ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ನಾಡಹಬ್ಬ ಮೈಸೂರು ದಸರಾ ಉತ್ಸವದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಮಾಜಿ ಕ್ಯಾಪ್ಟನ್ ಅರ್ಜುನ ಅತಿ ಹೆಚ್ಚು ತೂಕದ ಆನೆ ಎಂಬ ಹೆಸರನ್ನು ಈ ಬಾರಿಯೂ ಉಳಿಸಿಕೊಂಡಿದ್ದಾನೆ.
ಅರಮನೆಯಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆ ನಿತ್ಯವೂ ತಾಲೀಮು ನಡೆಸುತ್ತಿವೆ. ಇಂದು ದಸರಾ ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಯಿತು.
ಒಟ್ಟು 14 ಆನೆಗಳು ಪೊಲೀಸರ ಬಿಗಿ ಭದ್ರತೆಯಲ್ಲಿ ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರಕ್ಕೆ ಆಗಮಿಸಿ ತೂಕ ಪರೀಕ್ಷೆಯಲ್ಲಿ ಭಾಗಿಯಾದವು. ಎರಡನೇ ಹಂತದ ಆನೆಗಳ ಜೊತೆ ಮೊದಲನೇ ಹಂತದ ಆನೆಗಳಿಗೂ ತೂಕ ಪರೀಕ್ಷೆ ಮಾಡಲಾಗಿದೆ.
ಸೆ. 6ರಂದು ಮೊದಲನೇ ಹಂತದ ಆನೆಗಳಿಗೆ ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ ಅಭಿಮನ್ಯು 5160 ರಿಂದ 5300ಕೆಜಿಗೆ ತೂಕ ಏರಿಸಿಕೊಂಡಿದ್ದಾನೆ. ಭೀಮ 4370 ರಿಂದ 4685, ಮಹೇಂದ್ರ 4530 ರಿಂದ 4665, ಧನಂಜಯ 4940 ರಿಂದ 4990, ಗೋಪಿ 5080 ರಿಂದ 5145, ಕಂಜಾನ್ 4240 ರಿಂದ 4395, ವಿಜಯಾ 2830 ರಿಂದ 2885 ಮತ್ತು ವರಲಕ್ಷ್ಮಿ 3020 ರಿಂದ 3170 ಕೆಜಿಗೆ ತೂಕ ಹೆಚ್ಚಿಸಿಕೊಂಡಿವೆ.
5685 ಕೆಜಿಯೊಂದಿಗೆ ಈ ಬಾರಿಯೂ ಅರ್ಜನನೇ ಮೊದಲ ಸ್ಥಾನದಲ್ಲಿದ್ದಾನೆ. 5300 ಕೆಜಿ ತೂಕದೊಂದಿಗೆ ಅಂಬಾರಿ ಹೊರುವ ಅಭಿಮನ್ಯು ಎರಡನೇ ಸ್ಥಾನದಲ್ಲಿದ್ದಾನೆ. ತೂಕ ಹೆಚ್ಚಿಸಿಕೊಳ್ಳವ ವಿಚಾರದಲ್ಲಿ ಭೀಮ ಎಲ್ಲರಿಗಿಂತ ಮುಂದಿದ್ದಾನೆ. ಭೀಮ ಬರೋಬ್ಬರಿ 315 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾನೆ.
