BREAKING NEWS

Under 19 Worldcup 2024 Final: ಭಾರತ ಮಣಿಸಿ ಚಾಂಪಿಯನ್‌ ಆದ ಆಸ್ಟ್ರೇಲಿಯಾ

ಜನವರಿ 19ರಂದು ಆರಂಭವಾಗಿದ್ದ ಐಸಿಸಿ ಅಂಡರ್‌ 19 ವಿಶ್ವಕಪ್‌ ಟೂರ್ನಿಗೆ ತೆರೆಬಿದ್ದಿದ್ದು, ಇಂದು ( ಫೆಬ್ರವರಿ 11 ) ನಡೆದ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತ ತಂಡವನ್ನು 79 ರನ್‌ಗಳಿಂದ ಸೋಲಿಸಿ ಚಾಂಪಿಯನ್‌ ಪಟ್ಟಕ್ಕೇರಿದೆ.

ದಕ್ಷಿಣ ಆಫ್ರಿಕಾದ ಬೆನೊನಿಯ ವಿಲ್ಲೋಮೋರ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 253 ರನ್‌ ಗಳಿಸಿ ಭಾರತಕ್ಕೆ ಗೆಲ್ಲಲು 254 ರನ್‌ಗಳ ಸವಾಲಿನ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಟೀಮ್‌ ಇಂಡಿಯಾ 43.5 ಓವರ್‌ಗಳಲ್ಲಿ 174 ರನ್‌ಗಳಿಗೆ ಆಲ್‌ಔಟ್‌ ಆಗಿದೆ.

ಭಾರತದ ಪರ ಆರಂಭಿಕ ಆಟಗಾರ ಆದರ್ಶ್‌ ಸಿಂಗ್‌ ಹಾಗೂ ಮುರುಗನ್‌ ಅಭಿಷೇಕ್‌ ಹೊರತುಪಡಿಸಿ ಉಳಿದ ಯಾವ ಬ್ಯಾಟ್ಸ್‌ಮನ್‌ ಸಹ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಕಳೆದ ಪಂದ್ಯಗಳಲ್ಲಿ ಉತ್ತಮ ಆಟವನ್ನಾಡಿದ್ದ ನಾಯಕ ಉದಯ್‌ ಸಹರಣ್‌ ಹಾಗೂ ಸಚಿನ್‌ ದಾಸ್‌ ಈ ಪಂದ್ಯದಲ್ಲಿ ಎರಡಂಕಿ ಮುಟ್ಟುವಲ್ಲಿಯೂ ಯಶಸ್ವಿಯಾಗಲಿಲ್ಲ.

ಆದರ್ಶ್‌ ಸಿಂಗ್‌ 47, ಅರ್ಶಿನ್‌ ಕುಲ್ಕರ್ಣಿ 3, ಮುಶೀರ್‌ ಖಾನ್‌ 22, ಉದಯ್‌ ಸಹರಣ್‌ 8, ಸಚಿನ್‌ ದಾಸ್‌ 9, ಪ್ರಿಯಂಶು ಮೊಲಿಯಾ 9, ಅವಿನಾಶ್‌ ಅರವೆಳ್ಳಿ ಡಕ್‌ಔಟ್‌, ಮುರುಗನ್‌ ಅಭಿಷೇಕ್‌ 42, ರಾಜ್‌ ಲಿಂಬಾನಿ ಡಕ್‌ಔಟ್‌, ನಮನ್‌ ತಿವಾರಿ ಅಜೇಯ 14 ರನ್‌ ಹಾಗೂ ಸೌಮಿ ಪಾಂಡೆ 2 ರನ್‌ ಗಳಿಸಿದರು.

