BREAKING NEWS

ಬೈಯಪ್ಪನಹಳ್ಳಿಯಿಂದ ಹೋಗಬೇಕಿದ್ದ ಮೂರು ರೈಲುಗಳು ರದ್ದು : ಕಳಸದ 110 ಜನರು ಸೇಫ್

ಬೆಂಗಳೂರು : ಯಶವಂತಪುರದಿಂದ ಪಶ್ಚಿಮ ಬಂಗಾಳದ ಹೌರಾಗೆ ತೆರಳುತ್ತಿದ್ದ ರೈಲು ಅಪಘಾತಕ್ಕೊಳಗಾಗಿದ್ದು, 200ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಇತ್ತ ಬೆಂಗಳೂರಿನಿಂದ ಓಡಿಶಾಗೆ ಹೊರಡಬೇಕಿದ್ದ ಮೂರು ರೈಲುಗಳನ್ನು ರದ್ದುಗೊಳಿಸಲಾಗಿದ್ದು, ಮುಂಗಡ ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ಹಣ ಹಿಂದಿರುಗಿಸಲಾಗುತ್ತಿದೆ. ಇಂದು ಬೆಂಗಳೂರಿನ ಬೈಯಪ್ಪನಹಳ್ಳಿ SMVT ರೈಲ್ವೆ ನಿಲ್ದಾಣದಿಂದ ತೆರಳಬೇಕಿದ್ದ ಮೂರು ರೈಲುಗಳ ಸಂಚಾರವನ್ನು (ರದ್ದುಗೊಂಡ ರೈಲುಗಳ ಸಂಖ್ಯೆ- 12551, 12864 ಮತ್ತು 12253) ರದ್ದುಗೊಳಿಸಲಾಗಿದೆ.

ಅಪಘಾತಕ್ಕೊಳಗಾದ ರೈಲಿನಲ್ಲಿ ಬೈಯ್ಯಪ್ಪನಹಳ್ಳಿ SMVTನಿಂದ 1,294 ಮಂದಿ ಪ್ರಯಾಣ ಮಾಡುತ್ತಿದ್ದರು. ಇದರಲ್ಲಿ 994 ಮಂದಿ ರಿಸರ್ವ್ಡ್ ಪ್ಯಾಸೆಂಜರ್​, 300 ಅನ್ ರಿಸರ್ವ್ಡ್ ಪ್ಯಾಸೆಂಜರ್ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಕಳಸದ 110 ಜನ ಸೇಫ್

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ 110 ಮಂದಿ ಇದೇ ರೈಲಿನಲ್ಲಿ ಜಾರ್ಖಂಡ್​ನ ಸಮ್ಮೇದ ಶಿಖರ್ಜಿಗೆ ಪ್ರಯಾಣ ಬೆಳೆಸಿದ್ದರು. ಎಲ್ಲರೂ ಅಪಘಾತಕ್ಕೀಡಾದ ಬೋಗಿಗಳ ಪಕ್ಕದ ಬೋಗಿಯಲ್ಲಿ ಕುಳಿತಿದ್ದರು ಎಂದು ತಿಳಿದು ಬಂದಿದೆ. 150 ಜನರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಕಳಸ, ಸಂಸೆ, ಹೊರನಾಡು ಸುತ್ತಮುತ್ತಲಿನ ಜೈನ ಸಮುದಾಯದ 110 ಮಂದಿ ಪ್ರಯಾಣಿಸುತ್ತಿದ್ದರು.

