ಮಂಗಳೂರು : ಸ್ನೇಹಿತನನ್ನು ರಕ್ಷಿಸಲು ಹೋಗಿ ವೈದ್ಯನೊಬ್ಬ ಸಮುದ್ರಪಾಲಾದ ಘಟನೆ ಭಾನುವಾರ ತಡರಾತ್ರಿ ಉಳ್ಳಾಲದಲ್ಲಿ ನಡೆದಿದೆ.
ಡಾ.ಆಶೀಕ್ ಗೌಡ ಸಮುದ್ರ ಪಾಲಾದ ವೈದ್ಯ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂಟನ್ರ್ಶಿಪ್ ಮಾಡುತ್ತಿದ್ದ ಐವರು ವೈದ್ಯರ ತಂಡವೊಂದು ತಡರಾತ್ರಿ ಸಮುದ್ರ ವಿಹಾರಕ್ಕೆ ಬಂದಿತ್ತು.
ಅಂತೆಯೇ ಇವರು ಸೋಮೇಶ್ವರ ಬೀಚ್ ನ ರುದ್ರಪಾದೆ ಮೇಲೆರಿದ್ದರು. ಈ ವೇಳೆ ಡಾ.ಪ್ರದೀಪ್ ಎಂಬವರು ಬಂಡೆಯ ಮೇಲಿಂದ ಬಿದ್ದಿದ್ದರು. ಕೆಳಗೆ ಬಂಡೆಯನ್ನ ಹಿಡಿದು ಸಹಾಯಕ್ಕೆ ಯಾಚಿಸಿದ್ರು. ಈ ವೇಳೆ ಪ್ರದೀಪ್ ರಕ್ಷಣೆಗೆ ಡಾ.ಆಶೀಕ್ ಗೌಡ ಪ್ರಯತ್ನಿಸಿದ್ದರು. ಆಗ ಆಶೀಕ್ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾರೆ.
ಇತ್ತ ಪ್ರದೀಪ್ ಕಲ್ಲುಗಳ ಆಸರೆ ಪಡೆದು ಮೇಲೆ ಬಂದಿದ್ದಾರೆ. ಕೂಡಲೇ ಪ್ರದೀಪ್ ಪೊಲೀಸರಿಗೆ ಘಟನೆಯ ಮಾಹಿತಿ ನೀಡಿದ್ದಾರೆ. ಇಂದು ರುದ್ರಪಾದೆಯ ಸಮೀಪದಲ್ಲೇ ಆಶೀಕ್ ಮೃತ ದೇಹ ಪತ್ತೆಯಾಗಿದೆ. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖ್ಯಾತನಾಮರಿಗೆ ವೇದಿಕೆಯ ಕಾರ್ಯಕ್ರಮದಲ್ಲಿ ಸ್ವಲ್ಪ ಕಡಿಮೆ ಸಮಯ ದೊರೆತರೂ ಪರವಾಗಿಲ್ಲ. ಅರಳುವ ಪ್ರತಿಭೆಗಳಿಗೆ ಸಾಕಷ್ಟು ಸಮಯ ಸಿಗಬೇಕೆಂಬ ಆಶಯ ಇರಬೇಕೆಂದು…
ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ಜಲಸಂರಕ್ಷಣೆಯ ಬೃಹತ್ ಕ್ರಾಂತಿಯನ್ನೇ ಮಾಡಿದ ಪಾಟೇಕರ್ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಕೆಲವೊಮ್ಮೆ ಕಾಲವು ತರುವ…
ಮಹಾದೇಶ್ ಎಂ.ಗೌಡ ೩ ದಿನಗಳ ಜಾತ್ರೆಗೆ ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆ; ಪ್ರಾಧಿಕಾರದಿಂದ ಸಕಲ ಸಿದ್ಧತೆ ಹನೂರು: ಮಹಾಲಯ ಅಮಾವಾಸ್ಯೆ…
ಚಿರಂಜೀವಿ ಸಿ.ಹುಲ್ಲಹಳ್ಳಿ ಕಬಿನಿ ಕಿಂಗ್ ಮಹೇಂದ್ರ ತಾಲೀಮು ಅರ್ಧಕ್ಕೆ ಮೊಟಕು ಆತಂಕದಲ್ಲಿ ದಸರಾ ಗಜಪಡೆಯ ಅಭಿಮಾನಿಗಳು ಮೈಸೂರು: ಮಹಾಭಾರತದ ಭೀಮನ…
ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಕೃಪೆ ತೋರಿದ ವರುಣ ಮಳೆ ಮುಂದುವರಿದರೆ ತಾಲ್ಲೂಕಿನ ದೊಡ್ಡ ಕೆರೆ ತುಂಬುವುದು ಖಚಿತ ಗುಂಡ್ಲುಪೇಟೆ:…
ಬೆಂಗಳೂರು: ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.…