ಚಿಕ್ಕಮಗಳೂರು : ಸತತವಾಗಿ ಏರಿಕೆ ಕಾಣುತ್ತಿರುವ ರೊಬಸ್ಟಾ ಕಾಫಿ ದರವು ಹೊಸ ದಾಖಲೆ ಬರೆದಿದೆ. 50 ಕೆ.ಜಿ ತೂಕದ ರೊಬಸ್ಟಾ ಚೆರ್ರಿ ಮೂಟೆಯೊಂದಕ್ಕೆ ₹ 6 ಸಾವಿರ ಧಾರಣೆ ಬಂದಿದ್ದು, ಇದು ಸಾರ್ವಕಾಲಿಕ ಗರಿಷ್ಠ ಬೆಲೆಯಾಗಿದೆ.
ಲಂಡನ್ ಮಾರುಕಟೆಯಲ್ಲಿ ರೊಬಸ್ಟಾ ಕಾಫಿ ಬೀನ್ಸ್ ಟನ್‌ಗೆ 2,411 ಡಾಲರ್ ಆಸುಪಾಸಿನಲ್ಲಿ ಶುಕ್ರವಾರ ಮಾರಾಟವಾಗಿದೆ. ಪರಿಣಾಮ ಸ್ಥಳೀಯ ಕಾಫಿ ಮಾರುಕಟ್ಟೆಯಲ್ಲೂ ಧಾರಣೆ ಮತ್ತು ಬೇಡಿಕೆ ಹೆಚ್ಚಳವಾಗಿದೆ. ಸದ್ಯ 1 ಕೆ.ಜಿ ರೊಬಸ್ಟಾ ಕಾಫಿ ಬೀನ್ಸ್‌ಗೆ ₹ 220 ದರ ಇದೆ.
ಕಳಸ ತಾಲ್ಲೂಕಿನಲ್ಲಿ ಈ ವರ್ಷದ ಕಾಫಿ ಫಸಲು ಶೇ 30ರಷ್ಟು ಕಡಿಮೆ ಇದೆ. ಜನವರಿಯಲ್ಲಿ ಬೆಲೆ ₹5 ಸಾವಿರ ತಲುಪಿದಾಗ ಬಹುತೇಕ ಬೆಳೆಗಾರರು ಕಾಫಿ ಮಾರಿದ್ದಾರೆ. ಸದ್ಯ ಕೆಲವೇ ಬೆಳೆಗಾರರಲ್ಲಿ ಫಸಲು ಉಳಿದಿದ್ದು, ಅವರೂ ಬೆಲೆ ಇನ್ನಷ್ಟು ಏರುವ ನಿರೀಕ್ಷೆಯಲ್ಲಿದ್ದಾರೆ.
ರೊಬಸ್ಟಾ ಕಾಫಿ ಬೆಳೆಯುವ ಇಂಡೊನೇಷ್ಯಾ, ವಿಯಟ್ನಾಂ ಹಾಗೂ ಅರೇಬಿಕಾ ಕಾಫಿ ತಳಿ ಬೆಳೆಯುವ ಬ್ರೆಜಿಲ್‌ನಲ್ಲಿ ಈ ಬಾರಿ ಪ್ರತಿಕೂಲ ಹವಾಮಾನದಿಂದ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಪೂರೈಕೆ ಕುಗ್ಗಿದ್ದು, ಬೆಲೆ ಸತತವಾಗಿ ಏರುತ್ತಲೇ ಇದೆ ಎನ್ನುತ್ತಾರೆ ಕಾಫಿ ವ್ಯಾಪಾರಿಗಳು.
‘ಸದ್ಯಕ್ಕೆ ಬೆಳೆಗಾರರ ಕೈಯಲ್ಲಿ ಶೇ 10ರಷ್ಟು ಪ್ರಮಾಣದ ಕಾಫಿಯೂ ಉಳಿದಿಲ್ಲ. ಬೆಲೆ ಏರುತ್ತಿದ್ದರೂ, ಅದರ ಲಾಭ ಪಡೆಯಲು ನಮ್ಮಂತಹ ಬೆಳೆಗಾರರಿಗೆ ಆಗುತ್ತಿಲ್ಲ’ ಎಂದು ಸಣ್ಣ ಪ್ರಮಾಣದಲ್ಲಿ ಕಾಫಿ ಬೆಳೆಯುವ ಬೆಳೆಗಾರರು ಬೇಸರ ವ್ಯಕ್ತಪಡಿಸಿದರು.
ದೇಶದ ತುಂಬಾ ಇಂದು ಭಕ್ತ ಗಣ ಮಾಡುತ್ತಿದೆ ಜಪ ರಾಮ ರಾಮ... ಆ ಟ್ರಂಪಣ್ಣನೂ ಜಪಿಸುತ್ತಿದ್ದಾರಂತೆ ಯಾವಾಗ ಘೋಷಿಸುತ್ತದೆಯೋ ಇರಾನ್,…
ಕೆಲವು ತಿಂಗಳ ಹಿಂದೆ ಹೈದರಾಲಿರಸ್ತೆಯ ಎರಡೂ ಬದಿ ೪೦ ಮರಗಳನ್ನು ಹೊಂದಿ ಹಸಿರು ಕಂಗೊಳಿಸುತ್ತಿತ್ತು. ರಸ್ತೆ ಅಗಲೀಕರಣದ ನೆಪದಲ್ಲಿ ಅಹೋರಾತ್ರಿ…
ಇತ್ತೀಚಿನ ದಿನಗಳಲ್ಲಿ ಬೆಂಗಳೂರು, ಮೈಸೂರು, ಹೈದರಾಬಾದ್, ಮುಂಬೈನಂತಹ ನಗರ ಪ್ರದೇಶಗಳಲ್ಲಿ ಓಲಾ, ಊಬರ್, ರ‍್ಯಾಪಿಡೋ, ನಮ್ಮ ಯಾತ್ರೆ ಎಂಬ ಆಪ್…
ಕನ್ನಡ ಚಿತ್ರರಂಗ ಸದ್ದು ಮಾಡುತ್ತಿದೆ. ರಾಜ್ಯಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲ ಮುಖಗಳ ಪರಿಚಯವೂ ಈಗ ಆಗತೊಡಗಿದೆ. ನಿರ್ಮಾಪಕ ಕನಕಪುರ…
ಮಹಾದೇಶ್ ಎಂ.ಗೌಡ ಹನೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ೨೪ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ…
ಭೇರ್ಯ ಮಹೇಶ್ ಡಿಜಿಟಲ್ ಗ್ರಂಥಾಲಯ, ಸ್ವಚ್ಛತೆ, ನೈರ್ಮಲ್ಯ, ನೀರು ಸರಬರಾಜು, ಇನ್ನಿತರ ವಿಭಾಗಗಳಲ್ಲಿ ವಿಶೇಷ ಸಾಧನೆ ಭೇರ್ಯ: ಭಾರತದ ನಿಜವಾದ…