ಬೆಂಗಳೂರು: ಜೆಡಿಎಸ್‌ನಲ್ಲಿದ್ದಾಗ ಸಿದ್ದರಾಮಯ್ಯ ಪಾಳೇಗಾರಿಕೆ ಮಾಡುತ್ತಾ ದೇವೇಗೌಡರನ್ನು ಹೆದರಿಸಿಟ್ಟುಕೊಂಡಿದ್ದರು. ಈಗ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷ ಕಟ್ಟಿ ಎರಡು ಸ್ಥಾನ ಗೆಲ್ಲಿಸಲಿ ಎಂದು ಜೆಡಿಎಸ್ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬ್ಯಾನರ್‌ನಲ್ಲಿ ತಮ್ಮ ಭಾವಚಿತ್ರ ಇಲ್ಲ ಎಂಬ ಕಾರಣಕ್ಕೆ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಇಕ್ಬಾಲ್ ಅನ್ಸಾರಿ ಅವರನ್ನು ಮಂತ್ರಿ ಮಾಡಬೇಡಿ ಅಂತ ಗಲಾಟೆ ಮಾಡಿದ್ದರು. ಸಭೆಯಿಂದ ಟವಲ್ ಕೊಡವಿಕೊಂಡು ಎದ್ದು ಹೋಗಿದ್ದರು. ಹೋಗುವಾಗ ಎಂಟು ಶಾಸಕರನ್ನು ಕರೆದುಕೊಂಡು ಹೋಗಿದ್ದರು. ಅವರಲ್ಲಿ ಎಷ್ಟು ಜನರನ್ನು ಗೆಲ್ಲಿಸಿಕೊಂಡರು? ಅವರಿಗೆ ಈ ಬಾರಿ ಜನರ ಮೂಲಕ ಉತ್ತರ ಕೊಡಿಸುತ್ತೇನೆ’ ಎಂದರು.
ಕಾಂಗ್ರೆಸ್–ಬಿಜೆಪಿ ಒಟ್ಟಾಗಿ ಜೆಡಿಎಸ್ ವಿರುದ್ಧ ಷಡ್ಯಂತ್ರ ರೂಪಿಸುತ್ತಿವೆ. ಒಳ ಒಪ್ಪಂದ ಮಾಡಿಕೊಂಡು ಪರಸ್ಪರ ಎ ಟೀಂ, ಬಿ ಟೀಂಗಳಂತೆ ಕೆಲಸ ಮಾಡುತ್ತಿವೆ. ಹೈದರಾಬಾದ್‌ನಲ್ಲಿ ಕಾಂಗ್ರೆಸ್ ನಾಯಕರ ಜತೆ ಜೆಡಿಎಸ್ ಮಾತುಕತೆ ಮಾಡಿದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಬಿಜೆಪಿ ಜತೆ ಒಳ ಒಪ್ಪಂದವಾಗಿದೆ ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡುತ್ತಾರೆ. ಎರಡೂ ಪಕ್ಷಗಳಿಗೆ ಬೇರೆ ವಿಷಯ ಇಲ್ಲವೇ ಎಂದು ಪ್ರಶ್ನಿಸಿದರು.
‘ಗೌಡರ ಕುಟುಂಬವೇ ಅಂತಿಮ’
ಬೆಂಗಳೂರು: ‘ಜೆಡಿಎಸ್ ಪಕ್ಷದಲ್ಲಿ ಎಚ್.ಡಿ. ದೇವೇಗೌಡರ ಕುಟುಂಬವೇ ಅಂತಿಮ. ಅಲ್ಲಿ ಸ್ವತಂತ್ರ ಅಭಿಪ್ರಾಯಕ್ಕೆ ಅವಕಾಶವಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
‘ಆ ಪಕ್ಷದಲ್ಲಿ ದೇವೇಗೌಡರು, ಕುಮಾರಸ್ವಾಮಿ ಹೇಳಿದಂತೆ ಎಲ್ಲರೂ ಕೇಳಬೇಕು. ಸ್ವತಂತ್ರವಾಗಿ ಮಾತನಾಡಲು ಪ್ರಯತ್ನಿಸಿದರೆ ಪಕ್ಷದಿಂದ ಹೊರಹಾಕುತ್ತಾರೆ. ಅವರ ಕುಟುಂಬದ ವಿರುದ್ಧ ಮಾತನಾಡಿದರೆ ಪಕ್ಷದಲ್ಲಿ ಉಳಿಯಲು ಬಿಡುವುದಿಲ್ಲ. ಸ್ವತಂತ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ನನ್ನನ್ನು ಹೊರಹಾಕಿದಂತೆ ಈಗ ಗುಬ್ಬಿ ಮಾಜಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರನ್ನೂ ಹೊರ ಕಳುಹಿಸಿದ್ದಾರೆ’ ಎಂದರು.
ಲಕ್ಷಾಂತರ ರೂ. ಫಸಲು ನಾಶವಾಗುತ್ತಿದೆ ಎಂದು ರೈತರ ಅಳಲು; ಸೂಕ್ತ ಕ್ರಮಕ್ಕೆ ಅರಣ್ಯ ಇಲಾಖೆಗೆ ಆಗ್ರಹ ಹನೂರು: ತಾಲ್ಲೂಕಿನ ಕಾವೇರಿ…
ಹನೂರು: ಉಡುತೊರೆ ಹಳ್ಳ ಜಲಾಶಯದಿಂದ ರೈತರ ಜಮೀನುಗಳಿಗೆ ನೀರು ಹರಿಸಲು ನಿರ್ಮಾಣ ಮಾಡಿದ್ದ ಸಣ್ಣ ಸಣ್ಣ ಕಾಲುವೆಗಳನ್ನು ಮುಚ್ಚಿ ಜಮೀನು…
ಗಿರೀಶ್ ಹುಣಸೂರು ಜ್ವರ, ಶೀತ, ಕೆಮ್ಮು ಕಾಯಿಲೆಗಳ ಭೀತಿ; ಆಸ್ಪತ್ರೆಗಳಿಗೆ ಎಡತಾಕುವ ಪರಿಸ್ಥಿತಿ ಮೈಸೂರು: ರಾಜ್ಯದಲ್ಲಿ ತಾಪಮಾನ ಕುಸಿತದಿಂದಾಗಿ ಚಳಿಯ…
ಎಸ್.ಎಸ್.ಭಟ್ ನಂಜನಗೂಡು: ಭಾನುವಾರ ನಿಧನರಾದ ಆಧುನಿಕ ದಾವಣಗೆರೆಯ ನಿರ್ಮಾತೃ ಶಾಮನೂರು ಶಿವಶಂಕರಪ್ಪ ಅವರಿಗೂ ಹಾಗೂ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ…
ಬೆಂಗಳೂರು: ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು. ಇಲ್ಲದೇ ಹೋದರೆ ಅಂತಹ ಶಾಲೆಗಳ ಮೇಲೆ ಕ್ರಮ…