ಅಂಕಣಗಳು

ಸರ್ಕಾರಿ ಶಾಲೆಗಳಿಗೆ ಹೊಸ ರೂಪ ನೀಡುತ್ತಿರುವ ಅಕ್ತ ಟೀಮ್‌

ಅನಿಲ್ ಅಂತರಸಂತೆ

ರಾಜ್ಯದಲ್ಲಿ ಕೆಲ ಸರ್ಕಾರಿ ಶಾಲೆಗಳ ಸ್ಥಿತಿ ಹೇಳಿಕೊಳ್ಳುವಷ್ಟು ಸುಧಾರಿಸಿಲ್ಲ. ಇಲ್ಲಿ ಮೂಲಸೌಕರ್ಯಗಳಿಲ್ಲ, ಉತ್ತಮ ವಾತಾವರಣವಿಲ್ಲ, ಮೈದಾನವಿಲ್ಲ, ಕಟ್ಟಡಗಳ ಸ್ಥಿತಿ ಉತ್ತಮವಾಗಿಲ್ಲ ಎಂಬೆಲ್ಲ ಕಾರಣಗಳಿಂದಾಗಿ ಇಂದು ಸಾಕಷ್ಟು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಿದ್ದಾರೆ.

ಶಾಲೆಗಳ ಈ ಸಮಸ್ಯೆಗಳಿಂದ ಮಕ್ಕಳ ದಾಖಲಾತಿ ಪ್ರಮಾಣವು ಇಳಿಮುಖವಾಗಿದೆ. ಇದರಿಂದಾಗಿ ಕೆಲ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುವಿಪಿವೆ, ಸಾಕಷ್ಟು ಮುಚ್ಚಿವೆ ಕೂಡ. ಸರ್ಕಾರಿ ಶಾಲೆಗಳ ಈ ಪರಿಸ್ಥಿತಿ ಕಂಡ ಯುವತಿ ಅಕ್ಕ ಅನು ತನ್ನ ಗೆಳೆಯರ ಬಳಗವನ್ನು ಕಟ್ಟಿಕೊಂಡು ಸರ್ಕಾರಿ ಶಾಲೆಗಳಿಗೆ ಸುಣ್ಣಬಣ್ಣ ಬಳಿಯುವ ಜತೆಗೆ ಆವರಣವನ್ನು ಸ್ವಚ್ಛಗೊಳಿಸುತ್ತಾ ‘ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ’ ಅಭಿಯಾನವನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಮೈಸೂರು, ಮಂಡ್ಯ ಭಾಗಗಳ ಸರ್ಕಾರಿ ಶಾಲೆಗಳಲ್ಲಿ ತಮ್ಮ ಶ್ರಮದಾನ ಮಾಡಿರುವ ಅಕ್ಕ ಅನು ಮತ್ತು ತಂಡ ಎಚ್. ಡಿ. ಕೋಟೆಯ ಅಂತರಸಂತೆ ಶಾಲೆ, ಗಂಗಡಹೊಸಹಳ್ಳಿ ಶಾಲೆ, ಹ್ಯಾಂಡ್‌ಪೋಸ್ಟ್ ಶಾಲೆ, ಹುಣಸೂರಿನ ಹುಂಡೀಮಾಳ, ನಾಗರಹೊಳೆ ಅರಣ್ಯ ವ್ಯಾಪ್ತಿಯ ನಾಗರಹೊಳೆ ಗಿರಿಜನ ಆಶ್ರಮ ಶಾಲೆ, ವಡಕನ ಮಾಳ ಶಾಲೆ, ಹೊಸೂರು ಹಾಡಿ ಶಾಲೆ, ಮಂಡ್ಯದ ದೊಡ್ಡಬೇಡರಹಳ್ಳಿ ಶಾಲೆ, ಹೊಸಕೆರೆ ಶಾಲೆ, ಅರೆಚಾಕನಹಳ್ಳಿ ಶಾಲೆಗಳನ್ನು ಸ್ವಚ್ಚಗೊಳಿಸಿ, ಬಣ್ಣ ಹೆಚ್ಚಿ ಸುಂದರಗೊಳಿಸಿದ್ದಾರೆ. ಗಿಡಗಂಟಿಗಳಿಂದ ಆವೃತ್ತಗೊಂಡು ಸುಣ್ಣ ಬಣ್ಣವಿಲ್ಲದೆ ದುಸ್ಥಿತಿಯಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಳಿಯುವುದೇ ಈ ತಂಡದ ಕಾಯಕ. ಇಂತಹ ಸಮಾಜ ಸೇವೆಯಿಂದಲೇ ಇಂದು ಕರ್ನಾಟಕದ ಮನೆ ಮಾತಾಗಿರುವ ಅಕ್ಕ ಅನು ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಚಿಕ್ಕಬೆರಗಿ ಗ್ರಾಮದ ಹೇಮಣ್ಣ ಮತ್ತು ಈರಮ್ಮ ದಂಪತಿಗಳ ಮೂರನೇ ಮಗಳು. ಅಕ್ಕ ಅನು ಎಂದೇ ಪ್ರಸಿದ್ಧಿ ಪಡೆದಿರುವ ಇವರು ತಮ್ಮ 12-15 ಮಂದಿಯ ತಂಡದ ಸಹಾಯದೊಂದಿಗೆ ರಾಜ್ಯದ 121ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಶ್ರಮದಾನ ಮಾಡುವ ಮೂಲಕ ಹೊಸ ರೂಪ ನೀಡುತ್ತಿದ್ದಾರೆ.

