ಸಿ. ಶಿವಸುಂದರ್,
ಸಿದ್ದರಾಮಯ್ಯನವರ ಸರ್ಕಾರ, ಸರ್ಕಾರಿ ಗುತ್ತಿಗೆಗಳಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ ೧ ಮತ್ತು ಪ್ರವರ್ಗ ೨-ಎ ನಲ್ಲಿರುವ ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ಕೊಡುವುದರ ಜೊತೆಜೊತೆಗೆ ಪ್ರವರ್ಗ ೨ಬಿಯಲ್ಲಿರುವ ಮುಸ್ಲಿಮರಿಗೂ ಶೇ. ೪ ಮೀಸಲಾತಿಯನ್ನು ಒದಗಿಸುವುದಾಗಿ ಘೋಷಿಸಿದ ನಂತರ ಬಿಜೆಪಿ ಪಕ್ಷವು ಇದು ಮುಸ್ಲಿಮರ ತುಷ್ಟೀಕರಣ ಮತ್ತು ಸಂವಿಧಾನ ಬಾಹಿರ ಎಂದು ಹುಯಿಲೆಬ್ಬಿಸಿವೆ.
ಇದಕ್ಕೆ ಅವರು ಕೊಡುತ್ತಿರುವ ಕಾರಣ ಮುಸ್ಲಿಮರಿಗೆ ನೀಡಿರುವ ಮೀಸಲಾತಿ ಧರ್ಮಾ ಧಾರಿತ ವಾದದ್ದು ಮತ್ತು ಧರ್ಮಾಧಾರಿತ ಮೀಸಲಾತಿ ಸಂವಿಧಾನ ಬಾಹಿರವಾದದ್ದು ಎಂಬ ಕುತರ್ಕ. ಮುಸ್ಲಿಮರಿಗೆ ನೀಡುತ್ತಿರುವ ಮೀಸಲಾತಿ ಧರ್ಮಾಧಾರಿತವೇ ಮತ್ತು ಸಂವಿಧಾನ ಬಾಹಿರವೇ ಎಂಬುದನ್ನು ಪರಿಶೀಲಿಸುವ ಮುನ್ನ ಬಿಜೆಪಿಗರು ಮತ್ತು ಸಂಘ ಪರಿವಾರದವರು ಸಂವಿಧಾನ ಬಾಹಿರವಾದದ್ದನ್ನೆಲ್ಲಾ ವಿರೋಽಸುತ್ತಿದ್ದರೇ ಎಂದು ನೋಡೊಣ. ಉದಾಹರಣೆಗೆ ಮೇಲ್ಜಾತಿ ಮಧ್ಯಮ ವರ್ಗದವರಿಗೆ ನೀಡಲು ಬಿಜೆಪಿ ಸರ್ಕಾರ ನೀಡಿರುವ ಉUಖ ಮೀಸಲಾತಿ. ಸಂವಿಧಾನದ ಅರ್ಟಿಕಲ್ ೪೬ ಅನ್ನು ಆಧರಿಸಿ ಈ ಮೀಸಲಾತಿ ಕೊಡಲಾಗಿದೆ ಎಂದು ಬಿಜೆಪಿ ಹೇಳಿತು. ಆದರೆ ಆರ್ಟಿಕಲ್ ೪೬ ಸ್ಪಷ್ಟವಾಗಿ ಹೇಳುವುದು, ಅದನ್ನು ನೀಡಬೇಕಿರುವುದು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೇ ವಿನಾ ಆರ್ಥಿಕ ಹಿಂದುಳಿದವರಿಗೆ ಅಲ್ಲ. ಇದು ಇವರ ಸಂವಿಧಾನ ಬದ್ಧತೆ.
