ಬೆಂಗಳೂರು : ಪ್ರಚಾರದ ಕಣದಲ್ಲಿ ಕ್ಲೈಮ್ಯಾಕ್ಸ್ ಕ್ಯಾಂಪೇನ್ ಮಾಡುತ್ತಿರುವ ರಾಹುಲ್ ಗಾಂಧಿ ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಭರ್ಜರಿ ಕ್ಯಾಂಪೇನ್ ಮಾಡಿದ್ದಾರೆ. ಕನ್ನಿಂಗ್ಹ್ಯಾಮ್ ರಸ್ತೆಯ ಕೆಫೆಯಲ್ಲಿ ಗ್ರಾಹಕರ ಜೊತೆ ಕಾಫಿ ಸವಿದು ಕಷ್ಟ-ಸುಖಗಳನ್ನು ಆಲಿಸಿದ್ದಾರೆ. ಬಳಿಕ ಬಿಎಂಟಿಸಿ ಬಸ್ನಲ್ಲಿ ಪ್ರಯಾಣ ಮಾಡಿ ಪ್ರಯಾಣಿಕರ ಕುಂದು ಕೊರತೆಗಳಿಗೆ ಕಿವಿಯಾದ್ರು. BMTC ಬಸ್ನಲ್ಲಿ ಪ್ರಯಾಣಿಕರ ಜೊತೆ ಚರ್ಚೆ ನಡೆಸಿದರು.
ಇನ್ನು ನಿನ್ನೆ ಪುಲಕೇಶಿನಗರ ಕ್ಷೇತ್ರದಲ್ಲಿ ರೋಡ್ ಶೋ ಮಾಡಿದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕಾಂಗ್ರೆಸ್ ಅಭ್ಯರ್ಥಿ ಎ.ಸಿ.ಶ್ರೀನಿವಾಸ್ ಪರ ಮತ ಬೇಡಿದರು. ಇದೇ ವೇಳೆ ಬಿಜೆಪಿ ದ್ವೇಷ ಹರಡುತ್ತೆ. ನಾವು ಪ್ರೀತಿಯಿಂದ ಜನರನ್ನು ಬೆಸೆಯುತ್ತೇವೆ. ದ್ವೇಷದ ಬಜಾರ್‌ನಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತೇವೆ ಎಂದರು. ಬಿಜೆಪಿ ವಿರುದ್ಧ ಬೆಲೆ ಏರಿಕೆ, 40 ಪರ್ಸೆಂಟ್ ಅಸ್ತ್ರ ಝಳಪಿಸಿದರು. ಡೆಲಿವರಿ ಬಾಯ್ ಸ್ಕೂಟರ್ ಏರಿದ ರಾಹುಲ್, ಸಿಟಿ ಮಂದಿಯ ಗಮನ ಸೆಳೆದರು. ಏರ್‌ಲೈನ್ಸ್ ಹೊಟೇಲ್‌ನಿಂದ ಶಾಂಗ್ರಿಲಾ ಹೋಟೆಲ್ ವರೆಗೆ ಸ್ಕೂಟರ್‌ನಲ್ಲಿ ಸವಾರಿ ಮಾಡುತ್ತಾ ಸಂವಾದ ನಡೆಸಿದರು. ಇಲ್ಲಿಂದ ನೇರವಾಗಿ ಆನೇಕಲ್ಗೆ ಎಂಟ್ರಿಕೊಟ್ಟ ರಾಹುಲ್, ರೋಡ್ ಶೋ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಹುಲ್ಗೆ ಸಾಥ್ ಕೊಟ್ಟರು. ರಾತ್ರಿ ಶಿವಾಜಿನಗರದಲ್ಲಿ ಕ್ಯಾಂಪೇನ್ ಮಾಡಿದ ಕೈ ನಾಯಕ ಬಿಜೆಪಿ ವಿರುದ್ಧ ಗುಡುಗಿದರು.
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಪರಿಣಾಮ ರಾಜ್ಯದಲ್ಲಿ ಏಳು ದಿನ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಎ1 ಆರೋಪಿ ಪವಿತ್ರಾಗೌಡಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.…
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಮಸಣಾಪುರ ಚಾಟಿಪುರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರದ ಫಲಕಕ್ಕೆ ಕಿಡಿಗೇಡಿಗಳು ಅಪಮಾನ…
ಭಾರತೀಯ ಅಂಚೆ ಹಾಗೂ ಕರ್ನಾಟಕ ಅಂಚೆ ಚೀಟಿ ಸಂಗ್ರಹಣಾ ಸಂಘವು ಆಧುನಿಕ ಮೈಸೂರು ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿರುವ ಮೈಸೂರು…
ಮೈಸೂರಿನ ದಟ್ಟಗಳ್ಳಿ ೩ ನೇ ಹಂತದ ಕನಕದಾಸನಗರವು, ಬಡಾವಣೆ ನಿರ್ಮಾಣವಾದ ಆರಂಭದಲ್ಲಿ ರಾಮಕೃಷ್ಣ ನಗರ ಉಪ ಅಂಚೆ ಕಚೇರಿಗೆ ಸೇರಿತ್ತು.…
ಪುನೀತ್ ಮಡಿಕೇರಿ ಹೆಚ್ಚುವರಿ ಸಿಬ್ಬಂದಿಗಳ ನಿಯೋಜನೆ; ಅಗತ್ಯವಿರುವಷ್ಟು ವಿದ್ಯುತ್ ಕಂಬಗಳು, ಪರಿವರ್ತಕಗಳು, ವಾಹಕಗಳ ದಾಸ್ತಾನು ಮಡಿಕೇರಿ: ಗುಡ್ಡಗಾಡು ಪ್ರದೇಶವಾಗಿರುವ ಕೊಡಗು…