ ತಿಳಿದಿಲ್ಲ. ಗಡಿಯಲ್ಲಿನ ಇತರ ವಿವಾದಗಳ ಬಗ್ಗೆಯೂ ಮಾಹಿತಿ ಇಲ್ಲ. ಹೀಗಾಗಿ ಈ ಒಪ್ಪಂದ ನಿಜವಾಗಿಯೂ ಚೀನಾ ಜೊತೆಗಿನ ಬಾಂಧವ್ಯವನ್ನು ಸುಧಾರಿಸಲುಕಾರಣವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಬ್ರಿಕ್ಸ್‌ಗೆ ಹೆಚ್ಚು ಬಲ: ರಷ್ಯಾವನ್ನು ಮೂಲೆಗುಂಪು ಮಾಡಲು ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ದೇಶಗಳು ಮತ್ತು ಯೂರೋಪ್ ಒಕ್ಕೂಟದ ಬಲಿಷ್ಠ ದೇಶಗಳು ಸತತವಾಗಿ ಪ್ರಯತ್ನಿಸುತ್ತ ಬಂದಿವೆ. ಆದರೆ ತಮ್ಮ ದೇಶವನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸುವಂತೆ ರಷ್ಯಾದ ಅಧ್ಯಕ್ಷ ವಾಡಮಿರ್ ಪುಟಿನ್ ಕಜಾನ್ ನಗರದಲ್ಲಿ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ದಕ್ಷಿಣ ಆಫ್ರಿಕಾದ ಒಕ್ಕೂಟ) ಶೃಂಗಸಭೆ ನಡೆಸಿದ್ದಾರೆ. ಬ್ರಿಕ್ಸ್ ಗುಂಪಿಗೆ ಈಗ ಇನ್ನೂ ಐದು ದೇಶಗಳು (ಯುಎಇ, ಈಜಿಪ್ಟ್, ಇರಾನ್, ಇಥಿಯೋಪಿಯಾ, ಸೌದಿ ಅರೇಬಿಯಾ) ಕಳೆದ ವರ್ಷ ಸೇರಿಕೊಂಡಿವೆ. ಸೌದಿ ಅರೇಬಿಯಾ ಇನ್ನೂ ಸದಸ್ಯತ್ವ ಪಡೆದುಕೊಂಡಿಲ್ಲ, ಆದರೆ ಆಹ್ವಾನಿತ ದೇಶವಾಗಿ ಸದ್ಯಕ್ಕೆ ಸಂಘಟನೆಯ ಭಾಗವಾಗಿದೆ. ಈ ವರ್ಷ ಆಕ್ಟೋರಿಯಾ, ಬೆಲರಸ್, ಬೊಲಿವಿಯಾ, ಕ್ಯೂಬಾ, ಮಲೇಷಿಯಾ, ಇಂಡೋನೇಷಿಯಾ, ಕಜಕಿಸ್ತಾನ್, ನೈಜೀರಿಯಾ, ಥಾಯ್‌ಲ್ಯಾಂಡ್, ಉಗಾಂಡಾ, ಉಜ್ಜೆಕಿಸ್ತಾನ್, ವಿಯಟ್ನಾಂ, ಟರ್ಕಿ ಸದಸ್ಯತ್ವ ಪಡೆದುಕೊಂಡಿವೆ. ಇನ್ನೂ ಮೂವತ್ತು ದೇಶಗಳು ಸದಸ್ಯರಾಗ ಬಯಸಿವೆ. ಜಗತ್ತಿನ ಒಟ್ಟು ಜನಸಂಖ್ಯೆಯ ಅರ್ಧಭಾಗ ಬ್ರಿಕ್ಸ್ ವ್ಯಾಪ್ತಿಗೆ ಬರಲಿದೆ. ಜಗತ್ತಿನ ಒಟ್ಟು ಆಂತರಿಕ ಉತ್ಪಾದನೆ ಶೇ.40 ಭಾಗ ಬ್ರಿಕ್ಸ್ ವ್ಯಾಪ್ತಿಗೆ ಬರುತ್ತದೆ. ವಿಶ್ವದ ಒಟ್ಟು ತೈಲ ಉತ್ಪಾದನೆಯ ಶೇ.80 ಭಾಗ ಈ ಬ್ರಿಕ್ಸ್ ದೇಶಗಳದ್ದಾಗಿದೆ.