ಸಂವಿಧಾನದ ಆರ್ಟಿಕಲ್ ೧೫ (೪) ಮತು ೧೬ (೪):
ಅದೇನೇ ಇರಲಿ. ಮುಸ್ಲಿಮರಿಗೆ ಕೊಡುತ್ತಿರುವ ಮೀಸಲಾತಿ ಧರ್ಮಾಧಾರಿತವೂ ಅಲ್ಲ. ಸಂವಿಧಾನ ಬಾಹಿರವೂ ಅಲ್ಲ. ಮುಸ್ಲಿಮರಿಗೆ ನೀಡುತ್ತಿರುವ ಮೀಸಲಾತಿ ಸಾಮಾಜಿಕವಾಗಿ ಹಿಂದುಳಿದ ವರ್ಗವೆಂದು ಪರಿಗಣಿಸಿ ಕೊಡುತ್ತಿರುವ ಮೀಸಲಾತಿಯೇ ವಿನಾ ಧರ್ಮಾಧಾರಿತ ಮೀಸಲಾತಿಯಲ್ಲ. ಇದು ಸಂವಿಧಾನ ಬಾಹಿರವಲ್ಲ; ಸಂವಿಧಾನ ಬದ್ಧ. ಏಕೆಂದರೆ ಸಂವಿಧಾನದ ಆರ್ಟಿಕಲ್ ೧೫ (೪) ಮತ್ತು ೧೬ (೪)ರ ಪ್ರಕಾರ ಪ್ರಭುತ್ವವು ಸಮಾಜದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ವೈಜ್ಞಾನಿಕವಾಗಿ ಪತ್ತೆ ಹಚ್ಚಿ ಅವರ ಏಳಿಗೆಗೆ ಮೀಸಲಾತಿಯನ್ನೂ ಒಳಗೊಂಡಂತೆ ಇತರ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು. ಕಾಲಕಾಲಕ್ಕೆ ಸರ್ಕಾರಗಳು ಸಮಾಜದಲ್ಲಿ ಈ ಬಗೆಯ ಹಿಂದುಳಿದಿರುವಿಕೆಗೆ ಬಲಿಯಾಗಿ ರುವ ಯಾವುದೇ ವರ್ಗಗಳು, ಅವರು ಯಾವುದೇ ಧರ್ಮ, ಸಮುದಾಯ, ಜಾತಿಗಳಿಗೆ ಸೇರಿದ್ದರೂ, ಪತ್ತೆ ಹಚ್ಚಿ ಅವರಿಗೆ ಮೀಸಲಾತಿ ಕಲ್ಪಿಸಬೇಕು. ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳುವ ಯಾವುದೇ ಸರ್ಕಾರ ಈ ಕಾರಣಗಳಿಗಾಗಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಲೇಬೇಕು. ಅದಕ್ಕೆ ಧರ್ಮದ ಅಡ್ಡಗೋಡೆಯಿಲ್ಲ.
ಮುಸ್ಲಿಮರು ಹಿಂದುಳಿದ ವರ್ಗಗಳ ಭಾಗ- ಸಾಂವಿಧಾನಿಕ ಕೋರ್ಟುಗಳ ಆದೇಶ: ಮೊದಲನೆಯದಾಗಿ ಮುಸ್ಲಿಮರನ್ನು ಇಡೀ ಸಮುದಾಯವಾಗಿ ಹಿಂದುಳಿದಿದೆ ಎಂದು ಪರಿಗಣಿಸಿ ಕರ್ನಾಟಕದಲ್ಲಿ ಮಾತ್ರವಲ್ಲದೆ ಕೇರಳ, ತಮಿಳುನಾಡು ಹಾಗೂ ಬಿಹಾರಗಳಲ್ಲಿ ಕೂಡ ಈಗಲೂ Other Backward Classes-ಇತರ ಹಿಂದುಳಿದ ವರ್ಗಗಳ ಭಾಗವಾಗಿ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲೂ ೨೦ ರಾಜ್ಯಗಳ ವಿವಿಧ ಮುಸ್ಲಿಂ ಸಮುದಾಯಗಳು ಈಗಲೂ ಮೀಸಲಾತಿ ಯನ್ನು ಪಡೆದುಕೊಳ್ಳುತ್ತಿವೆ. ೨೦೧೩ರಲ್ಲಿ ಕರ್ನಾಟಕದ ಬಿಜೆಪಿಯ ಸದಾನಂದ ಗೌಡ ಸರ್ಕಾರವು ಮುಸ್ಲಿಮರ ಒಂಬತ್ತು ಉಪ ಪಂಗಡಗಳನ್ನು ಬಿಟ್ಟು ಉಳಿದೆಲಾ ಮುಸ್ಲಿಮರನ್ನು ಕೇಂದ್ರದ ಒಬಿಸಿ ಮೀಸಲಾತಿ ಒದಗಿಸುವಾಗ ಹಿಂದುಳಿದ ವರ್ಗಗಳೆಂದೇ ಪರಿಗಣಿಸಬೇಕೆಂದು ಆದೇಶಿಸಿತ್ತು.
ಇದನ್ನು ಕರ್ನಾಟಕದ ಹೈಕೋರ್ಟ್‌ನ ವಿಭಾಗೀಯ ಪೀಠ ೧೯೭೯ರ ಏಪ್ರಿಲ್ ೯ ರಂದು WP ೪೩೭೧/ ೭೭ ಪ್ರಕರಣದಲ್ಲಿ ಅತ್ಯಂತ ಸ್ಪಷ್ಟವಾಗಿ ಹೀಗೆ ಹೇಳಿದೆ: “. . . So far as the Muslims are concernrd, the commission was unwise in excluding them from the list of Backward Classes solely on the ground that they belong to a religious minority. The Commission has however found that the Muslims are socially and educationally backward and also do not have adequate representation in the service.
The fact that they are religious minority is no ground to exclude them from the list of backward classes . The government in our opinion was perfectly justified in listing the Muslims in the list of Backward classes*
(ಮುಸ್ಲಿಮರ ಕುರಿತಾಗಿ ಹೇಳಬೇಕೆಂದರೆ ಮುಸ್ಲಿಮರು ಧಾರ್ಮಿಕ ಅಲ್ಪ ಸಂಖ್ಯಾತರಾಗಿದ್ದಾರೆ ಎಂಬ ಏಕೈಕ ಕಾರಣಕ್ಕೆ ಅವರನ್ನು ಹಿಂದುಳಿದ ವರ್ಗಗಳಿಂದ ಆಯೋಗವು ಹೊರಗಿಟ್ಟಿದ್ದು ಸಮಂಜಸವಾದ ಕ್ರಮ ವಲ್ಲ. ಅದೇನೇ ಇದ್ದರೂ ಆಯೋಗವು ಮುಸ್ಲಿಮರು ಸಾಮಾಜಿಕ ವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು ಸರ್ಕಾರಿ ಸೇವೆಗಳಲ್ಲೂ ಸೂಕ್ತ ಪ್ರಾತಿನಿಧ್ಯ ಹೊಂದಿಲ್ಲ ಎಂಬುದನ್ನು ಗುರುತಿಸಿದೆ. ಅವರು ಧಾರ್ಮಿಕ ಅಲ್ಪಸಂಖ್ಯಾತ ರಾಗಿದ್ದಾರೆ ಎಂಬುದು ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗಿಡಲು ಕಾರಣವೇ ಅಲ್ಲ. ಆದ್ದರಿಂದ ಸರ್ಕಾರವು ಮುಸ್ಲಿಮರನ್ನು ಮತ್ತೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿ ಸರಿಯಾದುದನ್ನೇ ಮಾಡಿದೆ ಎಂದು ನಾವು ಪರಿಗಣಿಸುತ್ತೇವೆ. )
ಹಾಗೆಯೇ ೧೯೯೨ರಲ್ಲಿ ಮಂಡಲ್ ವರದಿಯ ಸಾಂವಿಧಾನಿಕತೆಯನ್ನು ಪರಿಶೀಲಿಸಲು ರಚಿಸಲಾಗಿದ್ದ ಒಂಬತ್ತು ನ್ಯಾಯಾಧೀಶರ ಪೀಠವು ಇಂದ್ರಾ ಸಹಾನಿ ಪ್ರಕರಣದಲ್ಲಿ ಮುಸ್ಲಿಮರಿಗೆ ಹಿಂದುಳಿದ ವರ್ಗಗಳಾಗಿ ಮೀಸಲಾತಿ ಕಲ್ಪಿಸುವ ಬಗ್ಗೆ ನಿಸ್ಸಂಽಗ್ಧವಾಗಿ ಹೀಗೆ ಸ್ಪಷ್ಟಪಡಿಸಿದೆ:
“This inadequate representation is not confined to any specific section of the people, but all those who fall under the group of social backwardness whether they are Shudras of Hindu community or similarly situated other backward classes of people in other
