ಗುಜರಾತ್ : ದಂಪತಿ ತಮ್ಮ ತಲೆಯನ್ನು ತಾವೇ ಕಡಿದುಕೊಂಡ ಭಯಾನಕ ಘಟನೆ ಗುಜರಾತ್ ರಾಜ್ಯದ ರಾಜ್‌ಕೋಟ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ವಿಂಚಿಯಾ ಎಂಬ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. 38 ವರ್ಷ ವಯಸ್ಸಿನ ಕೃಷಿಕ ಹಾಗೂ ಆತನ ಪತ್ನಿ ‘ಗಿಲ್ಲೊಟಿನ್’ ಮಾದರಿಯ ಯಂತ್ರಕ್ಕೆ ತಮ್ಮ ತಲೆಯನ್ನು ಕೊಟ್ಟು ಸಾವಿಗೆ ಶರಣಾಗಿದ್ದಾರೆ.
ಫ್ರೆಂಚ್ ಕ್ರಾಂತಿಯ ವೇಳೆ ಗಿಲ್ಲೋಟಿನ್ ಯಂತ್ರ ಕುಖ್ಯಾತವಾಗಿತ್ತು. ರಾಜಕೀಯ ವಿರೋಧಿಗಳ ತಲೆಯನ್ನು ಈ ಯಂತ್ರದಲ್ಲಿ ಇರಿಸಿ ಕತ್ತರಿಸಲಾಗುತ್ತಿತ್ತು. ಈ ಯಂತ್ರದಲ್ಲಿ ತಲೆಯನ್ನು ಕತ್ತರಿಸುವಷ್ಟ ಹರಿತವಾದ ಬ್ಲೇಡ್ ಇರುತ್ತದೆ. ಯಂತ್ರಕ್ಕೆ ತಲೆಯನ್ನು ಇರಿಸಿ ಯಂತ್ರವನ್ನು ಚಾಲನೆ ಮಾಡಿ ರುಂಡ ಹಾಗೂ ಮುಂಡ ಬೇರ್ಪಡುವಂತೆ ಮಾಡಲಾಗುತ್ತಿತ್ತು.
ರಾಜ್‌ಕೋಟ್ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ? : ಗಿಲ್ಲೊಟಿನ್ ಮಾದರಿಯ ಯಂತ್ರಕ್ಕೆ ತಮ್ಮ ತಲೆಯನ್ನು ಕೊಟ್ಟು ರಾಜ್‌ಕೋಟ್‌ನ ಕೃಷಿಕ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಎಂಬ ವಿಚಾರ ಇದೀಗ ಪೊಲೀಸರಿಗೂ ತಲೆ ನೋವಾಗಿ ಪರಿಣಮಿಸಿದೆ. ಮೂಢನಂಬಿಕೆ, ಮಂತ್ರ – ತಂತ್ರದ ಬಲೆಗೆ ಬಿದ್ದು ಈ ಕೃತ್ಯ ಎಸಗಿದ್ದಾರಾ ಎಂಬ ಅನುಮಾನವೂ ಮೂಡಿದೆ.
ಈ ನಡುವೆ ಪೊಲೀಸರಿಗೆ ಗುಜರಾತಿ ಭಾಷೆಯಲ್ಲಿ ಬರೆದಿರುವ ಆತ್ಮಹತ್ಯೆ ಪತ್ರ ಹಾಗೂ ದಂಪತಿಗಳಿಬ್ಬರ ಹೆಬ್ಬೆಟ್ಟು ಮುದ್ರೆ ಕೂಡಾ ಪತ್ತೆಯಾಗಿದೆ. ದಂಪತಿ ತಮ್ಮ ಸಾವಿಗೆ ತಾವೇ ಕಾರಣ ಎಂದು ಹೇಳಿಕೊಂಡಿದ್ಧಾರೆ. ತಮ್ಮ ಸಾವಿಗೆ ಯಾರನ್ನೂ ದೂಷಿಸುವ ಅಗತ್ಯವಿಲ್ಲ ಎಂದೂ ದಂಪತಿ ಮನವಿ ಮಾಡಿದ್ದಾರೆ.
