ಮೈಸೂರು : ಒಂದೊಂದು ಊರಿಗೆ ಹೋದಾಗಲೂ ಒಂದೊಂದು ಆಹಾರದ ವಿಶೇಷತೆಗಳು ಇರುತ್ತವೆ. ಅವು ಕೆಲ ಪ್ರದೇಶಗಳಿಗೆ ಮಾತ್ರ ಫೇಮಸ್ ಆಗಿವೆ. ಆದ್ರೆ, ತನ್ನ ಹೆಸರಿನಲ್ಲಿಯೇ ಮೈಸೂರನ್ನು ಪ್ರತಿನಿಧಿಸುವ ಮೈಸೂರ್ ಪಾಕ್ ದೇಶ ವಿದೇಶಗಳ ತನಕ ಹೆಸರು ವಾಸಿಯಾಗಿದೆ. ಇದೀಗ ಈ ಮೈಸೂರುಪಾಕ್ ವಿಶ್ವದ ಸ್ಟ್ರೀಟ್ ಫುಡ್ನಲ್ಲಿ 14ನೇ ಸ್ಥಾನ ಪಡೆದುಕೊಂಡಿದೆ.
ಮೈಸೂರು ಅರಸರ ಕಾಲದಲ್ಲಿ ತಯಾರಾಗಿದ್ದ ಮೈಸೂರುಪಾಕ್, ಮೈಸೂರು ಅಂದ್ರೆ ಮೈಸೂರುಪಾಕ್ ಎನ್ನುವಷ್ಟು ಖ್ಯಾತಿ ಗಳಿಸಿದ್ದು, ಇದೀಗ ಜಾಗತಿಕ ಮಟ್ಟದ ಮನ್ನಣೆ ಪಡೆದುಕೊಂಡಿದೆ. 4.4 ರೇಟಿಂಗ್ ಪಡೆದ ಮೈಸೂರುಪಾಕ್, ಆನ್‌ಲೈನ್ ಮಾರ್ಕೆಟ್ನಲ್ಲಿ ವಿಶ್ವದ 50 ತಿಂಡಿ ತಿನಿಸುಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಇನ್ನು ಕುಲ್ಫಿಗೆ 18ನೇ ಸ್ಥಾನ, ಕುಲ್ಫಿ ಫಲೂದಾಗೆ 32ನೇ ಸ್ಥಾನ ಸಿಕ್ಕಿದೆ.
ಟೇಸ್ಟ್ ಅಟ್ಲಾಸ್, ವಿಶ್ವದ ಬೆಸ್ಟ್ ಸ್ಟ್ರೀಟ್ ಫುಡ್ ಸ್ವೀಟ್ನ ಟಾಪ್ 50 ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಮೈಸೂರುಪಾಕ್ಗೆ 4.4 ರೇಟಿಂಗ್ನಿಂದಿಗೆ 14ನೇ ಸ್ಥಾನ ಸಿಕ್ಕಿದೆ. ಇನ್ನು ಕುಲ್ಫಿಗೆ 4.3 ರೇಟಿಂಗ್ ನೋಂದಿಗೆ 18ನೇ ಸ್ಥಾನ ನೀಡಲಾಗಿದೆ. ಫಲೂದಾ 4.0 ರೇಟಿಂಗ್ನೊಂದಿಗೆ 32ನೇ ಸ್ಥಾನ ಪಡೆದುಕೊಂಡಿದೆ.
ಇಂತಹ ಮೈಸೂರ್ ಪಾಕ್ ನಮ್ಮ ಮೈಸೂರಿನಲ್ಲಿಯೇ ತಯಾರಾಗಿದ್ದು ಎನ್ನುವುದೇ ಕನ್ನಡಿಗರೆಲ್ಲರಿಗೂ ಹೆಮ್ಮೆ ತರುವ ವಿಚಾರ. ಅಷ್ಟೇ ಅಲ್ಲದೆ ದೇಶ ವಿದೇಶಗಳಿಗೆ ಮೈಸೂರಿನ ಹೆಸರನ್ನು ಪರಿಚಯಿಸಿದ ಸಿಹಿ ತಿನಿಸು ಕೂಡ ಹೌದು. ಇಂತಹ ತಿನಿಸು ಮೈಸೂರು ಅರಮನೆಯ ಪಾಕಶಾಲೆಯಲ್ಲಿಯೇ ತಯಾರಾಗಿದ್ದು ಎನ್ನುವುದೇ ಸಂತಸದ ವಿಚಾರ.
‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…
ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…
ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…
ಜಿ.ಪಿ.ಬಸವರಾಜು ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ…
ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರು ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…
ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…