ಓದುಗರ ಪತ್ರ
ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಮತ್ತು ನಾಗರತ್ನ ದಂಪತಿಯ ವಿವಾಹ ವಿಚ್ಛೇದನಕ್ಕೆ ರಾಜ್ಯ ಹೈಕೋರ್ಟ್ ಸಮ್ಮತಿ ನೀಡಿರುವುದು ಮಾಧ್ಯಮಗಳ ಮೂಲಕ ಜನರಿಗೆ ತಿಳಿದಿದೆ. ಇವರ ವಿವಾಹ ವಿಚ್ಛೇದನ ಪ್ರಕರಣ ಅನೇಕ ವರ್ಷಗಳಿಂದ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ದೇಶದಲ್ಲಿ ಅನೇಕ ನಟಿ-ನಟಿಯರು ವೈಯಕ್ತಿಕ ಕಾರಣಗಳಿಂದಾಗಿ ಅಥವಾ ಸಾಂಸಾರಿಕ ಬಿಕ್ಕಟ್ಟುಗಳಿಂದ ಪಾರಾಗಲು ವಿವಾಹ ವಿಚ್ಛೇದನೆಗೆ ಮುಂದಾಗುತ್ತಿರುವುದು, ಅದರಲ್ಲೂ ಭಾರತದಂತಹ ನೆಲದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ನಿಜಕ್ಕೂ ಆತಂಕ ಮೂಡಿಸುತ್ತದೆ. ಕಾರಣ ಈ ನೆಲ ಗಟ್ಟಿಯಾದ ಪತಿ-ಪತ್ನಿ ಕುಟುಂಬದ ಬೇರನ್ನು ಹೊಂದಿರುವುದು ಪಾಶ್ಚಾತ್ಯರಲ್ಲೂ ಅಚ್ಚರಿ ಮೂಡಿಸುವಂತಿತ್ತು. ಈಗ ಇದು ಇತಿಹಾಸವಾಗುತ್ತಿದೆಯೇನೋ ಎನ್ನಿಸುತ್ತಿದೆ.
ತಮ್ಮ ಹೆಂಡತಿ ಹಾಗೂ ಮೂರು ಮಕ್ಕಳಿಗೆ ಪರಿಹಾರದ ರೂಪದಲ್ಲಿ ದುನಿಯಾ ವಿಜಯ್ ನ್ಯಾಯಾಲಯದ ಆದೇಶದ ಪ್ರಕಾರ ಎರಡು ಕೋಟಿ ರೂ.ಗಳನ್ನು ನೀಡಲು ಒಪ್ಪಿzರೆ. ಬಾಲಿವುಡ್‌ನಲ್ಲೂ ಈ ರೀತಿಯ ವಿಚ್ಛೆದನಗಳು ಸಾಮಾನ್ಯವಾಗಿ ಹೋಗಿವೆ. ಅಲ್ಲೂ ಪರಿಹಾರದ ಮೊತ್ತ ಕೋಟಿ ಕೋಟಿ ರೂಪಾಯಿಗಳದಾಗಿರುತ್ತದೆ. ಇವುಗಳನ್ನೆ ನೋಡಿದರೆ, ವಿವಾಹ ದಂತೆ, ವಿಚ್ಛೇದನವೂ ದುಬಾರಿಯಾಗುತ್ತಿದೆಯೇನೋ?! ಆದರೆ ಇದು ಒಳ್ಳೆಯದಕ್ಕೋ ಅಥವಾ ಕೆಟ್ಟದ್ದಕ್ಕೋ ಎಂಬುದು ಮಾತ್ರ ಅರ್ಥವಾಗುತ್ತಿಲ್ಲ.
-ಕೆ.ವಿ.ವಾಸು, ಮೈಸೂರು
ಈಗಿನ ಕಾಲದ ಮಕ್ಕಳಿಗೆ ಎಲ್ಲವೂ ಕ್ಷಣ ಮಾತ್ರದಲ್ಲಿ ಅರ್ಥವಾಗುವುದರಿಂದ ಅವರ ವರ್ತನೆಯಲ್ಲಿ ಸಹಜತೆಯನ್ನು ಕಾಣಬಹುದು. ಇಂದಿನ ಮಕ್ಕಳಿಗೆ ಭಯ ಇಲ್ಲ…
ಮೈಸೂರಿನ ಶಾರದಾದೇವಿ ನಗರದಲ್ಲಿ ಹೊಸ ಬಸ್ ನಿಲ್ದಾಣವನ್ನು ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಈ ಬಸ್…
ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ರಾಷ್ಟ್ರೀಯ ಸ್ವಯಂ ಸೇವಾ ಸಂಘವು ಆರಂಭವಾಗಿ ನೂರು ವರ್ಷ ತುಂಬಿದ ಸ್ಮರಣಾರ್ಥವಾಗಿ ಸಂಘದ ಉದ್ದೇಶ…
ಅಕ್ಷತಾ ‘ಹವ್ಯಾಸ ಮನುಷ್ಯನ ಕನಸುಗಳಿಗೆ ಗರಿ ಮೂಡಿಸುತ್ತದೆ. ಕನಸು ಕಾಣುವ ವ್ಯಕ್ತಿಗೆ ಅವಕಾಶಗಳ ದಾರಿ ತೆರೆದುಕೊಳ್ಳುತ್ತವೆ’ ಇದು ಬೆಂಗಳೂರಿನಲ್ಲಿ ನೆಲೆಸಿರುವ…
ಸಿರಿ ಮೈಸೂರು ಆ ದಿನ ನಾನು ಸಾಮಾನ್ಯವಾಗಿ ಹೋಗದಂತಹ ಒಂದು ಅಪರೂಪದ ಸ್ಥಳಕ್ಕೆ ಹೋಗಿದ್ದೆ. ಮೈಸೂರಿನಿಂದ ಐದಾರು ಗಂಟೆಗಳ ಪ್ರಯಾಣದ…
ಕೀರ್ತಿ ಬೈಂದೂರು ಇಳಿಬಿಟ್ಟ ಕೂದಲು, ಹೆಚ್ಚೆನಿಸಿದರೂ ಕಡಿಮೆಯಾಗದ ನಗು, ಸಮತೂಕದ ದನಿ, ಬೊಗಸೆ ಪ್ರೀತಿಗೆ ಸಾಗರದಷ್ಟು ವಾತ್ಸಲ್ಯವನ್ನು ಮೊಗೆದು ಕೊಡಲು…