ನೆಲಮಂಗಲ: ಎಲ್ಲಾ ಪಕ್ಷಗಳು ಮತ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು ಸ್ಟಾರ್ ನಟ, ನಟಿಯರು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡದ ಹಿರಿಯ ನಟಿ ಲೀಲಾವತಿ ಮತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಮೇ.10 ರಂದು ಮತದಾನ ದಿನಾಂಕ ಘೋಷಣೆಯಾಗಿದ್ದು, ಚುನಾವಣಾ ಆಯೋಗ ಹಿರಿಯ ನಾಗರೀಕರಿಗೆ ವಿಶೇಷ ಸೌಲಭ್ಯ ಕಲ್ಪಿಸಿರುವುದರಿಂದ ಲೀಲಾವತಿ ಮತದಾನ ಮಾಡಿದ್ದಾರೆ. ಈ ಬಾರಿಯ ಮತದಾನ ಮಾಡಿದ ನಟಿ ಎಂಬ ಹೆಗ್ಗಳಿಕೆಗೆ ಲೀಲಾವತಿ ಪಾತ್ರರಾಗಿದ್ದಾರೆ.
80 ವರ್ಷ ತುಂಬಿದ ನಾಗರೀಕರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶವನ್ನು ಚುನಾವಣಾ ಆಯೋಗ ಕಲ್ಪಿಸಿದೆ. ಇದರ ಅಡಿಯಲ್ಲಿ ಹಿರಿಯ ನಟಿ ಲೀಲಾವತಿ, ನೆಲಮಂಗಲ ತಾಲೂಕಿನ ಮೈಲನ ಹಳ್ಳಿಯ ಮನೆಯಲ್ಲಿ ಮತದಾನ ಮಾಡಿದ್ದಾರೆ. ಪುತ್ರ ವಿನೋದ್ ರಾಜ್ ಸಹಾಯದಿಂದ ಮನೆಯಲ್ಲಿಯೇ ಮತ ಚಲಾಯಿಸಿದ್ದಾರೆ.
ಮತದಾನ ನಂತರ ಮಾತನಾಡಿ, ಚುನಾವಣಾ ಆಯೋಗ ಈ ಅವಕಾಶ ಕಲ್ಪಿಸಿದ್ದು ನನ್ನಂತ ಹಿರಿಯರಿಗೆ ಅನುಕೂಲವಾಗಿದೆ. ಎಲ್ಲರೂ ತಪ್ಪದೇ ಮತದಾನ ಮಾಡಿ. ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಎಂದು ಹೇಳಿದರು. ಮತದಾನ ಮನೆಯಲ್ಲೇ ಮಾಡಿದ್ದು ಸಂಭ್ರಮ ತಂದಿದೆ ಎಂದಿದ್ದಾರೆ.
ಸಿದ್ದಾಪುರ : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಗ್ರಾ.ಪಂ. ಮಾಜಿ ಅಧ್ಯಕ್ಷನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ…
ಬೆಂಗಳೂರು : ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವು ೨೦೨೬ರ ಹಂಗಾಮಿನ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು…
ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ೩೦ ಡಿ.ಸೆ. ಬೆಂಗಳೂರು : ಈಗಾಗಲೇ ರಾಜ್ಯದಲ್ಲಿ ಹೆಚ್ಚಾಗಿರುವ ಮಾಗಿ ಚಳಿಯ ವಾತಾವರಣಕ್ಕೆ ಜನರು…
ಗುಂಡ್ಲುಪೇಟೆ : ತಾಲ್ಲೂಕಿನಲ್ಲಿ ಹುಲಿ ದಾಳಿ ಪ್ರಕರಣಗಳು ಮುಂದುವರಿದಿದ್ದು ಹಸುವಿನ ಮೇಲೆ ದಾಳಿ ಮಾಡಿದ ವ್ಯಾಘ್ರ ರಕ್ತ ಹೀರಿ ಕೊಂದಿರುವ…
ಮೈಸೂರು : NFHS-5 ವರದಿಯ ಪ್ರಕಾರ ಮೈಸೂರು ಜಿಲ್ಲೆಯ SAM ಮಕ್ಕಳ ಪ್ರಮಾಣ 7.2% ಇದ್ದು ಪ್ರಸ್ತುತ 0.21% ಗೆ…
ಮೈಸೂರು : ರಾಜ್ಯದಲ್ಲಿ ನಾಯಕತ್ವ, ಅಧಿಕಾರ ಹಂಚಿಕೆ ಕಿತ್ತಾಟ ಬಿಟ್ಟು ರಾಜ್ಯದ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಲಿ ಎಂದು…