ಚಾಮರಾಜನಗರ: ಅಸೆಂಬ್ಲಿಲಿ ನಾನು ಇರ್ಬೇಕಿತ್ತು, ನಾನೊಬ್ಬನೇ ಮಾತನಾಡುತ್ತಿರುವುದು, ಬೇರಾರು ಮಾತನಾಡುತ್ತಿಲ್ಲ. ಆದರೆ ನನ್ನನ್ನು ಕೊಳ್ಳೇಗಾಲ ಹೊಲೆಯ ಮೂದೇವಿಗಳು ಚುನಾವಣೆಯಲ್ಲಿ ಸೋಲಿಸಿಬಿಟ್ಟರು. ಇದು ಕೊಳ್ಳೇಗಾಲದ ಮಾಜಿ ಶಾಸಕ ಎನ್. ಮಹೇಶ್ ಅವರ ಮಾತಗಳು.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿರುವ ೧೫ ಸೆಕೆಂಡ್‌ಗಳ ಈ ವೀಡಿಯೋ ತುಣಕು ಚಾಮರಾಜಗರ ಭಾಗದ ದಲಿತರ ಕೋಪಕ್ಕೆ ಕಾರಣವಾಗಿದೆ.
ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಸಿ.ಎನ್ ಮಂಜುನಾಥ್ ಪರವಾಗಿ ರಾಮನಗರ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಈ ಮಾತುಗಳನ್ನು ಆಡಿರುವ ಎನ್ ಮಹೇಶ್ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಮತಯಾಚನೆ ವೇಳೇ, ಅಸೆಂಬ್ಲಿಯಲ್ಲಿ ದಲಿತರ ಪರವಾಗಿ ನಾನೊಬ್ಬನೇ ಧನಿ ಎತ್ತುತ್ತಿರುವುದು ಆದರೆ, 2023ರ ಚುನಾವಣೆಯಲ್ಲಿ ಹೊಲೆಯ ಮೂದೇವಿಗಳು ನನ್ನನ್ನು ಸೋಲಿಸಿಬಿಟ್ಟರು ಎಂದು ಮೂದಲಿಸಿದ್ದರು. ಈ ಬಗ್ಗೆ ವ್ಯಾಪಕವಾಗಿ ವಿರೋಧ ವ್ಯಕ್ತವಾಗುತ್ತಿದೆ.
ಇನ್ನು ಕೊಳ್ಳೇಗಾಲ ತಾಲೂಕಿನಾದ್ಯಂತ ಅಣ್ಣ ಎನ್ ಮಹೇಶ್ ವಿರುದ್ಧ ಹಲವಾರು ಸುದ್ಧಿಗೋಷ್ಠಿಗಳು, ಪ್ರತಿಭಟನೆಗಳು ನಡೆಯುತ್ತಿವೆ. ಎಲ್ಲಾ ದಲಿತ ಮುಖಂಡರು ಎನ್ ಮಹೇಶ ಹೇಳಿಕೆ ಖಂಡಿಸಿ ಅವರನ್ನು ಬಹಿಷ್ಕರಿಸುತ್ತೇವೆ ಎಂದು ತಿಳಿಸಿದ್ದಾರೆ.
ಹೇಳಿಕೆಗೆ ಕ್ಷಮೆಯಾಚಿಸಿದ ಮಾಜಿ ಶಾಸಕ ಎನ್ ಮಹೇಶ್: ಮಾಜಿ ಶಾಸಕ ಎನ್. ಮಹೇಶ್ ಹೇಳಿಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆ, ಇದರಿಂದ ಏ.೨೬ ರಂದು ನಡೆಯುವ ಚುನಾವಣೆಗೆ ತೊಡಕಾಗಬಹುದು ಎಂದು ಮನಗಂಡ ಮಹೇಶ್ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ.
ಈ ಸಂಬಂಧ ನಿನ್ನೆ (ಏ.೨೧) ರಾತ್ರಿ ಫೇಸ್‌ಬುಕ್ ಲೈವ್‌ನಲ್ಲಿ ಬಂದು ಮಾತನಾಡಿರುವ ಅವರು, ನಮ್ಮವರು ಎಂಬ ಹಕ್ಕಿನಿಂದಾಗಿ ನಾನು ಈ ರೀತಿ ಮಾತನಾಡಿದ್ದೇನೆ. ಇದರಿಂದ ನಿಮಲ್ಲರಿಗೂ ನೋವಾಗಿದ್ದರೇ ಕ್ಷಮೆ ಕೇಳುತ್ತೇನೆ. ನಾನು ಇಂತಹ ಅವಮಾನವನ್ನು ನಿನ್ನೆ ಮೊನ್ನೆಯಿಂದ ಅನುಭವಿಸುತ್ತಿಲ್ಲ. ಕಳೆದ ೨೦ ವರ್ಷಗಳಿಂದ ಅನುಭವಿಸುತ್ತಾ ಬಂದಿದ್ದೇನೆ. ಆದರೆ, ಈ ಎಲ್ಲಾ ಅವಮಾನವನ್ನು ನನಗೆ ನೀಡಿದವರು ನಮ್ಮವರೇ ಹೊರತು ಬೇರಾರು ಅಲ್ಲಾ ಎಂದು ಹೇಳಿದ್ದಾರೆ.
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…