ಬೆಂಗಳೂರು : ರಾಜಕೀಯ ವ್ಯಕ್ತಿಗಳಿಗೆ ನೀಡಲಾಗುವ ಸರ್ಕಾರಿ ಸವಲತ್ತುಗಳನ್ನು ಅವರ ಮಕ್ಕಳು ಹಾಗೂ ಅವರ ಕುಟುಂಬ ವರ್ಗ ಅನುಭವಿಸುವುದು ನಮ್ಮ ದೇಶಕ್ಕೆ ಅಂಟಿದ ರೋಗ. ಇತ್ತೀಚೆಗೆ, ಅಸ್ತಿತ್ವಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರದಲ್ಲಿ ಸಕ್ಕರೆ ಸಚಿವರಾಗಿರುವ ಶಿವಾನಂದ ಪಾಟೀಲರ ಕುಟುಂಬದ ಸದಸ್ಯರೊಬ್ಬರ ವಿರುದ್ಧ ಇಂಥ ಟೀಕೆಗಳು ಕೇಳಿಬಂದಿವೆ.
ಸಚಿವರ ಪುತ್ರಿಯಾದ ಸಂಯುಕ್ತಾ ಪಾಟೀಲ್ ಅವರು ತಮ್ಮ ತಂದೆಗೆ ನೀಡಿರುವ ಸರ್ಕಾರಿ ಕಾರಿನಲ್ಲಿ ಕುಳಿತು ಬೆಂಗಳೂರಿನಲ್ಲಿ ಪ್ರಯಾಣಿಸುತ್ತಿದ್ದುದನ್ನು ನೋಡಿದ ಅನೇಕ ಸಾರ್ವಜನಿಕರು ಟೀಕೆ ಮಾಡಿದ್ದಾರೆ. ಇದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ಸಚಿವರು ಪ್ರತಿಕ್ರಿಯೆ ನೀಡಿ, ತಮ್ಮ ಪುತ್ರಿಗೆ ಎಚ್ಚರಿಕೆ ನೀಡುವುದಾಗಿ ತಿಳಿಸಿದ್ದಾರೆ.
ಏನಿದು ವಿಚಾರ? : ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಪಡೆದಿರುವ ಸಚಿವ ಶಿವಾನಂದ ಪಾಟೀಲರಿಗೆ ರಾಜ್ಯ ಸರ್ಕಾರದ ವತಿಯಿಂದ ಸಹಜವಾಗಿ ಸಿಗುವ ಎಲ್ಲಾ ಸೌಲಭ್ಯಗಳ ಜೊತೆಗೆ ಅವರ ಸಂಚಾರಕ್ಕಾಗಿ ಐಶಾರಾಮಿ ಕಾರೊಂದನ್ನು ನೀಡಲಾಗಿದೆ. ನಿಯಮಗಳ ಪ್ರಕಾರ, ಸಚಿವರು ಸಹ ಸರ್ಕಾರಿ ನೌಕರರ ಸಾಲಿಗೆ ಸೇರುತ್ತಾದ್ದರಿಂದ ಸರ್ಕಾರದ ಕಾರನ್ನು ಕೇವಲ ಅವರು ಮಾತ್ರ ಬಳಸಬೇಕು. ಬೇರೆಯವರು ಬಳಸಬಾರದು ಅಥವಾ ಅವರು ಬೇರೆಯವರಿಗೆ ತಮಗೆ ನೀಡಲಾಗಿರುವ ಸೌಕರ್ಯಗಳನ್ನು ಬಳಸುವಂತೆ ನೀಡಲೂ ಬಾರದು.
ಸದಾಶಿವನಗರದಲ್ಲಿ ರೌಂಡ್ಸ್ : ಶಿವಾನಂದ ಪಾಟೀಲರ ವಿಚಾರದಲ್ಲಿ ಹಾಗಾಗಿಲ್ಲ. ಅವರ ಪುತ್ರಿ ಸಂಯುಕ್ತಾ ಪಾಟೀಲ್ ಅವರು ತಮ್ಮ ತಂದೆಗೆ ನೀಡಲಾಗಿರುವ ಸರ್ಕಾರಿ ಕಾರಿನಲ್ಲಿ ಕುಳಿತು, ಬೆಂಗಳೂರಿನ ಸದಾಶಿವ ನಗರದಲ್ಲಿ ರೌಂಡ್ಸ್ ಹೊಡೆದಿದ್ದಾರೆ. ಡ್ರೈವರ್ ಕಾರು ಚಲಾಯಿಸುತ್ತಿದ್ದರೆ, ಅವರ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಸಂಯುಕ್ತಾ ಅವರು, ತಮ್ಮ ಆಸನದ ಡೋರ್ ನ ಗಾಜನ್ನು ಇಳಿಸಿ, ನಗರ ಸೌಂದರ್ಯ ನೋಡುತ್ತಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದುದನ್ನು ಸಾರ್ವಜನಿಕರು ನೋಡಿದ್ದಾರೆ ಎಂದು ಖಾಸಗಿ ವಾಹಿನಿಯೊಂದು ಸುದ್ದಿ ಬಿತ್ತರಿಸಿದೆ.
