BREAKING NEWS

ಜೆಸಿಬಿ ಹರಿದು ಹೊಲದ ಕಾಲುದಾರಿಯಲ್ಲಿ ಮಲಗಿದ್ದ ಮೂವರು ಕಾರ್ಮಿಕರು ಸಾವು

ರಾಯಚೂರು : ಹೊಲದ ಕಾಲುದಾರಿಯಲ್ಲಿ ಮಲಗಿದ್ದ ಮೂವರು ಕಾರ್ಮಿಕರ ಮೇಲೆ‌ ಜೆಸಿಬಿ ಹರಿದು ಅಷ್ಟೂ ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ನೀಲವಂಜಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮಂಗಳವಾರ ರಾತ್ರಿ ನಡೆದಿರುವ ಈ ಘಟನೆಗೆ ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ.

ಇದು ಮರಳುಗಣಿಗಾರಿಕೆಗೆ ಸಂಬಂಧಿಸಿದ ಜೆಸಿಬಿಯೆಂಬ ಆರೋಪ ಕೇಳಿ ಬಂದಿದ್ದು ಸಾರ್ವಜನಿಕರ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ದೇವದುರ್ಗ ಶಾಸಕಿ ಶಾಸಕಿ ಜಿ ಕರಮ್ಮೆ ನಾಯಕ ಅವರು ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದಾಗಿ ಅಮಾಯಕರ ಜೀವ ಕಳೆದ ಹೋಗುತ್ತಿದ್ದು ಇದನ್ನು ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಮೃತಪಟ್ಟವರನ್ನು ಛತ್ತೀಸ್ ಗಢ ರಾಜ್ಯದ ಕಾರ್ಮಿಕರಾಗಿದ್ದು, ವಿಷ್ಣು (26), ಶಿವರಾಮ್(28), ಬಲರಾಮ್(30) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಬೋರ್ ವೆಲ್ ವಾಹನದಲ್ಲಿ ಬಂದಿದ್ದರು : ನೀಲವಂಜಿ ಗ್ರಾಮದಲ್ಲಿ ರೈತ ಓರ್ವನ ಜಮೀನಿಗೆ ಬೋರ್ವೆಲ್ ಕೊರೆಯಲು ಬೋರವೆಲ್ ವಾಹನದಲ್ಲಿ ಆಗಮಿಸಿದ್ದರು. ಬೋರವೆಲ್ ಕೆಲಸ ಮುಗಿದ ನಂತರದಲ್ಲಿ ರಾತ್ರಿಯ ವೇಳೆ ಹೊಲದಲ್ಲಿನ ಕಾಲುದಾರಿಯಲ್ಲಿ ಕಾರ್ಮಿಕರು ಮಲಗಿದ್ದು, ಬೋರ್ವೆವೆಲ್ ಕೊರೆಯುವ ಕೆಲಸ ಮಾಡಿದ್ದರಿಂದ ಗಾಢ ನಿದ್ರೆ ಜಾರಿಕೊಂಡಿದ್ದಾರೆ.

ಇತ್ತ ಹೊಲದಲ್ಲಿ ಜೆಸಿಬಿ ಹೊಲದಲ್ಲಿ ಬಂದಿದ್ದು, ರಾತ್ರಿ ಸಮಯದಲ್ಲಿ ನಿದ್ರೆಗೆ ಜಾರಿದ ಕಾರ್ಮಿಕರ ಮೇಲೆ ಹರಿದು ಹೋಗಿದೆ. ಪರಿಣಾಮ ಸ್ಥಳದಲ್ಲೇ ಮೃತಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಮೃತರ ಪೋಷಕರಿಗೆ ಮಾಹಿತಿ

ಘಟನೆ ವಿಷಯ ತಿಳಿದ ದೇವದುರ್ಗ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ‌ ಸಂಭವಿಸಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುತ್ತದೆ. ಮೃತರ ಪೊಷಕರಿಗೆ ಮಾಹಿತಿ ನೀಡಲಾಗಿದೆ. ಅವರ ದೂರಿನ ಮೇರೆಗೆ ಮುಂದೆ ತನಿಖೆಯನ್ನು ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಶಾಸಕಿ ಜಿ ಕರೆಮ್ಮ ನಾಯಕ. ದೇವದುರ್ಗ ತಾಲೂಕಿನ ಅಕ್ರಮ ಮರಳುಗಾರಿಕೆಯಿಂದಾಗಿ ಇಂತಹ ಅಮಾಯಕರ ಜೀವ ಕಳೆದ ಹೋಗುತ್ತಿವೆ. ತಾಲೂಕಿನ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ತಡೆಯುವುದಕ್ಕೆ ನಾನು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳು ಮನವಿ ಸಲ್ಲಿಸುವುದರ ಜೊತೆಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ನಿನ್ನೆ ಮೂವರು ಮೃತಪಟ್ಟಿರುವ ಕಾರಣ ಅಕ್ರಮ ಮರಳುಗಾರಿಕೆ. ರಾತ್ರಿಯ ವೇಳೆ ದೊಡ್ಡ ದೊಡ್ಡ ಲಾರಿಗಳು ಓಡಾಡುತ್ತಿವೆ. ಇದನ್ನು ತಡೆಯುವಂತೆ ಸೂಚಿಸಿ, ಸ್ಥಳದಲ್ಲಿ ಪೋಲೀಸರನ್ನು ನಿಯೋಜಿಸುವಂತೆ ಹೇಳಿದ್ದೇನೆ. ಅಲ್ಲದೇ ದೊಡ್ಡ ದೊಡ್ಡ ಲಾರಿಗಳು ಓಡಾಡುತ್ತಿರುವುದ್ದರಿಂದ ಗ್ರಾಮಸ್ಥರು ಕೂಡ ಭಯ ಭೀತರಾಗಿ, ನಮ್ಮಗೆ ಕರೆ ಮಾಡುತ್ತಿದ್ದಾರೆ. ದೇವದುರ್ಗ ಒಂದು ಮಾಫಿಯ ಕೆಲಸ ಮಾಡುತ್ತಿದೆ‌ ಎಂದು ಮಾಹಿತಿ ನೀಡಿದ್ದಾರೆ.

