BREAKING NEWS

ಇಪಿಎಫ್‌ ಠೇವಣಿಗಳಿಗೆ 8.15% ಬಡ್ಡಿ ಘೋಷಿಸಿದ ಇಪಿಎಫ್‌ಒ

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2022-23ನೇ ಆರ್ಥಿಕ ವರ್ಷಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಗಳಿಗೆ ಸೋಮವಾರ ಬಡ್ಡಿ ದರವನ್ನು ಘೋಷಿಸಿದೆ. ಜುಲೈ 24, 2023ರ ಸುತ್ತೋಲೆಯ ಮೂಲಕ ಇಪಿಎಫ್‌ ಖಾತೆಗಳಿಗೆ ಶೇ. 8.15ರ ಬಡ್ಡಿಯನ್ನು ಇಪಿಎಫ್‌ಒ ಘೋಷಿಸಿದೆ.

ಇಪಿಎಫ್‌ಒ ಹೊರಡಿಸಿದ ಸುತ್ತೋಲೆಯ ಪ್ರಕಾರ, ‘ನೌಕರರ ಭವಿಷ್ಯ ನಿಧಿ ಯೋಜನೆ 1952ರ ಪ್ಯಾರಾ 60(1) ರ ಅಡಿಯಲ್ಲಿ ಇಪಿಎಫ್ ಯೋಜನೆ 1952ರ ಪ್ಯಾರಾ 60ರ ನಿಬಂಧನೆಗಳ ಪ್ರಕಾರ ಇಪಿಎಫ್ ಯೋಜನೆಯ ಪ್ರತಿ ಸದಸ್ಯರ ಖಾತೆಗೆ 2022-23 ವರ್ಷಕ್ಕೆ ಶೇ. 8.15ರ ಬಡ್ಡಿಯನ್ನು ಕ್ರೆಡಿಟ್ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದನ್ನು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ತಿಳಿಸಲಾಗಿದೆ’.

ಇಪಿಎಫ್‌ ಎಂದರೇನು?

ಉದ್ಯೋಗಿಗಳ ಭವಿಷ್ಯ ನಿಧಿಯು ಸಂಬಳ ಪಡೆಯುವ ಉದ್ಯೋಗಿಗಳಿಗೆ ಕಡ್ಡಾಯ ಕೊಡುಗೆಯಾಗಿದೆ. ಇಪಿಎಫ್‌ ಖಾತೆಗೆ ಹೊಂದಾಣಿಕೆಯ ಮೊತ್ತವನ್ನು ನೀಡಲು ಉದ್ಯೋಗದಾತ ಸಂಸ್ಥೆಯೂ ಸಹ ಬದ್ಧವಾಗಿರುತ್ತದೆ.

ಮಾಸಿಕ ಆಧಾರದ ಮೇಲೆ ಉದ್ಯೋಗಿಯು ತನ್ನ ಇಪಿಎಫ್ ಖಾತೆಗೆ ತನ್ನ ಗಳಿಕೆಯ ಶೇ. 12ರಷ್ಟು ಹಣವನ್ನು ಕೊಡುಗೆ ನೀಡುತ್ತಾನೆ. ಉದ್ಯೋಗಿಯ ಸಂಪೂರ್ಣ ಕೊಡುಗೆಯನ್ನು ಇಪಿಎಫ್ ಖಾತೆಗೆ ಹಾಕಲಾಗುತ್ತದೆ. ಉದ್ಯೋಗದಾತರ ವಿಷಯಕ್ಕೆ ಬಂದಾಗ ಕೇವಲ ಶೇ. 3.67ರಷ್ಟು ಮೊತ್ತವನ್ನು ಮಾತ್ರ ಇಪಿಎಫ್ ಖಾತೆಗೆ ಠೇವಣಿ ಮಾಡಲಾಗುತ್ತದೆ. ಉಳಿದ ಶೇ. 8.33ರಷ್ಟು ನೌಕರರ ಪಿಂಚಣಿ ಯೋಜನೆಗೆ (ಇಪಿಎಸ್) ಹೋಗುತ್ತದೆ.

ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ?

ಇಪಿಎಫ್‌ ಖಾತೆಯನ್ನು ಇಪಿಎಫ್‌ಒ ನಿರ್ವಹಿಸುವ ಉದ್ಯೋಗಿಯು ಈ ಕೆಳಗಿನ ನಾಲ್ಕು ವಿಧಾನಗಳನ್ನು ಬಳಸಿಕೊಂಡು ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು:

ಎ) ಉಮಾಂಗ್ ಅಪ್ಲಿಕೇಶನ್ ಬಳಸುವ ಮೂಲಕ

ಬಿ) ಇಪಿಎಫ್ ಸದಸ್ಯರ ಇ-ಸೇವಾ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಬ್ಯಾಲೆನ್ಸ್‌ ಪರಿಶೀಲಿಸಬಹುದು.

