ಹುಬ್ಬಳ್ಳಿ : ವೀರಶೈವ ಸಮುದಾಯ ಯಾವುದೇ ಸಂಸ್ಥೆಯ ಅಡಿಯಲ್ಲಿ ಇಲ್ಲ. ವೀರಶೈವ ಮಹಾಸಭಾ ಅಧ್ಯಕ್ಷರಿಗೆ ನಾವು ಗೌರವ ಕೊಡುತ್ತೇವೆ. ಚುನಾವಣೆ ವೇಳೆ ಪಕ್ಷಕ್ಕೆ ಸಂಸ್ಥೆ ಹೆಸರು ಬಳಸುವುದು ಸರಿಯಲ್ಲ. ಲಿಂಗಾಯತ ವೇದಿಕೆ ಎನ್ನುವುದು ಒಂದು ಕಾಲ್ಪನಿಕ ಸಂಘಟನೆ. ನಾಲ್ಕು ಜನ ಸೇರಿ ಏನೋ ಹೇಳಿದರೇ ಲಿಂಗಾಯತರ ಧ್ವನಿ ಆಗುತ್ತಾ? ಲಿಂಗಾಯತ ಸಮುದಾಯ ಸಮುದ್ರವಿದ್ದಂತೆ. ಲಿಂಗಾಯತ ವೇದಿಕೆ ಚುನಾವಣೆ ವೇಳೆ ಹುಟ್ಟಿಕೊಂಡ ಸಂಘಟನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ನಿಂದ ಭ್ರಷ್ಟಾಚಾರ ಆರೋಪ ವಿಚಾರವಾಗಿ ಮಾತನಾಡಿದ ಅವರು ಭ್ರಷ್ಟಾಚಾರದ ದಾಖಲೆ ಕೊಡುವಂತೆ ಚುಣಾವಣಾ ಆಯೋಗ ಕೇಳಿದೆ. ನಮ್ಮ ವಿರುದ್ಧ ಯಾವುದೇ ಕೇಸ್ ದಾಖಲಾಗಿಲ್ಲ, ಸಾಕ್ಷಿ ಕೂಡ ಇಲ್ಲ. ಇಷ್ಟೆಲ್ಲಾ ಮಾತನಾಡುವ ಕಾಂಗ್ರೆಸ್ಸಿಗರ ಮೇಲೆಯೇ ಭ್ರಷ್ಟಾಚಾರ ಕೇಸ್ ಇದೆ. ತಮ್ಮ ಮೇಲೆಯೇ ಕೇಸ್ ಇದ್ದು, ಕೋರ್ಟ್ಗೆ ಅಲೆದಾಡುತ್ತಿದ್ದಾರೆ. ಯಾವ ನೈತಿಕತೆಯಿಂದ ನಮ್ಮನ್ನು ಪ್ರಶ್ನಿಸುತ್ತಾರೆ ಎಂದು ವಾಗ್ದಾಳಿ ಮಾಡಿದರು.
ಐಟಿ ಅಧಿಕಾರಿಗಳ ದಾಳಿ ವಿಚಾರವಾಗಿ ಮಾತನಾಡಿದ ಅವರು ಐಟಿ ಅಧಿಕಾರಿಗಳು ಎಲ್ಲ ಜಿಲ್ಲೆಯಲ್ಲಿ ಇದ್ದಾರೆ. ಎಲ್ಲಿ ತಪ್ಪು ನಡೆಯುತ್ತೆ ಅಂತ ಅವರಿಗೆ ಮಾಹಿತಿ ಇರುತ್ತೆ. ಕಾಂಗ್ರೆಸ್ನವರು ತಪ್ಪ ಮಾಡಿದರೇ ನಾವು ಏನ್ ಮಾಡೋಕಾಗುತ್ತೆ? ಕಾಂಗ್ರೆಸ್ನವರು ಮೊದಲೇ ಹೇಳುತ್ತಾರೆ ರೈಡ್ ಅಗುತ್ತೆ ಅಂತ. ಎಂಬಿ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್ ಮೊದಲೇ ಹೇಳಿ ಬಿಡೋದು. ಇದು ಕಾಂಗ್ರೆಸ್ ನವರ ತಂತ್ರಗಾರಿಕೆ. ಮೊದಲ ತಪ್ಪು ಮಾಡೋದನ್ನು ಕಾಂಗ್ರೆಸ್ ಬಿಡಲಿ ಎಂದು ತಿರುಗೇಟು ನೀಡಿದರು.
ಇನ್ನು ಬಿಜೆಪಿ ಕೇಂದ್ರ ನಾಯಕರ ರಾಜ್ಯ ಪ್ರವಾಸ ಕುರಿತು ಮಾತನಾಡಿದ ಅವರು ನಮ್ಮ ರಾಷ್ಟ್ರೀಯ ನಾಯಕರ ಎಲ್ಲ ಚುನಾವಣೆಯಲ್ಲಿ ರಾಜ್ಯಕ್ಕೆ ಬಂದಿದ್ದಾರೆ. ರಾಷ್ಟ್ರೀಯ ನಾಯಕರದ್ದು ಹಾಗೂ ಕರ್ನಾಟಕದ ಜನರದ್ದು ಭಾವನಾತ್ಮಕ ಸಂಬಂಧವಿದೆ. ಇದರಿಂದ ದೊಡ್ಡ ಮಟ್ಟದಲ್ಲಿ ಬೂಸ್ಟರ್ ಡೋಸ್ ಸಿಗಲಿದೆ. ರಾಜ್ಯಾದ್ಯಂತ ಅಂತಿಮ ಹಂತದ ಬಹಿರಂಗ ಪ್ರಚಾರ ನಡೆಯುತ್ತಿದೆ. ಎಲ್ಲಾ ನಾಯಕರು ಬಹಿರಂಗ ಸಭೆ, ರೋಡ್ ಶೋ ನಡೆಸುತ್ತಿದ್ದಾರೆ. 224 ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಪ್ರಚಾರ ಮಾಡುತ್ತಿದ್ದಾರೆ ಎಂದರು.
ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…
ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…
ಹೊಸದಿಲ್ಲಿ: ಮುಂಬರುವ ಐಸಿಸಿ ಟಿ-೨೦ ವಿಶ್ವಕಪ್‌ಗಾಗಿ ೧೫ ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಶುಭಮನ್…
ಹೊಸದಿಲ್ಲಿ : ಮೊಟ್ಟೆ ಸೇವೆನೆಗೆ ಸುರಕ್ಷಿತವಾಗಿದ್ದು ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕವಾಗುವ ಯಾವುದೇ ಅಂಶ ಪತ್ತೆ ಆಗಿಲ್ಲ ಎಂದು ಕೇಂದ್ರ ಆಹಾರ…
ಚಾಮರಾಜನಗರ : ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಲಶಕ್ತಿ ಮಂತ್ರಾಲಯದ…
ಮೈಸೂರು : ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ರವರೆಗೆ…