ನಿತ್ಯ ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಅಂತೀರಾ? ವಾಕಿಂಗ್ ಒಂದು ಆರೋಗ್ಯಕರ ವ್ಯಾಯಾಮವೇ ಆಗಿದ್ದರೂ ಕ್ರಮಬದ್ಧವಾಗಿ ಅದನ್ನು ಮಾಡದಿದ್ದರೆ ಅಥವಾ ಸಮಯವಲ್ಲದ ಸಮಯದಲ್ಲಿ ಮಾಡಿದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಯನ್ನೂ ಉಂಟು ಮಾಡಬಹುದು.
ಈಗ ಮೈಕೊರೆಯುವ ಚಳಿ ಆವರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಹಾಸಿಗೆ ಬಿಟ್ಟು ಮೇಲೇಳುವುದೇ ಕಷ್ಟವಾಗಿರುವಾಗ ವಾಕಿಂಗ್ ಮಾಡುವುದು ಅಂದರೆ ಹೇಗೆ? ಅದರಲ್ಲೂ ವಯಸ್ಸು ೬೦ ದಾಟಿದವರಿಗಂತೂ ಚಳಿಗಾಲದಲ್ಲಿ ವಾಕಿಂಗ್ ಕೆಲವೊಂದಿಷ್ಟು ಆರೋಗ್ಯ ಸಮಸ್ಯೆಗಳನ್ನೂ ತಂದಿಡಬಹುದು. ಹೃದಯ ಸಂಬಂಧಿ ಕಾಯಿಲೆ ಇರುವವರಂತೂ ಎಚ್ಚರಿಕೆಯಿಂದ ಇರುವಂತೆ ವೈದ್ಯರು ಸೂಚಿಸುತ್ತಾರೆ.
ಮೈಕೊರೆಯುವ ಚಳಿಯಲ್ಲಿ ಮುಂಜಾನೆಯೇ ಎದ್ದು ಇಬ್ಬನಿಯಲ್ಲಿ ವಾಕಿಂಗ್ ಮಾಡುವುದು ಹೃದಯ ಸಂಬಂಧಿ ಕಾಯಿಲೆಗಳಿರುವ ವೃದ್ಧರಿಗೆ ತೊಂದರೆಯನ್ನುಂಟು ಮಾಡಬಹುದು. ಏಕಾಏಕಿ ಚಳಿ ಹೆಚ್ಚಾದರೆ ಹೃದಯಾಘಾತವಾಗುವ ಸಂಭವವೂ ಇರುತ್ತದೆ ಎನ್ನುತ್ತಾರೆ ತಜ್ಞರು. ಚಳಿಯ ತೀವ್ರತೆಗೆ, ವಾಕಿಂಗ್ ಮಾಡು ವಾಗ ಎದೆಬಡಿತ ಹೆಚ್ಚಳವಾಗಿ ರಕ್ತಸಂಚಲನ ಏರು ಪೇರಾಗುವುದರಿಂದ ಅದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುವ ಹಿರಿಯರು ಚಳಿಗಾಲದ ಸಂದರ್ಭದಲ್ಲಿ ವಾಕಿಂಗ್, ಜಾಗಿಂಗ್ ಮಾಡುವುದಕ್ಕೆ ಬ್ರೇಕ್ ಹಾಕುವುದೇ ಉತ್ತಮ. ಹೃದಯ ಸಂಬಂಧಿ ಕಾಯಿಲೆ ಇರುವವರು ಮಾತ್ರವಲ್ಲದೆ ೪೫ ವರ್ಷ ಮೇಲ್ಪಟ್ಟವರೂ ಸೂಕ್ತ ಉಡುಪುಗಳನ್ನು ಧರಿಸಿ ಚಳಿಯಿಂದ ರಕ್ಷಣೆ ಪಡೆದುಕೊಳ್ಳದೆ ವಾಕಿಂಗ್ ಮಾಡುವುದೂ ಒಳ್ಳೆಯದಲ್ಲ ಎಂಬುದು ತಜ್ಞರ ಸಲಹೆಯಾಗಿದೆ.
