BREAKING NEWS

ಅದಾನಿ ಪೋರ್ಟ್ಸ್‌ ಲೆಕ್ಕಪರಿಶೋಧಕ ಸ್ಥಾನಕ್ಕೆ ಡೆಲಾಯ್ಟ್‌ ರಾಜೀನಾಮೆ

ಹಿಂಡೆನ್‌ಬರ್ಗ್‌ನ ವರದಿಯಲ್ಲಿ ಉಲ್ಲೇಖಿಸಿದ ಕೆಲವು ವಹಿವಾಟುಗಳ ವಿಚಾರವನ್ನು ಮುಂದಿಟ್ಟುಕೊಂಡು ಅದಾನಿ ಪೋರ್ಟ್ಸ್‌ ಲೆಕ್ಕಪರಿಶೋಧಕ ಸ್ಥಾನಕ್ಕೆ ರಾಜೀನಾಮೆ ನೀಡಲು ಡೆಲಾಯ್ಟ್ ನಿರ್ಧರಿಸಿದೆ. ಹಿಂಡನ್‌ಬರ್ಗ್‌ ವರದಿಯಲ್ಲಿ ಉಲ್ಲೇಖಿಸಿದ ಅಂಶಗಳನ್ನು ಅದಾನಿ ಸ್ವತಂತ್ರವಾಗಿ ಪರಿಶೀಲಿಸಲು ಬಯಸುತ್ತಿಲ್ಲ ಎಂಬುದೇ ಡೆಲಾಯ್ಟ್‌ ರಾಜೀನಾಮೆಗೆ ಕಾರಣ ಎಂದು ಈ ವಿಷಯದ ಬಗ್ಗೆ ತಿಳಿದಿರುವ ವ್ಯಕ್ತಿಗಳು ಹೇಳಿದ್ದಾರೆ.

ಮೇ ತಿಂಗಳಲ್ಲಿ ಡೆಲಾಯ್ಟ್ ತನ್ನ ವರದಿಯಲ್ಲಿ ಅಮೆರಿಕದ ಶಾರ್ಟ್‌ ಸೆಲ್ಲರ್‌ ಹಿಂಡನ್‌ಬರ್ಗ್‌ ರಿಸರ್ಚ್‌ ಉಲ್ಲೇಖಿಸಿದ ಕೆಲವು ವಹಿವಾಟುಗಳ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿ, ಸ್ವತಂತ್ರ ತನಿಖೆಗೆ ಸೂಚಿಸಿತ್ತು. ಈ ಮೂಲಕ ಕಂಪನಿಯ ಲೆಕ್ಕಪರಿಶೋಧಕನಾಗಿ ತನ್ನ ಕಾಳಜಿ ಮೆರೆದಿತ್ತು.

ಆದರೆ, ಈ ಬಗ್ಗೆ ರಾಯ್ಟರ್ಸ್‌ ಪ್ರತಿಕ್ರಿಯೆ ಕೋರಿದಾಗ ಡೆಲಾಯ್ಟ್ ಮತ್ತು ಅದಾನಿ ಪೋರ್ಟ್ಸ್‌ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವರ್ಷದ ಜನವರಿಯಲ್ಲಿ ಬಿಡುಗಡೆಯಾದ ಶಾರ್ಟ್‌ ಸೆಲ್ಲರ್‌ ಹಿಂಡನ್‌ಬರ್ಗ್‌ ರಿಸರ್ಚ್‌ನ ವರದಿಯು ಅದಾನಿ ಕಂಪನಿಗಳಿಂದ ತೆರಿಗೆ ಸ್ವರ್ಗಗಳ ಅನುಚಿತ ಬಳಕೆ ಮತ್ತು ಕಂಪನಿಯ ಸಾಲದ ಮಟ್ಟಗಳ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಆದರೆ ಈ ವರದಿಗಳನ್ನು ಸಂಸ್ಥೆ ನಿರಾಕರಿಸಿದೆ.

ಹಿಂಡೆನ್‌ಬರ್ಗ್ ಉಲ್ಲೇಖಿಸಿದ ಸಂಬಂಧಿತ ವಹಿವಾಟಿನ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಡೆಲಾಯ್ಟ್ ಅದಾನಿ ಪೋರ್ಟ್ಸ್‌ಗೆ ಸೂಚಿಸಿದ ನಂತರ ರಾಜೀನಾಮೆ ಸುದ್ದಿ ಹೊರಬಿದ್ದಿದೆ. ಆದರೆ, ಕಂಪನಿಯು ಸ್ವತಂತ್ರ ತನಿಖೆಗೆ ಒಪ್ಪಲಿಲ್ಲ ಎಂದು ಮೂಲಗಳು ತಿಳಿಸಿವೆ.

ಅದಾನಿ ಪೋರ್ಟ್ಸ್‌ ಲೆಕ್ಕಪರಿಶೋಧಕ ಹುದ್ದೆಗೆ ತುರ್ತಾಗಿ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದ್ದು, ಡೆಲಾಯ್ಟ್ ಸೋಮವಾರವೇ ತನ್ನ ನಿರ್ಧಾರ ಪ್ರಕಟಿಸಬಹುದು ಎಂದು ಮೂಲಗಳು ತಿಳಿಸಿವೆ.

ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಯು ಹೂಡಿಕೆದಾರರ ವಿಶ್ವಾಸವನ್ನು ಜರ್ಝರಿತಗೊಳಿಸಿತ್ತು. ಇದರಿಂದ ಅದಾನಿ ಸಮೂಹದ ಕಂಪನಿಗಳ ಮಾರುಕಟ್ಟೆ ಮೌಲ್ಯ ಸುಮಾರು 150 ಬಿಲಿಯನ್‌ ಡಾಲರ್‌ಗಳಷ್ಟು ಕುಸಿತ ಕಂಡಿತ್ತು.

ಆದರೆ, ನಂತರ ಸಮೂಹದ ಕಂಪನಿಗಳ ಷೇರುಗಳು ಗಳಿಕೆ ಕಂಡಿವೆ. ಹೀಗಿದ್ದೂ ಹಿಂಡೆನ್‌ಬರ್ಗ್‌ ರಿಸರ್ಚ್‌ನ ವರದಿಯ ನಂತರ ಅದಾನಿ ಸಮೂಹದ ಕಂಪನಿಗಳ ಮಾರುಕಟ್ಟೆ ಮೌಲ್ಯ ಇನ್ನೂ ಸುಮಾರು 100 ಬಿಲಿಯನ್‌ ಡಾಲರ್‌ಗಳಷ್ಟು ಕಡಿಮೆಯೇ ಇದೆ.

ಮೇ ತಿಂಗಳಲ್ಲಿ ನ್ಯಾಯಾಲಯವು ನೇಮಿಸಿದ ಸಮಿತಿಯು ಅದಾನಿ ಗುಂಪಿನ ವಿರುದ್ಧದ ಆರೋಪಗಳ ತನಿಖೆಯಲ್ಲಿ ಭಾರತದ ಮಾರುಕಟ್ಟೆಗಳ ಕಾವಲು ಸಂಸ್ಥೆ ಸೆಬಿಗೆ ಏನೂ ಸಿಕ್ಕಿಲ್ಲ. ಪ್ರಕರಣದ ಬಗೆಗಿನ ಅದರ ತನಿಖೆ ‘ಗಮ್ಯಸ್ಥಾನವಿಲ್ಲದ ಪ್ರಯಾಣ’ ಆಗಿರಬಹುದು ಎಂದು ಹೇಳಿತ್ತು.

ಬ್ಲೂಮ್‌ಬರ್ಗ್ ನ್ಯೂಸ್ ಶುಕ್ರವಾರ ಡೆಲಾಯ್ಟ್‌ನ ಯೋಜನೆಗಳ ಬಗ್ಗೆ ಮೊದಲು ವರದಿ ಮಾಡಿತ್ತು.

andolanait

Recent Posts

ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಕಲಿಸದೇ ಹೋದರೆ ಕ್ರಮ: ಸಚಿವ ಮಧು ಬಂಗಾರಪ್ಪ

ಬೆಂಗಳೂರು: ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು. ಇಲ್ಲದೇ ಹೋದರೆ ಅಂತಹ ಶಾಲೆಗಳ ಮೇಲೆ ಕ್ರಮ…

9 hours ago

ಹನೂರು| ರಸ್ತೆಯಲ್ಲಿ ಹುಲಿ ದರ್ಶನ: ವಿಡಿಯೋ ವೈರಲ್‌

ಹನೂರು: ತಾಲೂಕಿನ ಮಿಣ್ಯಂ ಗ್ರಾಮದಿಂದ ಹನೂರಿಗೆ ಆಗಮಿಸುತ್ತಿದ್ದ ಪ್ರಯಾಣಿಕರಿಗೆ ಅರಣ್ಯ ವ್ಯಾಪ್ತಿಯಲ್ಲಿ ಹುಲಿರಾಯ ದರ್ಶನ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ…

10 hours ago

ಶೀಘ್ರದಲ್ಲೇ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ: ರಹೀಂ ಖಾನ್‌

ಬೆಳಗಾವಿ: ಆದಷ್ಟು ಬೇಗ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುತ್ತದೆ ಎಂದು ಸಚಿವ ರಹೀಂ ಖಾನ್‌ ತಿಳಿಸಿದರು. ವಿಧಾನಪರಿಷತ್‌ ಕಲಾಪದಲ್ಲಿ…

10 hours ago

ಎಚ್‌ಡಿಕೆ ಹುಟ್ಟುಹಬ್ಬ: ಮಂಡ್ಯದಲ್ಲಿ ಕಾರ್ಯಕರ್ತರಿಂದ ಅದ್ಧೂರಿ ಆಚರಣೆ

ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಮಂಡ್ಯ ಜಿಲ್ಲೆಯ ಜೆಡಿಎಸ್‌ ಕಾರ್ಯಕರ್ತರು ಅದ್ಧೂರಿಯಾಗಿ ಆಚರಣೆ ಮಾಡಿದರು. ಮದ್ದೂರಿನಲ್ಲಿ ಮಾಜಿ…

10 hours ago

ಕೋಳಿ ಮೊಟ್ಟೆ ಸೇವಿಸಿದರೆ ಕ್ಯಾನ್ಸರ್‌ ಬರುವ ವದಂತಿ: ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಿಷ್ಟು.!

ಬೆಳಗಾವಿ: ಕೋಳಿ ಮೊಟ್ಟೆ ಸೇವಿಸಿದರೆ ಕ್ಯಾನ್ಸರ್‌ ಬರುವ ವದಂತಿ ಎಲ್ಲೆಡೆ ಹಬ್ಬಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯೆ…

11 hours ago

ಮಳವಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ

ಮಳವಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮಳವಳ್ಳಿಯಲ್ಲಿ ನಡೆಯಲಿರುವ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ 1066ನೇ ಜಯಂತಿ…

11 hours ago