ಬೀದರ್ : ಮರಾಠಾ ಮೀಸಲಾತಿಗಾಗಿ ಮಹಾರಾಷ್ಟ್ರದಲ್ಲಿ ಹೋರಾಟ ತೀವ್ರಗೊಂಡಿದೆ. ಕೆಎಸ್‍ಆರ್ ಟಿಸಿ ಬಸ್‍ಗೆ ಬೆಂಕಿಹಚ್ಚಿ ಮರಾಠಾ ಪುಂಡರು ಪುಂಡಾಟ ಮೆರೆದಿದ್ದಾರೆ.
ಮಹಾರಾಷ್ಟ್ರದ ಉಮ್ಮರ್ಗಾದ ತುರುರಿ ಬಳಿ ಬಸ್ ಹೊತ್ತಿ ಉರಿದಿದೆ. ಇದಕ್ಕೂ ಮುನ್ನ ಬಸ್‍ನ ಗ್ಲಾಸ್ ಹಾಗೂ ಕಿಟಕಿಗಳ ಗಾಜು ಪುಡಿಪುಡಿ ಮಾಡಿದ್ದಾರೆ. ಘಟನೆಯಲ್ಲಿ ಡ್ರೈವರ್, ಕಂಡಕ್ಟರ್ ಸೇರಿ ಬಸ್‍ನಲ್ಲಿದ್ದ 46 ಮಂದಿ ಪ್ರಯಾಣಿಕರು ಬಚಾವ್ ಆಗಿದ್ದಾರೆ.
ಈ ಬಸ್ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಡಿಪೋಗೆ ಸೇರಿದ್ದಾಗಿದೆ. ಭಾಲ್ಕಿಯಿಂದ ಪುಣೆಗೆ ಹೊರಟಿತ್ತು. ಈ ವೇಳೆ ಕಿಡಿಗೇಡಿಗಳು ದುಷ್ಕೃತ್ಯ ಮೆರೆದಿದ್ದಾರೆ. ಇದು ಕನ್ನಡ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಮುಂಜಾಗ್ರತಾ ಕ್ರಮವಾಗಿ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮವು ಮಹಾರಾಷ್ಟ್ರಕ್ಕೆ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಿಂದ ಹೊರಡುವ ಬಸ್ ಸಂಚಾರಗಳೆಲ್ಲವನ್ನು ಬಂದ್ ಮಾಡಲಾಗಿದೆ. ಅಲ್ಲದೇ ಈಗಾಗಲೇ ಮಹಾರಾಷ್ಟ್ರ ವ್ಯಾಪ್ತಿಯೊಳಗಿರುವ ಬಸ್‍ಗಳು ಸಮೀಪದ ಡಿಪೋ ಇಲ್ಲವೇ ಪೊಲೀಸ್ ಠಾಣೆಯೊಳಗೆ ನಿಲ್ಲಿಸಲು ಕೆ ಎಸ್ ಆರ್ ಟಿಸಿ ಎಂಡಿ ರಾಚಪ್ಪ ಅವರು ತಮ್ಮ ನಿಗಮದ ಬಸ್ ಚಾಲಕ, ನಿರ್ವಾಹಕರಿಗೆ ಸೂಚನೆ ನೀಡಿದ್ದಾರೆ.
ಈಗಿನ ಕಾಲದ ಮಕ್ಕಳಿಗೆ ಎಲ್ಲವೂ ಕ್ಷಣ ಮಾತ್ರದಲ್ಲಿ ಅರ್ಥವಾಗುವುದರಿಂದ ಅವರ ವರ್ತನೆಯಲ್ಲಿ ಸಹಜತೆಯನ್ನು ಕಾಣಬಹುದು. ಇಂದಿನ ಮಕ್ಕಳಿಗೆ ಭಯ ಇಲ್ಲ…
ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಮತ್ತು ನಾಗರತ್ನ ದಂಪತಿಯ ವಿವಾಹ ವಿಚ್ಛೇದನಕ್ಕೆ ರಾಜ್ಯ ಹೈಕೋರ್ಟ್ ಸಮ್ಮತಿ ನೀಡಿರುವುದು ಮಾಧ್ಯಮಗಳ…
ಮೈಸೂರಿನ ಶಾರದಾದೇವಿ ನಗರದಲ್ಲಿ ಹೊಸ ಬಸ್ ನಿಲ್ದಾಣವನ್ನು ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಈ ಬಸ್…
ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ರಾಷ್ಟ್ರೀಯ ಸ್ವಯಂ ಸೇವಾ ಸಂಘವು ಆರಂಭವಾಗಿ ನೂರು ವರ್ಷ ತುಂಬಿದ ಸ್ಮರಣಾರ್ಥವಾಗಿ ಸಂಘದ ಉದ್ದೇಶ…
ಅಕ್ಷತಾ ‘ಹವ್ಯಾಸ ಮನುಷ್ಯನ ಕನಸುಗಳಿಗೆ ಗರಿ ಮೂಡಿಸುತ್ತದೆ. ಕನಸು ಕಾಣುವ ವ್ಯಕ್ತಿಗೆ ಅವಕಾಶಗಳ ದಾರಿ ತೆರೆದುಕೊಳ್ಳುತ್ತವೆ’ ಇದು ಬೆಂಗಳೂರಿನಲ್ಲಿ ನೆಲೆಸಿರುವ…
ಸಿರಿ ಮೈಸೂರು ಆ ದಿನ ನಾನು ಸಾಮಾನ್ಯವಾಗಿ ಹೋಗದಂತಹ ಒಂದು ಅಪರೂಪದ ಸ್ಥಳಕ್ಕೆ ಹೋಗಿದ್ದೆ. ಮೈಸೂರಿನಿಂದ ಐದಾರು ಗಂಟೆಗಳ ಪ್ರಯಾಣದ…