ಬೆಂಗಳೂರು : ಇಂದಿರಾ ಕ್ಯಾಂಟೀನ್ ಬಡವರಿಗೆ ನೀಡುತ್ತಿದ್ದ ಊಟದ ದರ ಹೆಚ್ಚಿಸಲು ಶನಿವಾರ ನಡೆದ ಸಂಪುಟ ಸಭೆ ನಿರ್ಧರಿಸಲಾಗಿದೆ. ಇಂದಿರಾ ಕ್ಯಾಂಟೀನ್ಗಳಲ್ಲಿ ಒಂದು ಊಟದ ಬೆಲೆ 60 ರೂ. ದರ ನಿಗದಿ ಮಾಡಲಾಗಿದೆ. ಆ ಮೂಲಕ ಗ್ರಾಹಕರಿಂದ 27 ರೂ. ಸಂಗ್ರಹಿಸಲಿದ್ದು, ಉಳಿದ 33 ರೂ. ಸಬ್ಸಿಡಿಯನ್ನು ಸರ್ಕಾರ ನೀಡಲಿದೆ. ರಾಜ್ಯಾದ್ಯಂತ ನೂತನವಾಗಿ ನಿರ್ಮಾಣವಾಗಲಿರುವ ಇಂದಿರಾ ಕ್ಯಾಂಟೀನ್ಗಳಲ್ಲಿ ಈ ಹೊಸ ದರ ಇರಲಿದೆ. ಇನ್ನು ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ಗಳಲ್ಲಿ ಹಳೇ ದರ ಮುಂದುವರಿಕೆ ಆಗಲಿದೆ.
ವಿಧಾನಸೌಧದಲ್ಲಿ ಸಂಪುಟ ಸಭೆ ಬಳಿಕ ಸಚಿವ ಹೆಚ್.ಕೆ.ಪಾಟೀಲ್ ಹೇಳಿಕೆ ನೀಡಿದ್ದು, ಬಿಬಿಎಂಪಿ ಹೊರತುಪಡಿಸಿ ಸ್ಥಳೀಯ ಸಂಸ್ಥೆಗಳಲ್ಲಿ ಹೊಸದಾಗಿ 188 ಇಂದಿರಾ ಕ್ಯಾಂಟೀನ್ ತೆರೆಯಲು ಒಪ್ಪಿಗೆ ನೀಡಲಾಗಿದೆ. ಹೊಸ ಇಂದಿರಾ ಕ್ಯಾಂಟೀನ್ಗೆ 27 ಕೋಟಿ ರೂ. ನೀಡಲು ಅನುಮೋದಿಸಲಾಗಿದೆ. ಸ್ಥಳೀಯ ತಿಂಡಿ ತಿನಿಸು ಗಮನದಲ್ಲಿಟ್ಟುಕೊಂಡು ಇಂದಿರಾ ಕ್ಯಾಂಟೀನ್ ಮೆನು ಇರಲಿದೆ ಎಂದು ಹೇಳಿದರು.
1 ರಿಂದ 9ನೇ ತರಗತಿವರೆಗೆ ಕಲಿಕಾ ಬಲವರ್ಧನೆಗೆ 78.13 ಕೋಟಿ ರೂ. ವೆಚ್ಚದಲ್ಲಿ ಕಾರ್ಯಕ್ರಮ ಅನುಷ್ಠಾನಕ್ಕೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆ ಆವರಣದಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ 27.88 ಕೋಟಿ ರೂ. ನೀಡಲು ಅನುಮೋದನೆ ನೀಡಲಾಗಿದೆ ಎಂದರು.
ಗದಗ ಮೆಡಿಕಲ್ ಕಾಲೇಜ್ ಆವರಣದಲ್ಲಿ 138 ಕೋಟಿ ರೂ. ವೆಚ್ಚದಲ್ಲಿ 450 ಬೆಡ್ಗಳ ಆಸ್ಪತ್ರೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದು, ಸಂಗಮ ಗ್ರಾಮವನ್ನು ಕೂಡಲಸಂಗಮ ಎಂದು ನಾಮಕರಣಕ್ಕೆ ಅನುಮೋದನೆ ನೀಡಲಾಗಿದೆ. ರಾಜ್ಯದಿಂದ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿಚಾರವಾಗಿ ಸುಪ್ರೀಂಕೋರ್ಟ್‌ಗೆ ಆ.21ರಂದು ವಸ್ತುಸ್ಥಿತಿ ಮನವಿ ಸಲ್ಲಿಕೆಗೆ ನಿರ್ಧರಿಸಲಾಗಿದೆ.
