BREAKING NEWS

ಜೆಡಿಎಸ್ ಪಟ್ಟಿ ಬಿಡುಗಡೆ, ಹುಣಸೂರಿಗೆ ಹರೀಶ್ ಗೌಡ ಅಭ್ಯರ್ಥಿ

ಮೈಸೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಸಂಧಾನ ಯಶಸ್ವಿಯಾದ ಬೆನ್ನಿಗೇ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಶುಕ್ರವಾರ ಹಿರಿಗೌಡರ ಜತೆ ಶುಕ್ರವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಗರದ ಹೊರವಲಯದ ರೆಸಾರ್ಟ್ನಲ್ಲಿನಡೆದ ಸಭೆಯಲ್ಲಿ ಪಾಲ್ಗೊಂಡು ವಾಸ್ತವ್ಯ ಹೂಡಿದ್ದ ಎಚ್.ಡಿ.ದೇವೇಗೌಡರು ಶುಕ್ರವಾರ ಜಿಟಿಡಿ ಅವರೊಂದಿಗೆ ಒಂದೇ ಕಾರಿನಲ್ಲಿ ಪಯಣ ಬೆಳೆಸಿದರು. ಚಾಮುಂಡೇಶ್ವರಿದೇವಿಗೆ ಪೂಜೆ ಸಲ್ಲಿಸಿ ಪಂಚರಥಯಾತ್ರೆ ಯಶಸ್ವಿಯಾಗಲು ಶಕ್ತಿ ಕೊಡುವಂತೆ ಪ್ರಾರ್ಥಿಸಿದರು.

ಮೊದಲ ಪಟ್ಟಿ ಪ್ರಕಟ: ಚಾಮುಂಡೇಶ್ವರಿದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹೊರ ಬಂದ ಜಿ.ಟಿ.ದೇವೇಗೌಡರು ದೊಡ್ಡಗೌಡರ ಸಮ್ಮುಖದಲ್ಲೇ ಮೈಸೂರು ಜಿಲ್ಲೆಯ ಆರು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದರು. ಚಾಮುಂಡೇಶ್ವರಿಗೆ ಜಿಟಿಡಿ, ಹುಣಸೂರಿಗೆ ಜಿ.ಡಿ.ಹರೀಶ್ಗೌಡ, ಕೆ.ಆರ್.ನಗರಕ್ಕೆ ಸಾ.ರಾ.ಮಹೇಶ್, ಪಿರಿಯಾಪಟ್ಟಣಕ್ಕೆ ಕೆ.ಮಹದೇವ್, ತಿ.ನರಸೀಪುರಕ್ಕೆ ಎಂ.ಅಶ್ವಿನ್ ಕುಮಾರ್,ಎಚ್.ಡಿ.ಕೋಟೆಗೆ ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್ ಹೆಸರು ಅಂತಿಮವಾಗಿದೆ ಎಂದು ಹೇಳಿದರು. ನಾನು ನಿನ್ನೆಯಿಂದಲೇ ಪಕ್ಷ ಸಂಘಟನೆಯಿಂದಲೇ ತೊಡಗಿದ್ದೇನೆ. ಮನಸ್ಸು ಮೂರು ವರ್ಷಗಳ ನಂತರ ಸಮಾಧಾನದಲ್ಲಿದೆ. ನಾನು ಮತ್ತು ನನ್ನ ಮನೆಯವರು ಹೆಚ್ಚು ಖುಷಿಯಲ್ಲಿದ್ದೇವೆ. ಇನ್ನೂ ಯಾವ ಗೊಂದಲಗಳು ಉಳಿದಿಲ್ಲ ಎಂದರು. ಚಾಮುಂಡೇಶ್ವರಿಗೆ ಎಚ್.ಡಿ.ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇನ್ನೊಂದು ತಿಂಗಳಿನಲ್ಲಿ ನಡೆಯುವ ಶಕ್ತಿಕೊಡು ಅಂತ ಪ್ರಾರ್ಥಿಸಿದ್ದಾರೆ. ಜನವರಿ ತಿಂಗಳಲ್ಲಿ ಎಚ್.ಡಿ.ದೇವೇಗೌಡರು ಚಂಡಿಕಾ ಹೋಮ ನಡೆಸಲಿರುವ ಹಿನ್ನಲೆಯಲ್ಲಿ ನವದುರ್ಗೆಯನ್ನು ಬೇಡಿಕೊಂಡಿದ್ದಾರೆ ಎಂದರು. ಎಚ್.ಡಿ.ದೇವೇಗೌಡರ ಉತ್ಸಾಹ ನೋಡಿ ನಾವೇ ಅಚ್ಚರಿಗೆ ಒಳಗಾಗಿದ್ದೇವೆ. ಅವರೇ ನಮಗೆ ಪ್ರೇರಣೆ ಮತ್ತು ಶಕ್ತಿಯಾಗಿದ್ದಾರೆ. ಅವರನ್ನು ಸಂತೋಷವಾಗಿಡುವುದು ಮತ್ತು ಅವರ ಕನಸನ್ನು ನನಸು ಮಾಡುವುದೇ ಗುರಿಯಾಗಿದೆ ಎಂದು ಹೇಳಿದರು.

