ಮೈಸೂರು: ಶ್ರೀರಾಮ ಪ್ರಭುವಿನ ದರ್ಶನಕ್ಕೆ ಜಿಲ್ಲೆಯಿಂದ ತೆರಳುವ ಭಕ್ತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅಯೋಧ್ಯೆಗೆ ಮೈಸೂರಿನಿಂದ ರೈಲು ಸಂಪರ್ಕ ಕಲ್ಪಿಸಲಾಗಿದೆ.
ಮೈಸೂರು ಮಾರ್ಗವಾಗಿ ಅಯೋಧ್ಯೆಗೆ ಅತ್ಯಂತ ವೇಗವಾಗಿ ಚಲಿಸುವ ಮೈಸೂರು-ಅಯೋಧ್ಯೆ-ಮೈಸೂರು ರೈಲು ಸೇವೆ ಫೇಬ್ರವರಿ 4ರಿಂದ ಆರಂಭವಾಗಲಿದೆ. ಈ ಬಗ್ಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮೈಸೂರಿನಿಂದ ಅಯೋಧ್ಯೆಗೆ ರೈಲು ಫೆಬ್ರವರಿ 4 ಮತ್ತು ಫೆಬ್ರವರಿ 18 ರಂದು ಓಡಾಟ ನಡೆಸಲಿದೆ. ಅದರಂತೆಯೇ ಅಯೋಧ್ಯೆಯಿಂದ ಮೈಸೂರಿಗೆ ಫೆಬ್ರವರಿ 7 ಮತ್ತು ಫೆಬ್ರವರಿ 21 ರಂದು ಸಂಚಾರ ನಡೆಸಿಲಿದೆ.
ರೈಲ್ವೆ ಇಲಾಖೆ ತಯಾರಿಸಿರುವ ಈ ವೇಳಾಪಟ್ಟಿ ಅನ್ವಯ ರೈಲು ಮೈಸೂರಿನಿಂದ ಫೆಬ್ರವರಿ 4 ರಂದು ರಾತ್ರಿ 12.15 ಕ್ಕೆ ಹೊರಟು ಅಯೋಧ್ಯೆಗೆ ಫೆಬ್ರವರಿ 7ರ ರಾತ್ರಿ 12.55ಕ್ಕೆ ತಲುಪಲಿದೆ. ಇನ್ನು ಫೆಬ್ರವರಿ 18 ರಂದು ಇದೇ ಸಮಯಕ್ಕೆ ಹೊರಡಲಿರುವ ರೈಲು ಫೆಬ್ರವರಿ 21 ರಂದು ಅಯೋಧ್ಯೆ ತಲುಪಲಿದೆ.
ಅಯೋಧ್ಯೆಯಿಂದ ಮೈಸೂರಿನ ಕಡೆ ಸಂಚರಿಸಲಿರುವ ರೈಲು ಫೆಬ್ರವರಿ 7 ರಂದು ರಾತ್ರಿ 9.20ಕ್ಕೆ ಅಯೋಧ್ಯೆಯಿಂದ ಹೊರಟು ಮೈಸೂರಿಗೆ ಫೆಬ್ರವರಿ 10 ರ ಬೆಳಗ್ಗೆ 7 ಗಂಟೆಗೆ ತಲುಪಲಿದೆ. ಫೆಬ್ರವರಿ 21 ರಂದು ಕೂಡಾ ಇದೇ ಸಮಯಕ್ಕೆ ರೈಲು ಮೈಸೂರನನ್ನು ತಲುಪಲಿದೆ.
22 ಕೋಚ್ ಹೊಂದಿರುವ ಈ ರೈಲು ಮೈಸೂರು ಮಾರ್ಗವಾಗಿ ರಾಜ್ಯದ ಬೆಂಗಳೂರು, ತುಮಕೂರು, ಅರಸೀಕೆರೆ ಜಂಕ್ಷನ್, ಕಡೂರು, ಬೀರೂರು ಜಂಕ್ಷನ್‌ಗಳಲ್ಲಿ ನಿಲ್ದಾಣ ಹೊಂದಿರಲಿದೆ.
ಮಂಡ್ಯ: 2026ರ ಸಾಲಿನ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವವು ಮಾರ್ಚ್ 23ರಿಂದ ಏಪ್ರಿಲ್.4ರವರೆಗೆ ನಡೆಯಲಿದೆ. ಈ ಉತ್ಸವದ ಪ್ರಮುಖ…
ಮಂಡ್ಯ: ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ನಾನು ಕೊಟ್ಟ ಮಾತಿನಂತೆ ನುಡಿದಂತೆ ನಡೆಯುತ್ತಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ತಿಳಿಸಿದ್ದಾರೆ.…
ಮೈಸೂರು: ಕೆಲವು ಕಡೆ ಊಟದ ವಿಚಾರಕ್ಕಾಗಿಯೇ ಪ್ರವಾಸಿಗರು ಹೋಟೆಲ್ ರೂಂ ಬುಕ್ಕಿಂಗ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ ಎಂದು ಹೋಟೆಲ್ ಮಾಲೀಕರ ಸಂಘದ…
ಚೆನ್ನೈ: ಟಿವಿಕೆ ಪಕ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೇರಲಿದೆ ಎಂಬ ಸುದ್ದಿಗಳು ಕೇಳಿಬರುತ್ತಿರುವ ಬೆನ್ನಲ್ಲೇ ಟಿವಿಕೆ ಈಗ ಸ್ಪಷ್ಟನೆ…
ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಜೈರಾಜ್ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ಮೂದವರಾಗಿದ್ದ…
ಚಾಮರಾಜನಗರ: ಜಿಲ್ಲೆಯಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ಚಿರತೆ ಮತ್ತು ಆನೆಗಳ ದಾಳಿಯ ಬೆನ್ನಲ್ಲೇ, ಈಗ ಹುಲಿರಾಯನ…