ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರಮೋದಿ ಇಸ್ರೋಗೆ ಭೇಟಿ ನೀಡಿರುವುದು ಪ್ರಚಾರಕ್ಕಾಗಿ ಎಂದು ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರಯಾನ-3 ರ ಯಶಸ್ಸಿಗೆ ಪರಿಶ್ರಮಿಸಿದ ಇಸ್ರೋದ ಎಲ್ಲಾ ವಿಜ್ಞಾನಿಗಳಿಗೂ ಅಭಿನಂದನೆ ಸಲ್ಲಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಇಸ್ರೋಗೆ ಭೇಟಿ ನೀಡಿ ವಿಜ್ಞಾನಿಗಳನ್ನು ಭೇಟಿ ಮಾಡಿದ್ದಾರೆ. ವಿಜ್ಞಾನಿಗಳನ್ನು ಭೇಟಿ ಮಾಡಲು ಆಗದೇ ಇದ್ದವರೂ ಕೂಡ ತಾವಿದ್ದಲಿಂದಲೇ ಅಭಿನಂದಿಸಿ ಸಂಭ್ರಮಿಸಿದ್ದಾರೆ. ಪ್ರಧಾನಿಯವರು ಆಗಮಿಸಿದ್ದಕ್ಕೆ ತಾವು ಹೆಚ್ಚು ಚರ್ಚೆ ಮಾಡಲು ಬಯಸುವುದಿಲ್ಲ. ಆದರೆ ಅವರಿಗೆ ಪ್ರಚಾರಕ್ಕಾಗಿ ಉಳಿದಿರುವುದು ಇಂತದ್ದೇ ಮಾರ್ಗಗಳು ಎಂದರು.
ಪ್ರಧಾನಿಯವರು ಇಸ್ರೋಗೆ ಬರಬಾರದು ಎಂದು ನಾವು ಹೇಳುವುದಿಲ್ಲ. ಆದರೆ ಮಣಿಪುರಕ್ಕೂ ಕಡ್ಡಾಯವಾಗಿ ಹೋಗಲೇಬೇಕಿತ್ತು. ಅಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆಯಾಗಿ ಸಾವಿರಾರು ಜನ ಸಂಕಷ್ಟದಲ್ಲಿದ್ದಾರೆ, ಹತ್ಯೆಗಳಾಗಿವೆ. ಒಮ್ಮೆ ಇಲ್ಲಿಗೆ ಬನ್ನಿ ಎಂದು ಅಲ್ಲಿನ ಜನ ಮೊರೆಯಿಟ್ಟಿದ್ದಾರೆ. ಪ್ರಧಾನಿಯವರು ತಂದೆಯ ಸ್ಥಾನದಲ್ಲಿದ್ದು, ಅಲ್ಲಿಗೆ ಭೇಟಿ ನೀಡಿ ಹಿಂಸಾಚಾರವನ್ನು ತಹಬದಿಗೆ ತರಬೇಕಿತ್ತು ಎಂದು ಹೇಳಿದರು.
ಇಲ್ಲಿ ಒಂದು ರಾಕೆಟ್ ಹಾರಿಸಿದಾಕ್ಷಣ ಬರುವಂತಹ ಮೋದಿ ಮಣಿಪುರಕ್ಕೆ ಹೋಗಬೇಕಿತ್ತು. ಈ ಎರಡೂ ಘಟನೆಗಳ ಹೋಲಿಕೆ ನೋಡಿದಾಗ ಮೋದಿಯವರ ಟೀಕೆಗಳು ಸರಿಯೆನಿಸುತ್ತವೆ ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದರು.