lokesh

Recent Posts

ಪೌತಿ ಖಾತಾ ಅರ್ಜಿ ಶೀಘ್ರ ವಿಲೇವಾರಿ ಮಾಡಿ : ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಸೂಚನೆ

ಮಂಡ್ಯ : ಪೌತಿ ಖಾತಾ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಮುಂದಿನ ಆರು ತಿಂಗಳುಗಳೊಳಗೆ ಪೌತಿ ಖಾತಾ ಆಂದೋಲನದಲ್ಲಿ ಯಾವುದೇ…

6 hours ago

ಜಿ-ರಾಮ್‌ಜಿ ವಾಪಸ್‌ ಪಡೆಯಿರಿ : ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಬೆಂಗಳೂರು : ಉದ್ಯೋಗ ಖಾತರಿಯನ್ನು ಇಲ್ಲವಾಗಿಸುವ ಮತ್ತು ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವ್ಯತಿರಿಕ್ತವಾಗಿರುವ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು…

6 hours ago

ಹಣ ಅಕ್ರಮ ವರ್ಗಾವಣೆ ಪ್ರಕರಣ : ಕಾಂಗ್ರೆಸ್‌ ಶಾಸಕ ವೀರೇಂದ್ರಗೆ ಜಾಮೀನು

ಬೆಂಗಳೂರು : ಜಾರಿ ನಿರ್ದೇಶನಾಲಯ(ಇ.ಡಿ) ದಾಖಲಿಸಿದ್ದ ಕ್ರಿಮಿನಲ್‌ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಅವರಿಗೆ ಬಿಗ್‌ ರಿಲೀಫ್‌…

8 hours ago

ಮೈಸೂರಿನಲ್ಲಿ ಪತ್ರಕರ್ತರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ : ಜಿಲ್ಲಾಧಿಕಾರಿ ಮೆಚ್ಚುಗೆ

ಮೈಸೂರು : ಬೇರೆ ಜಿಲ್ಲೆಗಳಿಗೆ ಹೋಲಿಸಿಕೊಂಡರೆ ಮೈಸೂರಿನ ಪತ್ರಿಕೋದ್ಯಮ ಗುಣಮಟ್ಟದಿಂದ ಕೂಡಿದ್ದು, ಇಲ್ಲಿನ ಪತ್ರಕರ್ತರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು…

8 hours ago

ಕೈಗಾರಿಕೆ ಸ್ಥಾಪನೆಗೆ ಅರ್ಜಿ ಬಂದರೆ ಸಂಪೂರ್ಣ ಬೆಂಬಲ: ಸಚಿವ ಚಲುವರಾಯಸ್ವಾಮಿ ಭರವಸೆ

ಮಂಡ್ಯ : ಕೇಂದ್ರ ಬೃಹತ್ ಉಕ್ಕು ಮತ್ತು ಕೈಗಾರಿಕಾ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಯಾವುದಾದರೂ ಕಂಪನಿಗಳಿಂದ ಕೈಗಾರಿಕೆ ಸ್ಥಾಪನೆಗೆ…

9 hours ago

ಜ.1ರಂದು ಚಾ.ಬೆಟ್ಟಕ್ಕೆ ಹೆಚ್ಚಿನ ಜನ ನಿರೀಕ್ಷೆ : ಅಗತ್ಯ ವ್ಯವಸ್ಥೆಗೆ ಜಿಲ್ಲಾಧಿಕಾರಿ ಸೂಚನೆ

ಮೈಸೂರು : ಹೊಸ ವರ್ಷ ಜನವರಿ 1ರಂದು ಚಾಮುಂಡಿ ಬೆಟ್ಟಕ್ಕೆ ಹೆಚ್ವಿನ ಭಕ್ತಾಧಿಗಳು ಆಗಮಿಸುವ ನಿರೀಕ್ಷೆ ಇದ್ದು, ಅಗತ್ಯ ವ್ಯವಸ್ಥೆಗಳನ್ನು…

10 hours ago