ಅಮೆರಿಕ ನೇತೃತ್ವದ ಪಾಶ್ಚಾತ್ಯ ದೇಶಗಳ ಒಕ್ಕೂಟ ವಿಶ್ವ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ. ಅಭಿವೃದ್ಧಿ, ಶಾಂತಿ ಸ್ಥಾಪನೆ, ಹಸಿವು ನಿರ್ಮೂಲನೆ ಸಾಧ್ಯವಾಗುತ್ತಿಲ್ಲ. ದುರುದ್ದೇಶಗಳಿಂದ ಕೆಲವು ದೇಶಗಳ ಮೇಲೆ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಪಾಶ್ಚಾತ್ಯ ಒಕ್ಕೂಟ ರೂಪಿಸಿರುವ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಾದ ಐಎಂಎಫ್, ವಿಶ್ವಬ್ಯಾಂಕ್ ಮತ್ತಿತರ ಸಂಸ್ಥೆಗಳು ನಿರೀಕ್ಷಿಸಿದ ಪ್ರಮಾಣದಲ್ಲಿ ಬಡದೇಶಗಳಿಗೆ ನೆರವಾಗುತ್ತಿಲ್ಲ. ಶಾಂತಿ ಸ್ಥಾಪನೆಗೆ ನೆರವಾಗಬೇಕಾದ ನ್ಯಾಟೋ ವಿಸ್ತರಣೆ ಪ್ರಯತ್ನಗಳಿಂದಾಗಿ ಅಶಾಂತಿಗೆ ಕಾರಣವಾಗಿದೆ. ವಿಶ್ವಸಂಸ್ಥೆ ನಿಜವಾದ ವಿಶ್ವದ ಪ್ರಾತಿನಿಧಿಕ ಸಂಸ್ಥೆಯಂತೆ ಕೆಲಸಮಾಡಲು ಪಾಶ್ಚಾತ್ಯ ದೇಶಗಳು ಬಿಡುತ್ತಿಲ್ಲ. ಈ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬ್ರಿಕ್ಸ್ ಒಕ್ಕೂಟ ಪ್ರಯತ್ನಿಸಲಿದೆ ಎಂದು ಘೋಷಿಸಲಾಗಿದೆ. ಅಮೆರಿಕ ನೇತೃತ್ವದ ಪಾಶ್ಚಾತ್ಯ ಒಕ್ಕೂಟಕ್ಕೆ ಬ್ರಿಕ್ಸ್‌ ಪರ್ಯಾಯವೂ ಅಲ್ಲ, ಶತ್ರು ಒಕ್ಕೂಟವೂ ಅಲ್ಲ ಎಂಬ ಪ್ರಧಾನಿ ಮೋದಿ ಅವರ ಮಾತನ್ನು ರಷ್ಯಾ ಅಧ್ಯಕ್ಷ ಪುಟಿನ್‌ ಪುನರುಚ್ಛರಿಸಿದ್ದಾರೆ.

