ದೇಶ- ವಿದೇಶ

ವರ್ತನೆ ತಪ್ಪಿದರೆ ದಾಳಿ ನಿಶ್ಚಿತ : ಇರಾನ್‌ಗೆ ಟ್ರಂಪ್ ಖಡಕ್ ಎಚ್ಚರಿಕೆ

ವಾಷಿಂಗ್ಟನ್ : ಇರಾನ್ ತಪ್ಪು ವರ್ತನೆ ತೋರಿದರೆ ಮತ್ತೆ ಸೇನಾ ದಾಳಿ ಆರಂಭವಾಗಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಇರಾನ್ ಪ್ರಸ್ತಾವ ಕರಡು ನೋಡಿದ್ದೇನೆ. ಪೂರ್ಣ ಪಠ್ಯ ಈಗ ನನ್ನ ಕೈ ಸೇರಲಿದೆ. ಆದರೆ ಕಳೆದ 47 ವರ್ಷದಲ್ಲಿ ಮಾನವತೆಗೆ ಮಾಡಿದ ಹಾನಿಗೆ ಇರಾನ್ ಇನ್ನೂ ದೊಡ್ಡ ಬೆಲೆ ತೆತ್ತಿಲ್ಲ. ಹೀಗಾಗಿ ಈ ಪ್ರಸ್ತಾವ ಒಪ್ಪುವಂತಹದ್ದು ಎಂದು ನನಗೆ ಅನ್ನಿಸುತ್ತಿಲ್ಲ ಎಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

‘ಒಂದು ವೇಳೆ ಅವರು ಕೆಟ್ಟದಾಗಿ ವರ್ತಿಸಿದರೆ, ಏನಾದರೂ ತಪ್ಪು ಮಾಡಿದರೆ… ದಾಳಿ ಮತ್ತೆ ಆರಂಭವಾಗುವ ಸಾಧ್ಯತೆ ಖಂಡಿತ ಇದೆʼ ಎಂದು ಟ್ರಂಪ್ ಇದೇ ವೇಳೆ ಸ್ಪಷ್ಟಪಡಿಸಿದರು.

14 ಅಂಶಗಳ ಪ್ರಸ್ತಾವದಲ್ಲಿ ಏನಿದೆ?

1. ಎಲ್ಲ ರಂಗಗಳಲ್ಲೂ ಕದನ ವಿರಾಮ.
2. ಒಂದು ತಿಂಗಳಲ್ಲಿ ಹಾರ್ಮುಜ್ ಜಲಸಂಧಿ ಪುನಃ ತೆರೆಯುವುದು.
3. ಅಮೆರಿಕದ ನೌಕಾ ದಿಗ್ಬಂಧನ ತೆರವು.
4. ಇರಾನ್ ಮತ್ತು ಲೆಬನಾನ್‌ನಲ್ಲಿ ಶಾಶ್ವತ ಶಾಂತಿಗೆ ಕ್ರಮ.
5. ಪರಮಾಣು ಕಾರ್ಯಕ್ರಮ ಕುರಿತ ಮಾತುಕತೆಯನ್ನು ನಂತರದ ಹಂತಕ್ಕೆ ಮುಂದೂಡುವುದು ಸೇರಿದಂತೆ 14 ಅಂಶಗಳಿವೆ.

ಯುದ್ಧ ವಿರಾಮದ ನಡುವೆಯೂ ಉದ್ವಿಗ್ನತೆ
ಅಮೆರಿಕ-ಇಸ್ರೇಲ್ ಫೆಬ್ರವರಿ ಅಂತ್ಯದಲ್ಲಿ ಆರಂಭಿಸಿದ ದಾಳಿ ಏಪ್ರಿಲ್ 8ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಆದರೆ ಪಾಕಿಸ್ತಾನದಲ್ಲಿ ನಡೆದ ಒಂದು ಸುತ್ತಿನ ಶಾಂತಿ ಮಾತುಕತೆ ವಿಫಲವಾಗಿತ್ತು.

ಇರಾನ್ ಸೇನಾ ಕಮಾಂಡ್‌ನ ಹಿರಿಯ ಅಧಿಕಾರಿ ಮೊಹಮ್ಮದ್ ಜಾಫರ್ ಅಸಾದಿ, ‘ಅಮೆರಿಕದೊಂದಿಗೆ ಮತ್ತೆ ಯುದ್ಧ ಸಂಭವಿಸುವ ಸಾಧ್ಯತೆ ಇದೆ’ ಎಂದು ಶನಿವಾರ ಎಚ್ಚರಿಸಿದ್ದಾರೆ.

ಜಲಸಂಧಿ ಬಿಕ್ಕಟ್ಟು, ತೈಲ ಮಾರುಕಟ್ಟೆಗೆ ಹೊಡೆತ
ಜಾಗತಿಕ ತೈಲ-ಅನಿಲ ಸರಬರಾಜಿನ ಶೇ.20ರಷ್ಟು ಸಾಗುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ನಿರ್ಬಂಧಿಸಿದ್ದರೆ, ಅಮೆರಿಕ ಇರಾನ್ ಬಂದರುಗಳ ಮೇಲೆ ದಿಗ್ಬಂಧನ ಹೇರಿದೆ. ಇದರಿಂದ ತೈಲ ಬೆಲೆ ಗಗನಕ್ಕೇರಿದೆ.

‘ಇರಾನ್ ಪರಮಾಣು ಅಸ್ತ್ರ ಹೊಂದಲು ನಾವು ಬಿಡುವುದಿಲ್ಲ. ಒಪ್ಪಂದ ಬೇಕೆಂದರೆ ಅವರೇ ಮೊದಲು ಬದಲಾಗಬೇಕು’ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.

ಸದ್ಯ ಉಭಯ ದೇಶಗಳ ನಡುವೆ ನೇರ ಮಾತುಕತೆ ಇಲ್ಲ. ಮಧ್ಯವರ್ತಿಗಳ ಮೂಲಕ ಸಂದೇಶ ವಿನಿಮಯ ಮಾತ್ರ ನಡೆಯುತ್ತಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ತಿಳಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

8 mins ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

10 mins ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

12 mins ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

3 hours ago

ಸುಮ್ಮನಿದ್ದರೂ ಪರಿಣಮಿಸುವ ರಂಗಭೂಮಿಯ ಝೆನ್ ಗುರು – ಜಂಬೆ ಮೇಷ್ಟ್ರು

ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…

3 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಪ್ರತಿ ಭಾರತೀಯರ ಎದೆ ಬಡಿತದ ಚೇತನ ಗಾಂಧೀಜಿ:  ಕೈಯಲ್ಲೊಂದು ಕೋಲು ಹಿಡಿದು, ದುಂಡು ಕನ್ನಡಕ ಧರಿಸಿ, ಸತ್ಯ, ಅಹಿಂಸೆಯ ಅಸದಿಂದ…

3 hours ago