BREAKING NEWS

ಚಂದ್ರಯಾನ-3 : ಚಂದ್ರನ ಮೇಲೆ ನಡೆದಾಡಿದ ಪ್ರಗ್ಯಾನ್‌ ರೋವರ್‌

ನವದೆಹಲಿ : ಚಂದ್ರನ ಅಂಗಳದಲ್ಲಿ ಇಸ್ರೋದ ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್‌ ಬಳಿಕ ಹಲವು ಗಂಟೆಗಳ ನಂತರ ವಿಕ್ರಮ್‌ ಲ್ಯಾಂಡರ್‌ನಿಂದ ರೋವರ್‌ ಹೊರಬಂದಿದ್ದು, ಚಂದ್ರನ ಮೇಲೆ ವೈಜ್ಞಾನಿಕ ಅಧ್ಯಯನ ಆರಂಭಿಸಿದೆ.

ಈ ಕುರಿತು ಸುಮಾರು 8:26ರ ಹೊತ್ತಿಗೆ ಇಸ್ರೋ ಟ್ವಿಟ್ಟರ್‌ ಖಾತೆಯಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಚಂದ್ರಯಾನ-3 ರೋವರ್‌: ಭಾರತದಲ್ಲಿ ತಯಾರಿಸಲಾಗಿದೆ, ಚಂದ್ರನಿಗಾಗಿ ಮಾಡಲ್ಪಟ್ಟಿದೆ. ಚಂದ್ರಯಾನ-3 ರೋವರ್ ಲ್ಯಾಂಡರ್‌ನಿಂದ ಕೆಳಗೆ ಇಳಿಯಿತು. ಚಂದ್ರನ ಮೇಲೆ ಭಾರತ ನಡೆದಾಡಿತು. ಶೀಘ್ರವೇ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ಇಸ್ರೋ ತಿಳಿಸಿದೆ.

ಯಶಸ್ವಿ ಲ್ಯಾಂಡಿಂಗ್‌ ಬಳಿಕ ಮುಂದಿನ ಹಂತ ಪ್ರಗ್ಯಾನ್‌ ರೋವರ್‌ ಚಂದ್ರನ ಮೇಲ್ಮೈನಲ್ಲಿ ಅಧ್ಯಯನ ನಡೆಸಲಿದೆ. ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಇಳಿದು ಧೂಳೆಬ್ಬಿಸಿದೆ. ಇದೇ ಕಾರಣಕ್ಕೆ ಪ್ರಗ್ಯಾನ್‌ ರೋವರ್‌ ಕೆಲ ಗಂಟೆಗಳು ಕಾದು ಹೊರಬಂದಿದೆ ಎನ್ನಲಾಗಿದೆ.

ಪ್ರಗ್ಯಾನ್‌ ರೋವರ್‌ ತಡವಾಗಿ ಹೊರಬರಲು ಕಾರಣವೇನು? : ಸುಮಾರು 1,749.8 ಕೆಜಿ ತೂಕದ ಲ್ಯಾಂಡರ್‌ ಬಂದು ಚಂದ್ರನ ಮೇಲೆ ಹೆಜ್ಜೆ ಇಟ್ಟಾಗ ಅದರ ಸುತ್ತಲೂ ಧೂಳು ಆವರಿಸಿತು. ಅಲ್ಲಿನ ದುರ್ಬಲ ಗುರುತ್ವಾಕರ್ಷಣೆ ಶಕ್ತಿಯ ಕಾರಣದಿಂದ ಆ ದಟ್ಟವಾಗಿರುವ ಧೂಳು ತಕ್ಷಣಕ್ಕೆ ಕಡಿಮೆ ಆಗುವುದು ಕಷ್ಟ. ಈ ವೇಳೆ ರೋವರ್‌ ಹೊರ ಬಂದರೆ, ಆ ಧೂಳಿನ ಕಣಗಳು ರೋವರ್‌ನಲ್ಲಿರುವ ಸೆನ್ಸರ್‌ಗಳು, ಕ್ಯಾಮೆರಾಗಳ ಮೇಲೆ ಕುಳಿತುಕೊಳ್ಳುತ್ತದೆ. ಹೀಗಾಗಿ ಸ್ವಲ್ಪ ಸಮಯ ಕಾದು ನಂತರ ರೋವರ್‌ ಹೊರಬಂದಿದೆ.