ದಸರಾ ಗಜಪಡೆಯ ತೂಕದ ವಿವರ
ಆನೆ : ಅಭಿಮನ್ಯು (ಅಂಬಾರಿ ಆನೆ)
ವಯಸ್ಸು: 57 ವರ್ಷಗಳು
ಮೂಲ: ಮತ್ತಿಗೋಡು ಆನೆ ಶಿಬಿರ, ಕೊಡಗು ಜಿಲ್ಲೆ,
ಮಾವುತ: ಜೆ.ಎಸ್. ವಸಂತ, ಕಾವಾಡಿ ಜೆ.ಕೆ. ರಾಜು
ದಸರಾ ಅನುಭವ: 21 ವರ್ಷ, 4ನೇ ಬಾರಿ ಅಂಬಾರಿ
ತೂಕ: 5,300 ಕೆ.ಜಿ( 5160 ಕೆಜಿ.- ಸೆ.06 ರಂದು ಇದ್ದ ತೂಕ)
ಆನೆ : ವಿಜಯ (ಕುಮ್ಕಿ ಆನೆ)
ವಯಸ್ಸು : 63 ವರ್ಷಗಳು
ಮೂಲ: ದುಬಾರೆ ಅರಣ್ಯ,
ಮಾವುತ: ಜೆ.ಕೆ. ಬೋಜಪ್ಪ, ಕಾವಾಡಿ ಬಿ.ಪಿ. ಭರತ್
ದಸರಾ ಅನುಭವ: 13 ವರ್ಷ
ತೂಕ : 2,885 ಕೆಜಿ (2830 ಕೆಜಿ)
ಆನೆ : ಗೋಪಿ
ವಯಸ್ಸು : 41 ವರ್ಷಗಳು
ಮೂಲ: ದೊಡ್ಡಬೆಟ್ಟ ಅರಣ್ಯ, ಹಾಸನ
ಮಾವುತ ಪಿ.ಬಿ. ನವೀನ್ ಕುವಾರ್, ಕಾವಾಡಿಕ ಜೆ.ಆರ್. ಶಿವು
ದಸರಾ ಅನುಭವ : 12 ವರ್ಷ
ತೂಕ : 5145 ಕೆಜಿ (5080)
ಆನೆ : ವರಲಕ್ಷ್ತ್ರ್ಮಿ
ವಯಸ್ಸು : 67 ವರ್ಷಗಳು
ಮೂಲ: ಭೀಮನಕಟ್ಟೆ ಆನೆ ಶಿಬಿರ ಕಾಕನಕೋಟೆ ಅರಣ್ಯ
ಮಾವುತ ಜೆ.ಕೆ. ರವಿ, ಕಾವಾಡಿ ಕೆ.ಎಸ್.ಲವ
ದಸರಾ ಅನುಭವ : 10 ವರ್ಷ
ತೂಕ : 3,170ಕೆಜಿ (3020)
ಆನೆ : ಅರ್ಜುನ
ವಯಸ್ಸು : 65 ವರ್ಷಗಳು
ಮೂಲ : ಬಳ್ಳೆ ಆನೆ ಶಿಬಿರ, ಕಾಕನಕೋಟೆ ಅರಣ್ಯ
ಮಾವುತ ವಿನು, ಕಾವಾಡಿ ಡಿ.ರಾಜ
ದಸರಾ ಅನುಭವ : 22 ವರ್ಷ
ತೂಕ: 5680
ಆನೆ : ಕಂಜನ್
ವಯಸ್ಸು: 21 ವರ್ಷಗಳು
ಮೂಲ: ದುಬಾರೆ ಆನೆ ಶಿಬಿರ
ಮಾವುತ ಜೆಬಿ ವಿಜಯ, ಕಾವಾಡಿ ಮಣಿಕಂಠ
ಅನುಭವ: ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸಲಿದ್ದಾನೆ.
ತೂಕ : 4,395 ಕೆಜಿ (4240)
ಆನೆ : ಮಹೇಂದ್ರ
ವಯಸ್ಸು : 40 ವರ್ಷಗಳು
ಮೂಲ : ಮತ್ತಿಗೋಡು ಆನೆ ಶಿಬಿರ
ಮಾವುತ ರಾಜಣ್ಣ, ಕಾವಾಡಿ ಮಲ್ಲಿಕಾರ್ಜುನ
ದಸರಾ ಅನುಭವ : 2 ವರ್ಷ
ತೂಕ : 4660 ಕೆಜಿ (4530)
ಆನೆ : ಧನಂಜಯ
ವಯಸ್ಸು : 43 ವರ್ಷಗಳು
ಮೂಲ : ದುಬಾರೆ ಆನೆ ಶಿಬಿರ
ಮಾವುತ ಜೆ.ಸಿ. ಭಾಸ್ಕರ್, ಕಾವಾಡಿ ಜೆ.ಎಸ್.ರಾಜಣ್ಣ
ದಸರಾ ಅನುಭವ : 4 ವರ್ಷ
ತೂಕ : 4,990 ಕೆಜಿ (4940)
ಆನೆ : ಭೀಮ
ವಯಸ್ಸು : 23 ವರ್ಷ
ಮೂಲ : ಮತ್ತಿಗೋಡು ಆನೆ ಶಿಬಿರ
ಮಾವುತ : ಗುಂಡ, ಕಾವಾಡಿಗ: ನಂಜುಂಡಸ್ವಾಮಿ
ದಸರಾ ಅನುಭವ : 4 ವರ್ಷಗಳು
ತೂಕ : 4,685 ಕೆಜಿ (4370)
ಆನೆ: ಹಿರಣ್ಯ
ವಯಸ್ಸು: 46 ವರ್ಷ
ಮೂಲ: ದುಬಾರೆ ಆನೆ ಶಿಬಿರ
ಮಾವುತ: ಚಂದ್ರಶೇಖರ, ಕಾವಾಡಿಗ: ಮನ್ಸೂರ್
ದಸರಾ ಅನುಭವ: ಮೊದಲನೇ ಬಾರಿಗೆ ದಸರಾದಲ್ಲಿ ಭಾಗವಹಿಸಲಿದ್ದಾರೆ.
