ಚಿತ್ರ ಮಂಜರಿ

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಹಿರಿಯ ನಟಿ ಡಾ.ಲೀಲಾವತಿ, ವಿನೋದ್‌ರಾಜ್‌ಗೆ ಸನ್ಮಾನ

ನೆಲಮಂಗಲ : ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಹಿರಿಯ ನಟಿ ಡಾ.ಲೀಲಾವತಿ ಹಾಗೂ ವಿನೋದ್‌ರಾಜ್‌ರವರಿಗೆ ಸನ್ಮಾನ,ಅಭಿನಂದನೆ ಸಲ್ಲಿಸಲಾಗಿದೆ. ಹಿರಿಯ ನಟಿ ಡಾ.ಲೀಲಾವತಿ ಹಾಗೂ ವಿನೋದ್‌ರಾಜ್‌ರವರು ಕಲ್ಲಿನ ಬಂಡೆಯ ಜಾಗದಲ್ಲಿ ಪ್ರಕೃತಿಯನ್ನು ಆರಾಧಿಸುವಂತೆ ತೋಟ ಮಾಡಿರುವುದು ಆ ತೋಟದಲ್ಲಿ ಪ್ರಾಣಿಪಕ್ಷಿಗಳು ಜೀವನ ಮಾಡಲು ಅನುವು ಮಾಡಿಕೊಟ್ಟಿರುವುದು ಮನುಷ್ಯ ಜನ್ಮದ ಅದ್ಬುತ ಕಾರ್ಯ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಇಂದಿರಾಕೃಷ್ಣಪ್ಪ ಅಭಿಪ್ರಾಯ ಪಟ್ಟರು.

ತಾಲೂಕಿನ ಸೋಲದೇವನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಆಯೋಜಿಸಲಾಗಿದ್ದ ಭಾರತ ಸ್ವಾತಂತ್ರ‍್ಯ ಮಹೋತ್ಸವದ ಹಿನ್ನಲೆ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಜನರಿಗೆ ಹಾಗೂ ಪಶುಗಳಿಗೆ ಸ್ವಂತ ಆಸ್ಪತ್ರೆ ನಿರ್ಮಾಣ ಮಾಡಿ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಸಮಾಜಕ್ಕೆ ಪ್ರೇರಣೆ, ಗಾಂಧಿಯವರ ಕನಸಿನ ಭಾರತಕ್ಕೆ ಲೀಲಾವತಿಯವರ ಸೇವೆ ಮಾದರಿಯಾಗಿದೆ. ಕರುನಾಡಿನಲ್ಲಿ ಜನಮೆಚ್ಚಿದ ಆರುನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟನೆ ಮಾಡಿ ದಕ್ಷಿಣ ಭಾರತದ ಘನತೆಯ ಕಲಾವಿದೆಯಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಜೀವನ ಸಾಗಿಸುವ ಮೂಲಕ ಸಮಾಜ ಸೇವೆ ಮಾಡಿ ಮಾದರಿಯಾಗಿದ್ದಾರೆ ಎಂದರು.

ಹಿರಿಯ ನಟಿ ಡಾ.ಲೀಲಾವತಿ ಮಾತನಾಡಿ, ನನಗೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಅಭಿನಂದನೆ ಸಲ್ಲಿಸುತ್ತಿರುವುದು ಸಂತೋಷವಾಗಿದೆ. ದೇಶದಲ್ಲಿ ಗಾಂಧಿ ಕನಸಿನ ಮಾದರಿ ಗ್ರಾಮಗಳು ಸೃಷ್ಟಿಯಾದರೆ ಮಾತ್ರ ಗ್ರಾಮೀಣ ಜನರ ಬದುಕು ಉತ್ತಮವಾಗಿರುತ್ತದೆ, ನಾನು ನೆಲೆಸಿರುವ ಸೋಲದೇವನಹಳ್ಳಿ ಭಾಗದ ಗ್ರಾಮೀಣ ಜನರಿಗೆ ಅನುಕೂಲವಾಗಲು ಆಸ್ಪತ್ರೆ ಮಾಡುವ ಕನಸು ನನಸಾಗಿದೆ. ಒಂದು ಪಶು ಆಸ್ಪತ್ರೆ ಮಾಡಲಾಗುತ್ತಿದ್ದು ಮಗ ವಿನೋದ್ ರಾಜ್ ಬಲವಾಗಿ ನಿಂತಿದ್ದಾರೆ. ಗಾಂಧೀಜಿಯವರು ಹೇಳಿದಂತೆ ಹಳ್ಳಿ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಕಾಣಲಿದೆ ಎಂದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಭಾರತ ಸ್ವಾತಂತ್ರ‍್ಯ ಮಹೋತ್ಸವದ ಹಿನ್ನಲೆ ಕನ್ನಡಕ್ಕೊಬ್ಬರೆ ಅಭಿನಯ ಸರಸ್ವತಿ ಡಾ.ಲೀಲಾವತಿ ಎಂಬ ಬಿರುದು ನೀಡಿ ಪ್ರಮಾಣ ಪತ್ರ ಹಾಗೂ ಚರಕವನ್ನು ನೀಡಿ ಡಾ.ಲೀಲಾವತಿಯವರಿಗೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು. ತಾಯಿಯ ಜೊತೆ ಮಗ ವಿನೋದ್ ರಾಜ್‌ರವರಿಗೂ ಸಹ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಟ ವಿನೋದ್‌ರಾಜ್, ರಾಷ್ಟೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ ಪ್ರಶಾಂತ್,ಅಧ್ಯಾಪಕಿ ಶಾಮಲಾ, ಕನ್ನಡ ಸಾಹಿತ್ಯ ಪರಿಷತ್ ಸಂಘಸಂಸ್ಥೆಗಳ ಪ್ರತಿನಿಧಿಗಳು ಭಾಗಿಯಾಗಿದ್ದರೆ.

lokesh

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

11 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

11 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

12 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

13 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

18 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

18 hours ago