ಇದಕ್ಕೆ ಏನು ಮಾಡಬೇಕು? ವ್ಯಾಯಾಮವಿಲ್ಲದೆ ಮನೆಯಲ್ಲಿಯೇ ಕೂರುವುದೂ ಆರೋಗ್ಯಕ್ಕೆ ಮಾರಕ. ಹೀಗಾಗಿ ಹೃದಯಕ್ಕೆ ಒತ್ತಡವಾಗ ದಂತೆ ಮನೆಯಲ್ಲಿಯೇ ವ್ಯಾಯಾಮ ಮಾಡುವುದು ಉತ್ತಮ. ಮನೆಯ ವರಾಂಡದಲ್ಲಿಯೇ ವಾಕಿಂಗ್ ಮಾಡಬೇಕು. ವಾಕಿಂಗ್ ಅಥವಾ ವ್ಯಾಯಾಮ ಮಾಡುವಾಗ ಚಳಿಯಿಂದ ರಕ್ಷಣೆ ಪಡೆದುಕೊಳ್ಳಲು ಸೂಕ್ತ ಉಡುಪುಗಳನ್ನು ಧರಿಸ ಬೇಕು. ಅಲ್ಲದೆ ವ್ಯಾಯಾಮಕ್ಕಿಳಿಯುವ ಮೊದಲು ವೈದ್ಯರ ಸಲಹೆ ಪಡೆದು, ಅದರಂತೆ ತಮ್ಮ ದಿನಚರಿ ರೂಢಿಸಿಕೊಳ್ಳುವುದು ಉತ್ತಮ.
ವಾಕಿಂಗ್ ಮುನ್ನ ಏನು ಮಾಡಬೇಕು: ಚಳಿಗಾಲದಲ್ಲಿ ರಕ್ತದ ಒತ್ತಡ ಹೆಚ್ಚಾಗುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ವಾಕಿಂಗ್ ಆರೋಗ್ಯಕ್ಕೆ ಒಳ್ಳೆಯದೇ ಆಗಿದೆ ಇದು ಹೃದಯದ ಆರೋಗ್ಯಕ್ಕೆ ಮಾತ್ರವಲ್ಲ, ಮಧುಮೇಹಿಗಳಿಗೂ ಉತ್ತಮ ವ್ಯಾಯಾಮವಾಗಿದ್ದರೂ ಚಳಿಗಾಲದಲ್ಲಿ ವಾಕಿಂಗ್ ಮಾಡುವಾಗ ನಿಮ್ಮ ದೇಹವನ್ನು ಬೆಚ್ಚಗಾಗಿಟ್ಟುಕೊಳ್ಳಬೇಕು. ಸ್ವೆಟರ್, ತಲೆಗೆ ಟೋಪಿ, ಶಾಲುಗಳನ್ನು ಬಳಸಿ ಕೊರೆಯುವ ಚಳಿಯಿಂದ ರಕ್ಷಣೆ ಪಡೆದುಕೊಳ್ಳಬೇಕು.
ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಎಚ್ಚರಿಕೆ ಅಗತ್ಯ: ಸಂಶೋಧನೆಗಳ ಪ್ರಕಾರ ಹೆಚ್ಚಿನ ಹೃದಯಾಘಾತಗಳು ಬೆಳಿಗ್ಗೆ ೪ರಿಂದ ೧೦ ಗಂಟೆಯವರೆಗೆ ಸಂಭವಿಸುತ್ತವೆ. ಈ ಸಂದರ್ಭದಲ್ಲಿ ಹೃದಯದ ರಕ್ಷಣೆ ಮಾಡುವುದು ಅತ್ಯ ವಶ್ಯ. ಚಳಿಗಾಲದಲ್ಲಿ ಮುಂಜಾನೆಯ ಸಮಯ ಈ ಹೃದಯಾಘಾತದ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಬೆಳಗಿನ ಚಳಿಯು ಹೃದಯ ಹಾಗೂ ರಕ್ತ ಸಂಚಲನದ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ ಅಧಿಕ ಬಿಪಿ, ಮಧುಮೇಹ ಅಥವಾ ಶ್ವಾಸಕೋಶದ ತೊಂದರೆ ಇರುವವರಿಗೆ ಆರೋಗ್ಯ ಸಮಸ್ಯೆಗಳು ಎದುರಾಗ ಬಹುದು. ಆದ್ದರಿಂದ ಇಂತಹ ಆರೋಗ್ಯ ಸಮಸ್ಯೆಗಳಿರು ವವರು ಬೆಳಗಿನ ವ್ಯಾಯಾಮ ಅಥವಾ ವಾಕಿಂಗ್ ತಪ್ಪಿಸುವುದು ಉತ್ತಮ. ಒಂದು ವೇಳೆ ವಾಕಿಂಗ್ ಮಾಡುವುದಾದರೆ ಕಿವಿ, ಎದೆ, ಕಾಲು ಗಳು ಮತ್ತು ತಲೆಯನ್ನು ಮುಚ್ಚು ವಂತೆ ಬೆಚ್ಚ ನೆಯ ಉಡುಪುಗಳನ್ನು ಧರಿಸಿಕೊಳ್ಳಬೇಕು.
