ಪೀಠೋಪಕರಣಗಳು ಮತ್ತು ಗೃಹಾಲಂಕಾರಕ ವಸ್ತುಗಳ ಆನ್‌ಲೈನ್ ಮಾರಾಟ ತಾಣ ಪೆಪ್ಪರ್‌ಫ್ರೈನ ಸಹ-ಸಂಸ್ಥಾಪಕ ಅಂಬರೀಶ್ ಮೂರ್ತಿ ನಿಧನರಾಗಿದ್ದಾರೆ. ಕಂಪನಿಯ ಇನ್ನೋರ್ವ ಸಹ-ಸಂಸ್ಥಾಪಕ ಆಶಿಶ್ ಷಾ ಅವರು ‘ಎಕ್ಸ್’ನಲ್ಲಿ ಈ ವಿಷಯ ತಿಳಿಸಿದ್ದಾರೆ.
ಲೇಹ್‌ನಲ್ಲಿ ಹೃದಯ ಸ್ತಂಭನದಿಂದಾಗಿ ತಮ್ಮ ಸ್ನೇಹಿತ, ಮಾರ್ಗದರ್ಶಕ, ಸಹೋದರ ನಿಧನರಾಗಿದ್ದಾರೆ ಎಂದು ಆಶಿಶ್ ಶಾ ತಿಳಿಸಿದ್ದಾರೆ. ಅಂಬರೀಶ್ ಮೂರ್ತಿ ಅವರಿಗೆ 51 ವರ್ಷ ವಯಸ್ಸಾಗಿತ್ತು. ಬೈಕ್ ಉತ್ಸಾಹಿಯಾಗಿದ್ದ ಅವರು ಮುಂಬೈನಿಂದ ಲೇಹ್‌ಗೆ ಬೈಕ್‌ನಲ್ಲಿ ಪ್ರವಾಸ ಹೋಗಿದ್ದರು. ಈ ವೇಳೆ ಅಲ್ಲೇ ಹೃದಯ ಸ್ಥಂಭನಕ್ಕೆ ಒಳಗಾಗಿ ಅಸುನೀಗಿದ್ದಾರೆ.
2011ರಲ್ಲಿ ಅವರು ಪೆಪ್ಪರ್‌ಫ್ರೈ ಅನ್ನು ಸ್ಥಾಪಿಸಿದ್ದರು. ಮತ್ತು ಇದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದರು. “ನಿನ್ನೆ ರಾತ್ರಿ ಲೇಹ್‌ನಲ್ಲಿ ಹೃದಯ ಸ್ತಂಭನದಿಂದ ಅಂಬರೀಶ್ ಮೂರ್ತಿ ಅವರನ್ನು ಕಳೆದುಕೊಂಡೆ. ದಯವಿಟ್ಟು ಅವರಿಗಾಗಿ ಮತ್ತು ಅವರ ಕುಟುಂಬ ಮತ್ತು ಬಂಧುಗಳಿಗಾಗಿ ಪ್ರಾರ್ಥಿಸಿ,” ಎಂದು ಆಶಿಶ್ ಶಾ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಅವರ ಆತ್ಮೀಯರು, ಕಂಪನಿ ಉದ್ಯೋಗಿಗಳು ಅಂಬರೀಶ್ ಮೂರ್ತಿ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಲಡಾಖ್ ಪ್ರವಾಸಕ್ಕೆ ತೆರಳಿದ್ದ ಅಂಬರೀಶ್ ಮೂರ್ತಿ ಅವರು ತಮ್ಮ ಪ್ರವಾಸದ ಫೋಟೋಗಳು ಮತ್ತು ವಿಡಿಯೋಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.
ಕ್ರಂಚ್‌ಬೇಸ್ ಪ್ರಕಾರ ಅಂಬರೀಶ್ ಮೂರ್ತಿ ಅವರು ಅಡೋನಿಯಾ ಹಾಸ್ಪಿಟಾಲಿಟಿ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದರು. ಅವರು 1996ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಕೊಲ್ಕತ್ತಾದಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ (ಎಂಬಿಎ) ಸ್ನಾತಕೋತ್ತರ ಪದವಿ ಪಡೆದಿದ್ದರು.
