ಬೆಂಗಳೂರು: ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ರಾಜ್ಯ ಬಿಜೆಪಿಯ ನೂತನ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.
ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಬೈರತಿ ಬಸವರಾಜ್ ಅವರು ಉಪಾಧ್ಯಕ್ಷರಾಗಿದ್ದರೆ, ಮತ್ತೊಬ್ಬ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
10 ಮಂದಿ ಉಪಾಧ್ಯಕ್ಷರು, ನಾಲ್ವರು ರಾಜ್ಯ ಪ್ರಧಾನ ಕಾರ್ಯದರ್ಶಿಗಳು, 10 ಮಂದಿ ರಾಜ್ಯ ಕಾರ್ಯದರ್ಶಿಗಳು ಮತ್ತು ವಿವಿಧ ಮೋರ್ಚಾಗಳಿಗೆ ಶನಿವಾರ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.
ಯಾರಿಗೆ ಯಾವ ಹುದ್ದೆಗಳು?
ಹತ್ತು ಉಪಾಧ್ಯಕ್ಷರು : ಮಾಜಿ ಸಚಿವರಾದ ಮುರುಗೇಶ್ ನಿರಾಣಿ (ಬಾಗಲಕೋಟೆ), ಬೈರತಿ ಬಸವರಾಜ್ (ಬೆಂಗಳೂರು), ನಾಯಕರಾದ ರಾಜುಗೌಡ ನಾಯಕ್ (ಯಾದಗಿರಿ), ಎನ್ ಮಹೇಶ್ (ಚಾಮರಾಜನಗರ), ಅನಿಲ್ ಬೆನಕೆ (ಬೆಳಗಾವಿ), ಹರತಾಳು ಹಾಲಪ್ಪ (ಶಿವಮೊಗ್ಗ), ರೂಪಾಲಿ ನಾಯಕ್ (ಉತ್ತರ ಕನ್ನಡ), ಡಾ. ಬಸವರಾಜ್ ಕೇಲಗಾರ (ಹಾವೇರಿ), ಮಾಳವಿಕಾ ಅವಿನಾಶ್ (ಬೆಂಗಳೂರು) ಹಾಗೂ ಎಂ. ರಾಜೇಂದ್ರ (ಮೈಸೂರು) ಅವರನ್ನು ನೇಮಿಸಲಾಗಿದೆ.
ನಾಲ್ವರು ರಾಜ್ಯ ಪ್ರಧಾನ ಕಾರ್ಯದರ್ಶಿಗಳು : ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಕುಡಚಿಯ ಪಿ ರಾಜೀವ್, ಬೆಂಗಳೂರಿನ ನಂದೀಶ್ ರೆಡ್ಡಿ, ಹಾಸನ ಪ್ರೀತಮ್ ಗೌಡ ನೇಮಕಗೊಂಡಿದ್ದಾರೆ.
1೦ ಮಂದಿ ರಾಜ್ಯ ಕಾರ್ಯದರ್ಶಿಗಳು: ಬೀದರ್‌ನ ಶೈಲೇಂದ್ರ ಬೆಲ್ದಾಳೆ, ಶಿವಮೊಗ್ಗ ಡಿ.ಎಸ್ ಅರುಣ್, ಕಲಬುರಗಿಯ ಬಸವರಾಜ್ ಮತ್ತಿಮೋಡ್, ಚಿಕ್ಕಬಳ್ಳಾಪುರದ ಸಿ ಮುನಿರಾಜು, ತುಮಕೂರಿನ ವಿನಯ್ ಬಿದರೆ, ಮಂಗಳೂರಿನ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೊಪ್ಪಳದ ಶರಣು ತಳ್ಳಕೇರಿ, ಯಾದಗಿರಿಯ ಲಲಿತಾ ಅನಾಪುರ, ಮಂಡ್ಯದ ಲಕ್ಷ್ಮೀ ಅಶ್ವಿನ್ ಗೌಡ, ತುಮಕೂರಿನ ಅಂಬಿಕಾ ಹುಲಿನಾಯ್ಕರ್ ನೇಮಕ.
