ಆಗ್ರ (ಉತ್ತರ ಪ್ರದೇಶ): ಇಲ್ಲಿನ ಹೊಟೇಲೊಂದರಲ್ಲಿ ಸಸ್ಯಹಾರಿಯೊಬ್ಬರಿಗೆ ಅಜಾಗರೂಕತೆಯಿಂದ ಮಾಂಸಹಾರ ಬಡಿಸಿದ ಕಾರಣಕ್ಕೆ ಹೊಟೇಲ್‌ನಿಂದ ₹ 1 ಕೋಟಿ ಪರಿಹಾರ ಕೇಳಿದ ಘಟನೆ ನಡೆದಿದೆ.
ಅರ್ಪಿತ್ ಗುಪ್ತಾ ಎಂಬ ವ್ಯಕ್ತಿ ಫತೇಹ್‌ಬಾದ್ ರಸ್ತೆಯಲ್ಲಿರುವ ಐಷಾರಾಮಿ ಹೊಟೇಲೊಂದಕ್ಕೆ ಹೋಗಿದ್ದಾರೆ. ಸರ್ವರ್ ಬಳಿ ಗುಪ್ತಾ ಅವರು ವೆಜ್ ರೋಲ್ ಕೇಳಿದ್ದಾರೆ. ಸರ್ವರ್ ಬಡಿಸಿದ ಆಹಾರವನ್ನು ತಿನ್ನಲು ಪ್ರಾರಂಭಿಸಿದಾಗ ಖಾದ್ಯದ ರುಚಿ ಬದಲಾಗಿರುವುದು ಗುಪ್ತಾರ ಅರಿವಿಗೆ ಬಂದಿದೆ. ಹೊಟೇಲ್ ಸರ್ವರ್ ವೆಜ್ ರೋಲ್ ಬದಲಿಗೆ ಚಿಕನ್ ರೋಲ್ ಕೊಟ್ಟಿರುವುದಾಗಿ ಅಲ್ಲಿನ ಸಿಬ್ಬಂದಿಯನ್ನು ವಿಚಾರಿಸಿದಾಗ ಗೊತ್ತಾಗಿದೆ ಎಂದು ಗುಪ್ತಾ ಪರ ವಕೀಲರಾಗಿರುವ ನರೋತ್ತಮ ಸಿಂಗ್ ಪ್ರತಿಪಾದಿಸಿದ್ದಾರೆ.
‘ಜನ್ಮತಃ ಸಸ್ಯಹಾರಿಯಾದ ಗುಪ್ತಾ ಅವರಿಗೆ ಹೊಟೇಲ್‌ನಲ್ಲಿ ತಾವು ತಿಂದದ್ದು ಚಿಕನ್ ರೋಲ್ ಎಂದು ಗೊತ್ತಾದಾಗ ವಾಂತಿ ಮಾಡಿಕೊಂಡಿದ್ದಷ್ಟೇ ಅಲ್ಲ, ಆಸ್ಪತ್ರೆಗೆ ಕೂಡ ಅವರು ದಾಖಲಾಗಬೇಕಾಯಿತು‘ ಎಂದೂ ವಕೀಲರು ತಿಳಿಸಿದ್ದಾರೆ.
ಹೊಟೇಲ್ ತನ್ನ ತಪ್ಪನ್ನು ಮರೆಮಾಚುವ ಸಲುವಾಗಿ ಊಟದ ಬಿಲ್ ಸಹ ನೀಡಲಿಲ್ಲ. ಈ ಕುರಿತಾದ ಸತ್ಯಾಸತ್ಯತೆಗೆ ನಮ್ಮ ಕಕ್ಷಿದಾರರು ಇಡೀ ಘಟನೆಯನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಹೊಟೇಲ್ ಸಿಬ್ಬಂದಿ ಸರಳವಾಗಿ ಕ್ಷಮೆಯಾಚಿಸುವುದು ಸಾಕಾಗುವುದಿಲ್ಲ. ಸಸ್ಯಾಹಾರಿ ವ್ಯಕ್ತಿಯೊಬ್ಬರ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸಿದ್ದಕ್ಕಾಗಿ ಹೊಟೇಲ್ ಆಡಳಿತದ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ಪರಿಹಾರವಾಗಿ ಸಂತ್ರಸ್ತ ಗುಪ್ತಾ ಅವರಿಗೆ ₹ 1 ಕೋಟಿ ಕೊಡಬೇಕು ಎಂದು ವಕೀಲ ನರೋತ್ತಮ್ ಸಿಂಗ್ ಹೇಳಿದ್ದಾರೆ.
ವ್ಯಕ್ತಿಯ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾದರೆ ಮೂರರಿಂದ ಹತ್ತು ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…