ಶಿಕ್ಷಣದ ವ್ಯವಸ್ಥೆಯನ್ನು ಬಿಜೆಪಿಯವರ ಕೈಗೆ ಕೊಟ್ಟರೆ ಅವರು ಮಕ್ಕಳಲ್ಲಿ ಅನಗತ್ಯವಾದ ವಿಷಯಗಳನ್ನು ತುರುಕುತ್ತಾರೆ. ಕೆಟ್ಟ ಬುದ್ಧಿ, ಕೆಟ್ಟ ನೀತಿ ಹೇಳಿಕೊಡುತ್ತಾರೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಕಾರದಲ್ಲಿದ್ದಾಗ ಏನೆಲ್ಲಾ ಮಾಡಿದ್ದಾರೆ ಎಂಬುದು ಕಣ್ಣೆದುರೇ ಇದೆ. ಭಾರತ ಸಂಸ್ಕøತಿ, ಭಾಷೆ, ಆಚರಣೆಗಳಿಂದ ವೈವಿಧ್ಯಮಯವಾದ ದೇಶ. ಆದರೆ ನಾವೆಲ್ಲಾ ಭಾರತೀಯರು.
ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಮಕ್ಕಳಲ್ಲಿ ಅನಗತ್ಯ ವಿಚಾರಗಳನ್ನು ತುಂಬುತ್ತದೆ. ಇದಕ್ಕಾಗಿ ಅದನ್ನು ನಾವು ತಿರಸ್ಕರಿಸುವುದಾಗಿ ಚುನಾವಣೆ ಪ್ರಣಾಳಿಕೆಯಲ್ಲೇ ಭರವಸೆ ನೀಡಿದ್ದೆವು. ನಾನು ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷನಾಗಿದ್ದೆ. ಸರ್ಕಾರ ರಚನೆಯಾದ ಬಳಿಕ ಅದನ್ನು ಅನುಷ್ಠಾನಗೊಳಿಸುವುದು ಸಚಿವನಾಗಿರುವ ನನ್ನ ಜವಾಬ್ದಾರಿ ಎಂದರು.
ರಾಜ್ಯದಲ್ಲಿ ಎನ್‍ಇಪಿ ಪಿಯುಸಿಯವರೆಗೆ ಅಲ್ಪಸ್ವಲ್ಪ ಅನುಷ್ಠಾನಗೊಂಡಿದೆ. ಉನ್ನತ ಶಿಕ್ಷಣದಲ್ಲಿ ಇನ್ನೂ ಜಾರಿಯಾಗಿಲ್ಲ. ಬಿಜೆಪಿಗೆ ದಮ್ಮು, ತಾಕತ್ತು ಇದ್ದರೆ ಅವರದೇ ಪಕ್ಷ ಆಡಳಿತದಲ್ಲಿರುವ ಇತರೆ ರಾಜ್ಯಗಳಲ್ಲಿ ಈವರೆಗೂ ಎನ್‍ಇಪಿಯನ್ನು ಏಕೆ ಜಾರಿಗೊಳಿಸಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಎನ್‍ಇಪಿಗಿಂತಲೂ ಉತ್ತಮವಾದ ಎಸ್‍ಇಪಿಯನ್ನು ಜಾರಿಗೆ ತರುತ್ತೇವೆ. ರಾಜ್ಯ ಶಿಕ್ಷಣ ನೀತಿಗಾಗಿ ಉನ್ನತ ಮಟ್ಟದ ಸಮಿತಿ ರಚಿಸಲು ಮುಖ್ಯಮಂತ್ರಿಯವರಿಗೆ ಅಕಾರ ನೀಡಲಾಗಿದೆ. ಉನ್ನತ ಶಿಕ್ಷಣದ ಇಲಾಖೆಯಲ್ಲಿ ವ್ಯಾಪಕ ಚರ್ಚೆ ಬಳಿಕ ಸ್ಥಳೀಯ ನೀತಿಯನ್ನು ರೂಪಿಸುವುದಾಗಿ ಹೇಳಿದರು.