ಆಸ್ಟ್ರೇಲಿಯಾ ಪರ ಮಲಿ ಬಿಯರ್ಡ್‌ಮನ್‌ ಹಾಗೂ ರಾಫ್‌ ಮೆಕ್‌ಮಿಲನ್‌ ತಲಾ 3 ವಿಕೆಟ್‌ ಪಡೆದರೆ, ಕ್ಯಾಲಂ ವಿಡ್ಲೆರ್‌ 2 ವಿಕೆಟ್‌, ಚಾರ್ಲಿ ಆಂಡರ್‌ಸನ್‌ ಹಾಗೂ ಟಾಮ್‌ ಸ್ಟಾರ್ಕರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

andolana

Recent Posts

ಓದುಗರ ಪತ್ರ: ಜಗಕೆ ಮಾದರಿ!

ಜಗಕೆ ಮಾದರಿ! ಭಲೆ ಭಲೇ ಅಂಕೇಗೌಡರೆ ಜಗಕೆ ಮಾದರಿ ನಿಮ್ಮ ಪುಸ್ತಕಪ್ರೀತಿ ಅರಿವಿನ ಆಕರಗಳು ಪುಸ್ತಕಗಳು! ದುಡಿದ ಲಕ್ಷಾಂತರ ಹಣವನು…

43 mins ago

ಓದುಗರ ಪತ್ರ: ವಿವೇಕಾನಂದ ಪ್ರತಿಮೆ ಅನಾವರಣಗೊಳಿಸಿ

ಮೈಸೂರಿನ ವಿವೇಕಾನಂದ ನಗರದ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಪ್ರತಿಮೆಯನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಲಾಗಿದೆ. ಜ.೧೨ರಂದು ಸ್ವಾಮಿ ವಿವೇಕಾನಂದರ…

45 mins ago

ಓದುಗರ ಪತ್ರ: ಮಲ್ಲಯ್ಯನ ಬೆಟ್ಟ ಅಭಿವೃದ್ಧಿಗೊಳಿಸಿ

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದಲ್ಲಿರುವ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ (ಮಲ್ಲಯ್ಯನ ಬೆಟ್ಟ) ಪ್ರಸಿದ್ಧ ಪ್ರವಾಸಿ ಮತ್ತು ಧಾರ್ಮಿಕ…

47 mins ago

ಓದುಗರ ಪತ್ರ: ಬಸ್ ತಂಗುದಾಣ ನಿರ್ಮಿಸಿ

ಚಾಮರಾಜನಗರದ, ಸಿಂಹ ಚಲನಚಿತ್ರಮಂದಿರದ ಎದುರಿರುವ ಎಲ್‌ಐಸಿ ಕಚೇರಿಯ ಮುಂಭಾಗದಲ್ಲಿ ನಂಜನಗೂಡು-ಮೈಸೂರು ಸೇರಿದಂತೆ ವಿವಿಧ ಮಾರ್ಗಗಳ ಬಸ್‌ಗಳು ಸಂಚರಿಸುತ್ತವೆ. ಈ ಸ್ಥಳದಲ್ಲಿ…

49 mins ago

ಓದುಗರ ಪತ್ರ: ರಥೋತ್ಸವ: ಮುನ್ನೆಚ್ಚರಿಕೆ ಅಗತ್ಯ

ಚಾಮರಾಜನಗರ ಜಿಲ್ಲೆ ಮುಕ್ಕಡಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಮಾಯಮ್ಮ ದೇವಿ ರಥೋತ್ಸವದ ವೇಳೆ ರಥದ ಚಕ್ರದ ದಂಡ ಮುರಿದ ಪರಿಣಾಮ…

52 mins ago

ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರಿಗೆ ಸಂಕಷ್ಟ

ಲಕ್ಷ್ಮಿಕಾಂತ್ ಕೊಮಾರಪ್ಪ ಹೂವು ಅರಳುತ್ತಿರುವುದರಿಂದ ಕಾಫಿ ಕೊಯ್ಲಿಗೆ ಅಡ್ಡಿ; ಹೆಚ್ಚುವರಿ ಕಾರ್ಮಿಕ ವೆಚ್ಚವನ್ನು ಭರಿಸಬೇಕಾದ ಅನಿವಾರ್ಯತೆ ಸೋಮವಾರಪೇಟೆ: ತಾಲ್ಲೂಕಿನ ಗ್ರಾಮೀಣ,…

54 mins ago