ನವದೆಹಲಿ: ಪ್ರಧಾನಿ ಮೋದಿ ಪದವಿ ವಿವಾದ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ಆದೇಶವನ್ನು ಮರುಪರಿಶೀಲಿಸುವಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಗುಜರಾತ್ ವಿಶ್ವವಿದ್ಯಾನಿಲಯದ ವೆಬ್‍ಸೈಟ್‍ನಲ್ಲಿ ಪ್ರಧಾನಿ ಪದವಿ ಲಭ್ಯವಿಲ್ಲ ಎಂದು ಕೇಜ್ರಿವಾಲ್ ತಮ್ಮ ಮರುಪರಿಶೀಲನಾ ಅರ್ಜಿಯಲ್ಲಿ ಹೇಳಿದ್ದಾರೆ.
ಕೇಜ್ರಿವಾಲ್ ಅವರ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಾಲಯ ಶುಕ್ರವಾರ ಅಂಗೀಕರಿಸಿದೆ. ಪ್ರಕರಣದ ಮುಂದಿನ ವಿಚಾರಣೆಗೆ ನ್ಯಾಯಾಲಯವು ಜೂನ್ 30 ರಂದು ದಿನಾಂಕವನ್ನು ನಿಗದಿಪಡಿಸಿದೆ. ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಆದೇಶದ ಮರುಪರಿಶೀಲನಾ ಅರ್ಜಿಯನ್ನು ಶುಕ್ರವಾರ (ಮೇ 9) ಹೈಕೋರ್ಟ್ ಸ್ವೀಕರಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರ ವಿಭಾಗೀಯ ಪೀಠ ಪ್ರತಿವಾದಿಗಳಾದ ಗುಜರಾತ್ ವಿಶ್ವವಿದ್ಯಾನಿಲಯ, ಮುಖ್ಯ ಮಾಹಿತಿ ಆಯುಕ್ತರು, ಆಗಿನ ಸಿಐಸಿ ಪ್ರೊಫೆಸರ್ ಎಂ. ಶ್ರೀಧರ್ ಆಚಾರ್ಯುಲು ಮತ್ತು ಯೂನಿಯನ್ ಆಫ್ ಇಂಡಿಯಾಗೆ ತೀರ್ಪು ನೀಡಿದೆ.
ಗುಜರಾತ್ ವಿಶ್ವವಿದ್ಯಾನಿಲಯಕ್ಕಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಲ್ಲಿಸಿದ ಹೇಳಿಕೆಯನ್ನು ಆಧರಿಸಿ ಮಾರ್ಚ್ 31 ರಂದು ನೀಡಿದ ಆದೇಶದಲ್ಲಿ ಪ್ರಧಾನಿ ಮೋದಿಯವರ ಶೈಕ್ಷಣಿಕ ಪದವಿಗಳು ಗುಜರಾತ್ ವಿಶ್ವವಿದ್ಯಾನಿಲಯದ ವೆಬ್‍ಸೈಟ್‍ನಲ್ಲಿ ಲಭ್ಯವಿವೆ ಎಂದು ಹೇಳಲಾಗಿದೆ.
ಸಿಎಂ ಕೇಜ್ರಿವಾಲ್ ತಮ್ಮ ಮರುಪರಿಶೀಲನಾ ಅರ್ಜಿಯಲ್ಲಿ ನ್ಯಾಯಾಲಯಕ್ಕೆ ಗುಜರಾತ್ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‍ಸೈಟ್‍ನಲ್ಲಿ ಪ್ರಧಾನಿ ಮೋದಿ ಅವರ ಪದವಿ ಇಲ್ಲ ಎಂದು ತಿಳಿಸಿದರು. ಗುಜರಾತ್ ವೆಬ್‍ಸೈಟಿನಲ್ಲಿ ಕೇವಲ ಒಂದು ಆಫೀಸ್ ರಿಜಿಸ್ಟರ್ ಮಾತ್ರ ಲಭ್ಯವಿದೆ. ಇದು ಪ್ರಧಾನಿ ಮೋದಿಯವರ ಮೂಲ ಪದವಿಗಿಂತ ಭಿನ್ನವಾಗಿದೆ ಎಂದಿದ್ದಾರೆ. ಈ ಹಿಂದೆ ಗುಜರಾತ್ ವಿಶ್ವವಿದ್ಯಾನಿಲಯದ ವೆಬ್‍ಸೈಟ್‍ನಲ್ಲಿ ಪ್ರಧಾನಿ ಮೋದಿ ಪದವಿ ಲಭ್ಯವಿದೆ. ಅದನ್ನು ಇಲ್ಲಿಂದ ಪರಿಶೀಲಿಸಬಹುದು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿತ್ತು.