ಬ್ರಿಕ್ಸ್‌ನ ಆಶಯಗಳೇನೋ ಆದರ್ಶಪ್ರಾಯವಾಗಿವೆ. ಆದರೆ ಅದು ಯಾವುದೇ ಜಾಗತಿಕ ಸಮಸ್ಯೆಯನ್ನು ಕೈಗೆತ್ತಿಕೊಂಡು ಪರಿಹರಿಸುವ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿಲ್ಲ. ಗಾಜಾ ಮತ್ತು ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಆಕ್ರಮಣ ನಿಲ್ಲಬೇಕೆಂದು ಬ್ರಿಕ್ಸ್ ನಿರ್ಣಯ ಕರೆ ನೀಡಿದೆ. ಉಕ್ರೇನ್ ಯುದ್ಧ ಅಂತ್ಯವಾಗುವ ದಿಸೆಯಲ್ಲಿ ಸಂಧಾನ ನಡೆಯಬೇಕೆಂದು ಬ್ರಿಕ್ಸ್ ಶೃಂಗಸಭೆಯ ನಿರ್ಣಯ ಕರೆ ನೀಡಿದೆ. ವಿಶ್ವಸಂಸ್ಥೆ ನಿಜವಾದ ವಿಶ್ವಸಂಸ್ಥೆಯಾಗಬೇಕೆಂದು ಬ್ರಿಕ್ಸ್ ಬಯಸುತ್ತದೆ. ಭದ್ರತಾ ಮಂಡಳಿಯಲ್ಲಿ ಅಭಿವೃದ್ಧಿ ದೇಶಗಳಿಗೆ ಸ್ಥಾನ ಸಿಗುವಂತಾಗಲು ಸುಧಾರಣೆಗಳನ್ನು ತರಬೇಕೆಂದು ಕರೆ ನೀಡಲಾಗಿದೆ. ಬ್ರಿಕ್ಸ್ ಬ್ಯಾಂಕನ್ನು ಬಲಗೊಳಿಸುವ ದಿಸೆಯಲ್ಲಿ ಗಟ್ಟಿ ಪ್ರಯತ್ನಗಳು ಆರಂಭವಾಗಬೇಕೆಂದು ನಿರ್ಣಯ ಕರೆ ನೀಡಿದೆ.

ಬ್ರಿಕ್ಸ್ ಸಂಘಟನೆ ಮತ್ತಷ್ಟು ಬಲಗೊಳ್ಳುವ ಸೂಚನೆಗಳು ಈ ಶೃಂಗಸಭೆಯಲ್ಲಿ ಸ್ಪಷ್ಟವಾಗಿ ಕಂಡುಬಂದವು. ಆದರೆ ಡಾಲರ್‌ಗೆ ಪರ್ಯಾಯ ಕಂಡುಕೊಳ್ಳುವ ದಿಸೆಯಲ್ಲಿ ಶೃಂಗಸಭೆ ಯಶಸ್ವಿಯಾಗಿಲ್ಲ. ಡಾಲರ್ ಏಕಾಧಿಪತ್ಯವನ್ನು ಕೊನೆಗಾಣಿಸಬೇಕೆಂದು ಪುಟಿನ್ ಹೇಳಿದರಾದರೂ ಆ ವಿಚಾರದಲ್ಲಿ ಸದಸ್ಯ ದೇಶಗಳಲ್ಲಿ ಒಮ್ಮತ ಮೂಡಿದಂತಿಲ್ಲ. ಚೀನಾದ ಹುವಾನ್ ಕರೆನ್ಸಿಯನ್ನು ಡಾಲರ್‌ಗೆ ಪರ್ಯಾಯವಾಗಿ ಮಾಡುವ ತಮ್ಮ ಹಿಂದಿನ ಪ್ರಯತ್ನವನ್ನು ಚೀನಾ ಅಧ್ಯಕ್ಷಕ್ಷಿ ಕೈಬಿಟ್ಟಂತೆ ಕಾಣುತ್ತಿದೆ. ರಷ್ಯಾ ಸೇರಿದಂತೆ ಹಲವು ದೇಶಗಳು ಹುವಾನ್‌ ಕರೆನ್ಸಿ ಮಾಡುವುದಕ್ಕೆ ಸಮ್ಮತಿ ಸೂಚಿಸಿದರೂ ಭಾರತವೂ ಸೇರಿದಂತೆ ಪ್ರಮುಖ ದೇಶಗಳು ಏಕಾಏಕಿ ಡಾಲರ್ ಕೈಬಿಡುವುದಕ್ಕೆ ಒಪ್ಪಲಿಲ್ಲ ಎನ್ನಲಾಗಿದೆ. ಆಯಾ ದೇಶಗಳ ಕರೆನ್ಸಿಯಲ್ಲಿಯೇ ವಹಿವಾಟು ನಡೆಸಲು ಅನುವಾಗುವಂತೆ ವ್ಯವಸ್ಥೆ ರೂಪಿಸಬೇಕೆಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದ್ದಾರೆ. ಅಂಥ ವಹಿವಾಟು ಸಾಧ್ಯವಾಗುವಂತೆ ಭಾರತದಲ್ಲಿ ಬಳಕೆಯಲ್ಲಿರುವಂತೆ ಯುಪಿಐ (ಯುನೈಟೆಡ್ ಪೇಮೆಂಟ್ ಇಂಟರ್‌ ಫೇಸ್) ತಂತ್ರಜ್ಞಾನ ಬಳಸಬಹುದು ಎಂದೂ ಮೋದಿ ಅವರು ಸಲಹೆ ನೀಡಿದ್ದಾರೆ. ಈಗಾಗಲೇ ಯುಎಇ ಈ ತಂತ್ರಜ್ಞಾನ ಬಳಸುತ್ತಿದೆ ಎಂದೂ ಅವರು ಉದಾಹರಿಸಿದರು. ಆದರೆ ಈ ಬಗ್ಗೆ ಇನ್ನೂ ವಿವರವಾದ ಚರ್ಚೆ ನಡೆಯಬೇಕಿದ್ದು, ಬಹುಶಃ ಮುಂದಿನ ವರ್ಷ ಬ್ರೆಜಿಲ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಒಂದು ಅಂತಿಮ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ.

