ನವದೆಹಲಿ: ಆ್ಯಂಡ್ರಾಯ್ಡ್ ಮೊಬೈಲ್ ಸಾಧನಗಳ ಪ್ರಕರಣದಲ್ಲಿ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ನೀಡಿದ್ದ ಆದೇಶ ವನ್ನು ಭಾಗಶಃ ಎತ್ತಿಹಿಡಿದಿರುವ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು (ಎನ್‌ಸಿಎಲ್‌ಎಟಿ), ₹ 1,338 ಕೋಟಿ ದಂಡವನ್ನು 30 ದಿನಗಳಲ್ಲಿ ಪಾವತಿಸು ವಂತೆ ಗೂಗಲ್ ಕಂಪನಿಗೆ ಸೂಚಿಸಿದೆ.
ಆದರೆ, ಗೂಗಲ್ ಕಂಪನಿಯು ಆ್ಯಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯ ಸ್ಮಾರ್ಟ್‌ಫೋನ್‌ಗಳಲ್ಲಿ ತಾನು ಮೊದಲೇ ಇನ್‌ಸ್ಟಾಲ್ ಮಾಡಿರುವ ಆ್ಯಪ್‌ಗಳನ್ನು ತೆಗೆದುಹಾಕುವ ಅವಕಾಶವನ್ನು ಗ್ರಾಹಕರಿಗೆ ಕೊಡಬೇಕು ಎಂದು ಸಿಸಿಐ ನೀಡಿದ್ದ ಸೂಚನೆಯನ್ನು ಎನ್‌ಸಿಎಲ್‌ಎಟಿ ರದ್ದುಮಾಡಿದೆ.
ಎನ್‌ಸಿಎಲ್‌ಎಟಿ ನೀಡಿರುವ ಆದೇಶವನ್ನು ಪರಿಶೀಲಿಸುತ್ತಿರುವುದಾಗಿ ಗೂಗಲ್ ಹೇಳಿದೆ. ಗೂಗಲ್ ಕಂಪನಿಯು ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ವಿಚಾರದಲ್ಲಿ ಸ್ಪರ್ಧಾತ್ಮಕತೆಯ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಸಿಸಿಐ ಹೇಳಿತ್ತು. ಈ ಆದೇಶವನ್ನು ಎನ್‌ಸಿಎಲ್‌ಎಟಿಯಲ್ಲಿ ಪ್ರಶ್ನಿಸಲಾಗಿತ್ತು.
ತಾನು ಮೊದಲೇ ಇನ್‌ಸ್ಟಾಲ್ ಮಾಡಿಕೊಡುವ ಗೂಗಲ್ ಮ್ಯಾಪ್ಸ್, ಯೂಟ್ಯೂಬ್, ಜಿಮೇಲ್‌ನಂತಹ ಆ್ಯಪ್‌ಗಳನ್ನು ತೆಗೆದುಹಾಕಲು ಗೂಗಲ್ ಕಂಪನಿಯು ಗ್ರಾಹಕರಿಗೆ ಅವಕಾಶ ಕೊಡಬೇಕು ಎಂದು ಸಿಸಿಐ ನೀಡಿದ್ದ ನಿರ್ದೇಶನವನ್ನು ಎನ್‌ಸಿಎಲ್‌ಎಟಿ ರದ್ದುಮಾಡಿದೆ. ಅಲ್ಲದೆ, ಗೂಗಲ್ ಕಂಪನಿಯು ತನ್ನ ಪ್ಲೇಸ್ಟೋರ್‌ನಲ್ಲಿ ಇತರ ಕಂಪನಿಗಳ ಆ್ಯಪ್ ಸ್ಟೋರ್‌ಗೆ ಅವಕಾಶ ಕೊಡಬೇಕಾಗಿಲ್ಲ ಎಂದು ಕೂಡ ಎನ್‌ಸಿಎಲ್‌ಎಟಿ ಹೇಳಿದೆ.