ಸ್ವಚ್ಛ ಭಾರತ ಅಭಿಯಾನ ಮತ್ತು ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ ಅಭಿಯಾನದ ಮೂಲಕ ಅಕ್ಕ ಅನು ಮತ್ತು ತಂಡ 2019ರಿಂದ ಈ ಸೇವೆಯನ್ನು ಆರಂಭಿಸಿದ್ದು, ಈಗಾಗಲೇ ರಾಜ್ಯದ ಸುಮಾರು 23 ಜಿಲ್ಲೆಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳನ್ನು ಸ್ವಚ್ಛ ಮಾಡುವ ಜೊತೆಗೆ ಸ್ಥಳೀಯ ದಾನಿಗಳ ಸಹಕಾರದಿಂದ ಶಾಲೆಗಳಿಗೆ ಸುಣ್ಣ ಬಣ್ಣ ಬಳಿಯುವ ಕಾಯಕ ಮಾಡುತ್ತಿದ್ದಾರೆ. ಕನ್ನಡ ಶಾಲೆಗಳ ಪರಿಸ್ಥಿತಿ ಕಂಡ ಅನು ಆರಂಭದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿಯೇ ಬಣ್ಣ ಬಳಿಯುವ ಕೆಲಸ ಆರಂಭಿಸಿದರು. ಆರಂಭದಲ್ಲಿರ ಸರ್ಕಾರಿ ಶಾಲಾಗಳಲ್ಲ ಇವರು ಕೈಗೊಂಡ ಸೇವೆ ಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿದ ಕೆಲ ಉತ್ಸಾಹಿ ಯುವಕರೂ ಅವರ ತಂಡ ಸೇರಲು ಬಯಸಿ ಸುಮಾರು 12-15 ಜನರ ತಂಡವಾಗಿ ಪರಿವರ್ತನೆಗೊಂಡು ರಾಜ್ಯವನ್ನು ಸುತ್ತಿ ಅಲ್ಲಿನ ಸರ್ಕಾರಿ ಶಾಲೆಗಳಲ್ಲಿ ಶ್ರಮದಾನ ಮಾಡುತ್ತಿದೆ. ಈವರೆಗೂ ಸುಮಾರು 121ಕ್ಕೂ ಅಧಿಕ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ಜನರ ಸಹಕಾರವಿದ್ದರೆ ಇನ್ನೂ ಹೆಚ್ಚಿನ ಶಾಲೆಗಳನ್ನು ದರಸ್ತಿಗೊಳಿಸಲಿದ್ದೇವೆ. ನಮ್ಮ ಉದ್ದೇಶ ಸರ್ಕಾರಿ ಶಾಲೆಗಳು ಉಳಿಯಬೇಕು. ಸರ್ಕಾರಿ ಶಾಲೆಗಳು ಅಭಿವೃದ್ಧಿಯಾದರೆ ಕನ್ನಡ ಭಾಷೆ ಉಳಿಯಲಿದೆ ಎನ್ನುತ್ತಾರೆ ಅಕ್ಕ ಅನು.