ಬ್ರಿಕ್ಸ್ ಸದ್ಯಕ್ಕೆ ಪ್ರಭಾವಶಾಲಿಯಾದ ಸಂಘಟನೆಯಾಗಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಅದೊಂದು ಬಲಿಷ್ಠ ಸಂಘಟನೆಯಾಗಿ ರೂಪುಗೊಳ್ಳುವ ಎಲ್ಲ ಸೂಚನೆಗಳಿವೆ.

ರಷ್ಯಾವನ್ನು ಮೂಲೆಗುಂಪು ಮಾಡಲು ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ದೇಶಗಳು ಮತ್ತು ಯೂರೋಪ್ ಒಕ್ಕೂಟದ ಬಲಿಷ್ಠ ದೇಶಗಳು ಸತತವಾಗಿ ಪ್ರಯತ್ನಿಸುತ್ತ ಬಂದಿವೆ. ಆದರೆ ತಮ್ಮ ದೇಶವನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ ದೇಶವನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ ಸ್ಪಷ್ಟವಾಗಿ ಕಂಡುಬಂದವು. ಆದರೆ ಡಾಲರ್‌ಗೆ ಪರ್ಯಾಯ ಕಂಡುಕೊಳ್ಳುವ
ಎಂಬುದನ್ನು ಸಾಬೀತುಪಡಿಸುವಂತೆ ರಷ್ಯಾದ ಅಧ್ಯಕ್ಷ ವ್ಲಾಡಮಿರ್‌ ಪುಟಿನ್‌ ಕಜಾನ್ ನಗರದಲ್ಲಿ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ದಕ್ಷಿಣ ಆಫ್ರಿಕಾದ ಒಕ್ಕೂಟ) ಶೃಂಗಸಭೆ ನಡೆಸಿದ್ದಾರೆ. ಬ್ರಿಕ್ಸ್ ಗುಂಪಿಗೆ ಈಗ ಇನ್ನೂ ಐದು ದೇಶಗಳು (ಯುಎಇ, ಈಜಿಪ್ಟ್, ಇರಾನ್, ಇಥಿಯೋಪಿಯಾ, ಸೌದಿ ಅರೇಬಿಯಾ) ಕಳೆದ ವರ್ಷ ಸೇರಿಕೊಂಡಿವೆ. ಸೌದಿ ಅರೇಬಿಯಾ
ಇನ್ನೂ ಸದಸ್ಯತ್ವ ಪಡೆದುಕೊಂಡಿಲ್ಲ, ಆದರೆ ಆಹ್ವಾನಿತ ದೇಶವಾಗಿ ಸದ್ಯಕ್ಕೆ ಸಂಘಟನೆಯ ಭಾಗವಾಗಿದೆ.