ಸರಿಯಾದ ಅಭ್ಯಾಸ/ ವಾರ್ಮ್-ಅಪ್ ಮಾಡುವುದು ಮುಖ್ಯ: ಚಳಿಗಾಲದಲ್ಲಿ ವಾಕಿಂಗ್ ಆರಂಭಿಸುವ ಮೊದಲು ವಾರ್ಮ್- ಅಪ್ ವ್ಯಾಯಾಮಗಳನ್ನು ಮನೆಯಲ್ಲಿ ಮಾಡಿಕೊಳ್ಳುವುದು ಉತ್ತಮ. ಸರಿಯಾದ ತಯಾರಿ ಮತ್ತು ಅಭ್ಯಾಸವಿಲ್ಲದೆ ವ್ಯಾಯಾಮ ಮಾಡುವುದೂ ಅಪಾಯ ತಂದೊಡ್ಡಬಹುದು. ಅದು ಹೃದಯಾಘಾತ ಮತ್ತು ಪಾರ್ಶ್ವ ವಾಯುವಿ ನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಆರಂಭ ದಲ್ಲಿ ಸ್ವಲ್ಪ ವಾರ್ಮ್-ಅಪ್ ವ್ಯಾಯಾಮಗಳನ್ನು ಮಾಡಿಕೊಂಡು ನಂತರ ಮುಂದಿನ ವಾಕಿಂಗ್ ಆರಂಭಿಸುವುದು ಉತ್ತಮ.
ಸೂರ್ಯನ ಕಿರಣಗಳು ಕಂಡಾಗ ವಾಕಿಂಗ್ ಉತ್ತಮ: ಮುಂಜಾನೆ ೫ ಗಂಟೆಗೆ ಎದ್ದು ವಾಕಿಂಗ್ ಹೋಗುವವರಿದ್ದಾರೆ. ಇನ್ನೂ ಸೂರ್ಯನ ಬೆಳಕೆ ಬಾರದ ಸಂದರ್ಭದಲ್ಲಿ ವಾಕಿಂಗ್ ಹೋಗುವುದು ಅಷ್ಟು ಒಳ್ಳೆಯದಲ್ಲ. ಅದರಲ್ಲಿಯೂ ಚಳಿಗಾಲದಲ್ಲಿ ಅದು ಬೇಡವೇ ಬೇಡ ಎನ್ನುತ್ತಾರೆ ವೈದ್ಯರು. ಕೊರೆಯುವ ಚಳಿ ಜತೆಗೆ ಮಂಜು ದೇಹಕ್ಕೆ ಹೆಚ್ಚು ಹಾನಿಯುಂಟು ಮಾಡಬಹುದು.ಅದರಲ್ಲೂ ವೃದ್ಧರಿಗೆ ಈ ಸಮಯ ಅಷ್ಟು ಸೂಕ್ತವಲ್ಲ. ಆದ್ದ ರಿಂದ ಮುಂಜಾನೆ ಸೂರ್ಯನ ರಶ್ಮಿ ಕಾಣಿಸಿಕೊಂಡ ನಂತರ ವಾಕಿಂಗ್ ಹೋಗುವುದು ಉತ್ತಮ. ಈ ಸಮಯದಲ್ಲಿ ಬೆಚ್ಚಗಿನ ವಾತಾವರಣವಿರುತ್ತದೆ
ಬೆಂಗಳೂರು : ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಹಂತ ಹಂತವಾಗಿ ಸಫಾರಿ ಆರಂಭಿಸಲು ಮತ್ತು ಧಾರಣಾ ಶಕ್ತಿ ಮತ್ತು ಹುಲಿಗಳು ನಾಡಿನತ್ತ…
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.5ರಂದು ಬೆಳಿಗ್ಗೆ…
ಮೈಸೂರು : ಅರಮನೆ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿಬೆಟ್ಟದ ಸಂರಕ್ಷಣೆ ಮತ್ತು ಉಳಿವಿಗಾಗಿ ಜ.4ರಂದು(ಭಾನುವಾರ) ಜಾಗೃತಿ ಆಂದೋಲನವನ್ನು…
ಭೋಪಾಲ್ : ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರು ಸೇವನೆಯಿಂದ 11 ಜೀವಗಳು ಬಲಿಯಾಗಿವೆ. ಮತ್ತು 1400ಕ್ಕೂ ಹೆಚ್ಚು ನಿವಾಸಿಗಳ…
ಬೆಂಗಳೂರು : ಬ್ಯಾನರ್ ಕಟ್ಟುವ ವಿಷಯದಲ್ಲಿ ಕಳೆದ ರಾತ್ರಿ ಬಳ್ಳಾರಿ ನಗರದಲ್ಲಿ ನಡೆದ ಘಟನೆಯ ಕುರಿತು ಉಚ್ಚ ನ್ಯಾಯಾಲಯದ ಹಾಲಿ…
ಬೆಂಗಳೂರು : ಬಳ್ಳಾರಿಯಲ್ಲಿ ಗುರುವಾರ ರಾತ್ರಿ ವಾಲ್ಮೀಕಿ ಬ್ಯಾನರ್ ವಿಚಾರದಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ವೇಳೆ ಫೈರಿಂಗ್ ಆಗಿ…