BREAKING NEWS

ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ ವೇನಲ್ಲಿ ಭೀಕರ ಅಪಘಾತ : ಮೂವರ ಸಾವು

ಚನ್ನಪಟ್ಟಣ : ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಲಂಬಾಣಿ ತಾಂಡಾ ಬಳಿ ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ ವೇನಲ್ಲಿ ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ನೂತನ ಬೆಂಗಳೂರು ಮೈಸೂರು ದಶಪಥ ರಸ್ತೆಯಲ್ಲಿ ಈ ಘಟನೆ ಸಂಭವಿಸಿದ್ದು, ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಇನ್ನೊವಾ ಕಾರು ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಪಕ್ಕದ ರಸ್ತೆಯಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಆಲ್ಟೋ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಆಲ್ಟೋ ಕಾರಿನಲ್ಲಿದ್ದ ಮೂವರು (ತಂದೆ ಹಾಗೂ ಇಬ್ಬರು ಮಕ್ಕಳು) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಅತಿವೇಗದ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದಲ್ಲಿ ಮೃತಪಟ್ಟವರು ಟಿ.ನರಸೀಪುರ ಮೂಲದವರು ಎಂದು ಹೇಳಲಾಗುತ್ತಿದೆ. ಈ ಕುರಿತು ಪೊಲೀಸರು ಇನ್ನಷ್ಟೇ ಅಧಿಕೃತ ಹೇಳಿಕೆ ನೀಡಬೇಕಿದೆ. ಸ್ಥಳಕ್ಕೆ ಚನ್ನಪಟ್ಟಣ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್ ಕಣಿಮಿಣಿಕೆ ಬಳಿ ಟೋಲ್ ಕಟ್ಟುವುದನ್ನು ತಪ್ಪಿಸಲು ಹೋಗಿ ಬೈಕ್​ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಕಳೆದ ತಿಂಗಳು ಸಂಭವಿಸಿತ್ತು. ಹಿಂಬದಿ ಸವಾರ ಗಾಯಗೊಂಡಿದ್ದರು. ಈ ಕಹಿ ಘಟನೆಯ ನೆನಪು ಮಾಸುವ ಮುನ್ನವೇ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ.

lokesh

Recent Posts

ಬೆಳಗಾವಿಯ ನಗರಾಭಿವೃದ್ಧಿ ಕೋಶದ ಎಇಇ ಮನೆಯಲ್ಲಿ 14 ಕೋಟಿ ಅಕ್ರಮ ಆಸ್ತಿ ಪತ್ತೆ

– 6 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 3 ಕೋಟಿ ಡೆಪಾಸಿಟ್ ಪತ್ತೆ ಬೆಳಗಾವಿ : ಇಲ್ಲಿನ ನಗರಾಭಿವೃದ್ಧಿ…

15 mins ago

ವಿರಾಜಪೇಟೆ ಐತಿಹಾಸಿಕ ಕೆರೆಗಳ ಒತ್ತುವರಿ ಆರೋಪ

ಕಾಂಗೀರ ಬೋಪಣ್ಣ ವಿರಾಜಪೇಟೆ : ಪುರಸಭೆ ವ್ಯಾಪ್ತಿಗೆ ಒಳಪಡುವ ೨ ಐತಿಹಾಸಿಕ ಕೆರೆಗಳು ಒತ್ತುವರಿಯಾಗಿರುವ ಆರೋಪ ಕೇಳಿ ಬಂದಿದ್ದು, ಈ…

2 hours ago

ಪಿಯುಸಿ : ಗುಂಡ್ಲುಪೇಟೆಯಲ್ಲಿ ಬಾಲಕಿಯರೇ ಮೇಲುಗೈ

ರೈತರು, ಕೂಲಿ ಕಾರ್ಮಿಕರ ಮಕ್ಕಳೇ ಟಾಪರ್ಸ್‌ ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ : ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು ತಾಲ್ಲೂಕಿನ…

2 hours ago

ಮೈಸೂರು ಜಿಲ್ಲೆಯ 147 ಗ್ರಾಪಂಗಳೀಗ ಕ್ಷಯ ಮುಕ್ತ!

ಡಿಎಚ್‌ಒ ಡಾ.ಪಿ.ಸಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕ್ಷಯರೋಗ ಮುಕ್ತ ಗ್ರಾಪಂ ಅಭಿಯಾನ ಮೈಸೂರು : ಜಿಲ್ಲೆಯಲ್ಲಿ ಕ್ಷಯ ರೋಗ ಮತ್ತು ಸಾವಿನ ಪ್ರಮಾಣ…

2 hours ago

ಓದುಗರ ಪತ್ರ | ಜನಗಣತಿ ಪಾರದರ್ಶಕ,ನಿಖರವಾಗಿರಲಿ. . .

ಭಾರತದ ಜನಗಣತಿ ಕಾಯ್ದೆ ೧೯೪೮ರ ಪ್ರಕಾರ ಈ ಬಾರಿಯ ಜನಗಣತಿ ೨೦೨೭ರ ಕಾರ್ಯವು ಎರಡು ಹಂತಗಳಲ್ಲಿ ನಡೆಯುತ್ತಿದ್ದು, ಈ ಜನಗಣತಿಯು…

2 hours ago

ಬಾಪೂ ಆದರ್ಶ ಮಡದಿ ಕಸ್ತೂರ ಬಾ ಗಾಂಧಿ

ಡಾ.ಎಂ.ಡಿ.ಉಮೇಶ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪತ್ನಿ ಕಸ್ತೂರ ಬಾ ಅವರು ಏ. ೧೧, ೧೮೬೯ರಂದು ಗುಜರಾತ್‌ನ ಪೋರಬಂದರ್‌ನಲ್ಲಿ ಗೋಕುಲ್‌ದಾಸ್ ಕಪಾಡಿಯಾ…

3 hours ago