ಹೊಸದಿಲ್ಲಿ: ಸತತ ಮೂರನೇ ಬಾರಿಗೆ ಚೀನಾ ಅಧ್ಯಕ್ಷರಾಗಿ ಕ್ಸಿ ಜಿನ್‌ಪಿಂಗ್ ಆಯ್ಕೆಯಾಗಿರುವುದು ಭಾರತ ಸೇರಿ ಅನೇಕ ರಾಷ್ಟ್ರಗಳ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಒಂದು ದಶಕದ ಅವಧಿಯಲ್ಲಿ ಚೀನಾದ ಪ್ರಬಲ ನಾಯಕನಾಗಿ ಗುರುತಿಸಿಕೊಂಡಿರುವ ಜಿನ್‌ಪಿಂಗ್ ಅಧ್ಯಕ್ಷರಾಗಿ ಮರು ಆಯ್ಕೆಯಾಗಿರುವುದು ಜಾಗತಿಕ ವ್ಯಾಪಾರ, ಭದ್ರತೆ, ಮಾನವ ಹಕ್ಕುಗಳ ವಿಚಾರದಲ್ಲಿ ಮುಂದೇನಾಗಲಿದೆಯೋ ಎಂಬ ಆತಂಕ ಸೃಷ್ಟಿಯಾಗಿದೆ.
ಚೀನಾದ ಆರ್ಥಿಕ ಶಕ್ತಿ ಬಳಸಿಕೊಂಡು ವಿದೇಶದಲ್ಲಿ ತನ್ನ ಪ್ರಭಾವ ಹೆಚ್ಚಿಸಲು ಜಿನ್‌ಪಿಂಗ್ ಪ್ರಯತ್ನ ಮಾಡುವ ಸಾಧ್ಯತೆ ಇದೆ. ಸಣ್ಣ ಪುಟ್ಟ ರಾಷ್ಟ್ರಗಳಿಗೆ ಆರ್ಥಿಕ ನೆರವು ನೀಡಿ ದೊಡ್ಡ ರಾಷ್ಟ್ರಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಕಮ್ಯುನಿಸ್ಟ್ ನಾಯಕನ ತಂತ್ರಗಾರಿಕೆಯನ್ನು ಭಾರತ, ಅಮೇರಿಕ, ಸೇರಿ ಹಲವು ದೇಶಗಳು ವಿರೋಧಿಸಿವೆ. ಅಧಿಕಾರ ಆಸೆಯ ಮೂಲಕ ವಿಶ್ವಸಂಸ್ಥೆ ರೂಪಿಸಿರುವ ಮಾನವ ಹಕ್ಕುಗಳ ವ್ಯಾಖ್ಯಾನವನ್ನೇ ಬದಲಿಸಲು ಜಿನ್‌ಪಿಂಗ್ ಪ್ರಯತ್ನ ಮಾಡುತ್ತಾರೆಂದು ಅಮೆರಿಕ ಎಚ್ಚರಿಸಿದೆ.
ಭಾರತಕ್ಕೆ ಯಾವಾಗಲೂ ಸಮಸ್ಯೆ ಮಾಡುವುದಕ್ಕೆ ನೆರೆಯ ಪಾಕಿಸ್ತಾನಕ್ಕೆ ನೆರವು ನೀಡುವುದು. ಮಿಲಿಟರಿ ಹಾಗೂ ಆರ್ಥಿಕ ಸಹಾಯ ಮಾಡುವ ಮೂಲಕ ಪಾಕಿಸ್ತಾನವನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ.
ಜಿನ್‌ಪಿಂಗ್ ಅವರು ಮೂರನೇ ಅವಧಿಗೆ ಆಯ್ಕೆಯಾದ ವೇಳೆಯೇ, ಭಾರತದ ಗಡಿಯಲ್ಲಿ ವೆಸ್ಟರ್ನ್ ಥಿಯೇಟರ್ ಕಮಾಂಡ್ ಅನ್ನು ಮುನ್ನಡೆಸುತ್ತಿದ್ದ ಮೂವರು ಜನರಲ್‌ಗಳಿಗೆ ಬಡ್ತಿ ನೀಡಿದ್ದಾರೆ.
ಜಿನ್‌ಪಿಂಗ್ ಅವಧಿಯಲ್ಲಿ ಟಿಬೆಟ್ ಮೇಲೆ ಪ್ರಭುತ್ವ ಸಾಧಿಸಲು ಗಡಿಯಲ್ಲಿ ಭಾರತಕ್ಕೆ ಸಮಸ್ಯೆ ಮಾಡಲಾಗಿತ್ತು. ಬೌದ್ಧ ಧರ್ಮಗುರು ದಲೈ ಲಾಮಾಗೆ ರಕ್ಷಣೆ ನೀಡಿರುವ ಭಾರತವನ್ನು ಟಿಬೆಟ್ ವ್ಯವಹಾರದಿಂದ ದೂರ ಇಡಲು 2017ರಲ್ಲಿ ಡೋಕ್ಲಾಮ್ ಗಡಿಯಲ್ಲಿ ಶುರು ಮಾಡಿದ ಸಮಸ್ಯೆ 2020ರಲ್ಲಿ ಲಡಾಕ್‌ನಲ್ಲಿ ನಡೆದ ಸಂಘರ್ಷದವರೆಗೂ ಬೆಳೆದಿದ್ದನ್ನು ಗಮನಿಸಬಹುದಾಗಿದೆ.
ಸದ್ದು ಮಾಡದ ಕನ್ನಡ ಶಾಲೆಗಳ ಉಳಿವಿನ ಯೋಜನೆ ವಿಷಯ • ಚಿರಂಜೀವಿ ಸಿ. ಹುಲ್ಲಹಳ್ಳಿ ಮಂಡ್ಯ: ಕನ್ನಡ ನಾಡು ನುಡಿಗೆ…
'ಪುನಶ್ಚತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು' ಕುರಿತ ವಿಚಾರಗೋಷ್ಠಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕೈ ಪದ್ಮಶಾಲಿ ಆಗ್ರಹ ಜಿ.ತಂಗಂ ಗೋಪಿನಾಥಂ ಮಂಡ್ಯ:…
ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ಕುರಿತ ಗೋಷ್ಠಿಯಲ್ಲಿ ಅಮೆರಿಕ ಕನ್ನಡ ಕೂಟ (ಅಕ್ಕ)ದ ಅಧ್ಯಕ್ಷ ಅಮರ್ನಾಥ್ಗೌಡ ಹೇಮಂತ್ ಕುಮಾರ್…
`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…