ಕಾನೂನು ಸಲಹೆಗಾರರಾಗಿ ನಿವೃತ್ತ ನ್ಯಾ.ನಾಗರತ್ನರನ್ನು ನೇಮಿಸಲು ಒಪ್ಪಿಗೆ ಸೂಚಿಸಿದ್ದು, ಗುತ್ತಿಗೆ ಆಧಾರದ ಮೇಲೆ ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆಯಡಿ ಕಾನೂನು ಸಲಹೆಗಾರರಾಗ ನೇಮಿಸಲು ಸಂಪುಟ ಸಭೆ ಅನುಮೋದಿಸಿದೆ.
ಆರೋಪ ಸಾಬೀತಾದ ಹಿನ್ನೆಲೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಅಧೀನ ಕಾರ್ಯದರ್ಶಿ ಪಾಪಣ್ಣರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಹಿಂದಿನ ಸಂಪುಟ ಸಭೆಯಲ್ಲಿ ನಾಗಮಣಿಯನ್ನು ಅಮಾನತು ಮಾಡಿದ್ದೆವು. ಹಿಂದಿನ ಕೋರ್ಟ್ ಆದೇಶದ ಪ್ರಕಾರ ತಪ್ಪಿತಸ್ಥರಲ್ಲ ಅಂತಾ ವರದಿ ಸಿಕ್ಕಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.
ಕೀರ್ತಿ ಇದನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಚಹ ಮಾಡಿದ ನಂತರ ಉಳಿದ ಜೊಗಟು, ಈರುಳ್ಳಿ ಸಿಪ್ಪೆ, ಚಿಂದಿ ಬಟ್ಟೆ, ಹರಿದ…
ಅಮೆರಿಕದ ಸಿಯಾಟಲ್ನಲ್ಲಿ ಮಗನಿಗೆ ಹೊಸ ಕೆಲಸ ಸಿಕ್ಕಿತ್ತು. ಮನೆ ಮಾಡಿದ. ಅಲ್ಲಿ ಮನೆ ಶಿಫ್ಟ್ ಮಾಡುವುದೆಂದರೆ ನಾವೇ ಸಕಲವೂ ಆಗಿರುವುದರಿಂದ…
ಮುಂಚೆ ಕಾಲವೊಂದಿತ್ತು. ಸಮಯ ಕಳೆಯಲು ಎಲ್ಲರೂ ಪುಸ್ತಕದ ಮೊರೆ ಹೋಗು ತ್ತಿದ್ದರು. ಮನೆ ಹತ್ತಿರದ ಪುಸ್ತಕ ದಂಗಡಿ, ಗ್ರಂಥಾಲಯ, ಸ್ನೇಹಿತರ…
ತೃತೀಯ ಲಿಂಗಿಯೊಬ್ಬರು ವಿಜಯನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯಕ್ಕೆ ಕನ್ನಡ ಸಹಾಯಕ ಪ್ರಾಧ್ಯಾಪಕಿ ಯಾಗಿ ಆಯ್ಕೆಯಾಗಿರುವುದು ರಾಜ್ಯದ ಇತಿಹಾಸ ದಲ್ಲೇ ಮೊದಲಾಗಿದ್ದು,…
ಒಂದೆಡೆ ತಂಪಿನ ವಾತಾವರಣ : ಮತ್ತೊಂದೆಡೆ ಕಿರಿಕಿರಿ ಉಂಟುಮಾಡುವ ಕೆಸರುಮಯ ತಾಣ ಜಿ. ತಂಗಂ ಗೋಪಿನಾಥಂ ಮಂಡ್ಯ: ಕಳೆದ ಎರಡು…
ಚಿರಂಜೀವಿ ಸಿ. ಹುಲ್ಲಹಳ್ಳಿ ಮಂಡ್ಯ: ಕೃಷಿಯಲ್ಲಿ ಪ್ರಾಮುಖ್ಯತೆ ಪಡೆದಿರುವ ಮಂಡ್ಯ ಜಿಲ್ಲೆಯಲ್ಲಿ ಸಾಹಿತ್ಯಾಸಕ್ತರು ಮತ್ತು ಸಾಹಿತಿಗಳು ಕಡಿಮೆ ಏನಿಲ್ಲ ಎಂಬುದನ್ನು…