ಕಾರಿನ ಮುಂದಿನ ಕರ್ನಾಟಕ ಸರ್ಕಾರದ ಲಾಂಛನವನ್ನು ನೋಡಿದ ಅನೇಕ ಸಾರ್ವಜನಿಕರು ಕಾರಿನೊಳಗೆ ಇಣುಕಿ ನೋಡಿದಾಗ ಕಾರಿನಲ್ಲಿ ಸಚಿವರೇ ಇಲ್ಲ ಎಂಬುದು ಗೊತ್ತಾಗಿದೆ. ಕೂಡಲೇ ಇದು ಸರ್ಕಾರಿ ಸೌಲಭ್ಯದ ದುರುಪಯೋಗ ಎಂದು ತಮ್ಮ ಮೊಬೈಲ್ ಗಳಿಂದ ಸಚಿವರ ಪುತ್ರಿಯು ಕಾರಿನಲ್ಲಿ ರೌಂಡ್ಸ್ ಹೊಡೆಯುತ್ತಿರುವುದನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲಾತಾಣದಲ್ಲಿ ಅಪ್ಲೋಡ್ ಮಾಡಿ, ಸಚಿವರ ಪುತ್ರಿಯ ಈ ನಡೆಯುನ್ನು ಟೀಕಿಸಿದ್ದಾರೆ. ಈ ಪೋಸ್ಟ್ ಗಳು ವೈರಲ್ ಆಗಿವೆ.
ಮಗಳಿಗೆ ಎಚ್ಚರಿಕೆ ನೀಡುತ್ತೇನೆ : ತಮ್ಮ ಪುತ್ರಿಯ ಬಗ್ಗೆ ಕೇಳಿಬಂದಿರುವ ಟೀಕೆಗಳಿಗೆ ಸಚಿವ ಶಿವಾನಂದ ಪಾಟೀಲರು ಉತ್ತರ ನೀಡಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಪ್ರತಿಕ್ರಿಯೆಯಲ್ಲಿ ಅವರು, “ಸರ್ಕಾರ ಕೊಟ್ಟಿರುವ ಅಧಿಕೃತ ಕಾರು ನನ್ನ ಬಳಿಯೇ ಇದೆ. ಬೋರ್ಡ್ ಇರುವ ಕಾರು ಬೆಂಗಳೂರಿನಲ್ಲಿದೆ. ಆ ಕಾರನ್ನು ಸಹ ನನ್ನ ಮಗಳು ಉಪಯೋಗಿಸಬಾರದು. ಅವರು ಯಾವ ಸಂದರ್ಭದಲ್ಲಿ ಅದನ್ನು ಉಪಯೋಗಿಸಿದ್ದಾರೋ ನನಗೆ ಗೊತ್ತಿಲ್ಲ. ನಾನು ಆ ಬಗ್ಗೆ ಮಾಹಿತಿ ಪಡೆಯುತ್ತೇನೆ. ನನ್ನ ಕಾರನ್ನು ಬಳಸಬಾರದೆಂದು ಮಗಳಿಗೆ ಎಚ್ಚರಿಕೆ ನೀಡುತ್ತೇನೆ” ಎಂದು ಹೇಳಿದ್ದಾರೆ.
ಉಡುಪಿ: ಇಲ್ಲಿನ ಮಲ್ಪೆ ಕೋಡಿಬೆಂಗ್ರೆ ಬೀಷಚ್ ಸಮೀಪ ಪ್ರವಾಸಿ ದೋಣಿ ಮುಗುಚಿದ ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದ ಮೈಸೂರಿನ ಇಬ್ಬರು ಮೃತಪಟ್ಟಿರುವ…
ಹಾಸನ: ನಾನು ಜೆಡಿಎಸ್ ಬಿಟ್ಟು ಹೋದರೆ ದ್ರೋಹ ಹೇಗಾಗುತ್ತದೆ? ನಾನು ಅಲ್ಲಿದ್ದರೆ ಇನ್ನೊಂದು ಸೀಟ್ ಜಾಸ್ತಿ ಆಗೋದು ಅಷ್ಟೇ. ಏನು…
ಬೆಂಗಳೂರು: ವಿಧಾನಮಂಡಲ ವಿಶೇಷ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡದೇ ತೆರಳುತ್ತಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕಾಂಗ್ರೆಸ್ ಸದಸ್ಯರು…
ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟ ಘಟನೆ…
ಮಂಡ್ಯ: ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸವನ್ನು ಗಾಂಧಿ ಭವನದಲ್ಲಿ ಮಾಡಲಾಗುವುದು ಎಂದು ಮಂಡ್ಯ ಜಿಲ್ಲಾ…
ಮಂಡ್ಯ: ಮಂಡ್ಯ ಜಿಲ್ಲೆಯ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಲ್ಲಿ ದಿನಾಂಕ:31-10-2017ಕ್ಕೂ ಪೂರ್ವದಲ್ಲಿ ಗ್ರಾಮ ಪಂಚಾಯತ್ ನಿಂದ ನೇಮಕಗೊಂಡು ನೀರುಗಂಟಿ, ಸ್ವಚ್ಛತಗಾರ, ಅಟೆಂಡರ್…