ಎಸ್.ಎಸ್.ಭಟ್
ನಂಜನಗೂಡು: ಭಾನುವಾರ ನಿಧನರಾದ ಆಧುನಿಕ ದಾವಣಗೆರೆಯ ನಿರ್ಮಾತೃ ಶಾಮನೂರು ಶಿವಶಂಕರಪ್ಪ ಅವರಿಗೂ ಹಾಗೂ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಪಿಲಾ ತೀರಕ್ಕೂ ಅವಿನಾಭಾವ ಸಂಬಂಧವಿತ್ತು.
ಶಾಮನೂರು ಎಂದೇ ಪ್ರಖ್ಯಾತರಾಗಿದ್ದ ಅವರು ಮೈಸೂರು ಜಿಲ್ಲೆಯ ಕಪಿಲಾ ತೀರದ ಹುಲ್ಲಹಳ್ಳಿ ಬಳಿಯ ಸಂಗಮ ಹಾಗೂ ಸುತ್ತೂರು ಮಠದ ಭಕ್ತರಾಗಿ ಇಲ್ಲಿಗೆ ನೀಡಿದ ಕೊಡುಗೆ ಅಪಾರ.
ಮಹದೇವ ತಾತಾ ಅವರ ಐಕ್ಯಸ್ಥಳ ಸಂಗಮಕ್ಕೆ ವರ್ಷದಲ್ಲಿ ನಾಲ್ಕಾರು ಬಾರಿ ಕುಟುಂಬ ಸಮೇತ ಆಗಮಿಸುತ್ತಿದ್ದ ಅವರು ಬಂದಾಗಲೆಲ್ಲ ಮಹದೇವ ತಾತಾ ಅವರ ಗದ್ದುಗೆಗೆ ಪೂಜೆ ಸಲ್ಲಿಸಿ ಗಂಟೆಗಟ್ಟಲೆ ತಾತಾ ಅವರ ಸಮಾಧಿ ಮುಂದೆ ಕುಳಿತು ಧ್ಯಾನಸ್ಥರಾಗಿ, ಹುಂಡಿಗೆ ಹಣ ಹಾಕಿಯೇ ಅಲ್ಲಿಂದ ತೆರಳುತ್ತಿದ್ದರು.
ಶಾಮನೂರು ಶಿವಶಂಕರಪ್ಪನವರು ತಮ್ಮ ಸ್ವಂತ ಹಣದಲ್ಲಿ ಸಂಗಮದಲ್ಲಿ ಅತಿಥಿ ಗೃಹ ನಿರ್ಮಿಸಿ ತಾತಾ ಅವರಿಗೆ ಅರ್ಪಿಸಿ ದ್ದಲ್ಲದೆ, ಮಹದೇವ ತಾತಾರ ಭವನ ನಿರ್ಮಾಣಕ್ಕೂ ಕೋಟ್ಯಂತರ ರೂ.ಗಳನ್ನು ಕೊಡುಗೆಯಾಗಿ ನೀಡಿದ್ದರು. ತಮ್ಮ ಕೊಡುಗೆಯೊಂದಿಗೆ ತಾವೇ ಮುಂದಾಗಿ ನಿಂತು ಸಂಗಮದ ಗದ್ದುಗೆ ಬಳಿ ಕಪಿಲಾ ನದಿಯ ತಡಗೋಡೆಗಾಗಿ ೨.೫ ಕೋಟಿ ರೂ.ಗಳನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿದ್ದರು.
ಸಂಗಮದೊಂದಿಗೆ ಅದೇ ಕಪಿಲಾ ತೀರದಲ್ಲಿರುವ ತಾಲ್ಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾದ ಸುತ್ತೂರು ಮಠಕ್ಕೂ ಅವರ ಕೊಡುಗೆ ಸಾಕಷ್ಟಿದೆ. ಸುತ್ತೂರಿನ ಶ್ರೀ ಶಿವರಾತ್ರಿ ಶಿವಯೋಗಿಗಳ ಮೂಲ ಮಠದ ಮುಂಭಾಗದಲ್ಲೇ ಇಂದು ಕಂಗೊಳಿಸುತ್ತಿರುವ ಶ್ರೀಮತಿ ಪಾರ್ವತಮ್ಮ ಮತ್ತು ಶಾಮನೂರು ಶಿವಶಂಕರಪ್ಪ ಹೆಸರಿನ ೫೦ ಕೊಠಡಿಗಳ ೫೦೦ ಜನರ ವಾಸ್ತವ್ಯಕ್ಕೆ ಅವಕಾಶವಿರುವ ವಿಶಾಲವಾದ ಅತಿಥಿಗೃಹ ಸುತ್ತೂರಿಗೆ ಶಾಮನೂರು ನೀಡಿದ ಕೊಡುಗೆಯಾಗಿ ನಮ್ಮ ಮುಂದಿದೆ.
ಶಾಮನೂರು ನಿರ್ಮಿತ ಈ ಅತಿಥಿ ಗೃಹವನ್ನು ಕೇಂದ್ರ ಸಚಿವ ಅಮಿತ್ ಶಾ ೧೧.೨ ೨೦೨೪ ರಲ್ಲಿ ಲೋಕಾರ್ಪಣೆಗೊಳಿಸಿ ಶಿವರಾತ್ರೀಶ್ವರ ಮಠಕ್ಕೆ ಅರ್ಪಿಸಿದ್ದರು. ಕೊಡುಗೈ ದಾನಿ ಶಿವಶಂಕರಪ್ಪ ಇಂದು ನಮ್ಮೊಂದಿಗಿಲ್ಲ. ಆದರೆ ಅವರು ಮೈಸೂರು ಜಿಲ್ಲೆಯ ಕಪಿಲಾ ತೀರದ ಈ ಎರಡು ಪವಿತ್ರ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳು ಮಾತ್ರ ಅಲ್ಲಿಗೆ ಭೇಟಿ ನೀಡಿದವರ ಕಣ್ಣೆದುರಿಗೆ ಶಿವಶಂಕರಪ್ಪನರ ಹೆಸರನ್ನು ಚಿರಸ್ಥಾಯಿಯಾಗಿಸಿವೆ.
ಮಂಡ್ಯ: ಐತಿಹಾಸಿಕ ಹಿನ್ನೆಲೆಯುಳ್ಳ 416ನೇ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಅಕ್ಟೋಬರ್.15ರಂದು ಖ್ಯಾತ ನಟ ವಿ.ರವಿಚಂದ್ರನ್ ಅವರು…
ದಾಸೇಗೌಡ ಸರಗೂರು ಹೊಸ ನಲ್ಲಿ ಸಂಪರ್ಕದಲ್ಲಿ ಸಣ್ಣ ಪ್ರಮಾಣದ ನೀರು; ಕಾಂಕ್ರೀಟ್, ಡಾಂಬರ್ ರಸ್ತೆಗಳ ಅಗೆತಕ್ಕೆ ಆಕ್ರೋಶ ಸರಗೂರು: ಪಟ್ಟಣದ…
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ಲೋಕಸೇವಾ ಆಯೋಗವನ್ನು ರದ್ದುಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆಪಿಎಸ್‌ಸಿ ಒಂದು ಸ್ವಾಯತ್ತ ಸಂಸ್ಥೆಯಾದರೂ…
ಸಿನಿಮಾ ಮಾಧ್ಯಮ ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರುವ ಮಾಧ್ಯಮವಾಗಿದೆ. ಇತ್ತೀಚಿನ ತಂತ್ರಜ್ಞಾನದ ಅಗಾಧ ಬೆಳವಣಿಗೆಯ ನಡುವೆಯೂ ಉತ್ತಮ ಚಿತ್ರಗಳಿಗೆ…
ಈ ಬಾರಿಯ ವಿಶ್ವವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವವನ್ನು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳವರಿಂದ…
ನಾಗೇಶ ಹೆಗಡೆ ಕೊನೆಗೂ ಪಶ್ಚಿಮ ಘಟ್ಟಗಳ ರಕ್ಷಣೆ ಅನಿರ್ದಿಷ್ಟ ಕಾಲ ಮುಂದೂಡಿಕೆ ಗಾಡ್ಗೀಳ್ ಸಮಿತಿಯ ಕೆಲವು ನಿಯಮಗಳ ಮತ್ತೊಮ್ಮೆ ಖಡಕ್…