ನಂಜನಗೂಡು : ನಾನು ತಂದೆ ತಾಯಿ ಇಬ್ಬರನ್ನ ಕಳೆದುಕೊಂಡಿದ್ದೇನೆ. ನಿಮ್ಮನ್ನ ನಂಬಿ ಚುನಾವಣೆ ಎದುರಿಸುತ್ತಿದ್ದೇನೆ. ಕ್ಷೇತ್ರದ ಜನತೆಯೇ ನನ್ನ ತಂದೆ ತಾಯಿ ಈಗ. ನಿಮ್ಮ ಸೇವೆಗೆ ಒಂದು ಅವಕಾಶ ಕೊಡಿ ಎಂದು ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಇಡೀ ಕುಟುಂಬ ಈಗಲೂ ಕೂಡ ನೋವು, ದುಃಖದ ವಾತವರಣದಲ್ಲಿದೆ. ನಿಮ್ಮೆಲ್ಲರ ಶಕ್ತಿಯಿಂದ ಚುನಾವಣೆಗೆ ನಿಂತಿದ್ದೇನೆ ಎಂದು ಸಭೆಯಲ್ಲಿ ಕ್ಷೇತ್ರದ ಜನತೆ ಮುಂದೆ ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ.
ನಮ್ಮ ತಂದೆ ನಿಮ್ಮಲ್ಲರಿಗೂ ನಿರಂತರ ಸ್ಪಂದಿಸುವುದರ ಜೊತೆಗೆ ನಿಮ್ಮ ಜೊತೆ ಇದ್ದರು. ಲೋಕಸಭೆ ಸೋಲಿನ ಬಳಿಕ ಈ ಕ್ಷೇತ್ರದ ಜನರಿಗೆ ಸೇವೆ ಮಾಡೋ ಆಸೆ ಇಟ್ಟುಕೊಂಡಿದ್ದರು. ಆದರೆ ವಿಧಿವಶರಾದ್ರು, ಕೆಲ ದಿನಗಳಲ್ಲೇ ನಮ್ಮ ತಾಯಿಯನ್ನ ಕಳೆದುಕೊಂಡೆ. ಇದರ ನಡುವೆ ಕಾಂಗ್ರೆಸ್ ನಿಮ್ಮ ಸೇವೆಗೆ ಒಂದು ಅವಕಾಶ ನೀಡಿದೆ. ದಯಮಾಡಿ ನೀವೆಲ್ಲ ನನಗೆ ಆಶೀರ್ವಾದಿಸಿ ಎಂದು ಮತಯಾಚನೆ ಮಾಡಿದ್ದಾರೆ.
ನಿಮ್ಮ ಸೇವೆಗೆ ಒಂದು ಅವಕಾಶ ಕೊಡಿ. ಪ್ರಚಾರದ ವೇಳೆ ನೀವೆಲ್ಲ ಸಮಸ್ಯೆಗಳನ್ನ ಹೇಳಿಕೊಂಡಿದ್ದೀರಿ. ನಂಜನಗೂಡಿನ ಜನ ಭ್ರಷ್ಟಾಚಾರದ ವಿರುದ್ಧ ಬದಲಾವಣೆಗೆ ಸಿದ್ದ ಇದ್ದೀರಿ. ನಾನು ತಂದೆ ತಾಯಿ ಇಬ್ಬರನ್ನ ಕಳೆದುಕೊಂಡಿದ್ದೇನೆ. ನಿಮ್ಮನ್ನ ನಂಬಿ ಚುನಾವಣೆ ಎದುರಿಸುತ್ತಿದ್ದೇನೆ. ಕ್ಷೇತ್ರದ ಜನತೆಯೇ ನನ್ನ ತಂದೆ, ತಾಯಿ ಆಗಿದ್ದೀರಾ ಎಂದು ಹೇಳಿದ್ದಾರೆ.
ನಮ್ಮ ತಂದೆಯ ಹಾದಿಯಲ್ಲೇ ನಡೆದು ಸೇವೆ ಮಾಡಲು ಸಿದ್ದನಿದ್ದೇನೆ. ಕ್ಷೇತ್ರದ ಜನತೆಯೇ ನಮ್ಮ ತಂದೆಯವರು ಬಿಟ್ಟು ಹೋಗಿರುವ ಆಸ್ತಿ. ನಮ್ಮ ಕುಟುಂಬ ಬಹಳ ಕಷ್ಟದಲ್ಲಿದೆ. ಚುನಾವಣೆಯನ್ನು ಹಣದಲ್ಲಿ ಮಾಡಲು ಆಗುವುದಿಲ್ಲ. ದಯಾಮಾಡಿ ನನಗೆ ಒಂದು ಅವಕಾಶ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.
ಮುಂಬೈ : ಆದಿತ್ಯ ಧರ್ ನಿರ್ದೇಶನದ, ರಣವೀರ್ ನಟನೆಯ ಧುರಂಧರ್-2 ಚಿತ್ರದ ಎರಡನೇ ಭಾಗವು ನಾಳೆ(ಮಾರ್ಚ್.19) ಬಿಡುಗಡೆಯಾಗಲಿದೆ. ಕಳೆದ ವರ್ಷ…
ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳಿರುವಾಗ, ನಟ-ರಾಜಕಾರಣಿ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ…
ವಾಷಿಂಗ್ಟನ್ : ಅಮೆರಿಕದ ಬೆಂಬಲಕ್ಕೆ ನಿಲ್ಲಬೇಕಿದ್ದ ನ್ಯಾಟೋ ದೇಶಗಳು ಈಗ ಹಿಂದೆ ಸರಿದಿರುವುದು ಟ್ರಂಪ್ ಆಡಳಿತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಪಶ್ಚಿಮ…
ಬೆಂಗಳೂರು : ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳನ್ನು ಪೆನ್‌ಡ್ರೈವ್ ಮೂಲಕ ಹಂಚಿಕೆ ಮಾಡಿದ ಪ್ರಕರಣದಲ್ಲಿ…
ಬೆಂಗಳೂರು : ಏನೋ ಮಾಡಲು ಹೋಗಿ ಇನ್ನೆನೋ ಆಗಿ ಪೇಚಿಗೆ ಸಿಲುಕಿರುವ ಘಟನೆಗಳೂ ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಇದೀಗ…
ಮೈಸೂರು : ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದಲೇ ನನ್ನ ಸ್ಪರ್ಧೆ, ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ…