BREAKING NEWS

ರಾಜ್ಯಸಭಾ ಚುನಾವಣೆ ಮತದಾನ ಅಂತ್ಯ: ಶೇ. 99.5ರಷ್ಟು ಮತದಾನ

ಬೆಂಗಳೂರು: ರಾಜ್ಯದ ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ನಡೆದ ಮತದಾನ ಅಂತ್ಯಗೊಂಡಿದೆ. ಇಂದು ( ಫೆಬ್ರವರಿ 27 ) ವಿಧಾನಸೌಧದ 106ನೇ ಕೊಠಡಿಯಲ್ಲಿ ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆದಿದ್ದು, ಒಟ್ಟು ಶೇ. 99.5ರಷ್ಟು ಮತದಾನ ನಡೆದಿದೆ.

ಒಟ್ಟು 223 ಶಾಸಕರ ಪೈಕಿ 222 ಶಾಸಕರು ಮತದಾನ ಮಾಡಿದ್ದಾರೆ. ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ್‌ ಹೆಬ್ಬಾರ್‌ ಮತದಾನಕ್ಕೆ ಗೈರಾದರೆ, ಬಿಜೆಪಿಯ ಮತ್ತೋರ್ವ ಶಾಸಕ ಎಸ್.‌ ಟಿ. ಸೋಮಶೇಖರ್‌ ಕಾಂಗ್ರೆಸ್‌ಗೆ ಅಡ್ಡ ಮತದಾನ ಮಾಡಿದ್ದಾರೆ.

ಕಾಂಗ್ರೆಸ್‌ನ 135 ಶಾಸಕರು, ಬಿಜೆಪಿಯ 65 ಶಾಸಕರು, ಮೂವರು ಪಕ್ಷೇತರ ಶಾಸಕರು ಹಾಗೂ ಜೆಡಿಎಸ್‌ನ 19 ಶಾಸಕರು ಮತದಾನ ಮಾಡಿದ್ದಾರೆ. ಇನ್ನು ಬಿಜೆಪಿಯ ಓರ್ವ ಶಾಸಕ ಕಾಂಗ್ರೆಸ್‌ಗೆ ಮತ ಹಾಕಿರುವುದು ಹಾಗೂ ಓರ್ವ ಶಾಸಕ ಗೈರಾಗಿರುವುದು ಪಕ್ಷಕ್ಕೆ ಹಿನ್ನಡೆಯನ್ನುಂಟುಮಾಡಿದೆ.

andolana

Recent Posts

ವಿಬಿ ಜಿ ರಾಮ್ ಜಿ ಗೊಂದಲ ನಿವಾರಣೆ ಕೇಂದ್ರದ ಹೊಣೆ

ವಿಬಿ- ಜಿ ರಾಮ್ ಜಿ (ವಿಕಸಿತ್ ಭಾರತ್- ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕ ಮಿಷನ್ (ಗ್ರಾಮೀಣ್)- ೨೦೨೫) ಕಾಯ್ದೆಯು…

8 mins ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಸಿಎಂ ಶಿಶಿರ್ ಚಂದ್ರ ಏಕೆ ಕೆಳಗಿಳಿಯುತ್ತಿಲ್ಲ?

ಜನನಾಯಕ ಅನ್ನಿಸಿಕೊಂಡವರ ಅಧಿಕಾರ ಬದಲಿಸುವುದು ಅಷ್ಟು ಸುಲಭದ ಕೆಲಸವಲ್ಲ  ಅವತ್ತು ವಿಧಾನಸಭೆಯ ಮೊಗಸಾಲೆಗೆ ಪ್ರವೇಶ ಮಾಡುತ್ತಿದ್ದಂತೆಯೇ ಪತ್ರಕರ್ತ ರಾಕೇಶನ ಮುಖದಲ್ಲಿ…

15 mins ago

ರಂಗನತಿಟ್ಟು ಸಮೀಪ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ: ಪರ-ವಿರೋಧ ಅಭಿಪ್ರಾಯ

ಪರಿಸರ ಪ್ರೇಮಿಗಳು, ಸಾರ್ವಜನಿಕರ ಪರ-ವಿರೋಧ ಅಭಿಪ್ರಾಯ ಮಂಡ್ಯ: ಮೈಸೂರು ಬೈಪಾಸ್ ಮಾಡುವ ಗುರಿಯನ್ನು ಹೊಂದಿರುವ ಎನ್‌ಎಚ್ ೨೭೫ರ ವಿಸ್ತೃತ ಮಾರ್ಗವಾದ…

22 mins ago

ಅಳಿವಿನತ್ತ ರಾಜ್ಯದ ಮೊದಲ ಬಾಲಕಿಯರ ಶಾಲೆ

ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು: ಹೆಣ್ಣುಮಕ್ಕಳಿಗಾಗಿ ರಾಜ್ಯದಲ್ಲಿ ಸ್ಥಾಪಿಸಿದ ಮೊದಲ ಶಾಲೆ ಇದು. ಶತೋತ್ತರ ಅರ್ಧ…

29 mins ago

2ನೇ ಮದುವೆಗೆ ಸಜ್ಜಾಗಿದ್ದ ವರ : ಕಲ್ಯಾಣ ಮಂಟಪಕ್ಕೆ ಬಂದು ಮದುವೆ ನಿಲ್ಲಿಸಿದ ಮೊದಲ ಹೆಂಡತಿ!

ತುಮಕೂರು : ಈಗಾಗಲೇ ಮದುವೆಯಾಗಿ ಹೆಂಡತಿಯಿದ್ದರೂ 2ನೇಯ ಮದುವೆಗೆ ತಯಾರಿ ನಡೆಸಿ ಕಲ್ಯಾಣ ಮಂಟಪದಲ್ಲಿ ಇನ್ನೇನು ಮಾಂಗಲ್ಯ ಧಾರಣೆ ನಡೆಯಬೇಕು…

6 hours ago