ಚೆನ್ನೈ: ಮೈಸೂರು ಚೆನ್ನೈ ಮಧ್ಯೆ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇಂದಿನಿಂದ ಟ್ರಯಲ್ ರನ್ ಆರಂಭಿಸಿದೆ. ಚೆನ್ನೈನ ಎಂಜಿ ರಾಮಚಂದ್ರನ್ ಕೇಂದ್ರ ರೈಲ್ವೆ ನಿಲ್ದಾಣದಿಂದ ಬೆಳಿಗ್ಗೆ 6 ಗಂಟೆಗೆ ರೈಲು ನಿರ್ಗಮಿಸಿದ್ದು, ಮಧ್ಯಾಹ್ನ 12.30ರ ಸುಮಾರಿಗೆ ಮೈಸೂರು ತಲುಪಲಿದೆ.
ಹೈಸ್ಪೀಡ್ ರೈಲು ಚೆನ್ನೈ ಮೈಸೂರು ಮಧ್ಯೆ 6 ಗಂಟೆ 30 ನಿಮಿಷದಲ್ಲಿ 504 ಕಿಮೀ ಸಂಚರಿಸಲಿದೆ. ಮಧ್ಯದಲ್ಲಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಮಾತ್ರ ಒಂದು ಸ್ಟಾಪ್ ಇರಲಿದೆ.
ಟ್ರಯಲ್ಗಾಗಿ ವಂದೇ ಭಾರತ್ ಎಕ್ಸಪ್ರೆಸ್ ರೈಲು ಭಾನುವಾರ ಚೆನ್ನೈ ತಲುಪಿದ ಬಳಿಕ ವಿಭಾಗೀಯ ಹೆಚ್ಚುವರಿ ರೈಲ್ವೆ ಮ್ಯಾನೇಜರ್ ಭಾನುವಾರ ವಿಡಿಯೋ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. “ಕೊನೆಗೂ ಒಳ್ಳೆಯ ಸುದ್ದಿ ಬಂತು. ಟ್ರಯಲ್ ರನ್ಗಾಗಿ ವಂದೇ ಭಾರತ್ ಚೆನ್ನೈಗೆ ಬಂದಿದೆ” ಎಂದು ಬರೆದುಕೊಂಡಿದ್ದರು.
ಈ ರೈಲು ಬುಧವಾರ ಹೊರತುಪಡಿಸಿ ವಾರದ ಆರು ದಿನಗಳಲ್ಲಿ ಲಭ್ಯ ಇರಲಿದೆ. ಸ್ವಯಂಚಾಲಿತ ಡೋರ್, ವೈಫೈ ಇಂಟರ್ನೆಟ್ ಜೊತೆ ಸುಸಜ್ಜಿತ ತಂತ್ರಜ್ಞಾನದ 16 ಕೋಚ್ಗಳನ್ನು ಇದು ಹೊಂದಿರಲಿದೆ. ನ.11 ರಂದು ಬೆಂಗಳೂರಲ್ಲಿ ಈ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.
ಚೆನ್ನೈ : ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಮತ್ತು ನಾಗರಿಕರು ತಮ್ಮ…
ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ. ಶಿಕ್ಷಣ…
ಬೆಂಗಳೂರು : ಇಂದು 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಇದೇ ಮೊದಲ ಬಾರಿಗೆ ಶೇ.94.10ರಷ್ಟು ಫಲಿತಾಂಶ ಪ್ರಕಟವಾಗಿದೆ.…
ಬೆಂಗಳೂರು : 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ದಾಖಲೆಯ ಫಲಿತಾಂಶ ಬಂದಿದೆ. ಶಿಕ್ಷಣ ಸಚಿವ…
ಬೆಂಗಳೂರು : 2026ನೇ ಸಾಲಿನ ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಈ ಬಾರಿ ರಾಜ್ಯದ ವಿವಿಧ ಜಿಲ್ಲೆಗಳ ಫಲಿತಾಂಶದಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬಂದಿದೆ.…
ಬೆಂಗಳೂರು : 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶವನ್ನು ಬುಧವಾರ (ಏಪ್ರಿಲ್ 23) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ…