BREAKING NEWS

ಬಾಂಬ್ ಬೆಂಗಳೂರು ಸೃಷ್ಟಿಸಬೇಡಿ, ಓಲೈಕೆ ರಾಜಕಾರಣವೇ ಕಾರಣ: ಪ್ರತಿಪಕ್ಷ ನಾಯಕ ಆರ್.ಅಶೋಕ

  • ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗಲೆಲ್ಲ ಪುಂಡು ಪೋಕರಿಗಳಿಗೆ ರೆಕ್ಕೆ ಬರುತ್ತದೆ

ಬೆಂಗಳೂರು : ನೀವು ಬ್ರ್ಯಾಂಡ್ ಬೆಂಗಳೂರು ರೂಪಿಸದೇ ಇದ್ದರೂ ಪರವಾಗಿಲ್ಲ, ಬಾಂಬ್ ಬೆಂಗಳೂರು ಸೃಷ್ಟಿಸಬೇಡಿ. ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣದಿಂದಲೇ ಬಾಂಬ್ ಸ್ಫೋಟ ನಡೆದಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಖಂಡಿಸಿದರು.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಆರ್.ಅಶೋಕ ಪಾಲ್ಗೊಂಡು ಮಾತನಾಡಿದರು.

ನಾವೆಲ್ಲರೂ ತಲೆತಗ್ಗಿಸುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಾಂತಿಯ ತೋಟವನ್ನು ಕೆಡಿಸುವ ಭಯೋತ್ಪಾದಕ ಚಟುವಟಿಕೆ ರಾಜಧಾನಿಯಲ್ಲಿ ನಡೆದಿದೆ.

ಆಡಳಿತ ಪಕ್ಷದ ಸಚಿವರು, ಶಾಸಕರು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು. ನೀವು ಮತ‌ ಹಾಕಿ, ನಾವು ನಿಮ್ಮನ್ನು ರಕ್ಷಿಸುತ್ತೇವೆ ಎಂಬಂತಹ ಮನಸ್ಥಿತಿಯನ್ನು ಸೃಷ್ಟಿಸಲಾಗಿದೆ. ಈ ಮೂಲಕ ಭಯೋತ್ಪಾದಕ ತಂಡಕ್ಕೆ ರಹದಾರಿ ನೀಡಲಾಗಿದೆ ಎಂದರು.

ಬ್ರ್ಯಾಂಡ್ ಬೆಂಗಳೂರು ಮಾಡದಿದ್ದರೂ ಪರವಾಗಿಲ್ಲ. ಬಾಂಬ್ ಬೆಂಗಳೂರು ಎಂಬ ಕಳಂಕವನ್ನು ತರುವುದು ಬೇಡ.

ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ದೇಶ, ವಿದೇಶಗಳ ಕಂಪನಿಗಳ ಜನರು ಬರುತ್ತಾರೆ. ಬೆಂಗಳೂರಿನ ವರ್ಚಸ್ಸು ಕಡಿಮೆ ಮಾಡಿ, ಅಭದ್ರತೆ ಮೂಡಿಸಿ, ಹೂಡಿಕೆ ಇಳಿಕೆ ಮಾಡಲು ಭಯೋತ್ಪಾದಕರು ಯೋಜಿಸಿದ್ದಾರೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗಲೆಲ್ಲ ಪುಂಡು ಪೋಕರಿಗಳಿಗೆ ರೆಕ್ಕೆ ಬರುತ್ತದೆ. ಮುಸ್ಲಿಂ ಸಂಘಟನೆಗಳ ಪ್ರಕರಣ ಹಿಂಪಡೆಯುವಿಕೆ, ಶಿವಮೊಗ್ಗ ಹಾಗೂ ಕೋಲಾರದ ಘಟನೆಗೆ ಕ್ರಮ ವಹಿಸದಿರುವುದು ಮೊದಲಾದವುಗಳಿಂದಾಗಿಯೇ ಇಂತಹ ಅನಾಹುತ ನಡೆಯುತ್ತಿದೆ ಎಂದರು.

ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರ ಬಗ್ಗೆ ನಾನು ವಿಧಾನಸಭೆಯಲ್ಲಿ ಮಾತನಾಡಿದ್ದೆ. ಪಾಕಿಸ್ತಾನ ಜಿಂದಾಬಾದ್ ಎಂದರೂ ಕಾಂಗ್ರೆಸ್ ಶಾಸಕರು ಅವರ ಪರವಾಗಿ ನಿಂತರು.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರಂತೂ ಇದು ತಿರುಚಿದ ವೀಡಿಯೋ ಎಂದಿದ್ದಾರೆ. ಕುಕ್ಕರ್ ಬಾಂಬ್ ಸ್ಫೋಟಿಸಿದವರನ್ನು ಬ್ರದರ್ ಎನ್ನುವ ಇವರು, ರಾಮೇಶ್ವರ ಕೆಫೆಯಲ್ಲಿ ಸ್ಫೋಟ ಮಾಡಿದವರನ್ನು ಅಂಕಲ್ ಎನ್ನಬಹುದು.‌ ದಯವಿಟ್ಟು ರಾಜ್ಯದ ಘನತೆಗೆ ಧಕ್ಕೆ ತರದೆ ಭದ್ರತೆ ಬಗ್ಗೆ ಗಮನಹರಿಸಿ ಎಂದರು‌.

ಆಡಳಿತ ಪಕ್ಷದ ಮೇಲೆ ದೊಡ್ಡ ಜವಾಬ್ದಾರಿ ಇದೆ. ಪದೇ ಪದೆ ಇಂತಹ ಘಟನೆ ನಡೆದಾಗ ಶಾಂತಿ‌ ಕದಡುತ್ತದೆ. ಕೂಡಲೇ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕು.

