BREAKING NEWS

ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ : 625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿಗಳೆಷ್ಟು ?

ಬೆಂಗಳೂರು : ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ ಎಂದೇ ಪರಿಗಣಿಸಲಾದ ಎಸ್​ಎಸ್​ಎಲ್​ಸಿ 2022-23ನೇ ಸಾಲಿನ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಎಂಟು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊರಬಿದ್ದಿದ್ದು, ಈ ಬಾರಿ ಶೇಕಡ 83.89 ಫಲಿತಾಂಶ ದಾಖಲಾಗಿದೆ.

ಒಟ್ಟು 7,00,619 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಪೈಕಿ 3,41,108 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, 3,59,511 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ಈ ಬಾರಿಯೂ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ.

ಬೆಂಗಳೂರಿನ ನ್ಯೂ ಮೆಕಾಲೆ ಶಾಲೆಯ ಭೂಮಿಕಾ ಪೈ, ಚಿಕ್ಕಬಳ್ಳಾಪುರ ಜಿಲ್ಲೆಯ ಅಗಲಗುರ್ಕಿಯ  ಬಿಜಿಎಸ್ ಶಾಲೆಯ ಯಶಸ್​​ಗೌಡ,  ಸವದತ್ತಿಯ ಶ್ರೀಕುಮಾರೇಶ್ವರ ಶಾಲೆಯ ಅನುಪಮಾ ಶ್ರೀಶೈಲ್ ಹಿರೆಹೋಳಿ, ವಿಜಯಪುರದ ನಾಗರಬೆಟ್ಟದ ಆಕ್ಸ್​ಫರ್ಡ್​ ಆಂಗ್ಲ ಶಾಲೆಯ ಭೀಮನಗೌಡ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

 

ಜಿಲ್ಲಾವಾರು ಫಲಿತಾಂಶ

ಚಿತ್ರದುರ್ಗ -ಶೇ.96.8

ಮಂಡ್ಯ-ಶೇ.96.74

ಹಾಸನ-ಶೇ.96.68

ಬೆಂಗಳೂರು ಗ್ರಾಮಾಂತರ-ಶೇ.96.48

ಚಿಕ್ಕಬಳ್ಳಾಪುರ-ಶೇ.96.15

ಕೋಲಾರ-ಶೇ.94.6

ಚಾಮರಾಜನಗರ -ಶೇ.,94.32

ಮಧುಗಿರಿ- ಶೇ.93.23

ಕೊಡಗು-ಶೇ.93.19

ವಿಜಯನಗರ- ಶೇ.91.41

ವಿಜಯಪುರ- ಶೇ. 91.23

ಚಿಕ್ಕೋಡಿ-91.07

ಉತ್ತರಕನ್ನಡ- ಶೇ.90.53

ದಾವಣಗೆರೆ- ಶೇ.90.43

ಕೊಪ್ಪಳ- ಶೇ.90.27

ಮೈಸೂರು ಜಿಲ್ಲೆ- ಶೇ.89.75

ಚಿಕ್ಕಮಗಳೂರು-ಶೇ.89.69

ಉಡುಪಿ- ಶೇ. 89.49

ದಕ್ಷಿಣ ಕನ್ನಡ- ಶೇ. 89.47

ತುಮಕೂರು- ಶೇ. 89.43

ರಾಮನಗರ- ಶೇ. 89.42

ಹಾವೇರಿ ಶೇ.89.11

ಶಿರಸಿ- ಶೇ.87.39

ಧಾರವಾಡ-ಶೇ.86.55

ಗದಗ-ಶೇ.86.51

ಬೆಳಗಾವಿ-ಶೇ.85.85

ಬಾಗಲಕೋಟೆ-ಶೇ.85.14

ಕಲಬುರಗಿ- ಶೇ.84.51

ಶಿವಮೊಗ್ಗ-ಶೇ.84.04

ರಾಯಚೂರು- ಶೇ. 84.02

ಬಳ್ಳಾರಿ- ಶೇ.81.54

ಬೆಂಗಳೂರು ಉತ್ತರ ಶೇ.80.93

ಬೆಂಗಳೂರು ದಕ್ಷಿಣ ಶೇ.78.95

ಬೆಂಗಳೂರು ಪಶ್ಚಿಮ ಶೇ.80.93

ಬೀದರ್ ಶೇ. 78.73

ಯಾದಗಿರಿಗೆ ಕೊನೆಯ ಸ್ಥಾನ- ಶೇ.75.49

lokesh

Recent Posts

ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…

5 hours ago

ನಾಡಹಬ್ಬ ಮೈಸೂರು ದಸರಾ: ಸಂಪ್ರದಾಯದಂತೆ ಪ್ರಮೋದಾ ದೇವಿ ಒಡೆಯರ್ ಗೆ ಆಹ್ವಾನ

ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…

5 hours ago

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಬಿದ್ದ ಮರ: ಕೂದಲೆಳೆಯಲ್ಲಿ ಪಾರಾದ ಚಾಲಕ

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…

12 hours ago

ಓದುಗರ ಪತ್ರ: ಗೊಬ್ಬಳಿ ಮರ ಬಸ್‌ನಿಲ್ದಾಣದ ಆವರಣ ಸ್ವಚ್ಛವಾಗಿರಲಿ

ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…

12 hours ago

ಓದುಗರ ಪತ್ರ: ಮಹಾತ್ಮರ ರಾಮರಾಜ್ಯದ ಕಲ್ಪನೆಯ ಸಂದೇಶ ಸಾಕಾರಗೊಳ್ಳಲಿ

ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…

12 hours ago

ಓದುಗರ ಪತ್ರ: ಇಬ್ಬರು ಮಹಾನ್ ನಾಯಕರ ಆಶಯ ಮುಂದಿನ ಪೀಳಿಗೆಗೆ ದಾಟಿಸಲಿ

ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…

12 hours ago