communities, namely, Muslims, Sikhs, Christians etc” (<a href=”https://indiankanoon. org/ doc/1363234/”>https://indiankanoon. org/ doc/1363234/</a>
(ಸರ್ಕಾರಿ ಸೇವೆಗಳಲ್ಲಿ ಅಸಮರ್ಪಕ ಪ್ರಾತಿನಿಧ್ಯವು ಯಾವುದೋ ಒಂದು ಜನವರ್ಗಕೆ ಮಾತ್ರ ಸೀಮಿತವಾಗಿಲ್ಲ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿರುವ ಎಲ್ಲರಿಗೂ ಅದು ಸಮಾನವಾಗಿ ಅನ್ವಯವಾಗುತ್ತದೆ. ಅವರು ಹಿಂದುಗಳೊಳಗಿನ ಶೂದ್ರ ಸಮುದಾಯಕ್ಕೆ ಸೇರಿದವರಾಗಿರಬಹುದು ಅಥವಾ ಅದೇ ರೀತಿ ಹಿಂದುಳಿದಿರುವಿಕೆಗೆ ಗುರಿಯಾಗಿರುವ ಮುಸ್ಲಿಂ, ಸಿಖ್ ಅಥವಾ ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದವರಾಗಿದ್ದರೂ ಸಮಾನವಾಗಿ ಅನ್ವಯವಾಗುತ್ತದೆ)
ಹೀಗಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರೆ ಅವರಿಗೆ ಒಬಿಸಿ ಮೀಸಲಾತಿ ನೀಡಬೇಕಾದ್ದು ಸರ್ಕಾರದ ಸಾಂವಿಧಾನಿಕ ಕರ್ತವ್ಯ. ಅದನ್ನು ಧರ್ಮದ ಆಧಾರದಲ್ಲಿ ನಿರಾಕರಿಸುವುದು ಸಂವಿಧಾನ ವಿರೋಽ ಕೃತ್ಯವಾಗುತ್ತದೆ. ಹಾಗೆ ನೋಡಿದರೆ ಬೊಮ್ಮಾಯಿ ಸರ್ಕಾರ ಹೊಸ ಮೀಸಲಾತಿ ಸೂತ್ರದಲ್ಲೂ ೨-ಡಿ ಪ್ರವರ್ಗದಡಿ ಕ್ರಿಶ್ಚಿಯನ್ನರಿಗೂ, ದಿಗಂಬರ ಜೈನರಿಗೂ, ೨-ಎ ಪ್ರವರ್ಗದಡಿಯಲ್ಲಿ ಬೌದ್ಧರಿಗೂ ಮೀಸಲಾತಿಯನ್ನೂ ಮುಂದುವರಿಸಿದೆ. ಹೀಗಾಗಿ ಬೊಮ್ಮಾಯಿ ಸರ್ಕಾರದ ಮೀಸಲಾತಿ ಸೂತ್ರ ಅಸಾಂವಿಧಾನಿಕ ಮಾತ್ರವಲ್ಲ, ದ್ವೇಷಪೂರಿತ ಕೋಮುವಾದಿ ಕ್ರಮವೂ ಆಗಿದೆ.
ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗಗಳ ಅಧ್ಯಯನಗಳು ಮತ್ತು ಮುಸ್ಲಿಮರು ಸ್ವಾತಂತ್ರ್ಯ ಪೂರ್ವದಲ್ಲಿ ೧೯೧೮ರ ಮಿಲ್ಲರ್ ಸಮಿತಿ ಯಿಂದ ಮೊದಲುಗೊಂಡು, ೧೯೬೦ರ ನಾಗನಗೌಡ ಸಮಿತಿ, ೧೯೭೭ರ ದೇವ ರಾಜ ಅರಸು ಸರ್ಕಾರದ ಮೀಸಲಾತಿ ಸೂತ್ರ, ೧೯೮೬ರ ವೆಂಕಟಸ್ವಾಮಿ ಆಯೋಗದ ವರದಿ ಮತ್ತು ೧೯೯೦ರ ನ್ಯಾ. ಚಿನ್ನಪ್ಪರೆಡ್ಡಿ ನೇತೃತ್ವದ ಕರ್ನಾಟಕದ ಮೂರನೇ ಹಿಂದುಳಿದ ಆಯೋಗದ ವರದಿಗಳೆಲ್ಲವೂ ಅತ್ಯಂತ ವೈಜ್ಞಾನಿಕ ಅಧ್ಯಯನ ಹಾಗೂ ದತ್ತಾಂಶಗಳನ್ನು ಆಧರಿಸಿಯೇ ಮುಸ್ಲಿಮರಲ್ಲಿ ಅತಿ ಹಿಂದುಳಿದವರನ್ನು ಅತಿ ಹಿಂದುಳಿದ ಪ್ರವರ್ಗಗಳಿಗೆ ಸೇರಿಸಿದ್ದಲ್ಲದೆ, ಇಡೀ ಮುಸ್ಲಿಂ ಸಮುದಾಯವನ್ನು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗವಾಗಿ ಪರಿಗಣಿಸಿ ಇಡೀ ಸಮುದಾಯಕ್ಕೆ ಒಬಿಸಿ ಮೀಸಲಾತಿಯನ್ನು ಕಲ್ಪಿಸಿವೆ.