ಸಿ) ಮಿಸ್ಡ್ ಕಾಲ್ ನೀಡುವ ಮೂಲಕ

ಡಿ) ಎಸ್‌ಎಂಎಸ್‌ ಕಳುಹಿಸುವ ಮೂಲಕ

ಉಮಂಗ್‌ ಅಪ್ಲಿಕೇಶನ್‌ನಲ್ಲಿ ಇಪಿಎಫ್‌ ಬ್ಯಾಲೆನ್ಸ್ ಅನ್ನು ಪರಿಶೀಲಿಸುವುದು ಹೇಗೆ?

ಚಂದಾದಾರರು ಈಗ ತಮ್ಮ ಪಿಎಫ್‌ ಬ್ಯಾಲೆನ್ಸ್ ಅನ್ನು ಉಮಂಗ್‌ ಆಪ್‌ ಮೂಲಕ ಮನೆಯಲ್ಲಿಯೇ ಸುಲಭವಾಗಿ ಪರಿಶೀಲಿಸಬಹುದು.

ಹಂತ 1: ಉಮಾಂಗ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್‌ ಮಾಡಿ

ಹಂತ 2: ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ, ನೋಂದಾಯಿಸಿ

ಹಂತ 3: ಆಯ್ಕೆಗಳಿಂದ ‘ಇಪಿಎಫ್‌ಒ’ ಆಯ್ಕೆ ಮಾಡಿ

ಹಂತ 4: ‘ವ್ಯೂ ಪಾಸ್‌ಬುಕ್‌’ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

ಹಂತ 5: ನಿಮ್ಮ ಯುಎಎನ್‌ ಅನ್ನು ನಮೂದಿಸಿದ ನಂತರ ‘ಗೆಟ್‌ ಒಟಿಪಿ’ ಮೇಲೆ ಕ್ಲಿಕ್‌ ಮಾಡಿ.

ಹಂತ 6: ‘ಲಾಗಿನ್’ ಆಯ್ಕೆ ಮಾಡಿ.

ನಿಮ್ಮ ಪಾಸ್‌ಬುಕ್ ಮತ್ತು ಇಪಿಎಫ್ ಬ್ಯಾಲೆನ್ಸ್ ಅನ್ನು ಪರದೆಯ ಮೇಲೆ ನೀವು ಕಾಣಬಹುದು.

ಇಪಿಎಫ್‌ಒ ಪೋರ್ಟಲ್ ಅನ್ನು ಬಳಸಿಕೊಂಡು ಇಪಿಎಫ್‌ ಬ್ಯಾಲೆನ್ಸ್ ಅನ್ನು ಪರಿಶೀಲಿಸುವುದು ಹೇಗೆ?

ಇಪಿಎಫ್‌ಒ ವೆಬ್‌ಸೈಟ್‌ನ ಉದ್ಯೋಗಿ ವಿಭಾಗಕ್ಕೆ ಹೋಗಿ ಮತ್ತು ‘ಮೆಂಬರ್‌ ಪಾಸ್‌ಬುಕ್‌’ ಅನ್ನು ಕ್ಲಿಕ್ ಮಾಡಿ. ನಿಮ್ಮ ಯುಎಎನ್‌ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸುವ ಮೂಲಕ ನೀವು ಪಿಎಫ್‌ ಪಾಸ್‌ಬುಕ್‌ನ್ನು ನೋಡಬಹುದು. ಇದರಲ್ಲಿ ಎಲ್ಲಾ ವಿವರಗಳಿರುತ್ತವೆ.

andolanait

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಭಾಷೆ, ಬದುಕು ಕಲಿಸಿದ ನನ್ನಪ್ಪ

ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…

4 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಮತಗಳ ಪರಿಚಯ

ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…

4 hours ago

ರೆಟ್ರೋ ಫೋಟೋಗಳ ಹೊಸ ಅಲೆ

ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…

5 hours ago

ಮಹಾಪಂಚ್‌ ಕಾರ್ಟೂನ್‌

  ಮಹಾಪಂಚ್‌ ಕಾರ್ಟೂನ್‌ | ಸೆಪ್ಟಂಬರ್‌ 12 ಶನಿವಾರ

5 hours ago

ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಜಾತಿ ಮಾನದಂಡ ಅಲ್ಲ

ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…

5 hours ago

ಓದುಗರ ಪತ್ರ | ‘ಅಕ್ಕ’ ಸಮ್ಮೇಳನದಲ್ಲೂ ‘ನಂದಿನಿ’ ಮಿಂಚಿಂಗ್!

ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…

5 hours ago