ಜಿಟಿಡಿ ಕುರಿತು ಅಪಸ್ವರದ ಮಾತಿಗೆ ಅಸ್ಪದವಿಲ್ಲ: ಎಚ್ ಡಿ ಡಿ

ಮೈಸೂರು ಜಿಲ್ಲೆಗೆ ಜಿ.ಟಿ.ದೇವೇಗೌಡರೇ ನಾಯಕರು. ಅವರ ನಾಯಕತ್ವದಲ್ಲೇ ಮುಂದೆ ಪಕ್ಷದ ಎಲ್ಲ ಕಾರ್ಯಗಳು ನಡೆಯುತ್ತವೆ. ನಾಯಕತ್ವದ ಬಗ್ಗೆ ಒಂದೇ ಒಂದು ಅಪಸ್ವರದ ಮಾತು ಕೇಳಿಬಂದರೂ ನಾನು ಸಹಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಖಡಕ್ ಎಚ್ಚರಿಕೆ ನೀಡಿದರು. ಚಾಮುಂಡಿಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಟಿಡಿ ಜಿಲ್ಲೆಗೆ ಬಲಿಷ್ಠ ನಾಯಕ. ಅವರ ಕುರಿತು ಅಪಸ್ವರ ಎತ್ತುವವರು ಹೊರಗೆ ಹೋಗಬಹುದು. ಜಿಲ್ಲೆಯ ಉಸ್ತುವಾರಿವನ್ನು ಕೊಟ್ಟಿದ್ದೇವೆ. ಅವರ ತೀರ್ಮಾನವೇ ಅಂತಿಮ. ಏನಾದರೂ ಕೊಂಕು ಮಾತನಾಡಿದರೆ ನಾನು ಸಹಿಸುವುದಿಲ್ಲ ಎಂದು ಜಿಟಿಡಿ ವಿರೋಧಿಗಳಿಗೆ ಸಂದೇಶ ರವಾನಿಸಿದರು.

andolana

Recent Posts

ಇರಾನ್ ಇಸ್ರೇಲ್ ಸಂಘರ್ಷ ತೈಲ ಬೆಲೆ ಚಿನ್ನದ ಬೆಲೆ ಏರಿಕೆ ..?

ಟೆಹರಾನ್‌: ಇರಾನ್ ಮೇಲೆ ಇಸ್ರೇಲ್ ಅಮೆರಿಕ ಜಂಟಿಯಾಗಿ ದಾಳಿ ನಡೆಸಿದ ಪರಿಣಾಮ ಇದೀಗ ಇರಾನ್ ಕೂಡ ಪ್ರತೀಕಾರವಾಗಿ ಇಸ್ರೇಲ್ ಅಮೆರಿಕಾ…

3 mins ago

ಕೊಡಗು| ಬೆಟ್ಟತ್ತೂರು ಬಳಿ ಆನೆ ದಾಳಿಗೆ ವಿದ್ಯಾರ್ಥಿನಿ ಬಲಿ

ಕೊಡಗು: ಆನೆ ದಾಳಿಗೆ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ಮದೆ ಬೆಟ್ಟತ್ತೂರು ಗ್ರಾಮದ ಗಿರೀಶ್‌ ಎಂಬುವವರ ಪುತ್ರಿ ಪೂಜಾ…

17 mins ago

ಕಾಂಗ್ರೆಸ್‌ಗೆ ಹೆಚ್ಚಿನ ಸೀಟು ಇಲ್ಲ: ಡಿಎಂಕೆ ಸ್ಪಷ್ಟ ಸಂದೇಶ

ತಮಿಳುನಾಡು: ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಸೀಟು ಹಂಚಿಕೆ ಮಾತುಕತೆ ಆರಂಭವಾಗಿದೆ. ಜಾತ್ಯಾತೀತ ಪ್ರಗತಿಪರ ಮೈತ್ರಿಕೂಟದ ಪಕ್ಷಗಳಿಗೆ ಸೀಟು ಹಂಚಿಕೆ…

35 mins ago

ಚನ್ನಪಟ್ಟಣದಲ್ಲಿ ಕಾಡಾನೆ ಸೆರೆಗೆ ಸಾಕಾನೆಗಳ ಮೂಲಕ ಕಾರ್ಯಾಚರಣೆ

ರಾಮನಗರ: ಚನ್ನಪಟ್ಟಣ-ರಾಮನಗರ ಭಾಗದಲ್ಲಿ ಕಾಡಾನೆ ಉಪಟಳ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಎರಡು ಕಾಡಾನೆಗಳ ಸೆರೆಗೆ ಸರ್ಕಾರ ಅನುಮತಿ ನೀಡಿದೆ. ಚನ್ನಪಟ್ಟಣದ ಬಿ.ವಿ.ಹಳ್ಳಿ…

45 mins ago

ಚಿಕ್ಕಬಳ್ಳಾಪುರಕ್ಕೂ ಅಲಿ ಖಮೇನಿಗೂ ಇದೆ ನಂಟು

ಚಿಕ್ಕಬಳ್ಳಾಪುರ: ಇಸ್ರೇಲ್‌ ಹಾಗೂ ಅಮೇರಿಕಾ ನಡೆಸಿದ ದಾಳಿಯಲ್ಲಿ ಇರಾನ್‌ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದು, ಖನೇನಿಯ ಮಗಳು,…

58 mins ago

ಇರಾನ್‌ ಕ್ಷಿಪಣಿ ಭೀತಿ: ದುಬೈನಲ್ಲಿ ಹೈಅಲರ್ಟ್‌ ಘೋಷಣೆ

ದುಬೈ: ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಯುದ್ಧದ ಉದ್ವಿಗ್ನತೆಯು ತಾರಕ್ಕೇರಿರುವುದರಿಂದ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ. ಈ…

1 hour ago