ಗುಪ್ತಚರ ದಳ ಬದುಕಿದ್ದರೆ, ಸರ್ಕಾರ ಬದುಕಿದ್ದರೆ ಕೂಡಲೇ ಕ್ರಮ ಕೈಗೊಳ್ಳಲಿ. ಮತ ರಾಜಕಾರಣ ಬಿಟ್ಟು ಕ್ರಮ ವಹಿಸಿ. ದೇಶದ್ರೋಹದ ಸಂದರ್ಭದಲ್ಲೂ ಎಚ್ಚರವಾಗದಿದ್ದರೆ ಜನರು ಕ್ಷಮಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಓಲೈಕೆ ರಾಜಕಾರಣ : ಈ ಘಟನೆ ನಡೆಯಲು ಓಲೈಕೆ ರಾಜಕಾರಣವೇ ಕಾರಣ. ಸರ್ಕಾರ ಕ್ರಮ ಕೈಗೊಳ್ಳಲು ನಾವೆಲ್ಲರೂ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಆರ್.ಅಶೋಕ ತಿಳಿಸಿದರು.

andolana

Recent Posts

ಧರ್ಮ ಸಂಕಟ ; ರಾಜ್ಯದಲ್ಲಿರುವ 12 ಸಾವಿರ ದಲಿತ ಕ್ರಿಶ್ಚಿಯನ್ನರಿಗೆ ಎಸ್‌ಸಿ ಮೀಸಲಾತಿ ಕೈ ತಪ್ಪುವ ಭೀತಿ

ಬೆಂಗಳೂರು : ಹಿಂದೂ, ಬೌದ್ಧ ಮತ್ತು ಸಿಖ್ ಧರ್ಮೀಯರನ್ನು ಹೊರತುಪಡಿಸಿ ಇತರ ಧರ್ಮಕ್ಕೆ ಮತಾಂತರಗೊಂಡವರು ಪರಿಶಿಷ್ಟ ಜಾತಿ (ಎಸ್‌ಸಿ) ಸ್ಥಾನಮಾನ…

55 mins ago

ಮಡಿಕೇರಿ | ನಗರದಲ್ಲಿ ಮುಳ್ಳುಹಂದಿ ಪ್ರತ್ಯಕ್ಷ

ಮಡಿಕೇರಿ : ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿ ಮುಳ್ಳುಹಂದಿ ಪ್ರತ್ಯಕ್ಷವಾಗಿದೆ. ಓಡಾಡಲು ಕಷ್ಟವಾಗುವ ಸ್ಥಿತಿಯಲ್ಲಿದ್ದ ಈ ಮುಳ್ಳುಹಂದಿ…

2 hours ago

ಹನೂರು | ಪಶುವೈದ್ಯಾಧಿಕಾರಿಗಳ ನಿರ್ಲಕ್ಷದಿಂದ ಸಾವಿಗೀಡಾದ 500 ನಾಟಿ ಕೋಳಿಗಳು

ಹನೂರು : ತಾಲೂಕಿನ ಲೊಕ್ಕನಹಳ್ಳಿ ಗ್ರಾಮದ ಮನೋಹರ್ ಎಂಬುವರಿಗೆ ಸೇರಿದ 500ಕ್ಕೂ ಹೆಚ್ಚು ನಾಟಿ ಕೋಳಿಗಳಿಗೆ ರೋಗ ತಗುಲಿ ಮೃತಪಟ್ಟಿದ್ದರು,…

2 hours ago

ಕಾಂತಾರಾ ಮಿಮಿಕ್ರಿ ವಿವಾದ : ಚಾಮುಂಡಿ ಬೆಟ್ಟಕ್ಕೆ ಭೇಡಿ ನೀಡಲಿದ್ದಾರೆ ನಟ ರಣವೀರ್‌ ಸಿಂಗ್‌

ಮುಂಬೈ : ‘ಕಾಂತಾರ’ ಸಿನಿಮಾದಲ್ಲಿ ದೈವದ ಕುರಿತು ವೇದಿಕೆ ಮೇಲೆ ಅನುಕರಣೆ ಮಾಡಿ ‘ಫೀಮೇಲ್ ಗೋಸ್ಟ್’ ಎಂದು ಕರೆದು ವಿವಾದಕ್ಕೆ…

3 hours ago

ಉತ್ತರ ಸಿಕ್ಕಿಂನಲ್ಲಿ ಭೂಕುಸಿತ : ಚುಂಗಾಥಾಂಗ್‌ನಲ್ಲಿ ಸಿಲುಕಿದ 200 ಪ್ರವಾಸಿಗರು

ಸಿಕ್ಕಿಂ : ಉತ್ತರ ಸಿಕ್ಕಿಂನಲ್ಲಿ ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿ, ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸುಮಾರು 200 ಪ್ರವಾಸಿಗರು ಚುಂಗ್‌ಥಾಂಗ್‌ನಲ್ಲಿ…

3 hours ago

ಸಂಘರ್ಷ ಶಮನಕ್ಕೆ 15 ಅಂಶ ಮುಂದಿಟ್ಟ ಟ್ರಂಪ್‌ ; ಸಂಧಾನ ಅಣಕಿಸಿದ ಇರಾನ್‌

ವಾಷಿಂಗ್ಟನ್‌ : ಪಶ್ಚಿಮ ಏಪ್ಯಾ ಸಂಘರ್ಷ ಶಮನಕ್ಕೆ ನಡೆಯುತ್ತಿರುವ ಪ್ರಯತ್ನಗಳ ಮಧ್ಯೆ, ಟ್ರಂಪ್ ಆಡಳಿತ 15 ಅಂಶಗಳ ಪ್ರಸ್ತಾವನೆಯನ್ನು ಇರಾನ್…

4 hours ago