ಇದೀಗ ಸಿಎಂ ಕೇಜ್ರಿವಾಲ್ ಈ ಆಧಾರದ ಮೇಲೆ ಹೈಕೋರ್ಟ್ ತೀರ್ಪನ್ನು ಮರುಪರಿಶೀಲಿಸುವಂತೆ ಆಗ್ರಹಿಸಿದ್ದಾರೆ. ಗುಜರಾತ್ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‍ಸೈಟ್‍ನಲ್ಲಿ ಪ್ರಧಾನಿ ಮೋದಿ ಅವರ ಪದವಿ ಇಲ್ಲ ಎಂದು ಅವರು ಹೇಳಿದ್ದಾರೆ. ಆದ್ದರಿಂದ, ನ್ಯಾಯಾಲಯದ ಆದೇಶವು ಸ್ಪಷ್ಟವಾಗಿ ತಪ್ಪಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
2016ರಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕೇಂದ್ರ ಸಚಿವೆ ಸ್ಮತಿ ಇರಾನಿ ಅವರ ವಿದ್ಯಾರ್ಹತೆ ಕುರಿತು ನಾನಾ ಶಂಕೆಗಳು ವ್ಯಕ್ತವಾಗಿ ಬಿಜೆಪಿ-ಕಾಂಗ್ರೆಸ್ ರಾಜಕೀಯ ಕೆಸರೆರಚಾಟ ನಡೆಸಿದ್ದವು. ಆಗ ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಮಾಹಿತಿ ಬಹಿರಂಗಪಡಿಸುವಂತೆ ಕೇಜ್ರಿವಾಲ್ ಕೇಂದ್ರ ಮಾಹಿತಿ ಹಕ್ಕು ಆಯೋಗಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಂದಿನ ಮುಖ್ಯ ಮಾಹಿತಿ ಹಕ್ಕು ಆಯುಕ್ತ ಸಿ.ಶ್ರೀಧರ ಆಚಾರ್ಯುಲು ಅವರು ಈ ಮಾಹಿತಿ ಬಹಿರಂಗ ಮಾಡುವಂತೆ ಮೋದಿ ಸ್ನಾತಕೋತ್ತರ ಪದವಿ ಪಡೆದ ದೆಹಲಿ ವಿವಿ ಮತ್ತು ಪದವಿ ಪಡೆದ ಗುಜರಾತ್ ವಿವಿಗೆ ಸೂಚಿಸಿದ್ದರು.
ಆದರೆ ಇದನ್ನು ಗುಜರಾತ್ ವಿವಿ ಗುಜರಾತ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈ ಹಿನ್ನೆಲೆಯಲ್ಲಿ ಕೆಲ ದಿನಗಳಲ್ಲೇ ಮಾಹಿತಿ ಬಹಿರಂಗಕ್ಕೆ ಹೈಕೋರ್ಟ್ ತಡೆ ನೀಡಿತ್ತು. ವಿಚಾರಣೆ ವೇಳೆ ವಾದ ಮಂಡಿಸಿದ ಮೋದಿ ಪರ ವಾದಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವ್ಯಕ್ತಿಯೊಬ್ಬರ ಬೇಜವಾಬ್ದಾರಿಯುತ, ಬಾಲಿಶ ಕುತೂಹಲವು ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕ ಹಿತಾಸಕ್ತಿಯಾಗದು. ಈ ಹಿಂದೆಯೇ ಗುಜರಾತ್ ವಿವಿ ಮೋದಿ ಅವರ ಪದವಿ ಪ್ರಮಾಣಪತ್ರವನ್ನು ವೆಬ್‍ಸೈಟ್‍ಗೆ ಹಾಕಿತ್ತು.
ಈಗ ಮತ್ತೆ ಬಹಿರಂಗಕ್ಕೆ ಬೇಡಿಕೆ ಏಕೆ? ಇದು ಖಾಸಗಿ ವಿಷಯವಾಗಿದ್ದು, ಖಾಸಗಿತನ ಹಕ್ಕಿಗೆ ಧಕ್ಕೆ ಬರುತ್ತದೆ. ಮೇಲಾಗಿ, ಮೋದಿ ವಿದ್ಯಾರ್ಹತೆಯು ಅವರ ಪ್ರಧಾನಿ ಸ್ಥಾನಮಾನದ ಮೇಲೆ ಪರಿಣಾಮವನ್ನೇನೂ ಬೀರದು. ಈ ಅರ್ಜಿಯು ಎದುರಾಳಿಗಳ ವಿರುದ್ಧ ದ್ವೇಷ ಸಾಸುವ ಸಾಧನವಾಗಿ ಹೊರಹೊಮ್ಮಿದೆ ಎಂದು ವಾದಿಸಿದ್ದರು. ಆದರೆ ಕೇಜ್ರಿವಾಲ್ ಪರ ವಕೀಲರು, ಪ್ರಧಾನಿಗಳು ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿದ್ದೇನೆ ಎಂದು ಚುನಾವಣಾ ಅಫಿಡವಿಟ್‍ನಲ್ಲಿ ಹೇಳಿದ್ದಾರೆ. ಡಿಗ್ರಿ ವಿವರ ನಮಗೆ ವೆಬ್‍ಸೈಟ್‍ನಲ್ಲಿ ಸಿಕ್ಕಿಲ್ಲ. ಹೀಗಾಗಿ ಸರ್ಟಿಫಿಕೇಟ್ ಹಾಗೂ ಅಂಕಪಟ್ಟಿ ಮಾಹಿತಿ ಕೇಳಿದ್ದೇವೆ ಎಂದು ವಾದಿಸಿದ್ದರು.
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…