ಉದ್ಯಮಶೀಲತೆಯ ಬಗ್ಗೆ ಆರಂಭದಿಂದಲೂ ಆಸಕ್ತರಾಗಿದ್ದ ಅಂಬರೀಶ್ ಮೂರ್ತಿಯವರು ಪದವಿ ಓದುವ ವೇಳೆ ಮನೆಯಲ್ಲಿ ಟ್ಯೂಷನ್ ನೀಡಲು ಪ್ರಾರಂಭಿಸಿದ್ದರು. ಅವರು ಟ್ಯೂಟರ್ಸ್ ಬ್ಯೂರೋ ಎಂಬ ಸಣ್ಣ ಉದ್ಯಮವನ್ನೂ ಸ್ಥಾಪಿಸಿದ್ದರು. ಇದು ಶಾಲಾ ವಿದ್ಯಾರ್ಥಿಗಳೊಂದಿಗೆ ಬೋಧಕರನ್ನು ಸಂಪರ್ಕಿಸುವ ವ್ಯವಸ್ಥೆಯಾಗಿತ್ತು, ಅವರು 1990ರ ದಶಕದ ಆರಂಭದಲ್ಲಿ ಎರಡು ವರ್ಷಗಳ ಕಾಲ ಈ ಉದ್ಯಮವನ್ನು ನಡೆಸಿದ್ದರು.
ನಂತರ ಅವರು ಸ್ಥಾಪಿಸಿದ್ದೇ ಪೆಪ್ಪರ್‌ಫ್ರೈ. ಇದು ಸುಮಾರು 500 ಮಿಲಿಯನ್ ಡಾಲರ್ (ಸುಮಾರು 4,150 ಕೋಟಿ ರೂ.) ಮೌಲ್ಯದ್ದಾಗಿದೆ. 2020ರ ಹೊತ್ತಿಗೆ ಇದು ಎಂಟು ಸುತ್ತುಗಳಲ್ಲಿ 244 ಮಿಲಿಯನ್ ಡಾಲರ್ (2,000 ಕೋಟಿ ರೂ.) ಹೂಡಿಕೆ ಸಂಗ್ರಹಿಸಿತ್ತು. ಕಂಪನಿಯ ಹೂಡಿಕೆದಾರರಲ್ಲಿ ಗೋಲ್ಡ್‌ಮನ್ ಸ್ಯಾಚ್ಸ್ ಮತ್ತು ಬರ್ಟೆಲ್ಸ್‌ಮನ್ ಇಂಡಿಯಾ ಇನ್ವೆಸ್ಟ್‌ಮೆಂಟ್‌ಗಳು ಸೇರಿವೆ.
ವೈಡ್ ಆಂಗಲ್ ಬಾ.ನಾ.ಸುಬ್ರಹ್ಮಣ್ಯ ವರ್ಷದ ಕೊನೆಯ ವಾರ ತೆರೆಗೆ ಬಂದಿರುವ ಚಿತ್ರಗಳಲ್ಲಿ ಒಂದು ‘ಮಾರ್ಕ್’. ಚಿತ್ರದ ಮುಖ್ಯ ಪಾತ್ರ ಮಾರ್ಕಾಂಡೇಯ…
2025ರಲ್ಲಿ ವಿಧಿವಶರಾದ ಗಣ್ಯರ ಮಾಹಿತಿ ಜನವರಿ... ನಾ.ಡಿಸೋ’ಜಾ: ಕನ್ನಡದ ಪ್ರಸಿದ್ಧ ಬರಹಗಾರ ಮತ್ತು ಕಾದಂಬರಿಕಾರ ನಾ ಡಿ’ಸೋಜಾ ಅವರು ಜನವರಿ…
ಎಚ್.ಎಸ್.ದಿನೇಶ್‌ಕುಮಾರ್ ಮೈಸೂರು: ಸರ್ಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವವರು ಎಚ್ಚರಿಕೆ ವಹಿಸಿದಲ್ಲಿ ನಡೆಯ ಬಹುದಾದ ವಂಚನೆಗಳನ್ನು ಹೇಗೆ ತಪ್ಪಿಸಬಹುದು ಎಂಬುದಕ್ಕೆ ವಿಧಾನಪರಿಷತ್…
ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…
ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…
ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…