ತೂಕ: 2915 ಕೆಜಿ
ಆನೆ: ಲಕ್ಷ್ಮೀ
ವಯಸ್ಸು: 52 ವರ್ಷ
ಮೂಲ: ದೊಡ್ಡಹರವೆ ಆನೆ ಶಿಬಿರ
ಮಾವುತ: ರವಿ, ಕಾವಾಡಿಗ: ಮಂಜು
ದಸರಾ ಅನುಭವ: ಮೊದಲನೇ ಬಾರಿಗೆ ದಸರಾದಲ್ಲಿ ಭಾಗವಹಿಸಲಿದ್ದಾರೆ.
ತೂಕ: 3235
ಆನೆ: ಸುಗ್ರೀವಾ
ವಯಸ್ಸು: 41 ವರ್ಷ
ಮೂಲ: ದುಬಾರೆ ಆನೆ ಶಿಬಿರ
ಮಾವುತ: ಜೆ.ಬಿ.ಶಂಕರ್, ಕಾವಾಡಿಗ: ಜೆ.ಬಿ.ಹರೀಶ್
ದಸರಾ ಅನುಭವ: 2 ವರ್ಷ
ತೂಕ: 5035
ಆನೆ: ರೋಹಿತ್
ವಯಸ್ಸು: 21 ವರ್ಷ
ಮೂಲ: ರಾಮಪುರ ಆನೆ ಶಿಬಿರ
ಮಾವುತ: ಮಹದೇವ, ಕಾವಾಡಿಗ: ಮಣಿ
ದಸರಾ ಅನುಭವ: ಮೊದಲನೇ ಬಾರಿಗೆ ದಸರಾದಲ್ಲಿ ಭಾಗವಹಿಸಲಿದ್ದಾರೆ.
ತೂಕ: 3360 ಕೆ.ಜಿ
ಆನೆ: ಪ್ರಶಾಂತ್
ವಯಸ್ಸು: 50 ವರ್ಷ
ಮೂಲ: ದುಬಾರೆ ಆನೆ ಶಿಬಿರ
ಮಾವುತ: ಚಿನ್ನಪ್ಪ, ಕಾವಾಡಿಗ: ಚಂದ್ರ
ದಸರಾ ಅನುಭವ: ಮೊದಲನೇ ಬಾರಿಗೆ ದಸರಾದಲ್ಲಿ ಭಾಗವಹಿಸಲಿದ್ದಾರೆ.
ತೂಕ: 4970
ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಈಗ ಬ್ರೇಕ್ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅರಣ್ಯಾಧಿಕಾರಿಗಳು…
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಿಗಳ ಕೊರತೆಯಿರುವುದು ನಿಜ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.…
ಬೆಂಗಳೂರು: ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾರಾವ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಡಿಐಆರ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದೇಗೆ ಎಂಬ…
ಹಾಸನ: ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿ-ಮಗ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕಬ್ಬಳ್ಳಿ…
ಬೆಂಗಳೂರು: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ…
ಸಮತೋಲನದ ಬಜೆಟ್!... ಮೂಡಿ ಬಂದಿದೆ ಸರ್ವರ ಹಿತ ಏಳ್ಗೆಯ ಕರ್ನಾಟಕದ ಮಾದರಿ ಜನಪರ ಬಜೆಟ್! ಮುಖ್ಯಮಂತ್ರಿಗಳ ಅನುಭವದ ಮೂಸೆಯಲಿ ಸುಸ್ಥಿರ…