ಬಿಜೆಪಿ ರಾಜ್ಯ ಖಚಾಂಚಿಯಾಗಿ ಬೆಂಗಳೂರಿನ ಸುಬ್ಬ ನರಸಿಂಹ ಅವರನ್ನು ಮುಂದುವರಿಸಲಾಗಿದೆ.
ವಿವಿಧ ಮೋರ್ಚಾಗಳ ರಾಜ್ಯಾಧ್ಯಕ್ಷರು:
ಮಹಿಳಾ ಮೋರ್ಚಾ: ಸಿ ಮಂಜುಳಾ (ಮಾಜಿ ಮಹಿಳಾ ಆಯೋಗ ಅಧ್ಯಕ್ಷೆ)
ಯುವಮೋರ್ಚಾ: ಧೀರಜ್ ಮುನಿರಾಜು (ದೊಡ್ಡಬಳ್ಳಾಪುರ ಶಾಸಕ)
ಎಸ್ಟಿ ಮೋರ್ಚಾ: ಬಂಗಾರು ಹನುಮಂತ್, ಬಳ್ಳಾರಿ
ಎಸ್ಸಿ ಮೋರ್ಚಾ: ಎಸ್ ಮಂಜುನಾಥ್ (ಸಕಲೇಶಪುರ ಶಾಸಕ)
ಓಬಿಸಿ ಮೋರ್ಚಾ: ರಘು ಕೌಟಿಲ್ಯ. ಮೈಸೂರು
ರೈತ ಮೋರ್ಚಾ: ಎ.ಎಸ್ ಪಾಟೀಲ್ ನಡಹಳ್ಳಿ (ಮಾಜಿ ಶಾಸಕ), ವಿಜಯಪುರ
ಅಲ್ಪಸಂಖ್ಯಾತ ಮೋರ್ಚಾ: ಅನಿಲ್ ಥಾಮಸ್, ಮೈಸೂರು
ಬೆಳಗಾವಿ (ಸುವರ್ಣಸೌಧ) : ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕೇಬಲ್ ಟಿವಿ ಆಪರೇಟರ್‌ಗಳಿಗೆ ವಿಧಿಸಲಾಗುತ್ತಿರುವ ಶುಲ್ಕವನ್ನು ಶೇ.50ರಷ್ಟು ಕಡಿಮೆ ಮಾಡಲಾಗುವುದು…
ಬೆಳಗಾವಿ : ರಾಜ್ಯದಲ್ಲಿ ಹಣ ವಸೂಲಿಗಾಗಿ ಅನಗತ್ಯವಾಗಿ ಸಿಜೇರಿಯನ್ ಹೆರಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕೆ.ಪಿ.ಎಂ.ಇ. ನಿಯಮದಂತೆ ಕ್ರಮ…
ಚಿಕ್ಕಮಗಳೂರು : ಅತ್ಯಂತ ಪರಿಸರ ಸೂಕ್ಷ ಸ್ಥಳಗಳನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೆ…
ಹೊಸದಿಲ್ಲಿ : ಲೋಕಸಭೆಯಲ್ಲಿ ವಂದೇ ಮಾತರಂ ಗೀತೆ ಕುರಿತ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವು ಇತಿಹಾಸವನ್ನು…
ಬೆಳಗಾವಿ : ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಒಂದೇ ಒಂದು ಮಗುವಿದ್ದರೂ ಕೂಡ ಯಾವುದೇ ಕಾರಣಕ್ಕೂ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವುದಿಲ್ಲ…
ಬೆಳಗಾವಿ : ಡಿನ್ನರ್ ಬ್ರೇಕ್‌ಫಾಸ್ಟ್ ಬಳಿಕವೂ ತಂದೆಯ ಪರ ಪುತ್ರ ಯತೀಂದ್ರ ಬ್ಯಾಟಿಂಗ್ ಮಾಡುವುದನ್ನು ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ಪೂರ್ಣ ಅವಧಿಯವರೆಗೆ…