ಯಾವುದೇ ಆ್ಯಪ್ ಸ್ಟೋರ್ ಬಳಸದೆ, ಬೇರೆಡೆಗಳಿಂದ ಆ್ಯಪ್ ಡೌನ್‌ಲೋಡ್ ಮಾಡುವುದರ ಮೇಲೆ ನಿರ್ಬಂಧ ವಿಧಿಸಲು ಗೂಗಲ್‌ಗೆ ಅವಕಾಶ ಇರುತ್ತದೆ.
ಈ ನಿರ್ದೇಶನಗಳು ಸಿಂಧು
ಸಿಸಿಐ ನೀಡಿದ್ದ ಹತ್ತು ನಿರ್ದೇಶನಗಳ ಪೈಕಿ ಆರನ್ನು ಎನ್‌ಸಿಎಲ್‌ಎಟಿ ಎತ್ತಿಹಿಡಿದಿದೆ. ಎನ್‌ಸಿಎಲ್‌ಎಟಿ ಎತ್ತಿಹಿಡಿದಿರುವ ಪ್ರಮುಖ ನಿರ್ದೇಶನಗಳು ಇಲ್ಲಿವೆ:
l ಮೊಬೈಲ್ ಸಾಧನವನ್ನು ಆರಂಭದಲ್ಲಿ ಬಳಕೆಗೆ ಸಿದ್ಧಮಾಡಿಕೊಳ್ಳುವಾಗ (ಸೆಟಪ್) ಗ್ರಾಹಕರಿಗೆ ತಮ್ಮ ಸರ್ಚ್ ಎಂಜಿನ್ ಯಾವುದಾಗಿರಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇರಬೇಕು
l ಸ್ಮಾರ್ಟ್‌ಫೋನ್ ತಯಾರಕರಿಗೆ ಇಂಥದ್ದೇ ಆ್ಯಪ್‌ಗಳನ್ನು ಮೊದಲೇ ಇನ್‌ಸ್ಟಾಲ್ ಮಾಡುವಂತೆ ತಾಕೀತು ಮಾಡುವಂತಿಲ್ಲ.
ಬೆಂಗಳೂರು : ನಾಯಕ ರಜತ್ ಪಾಟೀದಾರ್, ಟಿಮ್ ಡೇವಿಡ್, ದೇವ್‌ದತ್ ಪಡಿಕ್ಕಲ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್…
ವಾಷಿಂಗ್ಟನ್ : ಹೊರ್ಮುಜ್ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ನಡೆಸುವುದಾಗಿ ಅಮೆರಿಕದ…
ಬೆಂಗಳೂರು : ಕೊಡಗು ಜಿಲ್ಲೆಯ ತಡಿಯಾಂಡಮೋಳ್ ಶಿಖರಕ್ಕೆ ಕೇರಳದಿಂದ ಚಾರಣಕ್ಕಾಗಿ ಬಂದು ಏಪ್ರಿಲ್ 2 ರಂದು ನಾಪತ್ತೆಯಾಗಿದ್ದ ಜಿ.ಎಸ್. ಶರಣ್ಯ…
ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾಕುಮಾರಿ ಅವರನ್ನು ಸರ್ಕಾರ ನೇಮಕ ಮಾಡಿದೆ. ಈವರೆಗೆ…
ಮೈಸೂರು : ಭಾರತೀಯ ಹವಾಮಾನ ಇಲಾಖೆಯು ಕರಾವಳಿ ಕರ್ನಾಟಕ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಏ.9ರವರೆಗೆ ಯಲ್ಲೋ…
ದಾವಣಗೆರೆ : ಕಾಂತರಾಜು ವರದಿ ಈಗ ನಿಮ್ಮ ಬಳಿಯೇ ಇದೆ. ಜಯಪ್ರಕಾಶ ಹೆಗಡೆ ಅವರ ವರದಿಯು ಸ್ವೀಕರಿಸಿದ್ದೀರಿ. ಎರಡು ವರದಿಗಳನ್ನು…