BREAKING NEWS

Oscar award 2024: 96ನೇ ಆಸ್ಕರ್‌ ಅವಾರ್ಡ್‌ನ ಸಂಪೂರ್ಣ ಮಾಹಿತಿ

ಲಾಸ್‌ ಏಂಜಲೀಸ್‌: 96ನೇ ಸಾಲಿನ ಆಸ್ಕರ್ ಅವಾರ್ಡ್‌ನ ಅತ್ಯುತ್ತಮ ಚಿತ್ರ ಹೆಗ್ಗಳೆಕಗೆ “ಓಪನ್‌ ಹೈಮರ್‌” ಭಾಜನವಾಗಿದೆ. (ಈ ಚಿತ್ರ ಬರೋಬ್ಬರಿ 13 ವಿಭಾಗದಲ್ಲಿ ನಾಮಿನೇಟ್ ಆಗಿತ್ತು ಅನ್ನೋದು ವಿಶೇಷ) ಮತ್ತು ಅತ್ಯುತ್ತಮ ನಟ ಪ್ರಶಸ್ತಿಯನ್ನು ಸಿಲಿಯನ್‌ ಮರ್ಫಿ ತಮ್ಮದಾಗಿಸಿಕೊಂಡಿದ್ದಾರೆ.

ಅಮೇರಿಕಾದ ಲಾಸ್‌ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ ವೇದಿಕೆಯಲ್ಲಿ ಭಾನುವಾರ (ಅಮೇರಿಕಾ ಕಾಲಮಾನ) ಆವಾರ್ಡ್‌ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು ಜಿಮ್ಮಿ ಕಿಮ್ಮೆಲೆ ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಹಲವು ಹಾಲಿವುಡ್‌ ತಾರೆಯರು, ನಿರ್ದೇಶಕರು, ತಂತ್ರಜ್ಞರು ಸೇರಿದಂತೆ ಸಿನಿ ರಸಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದರು.

ಆಸ್ಕರ್‌ ಅವಾರ್ಡ್‌ನ ಸಂಪೂರ್ಣ ವಿವರ:

• ಅತ್ಯುತ್ತಮ ಚಿತ್ರ: ಓಪನ್ ಹೈಮರ್

• ಅತ್ಯುತ್ತಮ ನಿರ್ದೇಶಕ: ಕ್ರಿಸ್ಟೋಫ‌ರ್ ನೋಲನ್

• ಅತ್ಯುತ್ತಮ ನಟಿ: ಎಮ್ಮಾ ಸ್ಟೋನ್

• ಅತ್ಯುತ್ತಮ ನಟ: ಸಿಲಿಯನ್ ಮರ್ಫಿ

• ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ: ‘ದಿ ರೋನ್ ಆಫ್ ಇಂಟರೆಸ್ಟ್’

• ಅತ್ಯುತ್ತಮ ಪೋಷಕ ನಟ: ರಾಬರ್ಟ್ ಡೌನಿ ಜೂನಿಯ‌ರ್ (ಓಪೆನ್ ಹೈಮರ್)

• ಅತ್ಯುತ್ತಮ ಪೋಷಕ ನಟಿ: ಡೇವಿನ್ ಜಾಯ್ ರಾಂಡೋಲ್ಫ್ (ದಿ ಹೋಲವರ್ಸ್)

• ಅತ್ಯುತ್ತಮ ಹಾಡು: ಬಾರ್ಬಿ (ವಾಟ್ ವಾಸ್ ಐ ಮೇಡ್ ಫಾರ್)

• ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್: ‘ಗಾಡ್ಡಿಲ್ಲಾ ಮೈನಸ್ ಒನ್’

• ಅತ್ಯುತ್ತಮ ಧ್ವನಿ ವಿನ್ಯಾಸ: ‘ದಿ ನ್ ಆಫ್ ಇಂಟರೆಸ್ಟ್’

• ಅತ್ಯುತ್ತಮ ಸಂಕಲನ: ‘ಓಪನ್ ಹೈಮರ್’

ಅತ್ಯುತ್ತಮ ಛಾಯಾಗ್ರಹಣ: ‘ಓಪನ್ ಹೈಮರ್’

• ಅತ್ಯುತ್ತಮ ಮೂಲ ಚಿತ್ರಕಥೆ: ಜಸ್ಟಿನ್ ಟ್ರೈಟ್ ಮತ್ತು ಆರ್ಥರ್ ಹರಾರಿ ಅವರ “ಅನ್ಯಾಟಮಿ ಆಫ್ ಎ ಫಾಲ್’