ಮೃತರನ್ನು 38 ವರ್ಷ ವಯಸ್ಸಿನ ಹೇಮು ಮಕ್ವಾನಾ ಹಾಗೂ ಆತನ ಪತ್ನಿ 35 ವರ್ಷ ವಯಸ್ಸಿನ ಹನ್ಸಾ ಮಕ್ವಾನಾ ಎಂದು ಗುರುತಿಸಲಾಗಿದೆ. ದಂಪತಿಗೆ ಇಬ್ಬರು ಮಕ್ಕಳಿದ್ದರು. ಈ ಮಕ್ಕಳು ತಮ್ಮ ಪೋಷಕರ ಮೃತ ದೇಹವನ್ನು ಕಂಡು ಕಂಗಾಲಾಗಿ ಕಣ್ಣೀರಿಡುತ್ತಾ ನೆರೆ ಹೊರೆಯವರಿಗೆ ಮಾಹಿತಿ ನೀಡಿದ್ದರು. ಆತ್ಮಹತ್ಯೆಗೆ ಶರಣಾದ ದಂಪತಿ 13 ವರ್ಷದ ಮಗ ಹಾಗೂ 12 ವರ್ಷ ವಯಸ್ಸಿನ ಮಗಳನ್ನು ಅಗಲಿದ್ದಾರೆ. ಮಕ್ಕಳಿಬ್ಬರೂ ತಮ್ಮ ಸಂಬಂಧಿಕರ ಮನೆಯಿಂದ ವಾಪಸ್ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯ ಮೃತ ದೇಹಗಳನ್ನು ರಾಜ್‌ಕೋಟ್‌ನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ದೇಹಗಳ ವಿಧಿವಿಜ್ಞಾನ ಪರೀಕ್ಷೆ ಹಾಗೂ ಮರಣೋತ್ತರ ಪರೀಕ್ಷೆ ನಡೆಯಬೇಕಿದೆ.
ಭಾರತಕ್ಕೆ ಭೇಟಿ ನೀಡಿದ್ದ ರಷ್ಯಾ ದೇಶದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಅತ್ಯಂತ ಭವ್ಯ ರೀತಿಯಲ್ಲಿ ಸ್ವಾಗತ ನೀಡಿ, ಆ…
ಪಿಎಂ ಕುಸುಮ್ ಬಿ ಯೋಜನೆಯಡಿ ಸೋಲಾರ್ ಪಂಪ್ ಸೆಟ್‌ಗೆ ಶೇ.80 ಸಬ್ಸಿಡಿ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್…
ಶನಿವಾರ, ಭಾನುವಾರ, ಸೋಮವಾರವೂ ಬಲಿ; ಹುಲಿ ದಾಳಿ ಎಂದು ಬಿಸಲವಾಡಿ, ಸಾಗಡೆ ಗ್ರಾಮಗಳ ರೈತರ ಆರೋ ಚಾಮರಾಜನಗರ: ತಾಲ್ಲೂಕಿನ ಬಿಸಲವಾಡಿ…
ರಾಜ್ಯ ಸರ್ಕಾರದಿಂದ ಅನುದಾನ ವಿಳಂಬ; ಚಿಕಿತ್ಸೆಗಾಗಿ ಬೆಂಗಳೂರು, ಮೈಸೂರಿನ ಆಸ್ಪತ್ರೆಗೆ ಅಲೆಯುತ್ತಿರುವ ರೋಗಿಗಳು ಮಂಡ್ಯ: ಕ್ಯಾನ್ಸರ್ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ…
ಜೀಪ್ ವ್ಯವಸ್ಥೆ ಮಾಡುವಂತೆ ತಹಸಿಲ್ದಾರ್‌ಗೆ ಮನವಿ ಮಾಡಿದ ಬಿಇಒ ಹನೂರು: ಹನೂರು ಶೈಕ್ಷಣಿಕ ವಲಯದ ಪಚ್ಚೆದೊಡ್ಡಿ ಗ್ರಾಮದ ಶಾಲೆಗೆ ಕ್ಷೇತ್ರ…
ಮಂಜು ಕೋಟೆ ಪ್ರತಿನಿತ್ಯ ಅಧಿಕಾರಿಗಳ ಬಳಿ ಅಲೆದಾಡುತ್ತಿರುವ ನೌಕರರು; ಕುಟುಂಬ ನಿರ್ವಹಣೆಗೆ ಪರದಾಟ ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯ ಪೌರಕಾರ್ಮಿಕರು ಮತ್ತು…