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ:  ಸಾಮಾಜಿಕ ಬಹಿಷ್ಕಾರಕ್ಕೆ ಜೈಲು ಶಿಕ್ಷೆ ಸ್ವಾಗತಾರ್ಹ

ಸಾಮಾಜಿಕ ಬಹಿಷ್ಕಾರ ಹಾಕಿದವರಿಗೆ ಜೈಲು ಶಿಕ್ಷೆ ಹಾಗೂ ಲಕ್ಷ ರೂ. ದಂಡವನ್ನು ವಿಧಿಸುವ ಮಸೂದೆಗೆ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ…

4 mins ago

ಓದುಗರ ಪತ್ರ: ಬಿಎಂಟಿಸಿ ಜನಹಿತ ಕಾಯಲಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆರ್ಥಿಕ ನಷ್ಟದಿಂದ ಹೊರಬರಲು ಬಸ್‌ಗಳ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಿದೆ. ಆದರೆ ಈ…

25 mins ago

ಓದುಗರ ಪತ್ರ: ಸಾರ್ವಜನಿಕ ಗ್ರಂಥಾಲಯದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಊಟಿ ರಸ್ತೆಯಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯ ಶಾಖೆಗೆ ಪ್ರತಿನಿತ್ಯ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಸ್ಪರ್ಧಾತ್ಮಕ…

28 mins ago

‘ಶಕ್ತಿ’ ಸ್ಕೀಮ್‌ನಿಂದ ಸಾರಿಗೆ ನಿಗಮಗಳಿಗೆ ನಿಶ್ಶಕ್ತಿ!

ನಿಗಮಗಳಿಗೆ ಸಕಾಲಕ್ಕೆ ಹಣ ಬಿಡುಗಡೆ ಮಾಡದ ಸರ್ಕಾರ; ಏದುಸಿರು ಬಿಡುತ್ತಿರುವ ನಿಗಮಗಳು ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ…

54 mins ago

ಇಂದು ಪೋಲೀಯೋ ಲಸಿಕಾ ಅಭಿಯಾನ

ನವೀನ್ ಡಿಸೋಜ ೧,೯೪೬ ಲಸಿಕೆದಾರರು, ೮೫ ಮೇಲ್ವಿಚಾರಕರು ೯೭೩ ಮನೆ ಭೇಟಿ ನೀಡುವ ತಂಡ ರಚನೆ ಪ್ರವಾಸಿಗರು, ವಲಸೆ ಕಾರ್ಮಿಕರ…

6 hours ago

ಮರುಳಯ್ಯನ ಕೊಪ್ಪಲು ಕೊಂತನಾಯಕರಿಗೆ ಬೇಡರ ಕಣ್ಣಪ್ಪನೇ ದೇವರು

ಸೂರ್ಯಪುತ್ರ ಯಾರಾದ್ರೂ ಮತ್ತೆ ಮತ್ತೆ ಸಿಗ್ತಾನೆ ಇದ್ರೆ ‘ಭೂಮಿ ದುಂಡಗಿದೆ, ಅದ್ಕೆ ಮತ್ತೆ ಮತ್ತೆ ಎದುರುಬದುರಾಗೋದು’ ಅನ್ನೋ ಮಾತು ಕೇಳಿರ್ತೇವೆ.…

6 hours ago