• ಅತ್ಯುತ್ತಮ ಸಾಕ್ಷ್ಯಚಿತ್ರ: ಜಾನ್ ಮತ್ತು ಯೊಕೊ ಅವರ ‘ವಾರ್ ಇಸ್ ಓವರ್”

• ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ: ಹಯಾವೊ ಮಿಯಾಜಾಕಿ ಮತ್ತು ತೋಶಿಯೊ ಸುಜುಕ್ ಅವರ ‘ದಿ ಬಾಯ್ ಅಂಡ್ ದಿ ಹೆರಾನ್’

• ಅತ್ಯುತ್ತಮ ಮೇಕಪ್ ಮತ್ತು ಕೇಶ ವಿನ್ಯಾಸ: ‘ಪೂರ್ ಥಿಂಗ್ಸ್’ (Poor Things)

ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ: ‘ದಿ ಲಾಸ್ಟ್ ರಿಪೇರಿ ಶಾಪ್’

 

andolanait

Recent Posts

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ಹೆಚ್.ಡಿ.ದೇವೇಗೌಡರ ಮನವಿ

ಹೊಸದಿಲ್ಲಿ: ಮಾಜಿ ಪ್ರಧಾನಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ. ದೇವೇಗೌಡರು ಶುಕ್ರವಾರ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ…

1 hour ago

ಪೌರಕಾರ್ಮಿಕರು ಸೇರಿ ಎಲ್ಲಾ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ : ಬೈರತಿ ಸುರೇಶ್

ವಿಧಾನಸಭೆ : ರಾಜ್ಯದಲ್ಲಿರುವ ಮಹಾನಗರಪಾಲಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಚಾಲಕರು, ಲೋಡರ್ ಗಳು, ತ್ಯಾಜ್ಯ ಸಂಗ್ರಹಕಾರರು ಸೇರಿದಂತೆ ಇನ್ನಿತರೆ…

2 hours ago

ಮೈಸೂರು | ನಾಳೆ ಗಿಚ್ಚಿ ಗಿಲಿಗಿಲಿ ಜೂನಿಯರ‍್ಸ್ ರಿಯಾಲಿಟಿ ಶೋʼನ ಆಡಿಷನ್‌

ಮೈಸೂರು : ಕಲರ್ಸ್ ಕನ್ನಡ ವಾಹಿನಿಯ ‘ಗಿಚ್ಚಿ ಗಿಲಿಗಿಲಿ ಜೂನಿಯರ‍್ಸ್’ ರಿಯಾಲಿಟಿ ಷೋಗಾಗಿ ಡಿ.20 ರಂದು ಬೆಳಿಗ್ಗೆ 11 ಗಂಟೆಗೆ…

3 hours ago

ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಚಾಲನೆ

ಬೆಳಗಾವಿ : ಆರೋಗ್ಯ ಸೇವೆಯಿಂದ ವಂಚಿತರಾಗಿರುವ ಜನರಿಗೆ ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕ ಯೋಜನೆ ನೆರವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

3 hours ago

ಸಿನಿಮಾ ಜವಾಬ್ದಾರಿಯುಳ್ಳ ಶಿಕ್ಷಣದ ಮಾಧ್ಯಮವಾಗಬೇಕು : ನಿರ್ದೇಶಕ ಸುರೇಶ್‌ ಆಶಯ

ಮೈಸೂರು : ಸಿನಿಮಾಗಳು ಮನರಂಜನೆಗಷ್ಟೇ ಸೀಮಿತವಾಗದೆ ಸಾಮಾಜಿಕ ಜವಾಬ್ದಾರಿಯುಳ್ಳ ಶಿಕ್ಷಣದ ಮಾಧ್ಯಮವಾಗಬೇಕು ಎಂದು ಖ್ಯಾತ ನಿರ್ದೇಶಕ ಬಿ.ಸುರೇಶ್ ಆಶಿಸಿದರು. ನಗರದ…

3 hours ago

ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿಗಳ ಕುರಿತು ಅರಿವು ಮೂಡಿಸಿ : ಜಿಲ್ಲಾಧಿಕಾರಿ ಸೂಚನೆ

ಮೈಸೂರು : ಅಲ್ಪಸಂಖ್ಯಾತರ ಸಮುದಾಯ ವಾಸಿಸುವ ಸ್ಥಳಗಳಲ್ಲಿ ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿಗಳ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮಗಳನ್ನು…

3 hours ago