lokesh

Recent Posts

ವರ್ತನೆ ತಪ್ಪಿದರೆ ದಾಳಿ ನಿಶ್ಚಿತ : ಇರಾನ್‌ಗೆ ಟ್ರಂಪ್ ಖಡಕ್ ಎಚ್ಚರಿಕೆ

ವಾಷಿಂಗ್ಟನ್ : ಇರಾನ್ ತಪ್ಪು ವರ್ತನೆ ತೋರಿದರೆ ಮತ್ತೆ ಸೇನಾ ದಾಳಿ ಆರಂಭವಾಗಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್…

3 hours ago

ನಿಗದಿಗಿಂತ ಮುನ್ನವೇ ಮುಂಗಾರು ಮಳೆ : ಮೇ ಅಂತ್ಯಕ್ಕೆ ಕೇರಳ ಪ್ರವೇಶ

ಬೆಂಗಳೂರು : ಬಿರುಬೇಸಿಗೆಯಿಂದಾಗಿ ಬಳಲಿ ಬೆಂಡಾಗಿರುವ ಜನತೆಗೆ ಕೇಂದ್ರ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದ್ದು, ಈ ಬಾರಿ ನಿಗದಿಗಿಂತ ಮುಂಚಿತವಾಗಿಯೇ…

4 hours ago

ಬೆಟ್ಟದಪುರ | ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶ ; ಬಾಲಕ ಸಾವು

ಬೆಟ್ಟದಪುರ : ಪಿರಿಯಾಪಟ್ಟಣ ತಾಲ್ಲೂಕಿನ ಬಿ.ಟಿ.ಎಂ. ಕೊಪ್ಪಲು ಗ್ರಾಮದಲ್ಲಿ ಮನೆಯ ಹಿಂದೆ ಕ್ರಿಕೆಟ್ ಆಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ…

5 hours ago

ಚಿಪ್ಪುಹಂದಿ ಬೇಟೆಯಾಡಿ ಮಾರಾಟಕ್ಕೆ ಯತ್ನ: ಓರ್ವ ಬಂಧನ

ಮೈಸೂರು : ಕಾಡುಪ್ರಾಣಿ ಬೇಟೆ ಹಾಗೂ ಅಕ್ರಮ ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ…

6 hours ago

ʼದೃಷ್ಟಿ ಉಪಗ್ರಹʼ ಉಡಾವಣೆ ಯಶಸ್ವಿ

ಬೆಂಗಳೂರು : ಮೋಡ, ಕತ್ತಲೆ, ಮಳೆ... ಯಾವುದಕ್ಕೂ ಜಗ್ಗದ ಕಣ್ಣು ಹೊಂದಿರುವ ಭಾರತದ ಮೊದಲ ಖಾಸಗಿ ಉಪಗ್ರಹ ‘ದೃಷ್ಟಿ’ ಇಂದು…

7 hours ago

ಮೇ.6ರಂದು ಯಸಳೂರಿನ ಅರ್ಜುನ ಆನೆ ಸಮಾಧಿ ಸ್ಥಳದ ಸ್ಮಾರಕ ಉದ್ಘಾಟನೆ: ಸಚಿವ ಈಶ್ವರ್‌ ಖಂಡ್ರೆ

ಬೆಂಗಳೂರು: ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಕಳೆದ 2023 ಡಿಸೆಂಬರ್.4ರಂದು ಆನೆ ಸೆರೆ ಕಾರ್ಯಾಚರಣೆ ವೇಳೆ ವೀರಾವೇಶದಿಂದ ಹೋರಾಡಿ, ಪಶುವೈದ್ಯರು,…

10 hours ago