ಪುಣೆ: ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರಿಗೆ ಜೀವಾವಧಿ ಶಿಕ್ಷೆ ಹಾಗೂ ಮೂವರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಪುಣೆ ನ್ಯಾಯಾಲಯ ಇಂದು (ಮೇ. 10, ಶುಕ್ರವಾರ) ಆದೇಶ ಹೊರಡಿಸಿದೆ.
ಸುಮಾರು ಮೂರು ವರ್ಷಗಳ ವಿಚಾರಣೆ ನಂತರ ಸೆಷನ್ ನ್ಯಾಯಾಧೀಶರಾದ ಪಿ.ಪಿ ಜಾಧವ್ ಅವರು ಶುಕ್ರವಾರ ತೀರ್ಪು ಪ್ರಕಟಿಸಿದರು. ಸಚಿನ್ ಆಂದೋರೆ ಹಾಗೂ ಶರದ್ ಕಲಸ್ಕರ್ ಅವರನ್ನು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದ್ದು, ಈ ಇಬ್ಬರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5 ಲಕ್ಷ ರೂ. ದಂಡ ವಿಧಿಸಿದೆ. ಡಾ. ವಿ. ರಾಜೇಂದ್ರ ಸಿಂಗ್ ತಾವಡೆ, ವಿಕ್ರಮ್ ಭಾವೆ ಮತ್ತು ಸಂಜೀವ್ ಪುನಲೇಕರ್ ಅವರ ಮೇಲಿನ ಪ್ರಕರಣವನ್ನು ಖುಲಾಸೆಗೊಳಿಸಿದೆ.
ಮಹಾರಾಷ್ಟ್ರದ ಅಂಧಶ್ರದ್ಧ ನಿರ್ಮೂಲನ್ ಸಮಿತಿ ಸ್ಥಾಪಕರಾಗಿದ್ದ ದಾಭೋಲ್ಕರ್ ಅವರನ್ನು 2013 ರಲ್ಲಿ ಪುಣೆಯ ಪಾರ್ಕ್ ಒಂದರಲ್ಲಿ ವಾಕಿಂಗ್ ಮಾಡುವ ವೇಳೆ ಗುಂಡಿಕ್ಕೆ ಹತ್ಯೆ ಮಾಡಲಾಗಿತ್ತು. ಈ ಪ್ರಕರಣವನ್ನು 2014ರಲ್ಲಿ ಸಿಬಿಐಗೆ ಪುಣೆ ಪೊಲೀಸರಿಂದ ಹಸ್ತಾಂತರಿಸಲಾಗಿತ್ತು. ಸಿಬಿಐ 2016-19ರ ನಡುವೆ ಸನಾತನ ಸಂಸ್ಥೆಯೊಂದಿಗೆ ನಂಟು ಹೊಂದಿದ್ದ೫ ಜನರ ಆರೋಪಿಗಳನ್ನು ಬಂಧಿಸಿದ್ದರು.
ನುರಿತ ತಜ್ಞರ ತಂಡದಿಂದ ಕೆರೆ ಸ್ವಚ್ಛತೆ ಆರಂಭಿಸಲು ತಯಾರಿ ಮೈಸೂರು : ಪ್ರವಾಸಿಗರು ಹಾಗೂ ವಾಯುವಿಹಾರಿಗಳ ನೆಚ್ಚಿನ ತಾಣವಾದ ಕುಕ್ಕರಹಳ್ಳಿ…
ಮೈಸೂರು ನಗರದ ಪ್ರತಿಯೊಂದೂ ವಾರ್ಡ್‌ನ ಪ್ರತಿ ಮಾರ್ಗದಲ್ಲೂ ಮೈಸೂರು ಮಹಾ ನಗರ ಪಾಲಿಕೆಯಿಂದ ವಾರ್ಡ್ ಸಂಖ್ಯೆ, ವಾರ್ಡ್‌ನ್ನು ಪ್ರತಿನಿಧಿಸುವ ಪಾಲಿಕೆ…
ಮೈಸೂರಿನ ಎಲ್ಲ ವಾರ್ಡ್‌ಗಳಲ್ಲೂ ಮಹಾನಗರ ಪಾಲಿಕೆಯಿಂದ ಕಸ ವಿಂಗಡಣೆಯನ್ನು ಮೂಲದಿಂದಲೇ ಅಂದರೆ ಮನೆಮನೆಗಳಲ್ಲೇ ಹಸಿ ಕಸ ಮತ್ತು ಒಣ ಕಸ…
ರಾಜ್ಯಸರ್ಕಾರವು ವಿಧಾನಸಭೆಯಲ್ಲಿ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ತಡೆಗಟ್ಟುವಿಕೆ) ಮಸೂದೆ ೨೦೨೫’ ಅನ್ನು ಮಂಡಿಸಿದೆ. ಈ ಮಸೂದೆ…
ಧನರ್ಮಾಸಕ್ಕೆ ಮೊದಲೇ ಚಳಿ ದಾಂಗುಡಿ ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ದಾಖಲು ಕೆ.ಬಿ.ರಮೇಶನಾಯಕ ಮೈಸೂರು : ಜಿಲ್ಲೆಯಲ್ಲಿ ಕಳೆದ…