೧೯೯೦ರಲ್ಲಿ ಕೂಲಂಕಷ ಸಾಮಾಜಿಕ ಅಧ್ಯಯನದ ನಂತರ ವರದಿ ನೀಡಿದ ನ್ಯಾ. ಚಿನ್ನಪ್ಪ ರೆಡ್ಡಿಯವರಂತೂ: ನ್ಯಾ. ಚಿನ್ನಪ್ಪರೆಡ್ಡಿ ಆಯೋಗವು ಹೀಗೆ ಅಭಿಪ್ರಾಯ ಪಡುತ್ತದೆ : The picture presented by the
Muslim Community as a whole is that of a Socially and Educationally Backward Class”
(p 170, Volume 1) ಎಂದರೆ: “ಒಟ್ಟಾರೆ ಈ ಅಧ್ಯಯನವು ಮುಸ್ಲಿಮರು ಒಂದು ಸಮುದಾಯವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗವಾಗಿದ್ದಾರೆ ಎಂಬ ಚಿತ್ರಣವನ್ನು ನೀಡುತ್ತದೆ ಎಂದು ಘೋಷಿಸುತ್ತದೆ. “
ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಪುನರಾರಂಭಿಸುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಕರ್ನಾಟಕ ರಾಜ್ಯ…
ಹೊಸದಿಲ್ಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ದೇಶಗಳ ಮೇಲೆ ಹೇರಿರುವ ಹೆಚ್ಚುವರಿ ಸಾಮೂಹಿಕ ಸುಂಕಗಳನ್ನು ಅಮೆರಿಕ…
ಹನೂರು : ಮುಂದಿನ ದಿನಗಳಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು ಯಶಸ್ವಿಯಾಗಿ ನಡೆಸಲು ಕರ್ನಾಟಕ ಪೊಲೀಸರು ಹಾಗೂ ಅಬಕಾರಿ ಇಲಾಖೆ…
ಕೆ.ಆರ್.ಪೇಟೆ : ಪಟ್ಟಣದ ಪಿ.ಎಲ್.ಡಿ ಬ್ಯಾಂಕ್ ಮುಂಭಾಗದಲ್ಲಿ ಶಫಿಉಲ್ಲಾ ಅವರು ನಡೆಸುತ್ತಿದ್ದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ಸ್ ಅಂಗಡಿಯು ವಿದ್ಯುತ್ ಶಾರ್ಟ್…
ಬೆಂಗಳೂರು : ಬೆಂಗಳೂರು ನಗರ ಮಾತ್ರವಲ್ಲದೆ ಇಡೀ ಕರ್ನಾಟಕ ಎಲೆಕ್ಟ್ರಿಕ್ ವಾಹನ ಉದ್ಯಮದ ಹಬ್ ಆಗಿ ಅಭಿವೃದ್ಧಿ ಹೊಂದುತ್ತಿದ್ದು, ಅದಕ್ಕೆ…
ಸುಪ್ರೀಂ ತೀರ್ಪಿಗೆ ಆಕ್ರೋಶ ವ್ಯಕ್ತಪಡಿಸಿದ ಅಮೆರಿಕ ಅಧ್ಯಕ್ಷ ವಾಷಿಂಗ್ಟನ್ : ವಿವಿಧ ದೇಶಗಳ ಸರಕುಗಳ ಮೇಲೆ ವಿಧಿಸಿದ್ದ ಭಾರಿ ಸುಂಕಗಳನ್ನು…