ಅನು ಅವರು ಈ ಸೇವೆಯನ್ನು ತಮ್ಮ ಕಾಲೇಜು ದಿನಗಳಲ್ಲೇ ಆರಂಭಿಸಿ ದರೂ ಆಗ ಅವರಿಗೆ ಸರಿಯಾದ ಪ್ರೋತ್ಸಾಹ ಸಿಗಲಿಲ್ಲ. ಈಗ ಇವರ ಕೆಲಸ ಮೆಚ್ಚಿ ಲಕ್ಷಾಂತರ ಮಂದಿ ಬೆಂಬಲಿಸುತ್ತಿದ್ದಾರೆ. ಕೇವಲ ಶಾಲೆಗಳು ಮಾತ್ರವ ಲ್ಲದೆ ಪುರಾತಾನ ದೇಗುಲಗಳು, ಸ್ಮಶಾನ, ಬಾವಿ, ಕಲ್ಯಾಣಿಗಳನ್ನೂ ಸ್ವಚ್ಛಗೊಳಿಸಿ ಸ್ವಚ್ಛ ಭಾರತ ಅಭಿಯಾನವನ್ನೂ ಮಾಡುತ್ತಿದ್ದಾರೆ. ಕೊವೀಡ್ ವೇಳೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಹಿರೇಮಾದಿನಾಳ ಗ್ರಾಮದ ಅಜ್ಜಿಯೊಬ್ಬರಿಗೆ ಮನೆಯನ್ನು ನಿರ್ಮಿಸಿಕೊಡುವ ಮೂಲಕ ಅನು ಮಾದರಿಯಾಗಿದ್ದಾರೆ.

ಖಾಸಗಿ ಶಾಲೆಗಳ ಎದುರು ಸರ್ಕಾರಿ ಶಾಲೆಗಳು ಮಂಕಾಗುತ್ತಿವೆ. ಸರ್ಕಾರಿ ಶಾಲೆಗಳು ಮುಚ್ಚಿ ಹೋಗುವ ಹಂತ ತಲುಪಿವೆ. ಸರ್ಕಾರಿ ಶಾಲೆಗಳು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದ್ದು, ಅವು ಮುಚ್ಚಿದರೆ ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಆದ್ದರಿಂದ ನಮ್ಮ ಶಾಲೆಗಳೂ ಉತ್ತಮವಾಗಿದ್ದರೆ ಹೆಚ್ಚು ಮಕ್ಕಳು ದಾಖಲಾಗಿ ಶಾಲೆ ಉಳಿಯಲಿದೆ ಎಂಬುದು ನಮ್ಮ ಉದ್ದೇಶ.
-ಅಕ್ಕ ಅನು, ಸಮಾಜ ಸೇವಕಿ

andolanait

Recent Posts

ಮೈಸೂರು ಸ್ಯಾಂಡಲ್‌ ಸೋಪ್‌ಗೆ ತಮನ್ನಾ ರಾಯಭಾರಿ ; ವಿಪಕ್ಷಗಳ ವಿರೋಧ

ಬೆಂಗಳೂರು : ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್) ನ ಐತಿಹಾಸಿಕ ಬ್ರ್ಯಾಂಡ್ ಮೈಸೂರು ಸ್ಯಾಂಡಲ್ ಸೋಪ್‌ಗೆ ನಟಿ…

8 hours ago

ಮೈಸೂರಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ

ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿದ ಸಂಸದ ಯದುವೀರ್ ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರು ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವ…

8 hours ago

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಕ್ಕೆ ಅನುಮತಿ ಸುಳಿವು

ಕುನ್ಹಾ ಆಯೋಗದ ವರದಿ ಆಧರಿಸಿ ಕ್ರಮ : ಪರಮೇಶ್ವರ್ ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿಗಳನ್ನು ನಡೆಸಲು…

8 hours ago

ಬಜೆಟ್‌ ದಿನಾಂಕ ಸದ್ಯದಲ್ಲೇ ನಿಗದಿ : ಸಿಎಂ

ಬೆಂಗಳೂರು : ವಿವಿಧ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸಲಾಗುತ್ತಿದ್ದು, ಆಯವ್ಯಯದ ದಿನಾಂಕವನ್ನು ಸದ್ಯದಲ್ಲಿಯೇ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬುಧವಾರ…

9 hours ago

T20 World Cup : ಡಬಲ್‌ ಸೂಪರ್‌ ಓವರ್‌ : 2 ಬಾರಿ ಟೈ ಆದ ಪಂದ್ಯದಲ್ಲಿ ಹರಿಣಗಳ ಮೇಲುಗೈ

ಅಹಮದಾಬಾದ್ : ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ಅಪ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಲೀಗ್ ಪಂದ್ಯವು ಎರಡು…

9 hours ago

ಮುಂದುವರೆದ ಡ್ರಗ್ಸ್‌ ಸಮರ : ಮಾದಕ ವಸ್ತು ವಶಕ್ಕೆ ; ಐವರ ಬಂಧನ

ಮೈಸೂರು : ನಗರದಲ್ಲಿ ಮಾದಕ ವಸ್ತು ಅಕ್ರಮ ಮಾರಾಟ ಮತ್ತು ಸಾಗಾಟದ ಮೇಲೆ ಸಿಸಿಬಿ ಮತ್ತು ಮಂಡಿ ಠಾಣಾ ಪೊಲೀಸರಿಂದ…

10 hours ago