ಸತ್ನಾ : 12 ವರ್ಷದ ಪುಟ್ಟ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರೋಪಿಗಳ ಮನೆಯನ್ನು ಮಧ್ಯ ಪ್ರದೇಶ ಸರ್ಕಾರ ಧ್ವಂಸ ಮಾಡಿದೆ ಎಂದು ಹೇಳಲಾಗಿದೆ.
ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ದೇವಸ್ಥಾನ ಪಟ್ಟಣವಾದ ಮೈಹಾರ್‌ನಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕ್ರೂರವಾಗಿ ವರ್ತಿಸಿದ ಆರೋಪ ಹೊತ್ತಿರುವ ಇಬ್ಬರ ಮನೆಗಳನ್ನು ಸ್ಥಳೀಯ ಆಡಳಿತ ಶನಿವಾರ ನೆಲಸಮಗೊಳಿಸಿದೆ. ಆರೋಪಿಗಳಾದ ರವೀಂದ್ರ ಕುಮಾರ್ ಮತ್ತು ಅತುಲ್ ಭಡೋಲಿಯಾ ಗುರುವಾರ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು, ಬಾಲಕಿಯ ಮೈತುಂಬಾ ಕಚ್ಚಿ ಗಾಯಗೊಳಿಸಿದ್ದಾರೆ. ಬಾಲಕಿಯ ಖಾಸಗಿ ಭಾಗಗಳಲ್ಲಿ ಗಟ್ಟಿಯಾದ ವಸ್ತುವನ್ನು ಸೇರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಆಕೆಯ ವೈದ್ಯಕೀಯ ಪರೀಕ್ಷೆಯ ವರದಿ ಬಂದ ನಂತರವೇ ಇದನ್ನು ಖಚಿತಪಡಿಸಬಹುದು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಘಟನೆಯ ನಂತರ, ಮೈಹಾರ್ ಮುನ್ಸಿಪಲ್ ಕೌನ್ಸಿಲ್‌ನ ಮುಖ್ಯ ಮುನ್ಸಿಪಲ್ ಅಧಿಕಾರಿ ಶುಕ್ರವಾರ ಇಬ್ಬರ ಕುಟುಂಬಗಳಿಗೆ ಅವರ ಜಮೀನು ಮತ್ತು ಕಟ್ಟಡಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕೋರಿ ನೋಟಿಸ್ ಜಾರಿ ಮಾಡಿದ್ದರು ಎಂದು ಪೊಲೀಸ್ ಉಪವಿಭಾಗಾಧಿಕಾರಿ ಲೋಕೇಶ್ ದಬರ್ ತಿಳಿಸಿದ್ದಾರೆ. ಆರೋಪಿಗಳಿಬ್ಬರ ಮನೆಗಳ ನಿರ್ಮಾಣದಲ್ಲಿ ಅಕ್ರಮವೆಸಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದ್ದು, ಭಡೋಲಿಯಾ ಅವರ ಮನೆಯನ್ನು ‘ನಜೂಲ್’ ಜಮೀನಿನಲ್ಲಿ (ಕೃಷಿಯೇತರ ಉದ್ದೇಶಕ್ಕೆ ಬಳಸುವ ಸರ್ಕಾರಿ ಭೂಮಿ) ನಿರ್ಮಿಸಲಾಗಿದ್ದು, ಕುಮಾರ್ ಅವರ ಮನೆಯನ್ನು ಅನುಮತಿಯಿಲ್ಲದೆ ನಿರ್ಮಿಸಲಾಗಿದೆ. ನಿಯಮಾನುಸಾರ ಇಂದು ಬೆಳಿಗ್ಗೆ ಎರಡೂ ಮನೆಗಳನ್ನು ಕೆಡವಲಾಯಿತು ಎಂದು ದಬರ್ ಹೇಳಿದರು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಅಧಿಕಾರಿಗಳ ತಂಡ ಭಡೋಲಿಯಾ ಅವರ ಮನೆಗೆ ತಲುಪಿದಾಗ, ಅವರ ಕುಟುಂಬ ಸದಸ್ಯರು ತನಿಖೆ ಪೂರ್ಣಗೊಂಡ ನಂತರವೇ ಯಾವುದೇ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳನ್ನು ವಿನಂತಿಸಿದರು. ಆದರೆ ಮಾತುಕೇಳದೇ ಏಕಾಏಕಿ ಅವರು ಕೆಡವಲು ಮುಂದಾದರು.
ಮೈಹಾರ್ ಪಟ್ಟಣದ ಪ್ರಸಿದ್ಧ ದೇವಾಲಯವನ್ನು ನಿರ್ವಹಿಸುವ ಟ್ರಸ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಈ ಇಬ್ಬರು ಬಾಲಕಿಗೆ ಆಮಿಷವೊಡ್ಡಿ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅಲ್ಲಿ ಅತ್ಯಾಚಾರ ಮಾಡಿ ಮತ್ತು ಕ್ರೂರವಾಗಿ ನಡೆಸಿದ್ದರು. ಆಕೆಯ ದೇಹದ ಮೇಲೆ ಕಚ್ಚಿದ ಗುರುತುಗಳನ್ನು ಹೊಂದಿರುವ ಅತಿಯಾದ ರಕ್ತಸ್ರಾವದ ಹುಡುಗಿಯನ್ನು ಸುಧಾರಿತ ವೈದ್ಯಕೀಯ ಆರೈಕೆಗಾಗಿ ವಿಭಾಗೀಯ ಪ್ರಧಾನ ಕಛೇರಿ ರೇವಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ತಂಡ ಆಕೆಯ ಆರೋಗ್ಯದ ಮೇಲೆ ನಿಗಾ ಇಡುತ್ತಿದ್ದು, ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ಭೋಪಾಲ್ ಅಥವಾ ದೆಹಲಿಗೆ ಸ್ಥಳಾಂತರಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…
ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…
ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…
ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…
ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…