ರೈಲು ಅಪಘಾತದ ಸಹಾಯಕ್ಕಾಗಿ ಸಹಾಯವಾಣಿ

ಬೆಂಗಳೂರು: 080-22356409
ಬಂಗಾರಪೇಟೆ: 08153 255253
ಕುಪ್ಪಂ: 8431403419
ವಿಶ್ವೇಶ್ವರಯ್ಯ ಟರ್ಮಿನಲ್ : 09606005129
ಕೃಷ್ಣರಾಜಪುರಂ: 88612 03980

 

lokesh

Recent Posts

ಓದುಗರ ಪತ್ರ: ನದಿ ಮಾಲಿನ್ಯ ತಡೆಗಟ್ಟಿ

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿ ಕಾವೇರಿ ನದಿಯ ಉಪನದಿಯಾಗಿದ್ದು, ಹುಣಸೂರು ಭಾಗದ ಬಹಳ ಮುಖ್ಯವಾದ…

1 hour ago

ಓದುಗರ ಪತ್ರ: ಸಚಿವ ಸೋಮಣ್ಣ ಹೇಳಿಕೆ ಸ್ವಾಗತಾರ್ಹ

ರೈಲ್ವೆ ನೇಮಕಾತಿ ಪರೀಕ್ಷೆಗಳನ್ನು ಕರ್ನಾಟಕದವರು ಇನ್ನು ಮುಂದೆ ಕನ್ನಡದಲ್ಲಿ ಬರೆಯಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಹಾಗೂ ರೈಲ್ವೆ ಇಲಾಖೆ…

1 hour ago

ಓದುಗರ ಪತ್ರ: ಅಪಾಯಕಾರಿ ಮರದ ಕೊಂಬೆ ತೆರವುಗೊಳಿಸಿ

ಮೈಸೂರಿನ ಮಾನಸಗಂಗೋತ್ರಿಯಿಂದ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿಗೆ (ಎಸ್‌ಜೆಸಿಇ) ಸಂಪರ್ಕ ಕಲ್ಪಿಸುವ ರಸ್ತೆಯ ಎಡ ಬದಿಯಲ್ಲಿ ಇರುವ ಮರವೊಂದರ ಕೊಂಬೆ…

1 hour ago

ಓದುಗರ ಪತ್ರ: ನವ ಭಾರತದ ನಿರ್ಮಾತೃ ಡಾ.ಅಂಬೇಡ್ಕರ್

ಶ್ರೇಷ್ಠ ಸಂವಿಧಾನದ ಮೂಲಕ ಶೋಷಿತ ಸಮುದಾಯಗಳಿಗೆ ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮೀಸಲು ಸೌಲಭ್ಯ ಕಲ್ಪಿಸುವ ಮೂಲಕ ಅವರ ಬಾಳಿಗೆ…

1 hour ago

ಆಂತರಿಕ ಕ್ಲೋಭೆಯಿಂದ ಭಾರತ ರಕ್ಷಿಸಿದ ಅಂಬೇಡ್ಕರ್

ಸಿ.ಹರಕುಮಾರ್, ಬರಹಗಾರ ಬಾಬಾ ಸಾಹೇಬ್‌ರ ಧಾರ್ಮಿಕ ನಿಲುವು ಅರಿಯಲು ಬಹುತೇಕರು ವಿಫಲ ಭಾರತದ ಭಾಗ್ಯವಿಧಾತ ಮತ್ತು ಸಂವಿಧಾನ ಕರ್ತೃ ಡಾ.ಬಿ.ಆರ್.ಅಂಬೇಡ್ಕರ್…

1 hour ago

ಕೊಡಗು ಜಿಲ್ಲೆಯಲ್ಲೂ ಹೆಚ್ಚುತ್ತಿರುವ ತಾಪಮಾನ

ನವೀನ್ ಡಿಸೋಜ ಬಳಲಿಕೆಯೊಂದಿಗೆ ಆರೋಗ್ಯ ಹದಗೆಡುವ ಸಾಧ್ಯತೆ; ಅಗತ್ಯ ಮುನ್ನೆಚ್ಚರಿಕೆಗೆ ಆರೋಗ್ಯ ಇಲಾಖೆ ಸಲಹೆ  ಮಡಿಕೇರಿ: ಅಚ್ಚ ಹಸಿರಿನ ಪರಿಸರದೊಂದಿಗೆ…

1 hour ago