ಸ್ಥಳೀಯ ಶಾಲಾಭಿವೃದ್ಧಿ ಸಮಿತಿ (ಎಸ್‍ಡಿಎಂಸಿ)ಗಳು ಸಮರ್ಪಕವಾಗಿ ಕೆಲಸ ಮಾಡದೇ ಇರುವ ಬಗ್ಗೆ ಚರ್ಚೆಗಳು ಬಂದಿವೆ. ತಾವು ನಾಳೆಯಿಂದ ಹುಬ್ಬಳ್ಳಿ-ಧಾರವಾಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಸ್ಥಳೀಯವಾಗಿ ಸಮಿತಿಗಳಿಗೆ ಎಚ್ಚರಿಕೆ ನೀಡುತ್ತೇನೆ. ಆಡಳಿತ ವರ್ಗಗಳ ಸಮಸ್ಯೆಗಳನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇನೆ. ಅದನ್ನು ಮೀರಿಯೂ ರಾಜಕಾರಣಕ್ಕಾಗಿ ಎಸ್‍ಡಿಎಂಸಿಗಳಲ್ಲಿ ಸಮಸ್ಯೆಗಳು ಉದ್ಭವಿಸಿದರೆ ಅಗತ್ಯ ಕಾನೂನಿನ ಮೂಲಕ ಸರಿಪಡಿಸುವುದಾಗಿ ಹೇಳಿದರು.
ತಮ್ಮ ಸರ್ಕಾರ ಯಾವುದೇ ಸರ್ಕಾರಿ ಕಾಲೇಜು ಮತ್ತು ಶಾಲೆಗಳನ್ನು ಮುಚ್ಚಲು ಬಯಸುವುದಿಲ್ಲ. ಮಕ್ಕಳಿಗೆ ಕನ್ನಡ ಭಾಷೆ ಕಲಿಕೆಗೆ ಆದ್ಯತೆ ನೀಡಲಾಗುವುದು. ಆದರೆ ಭಾಷಾ ಮಾಧ್ಯಮ ಆಯ್ಕೆಗೆ ಪೋಷಕರು ಹಾಗೂ ಮಕ್ಕಳಿಗೆ ಸ್ವಾತಂತ್ರ್ಯ ಇದೆ ಎಂದು ತಿಳಿಸಿದರು.
ನಾಳೆಯಿಂದ ಬಿಜೆಪಿ ಪ್ರತಿಭಟನೆ: ಸಂಸದರ ಮಾಹಿತಿ ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತ ಅವಹೇಳನಕಾರಿ ವೀಡಿಯೋ ಮಾಡಿದವರ…
ಬೆಳಗಾವಿ : ಮುಂದಿನ ಮಾರ್ಚ್‌ನಿಂದ ಎರಡೂವರೆ ಸಾವಿರ ಮೆಗಾ ವ್ಯಾಟ್ ಸೌರಶಕ್ತಿ ವಿದ್ಯುತ್ ಸೇರ್ಪಡೆಯಾಗುತ್ತಿದ್ದು, ಗೃಹ ಬಳಕೆ ಹಾಗೂ ಕೈಗಾರಿಕೆಗಳಿಗೆ…
ಬೆಳಗಾವಿ : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ರಾಜ್ಯಾಥಿತ್ಯ ಸೌಲಭ್ಯಗಳು ಸಿಗುತ್ತಿರುವ ಬಗ್ಗೆ ವಿಧಾನಪರಿಷತ್‌ನಲ್ಲಿ ಪ್ರಸ್ತಾಪವಾಯಿತು. ಶೂನ್ಯವೇಳೆಯಲ್ಲಿ ಸದಸ್ಯ ಧನಂಜಯ್…
ಬೆಂಗಳೂರು : ನಟ ದರ್ಶನ್ ಅವರ ಅನುಪಸ್ಥಿತಿಯಲ್ಲಿ ದಿ ಡೆವಿಲ್ ಸಿನಿಮಾ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾವನ್ನು ಅಭಿಮಾನಿಗಳು, ದರ್ಶನ್…
ಬೆಳಗಾವಿ : ರಾಜ್ಯದಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ…
ಬೆಳಗಾವಿ : ರಾಜ್ಯದಲ್ಲಿ ಹೊಸ ತಾಲ್ಲೂಕುಗಳಲ್ಲಿ ಸದ್ಯಕ್ಕೆ ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಮಂಜೂರಾತಿ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ…