ಬೆಳಗಾವಿ : ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಂದಿದ್ದು, 224 ವಿಧಾನಸಭಾ ಕ್ಷೇತ್ರಗಳಲ್ಲಿ 137 ಸ್ಥಾನವನ್ನ ಕಾಂಗ್ರೆಸ್ ಗೆಲ್ಲುವ ಮೂಲಕ ಸಂಪೂರ್ಣ ಬಹುಮತ ಪಡೆದುಕೊಂಡಿದೆ. ಬಿಜೆಪಿಯ ಘಟಾನುಘಟಿ ನಾಯಕರುಗಳು ಈ ಬಾರಿ ಸೋತಿದ್ದಾರೆ. ಅದರಂತೆ ಬಿಜೆಪಿ ಭದ್ರಕೋಟೆಯಾಗಿರುವ ಬೆಳಗಾವಿಯಲ್ಲಿ ಇದೀಗ ಕಾಂಗ್ರೆಸ್ 11 ಕ್ಷೇತ್ರಗಳಲ್ಲಿ ಗೆದ್ದುಕೊಂಡಿದೆ. ಈ ಕುರಿತು ಮಾತನಾಡಿದ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಇಡೀ ರಾಜ್ಯದಲ್ಲಿ ಜನ ಕಾಂಗ್ರೆಸ್ ಪರ ಆಶೀರ್ವಾದ ಮಾಡಿದ್ದಾರೆ. ಸ್ವಂತ ಬಲದ ಮೇಲೆ ಸರ್ಕಾರ ರಚನೆ ಆಗುತ್ತಿದೆ. ಮುಂದಿನ ಐದು ವರ್ಷ ಒಳ್ಳೆಯ ಕೆಲಸ ಮಾಡುವ ಹಂಬಲದಿಂದ ಅನೇಕ ಶಾಸಕರು ಆಯ್ಕೆಯಾಗಿದ್ದು, ಜನರ ಪ್ರೀತಿ ಗಳಿಸಿ ಅವರ ವಿಶ್ವಾಸ ಉಳಿಸುವ ಕೆಲಸ ಮಾಡ್ತೀವಿ ಎಂದರು.
ಸಿಎಂ ಆಯ್ಕೆ ಹೈಕಮಾಂಡ್ ತೀರ್ಮಾನ ಮಾಡುತ್ತೆ : ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ನಲ್ಲಿ ಮಾತನಾಡಿದ ಅವರು ‘ ಎಲ್ಲಾ ಜಿಲ್ಲೆಗಳಲ್ಲೂ ಕಾಂಗ್ರೆಸ್ ಶಾಸಕರು ಆರಿಸಿ ಬಂದಿದ್ದಾರೆ. ಸರ್ಕಾರ ರಚನೆಗೆ ಎಲ್ಲರದ್ದೂ ಪಾಲು ಇರುತ್ತೆ, ಬೆಳಗಾವಿಯದ್ದು ಏನು ವಿಶೇಷ ಇರಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಹಿಂದಿನಿಗಿಂತ ಹೆಚ್ಚಿನ ಆಶೀರ್ವಾದ ಮಾಡಿದ್ದಾರೆ. ಇನ್ನು ಕುಡಚಿ, ಕಾಗವಾಡದಲ್ಲಿ ಕಾಂಗ್ರೆಸ್ ಗೆಲುವು ವಿಚಾರ ‘ಚುನಾವಣಾ ಸಂದರ್ಭದಲ್ಲಿ ಜನರಿಗೆ ವಿಶ್ವಾಸ ಬರುವ ಮಾತು ಹೇಳಬೇಕು. ಆ ಮಾತಿನಿಂದ ಜನ ಆಶೀರ್ವಾದ ಮಾಡುವ ಮೂಲಕ ಅವರಿಬ್ಬರನ್ನು ಗೆಲ್ಲಿಸುವ ಕೆಲಸ ಮಾಡಿದ್ದಾರೆ ಎಂದರು. ಯಾರು ಸಿಎಂ ಆಗ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದು, ‘ರಾಷ್ಟ್ರೀಯ ಪಕ್ಷದಲ್ಲಿ ಶಾಸಕಾಂಗ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಅದು ಒಬ್ಬಿಬ್ಬರ ಅಭಿಪ್ರಾಯ ಅಲ್ಲ, 135 ಜನರ ಅಭಿಪ್ರಾಯ ಸಂಗ್ರಹ ಮಾಡ್ತಾರೆ. ವರದಿ ಒಪ್ಪಿಸಿದ ಮೇಲೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಮಂತ್ರಿ ಸ್ಥಾನ ಕುರಿತು ‘ಶಾಸಕರಾದ ಮೇಲೆ ಮಂತ್ರಿ ಆಗಬೇಕು, ಡಿಸಿಎಂ ಆಗಬೇಕು, ಸಿಎಂ ಆಗಬೇಕು ಅಂತಾ ಇರುತ್ತೆ. ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಪಕ್ಷ ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿರುತ್ತೆ.
ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯಗೆ ಕೊಟ್ಟ ಮಾತು ವೈರಲ್ ವಿಚಾರ ‘ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಿರಿಯರು, ಮತದಾರ ಆಶೀರ್ವಾದ ಗೆಲುವಿಗೆ ಕಾರಣ. ಚುನಾವಣೆಯಲ್ಲಿ ಭರವಸೆ ಮೂಡಿಸಲು ಆ ಮಾತು ಹೇಳಬೇಕಾಗುತ್ತದೆ. ನಾನೇನು ಬ್ರಹ್ಮನೂ ಅಲ್ಲ, ಬೇರೆಯವರ ರೀತಿ ನಾನು ದೊಡ್ಡ ನಾಯಕನೂ ಅಲ್ಲ. ಪ್ರಚಾರದ ವೇಳೆ ಲಕ್ಷ್ಮಣ್ ಸವದಿಗೆ ಕಬ್ಬು ಹೇರಲು ಕಲಿಸೋಣ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ‘ ಆಧುನಿಕ ಯುಗದಲ್ಲಿ ಕಬ್ಬು ಕಡಿಯುವ ಜನರು ಕಡಿಮೆ ಆಗಿದ್ದು, ಮಷಿನ್ ಬಂದಿದೆ. ನಿನ್ನೆ ಅಭಿನಂದನೆ ಸಮಾರಂಭದಲ್ಲಿ ಕಬ್ಬು ಕಡಿಯುವ ಮಷಿನ್ ತಂದು ಪೂಜೆ ಮಾಡಿಸಿದ್ರು, ಅದರ ಬಗ್ಗೆ ಚರ್ಚೆ ಮಾಡೋದು ಅನವಶ್ಯಕ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ವಿಚಾರ ‘ನಿರಂತರ ಪಕ್ಷ ಸಂಘಟನೆ ನನ್ನ ಹವ್ಯಾಸ, ನಾನು ರೂಢಿಸಿಕೊಂಡ ಸ್ವಭಾ, 11 ಕ್ಷೇತ್ರ ಇದ್ದಿದ್ದನ್ನು ಮುಂದಿನ ಬಾರಿ 18 ಕ್ಷೇತ್ರ ಒಯ್ಯಲು ಏನು ಮಾಡಬೇಕು ಮಾಡ್ತೀವಿ. ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಸೋಲು ‘ ಬಿಜೆಪಿಯವರು ಸಂಘಟಿತರಾಗಿ ಕೆಲಸ ಮಾಡಿದ್ದು ಒಂದಿರಬಹುದು. ಅದರ ಜೊತೆ ಬಹಳ ದುಡ್ಡಿನ ಪ್ರಭಾವ ಅಲ್ಲಿ ಬೀರಿತು. ಅಲ್ಲಿ ದುಡ್ಡಿನ ಹೊಳೆ ಹರಿಸಿದ್ದರಿಂದ ಸೋಲಾಗಿದೆ, ನಮಗೆ ಖೇದ ಆಗಿದೆ. ಹಿರಿಯ ರಾಜಕಾರಣಿ ಆರಿಸಿ ಬರಬೇಕು ಎಂಬ ಆಸೆ ಇತ್ತು, ನಮಗೂ ನೋವು ಇದೆ ಎಂದರು.
ಹೊಸದಿಲ್ಲಿ: ಮಾಜಿ ಪ್ರಧಾನಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ. ದೇವೇಗೌಡರು ಶುಕ್ರವಾರ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ…
ವಿಧಾನಸಭೆ : ರಾಜ್ಯದಲ್ಲಿರುವ ಮಹಾನಗರಪಾಲಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಚಾಲಕರು, ಲೋಡರ್ ಗಳು, ತ್ಯಾಜ್ಯ ಸಂಗ್ರಹಕಾರರು ಸೇರಿದಂತೆ ಇನ್ನಿತರೆ…
ಮೈಸೂರು : ಕಲರ್ಸ್ ಕನ್ನಡ ವಾಹಿನಿಯ ‘ಗಿಚ್ಚಿ ಗಿಲಿಗಿಲಿ ಜೂನಿಯರ‍್ಸ್’ ರಿಯಾಲಿಟಿ ಷೋಗಾಗಿ ಡಿ.20 ರಂದು ಬೆಳಿಗ್ಗೆ 11 ಗಂಟೆಗೆ…
ಬೆಳಗಾವಿ : ಆರೋಗ್ಯ ಸೇವೆಯಿಂದ ವಂಚಿತರಾಗಿರುವ ಜನರಿಗೆ ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕ ಯೋಜನೆ ನೆರವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
ಮೈಸೂರು : ಸಿನಿಮಾಗಳು ಮನರಂಜನೆಗಷ್ಟೇ ಸೀಮಿತವಾಗದೆ ಸಾಮಾಜಿಕ ಜವಾಬ್ದಾರಿಯುಳ್ಳ ಶಿಕ್ಷಣದ ಮಾಧ್ಯಮವಾಗಬೇಕು ಎಂದು ಖ್ಯಾತ ನಿರ್ದೇಶಕ ಬಿ.ಸುರೇಶ್ ಆಶಿಸಿದರು. ನಗರದ…
ಮೈಸೂರು : ಅಲ್ಪಸಂಖ್ಯಾತರ ಸಮುದಾಯ ವಾಸಿಸುವ ಸ್ಥಳಗಳಲ್ಲಿ ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿಗಳ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮಗಳನ್ನು…