ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳ ಪೈಕಿ ‘ಎ++’ ಶ್ರೇಣಿ ಪಡೆದ ಏಕೈಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದಲ್ಲಿ ಜೆಎನ್‌ಯು ನಂತರ ಈ ಸಾಧನೆ ಮಾಡಿದ ಸರ್ಕಾರಿ ವಿಶ್ವವಿದ್ಯಾಲಯವಾಗಿದೆ ಎಂದು ಬೆಂಗಳೂರು ವಿವಿ ಕುಲಪತಿ ಡಾ. ಎಸ್.ಎಂ. ಜಯಕರ್ ತಿಳಿಸಿದರು.
ಜ್ಞಾನಜ್ಯೋತಿ ಸಭಾಂಗಣದದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಹಂಚಿಕೊಂಡ ಅವರು, ದೇಶದಲ್ಲಿಯೇ ಮೊದಲ ಡಿಜಿಟಲ್ ಮೌಲ್ಯಮಾಪನ ಕೇಂದ್ರ, ಪಠ್ಯಕ್ರಮ, ಬೋಧನೆ ಹಾಗೂ ಕಲಿಕೆ, ಮೌಲ್ಯಮಾಪನ, ಸಂಶೋಧನೆ, ಮೂಲಸೌಕರ್ಯ, ಕಲಿಕಾ ಸಂಪನ್ಮೂಲ, ವಿದ್ಯಾರ್ಥಿಗಳ ಪ್ರಗತಿ, ಆಡಳಿತ ಮತ್ತು ನಿರ್ವಹಣೆಯಲ್ಲಿ ಉತ್ತಮ ಗುಣಮಟ್ಟ ಹೊಂದಿರುವ ಬೆಂಗಳೂರು ವಿಶ್ವವಿದ್ಯಾಲಯವು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯಿಂದ (ನ್ಯಾಕ್) ‘ಎ++’ ಶ್ರೇಣಿ ಪಡೆದಿದೆ ಎಂದರು.
ವಿವಿಯು 2018ರಿಂದ 2022ರ ವರೆಗಿನ ಮೌಲ್ಯಮಾಪನಾ ಅವಧಿಯ ಸ್ವಯಂಅಧ್ಯಯನ ವರದಿಯನ್ನು ನ್ಯಾಕ್‌ಗೆ ಸಲ್ಲಿಸಿತ್ತು. ಕೆಲವೇ ಕೆಲವು ಶೈಕ್ಷಣಿಕ ಸಂಸ್ಥೆಗಳು 4ನೇ ಆವೃತ್ತಿಯಲ್ಲಿ ನ್ಯಾಕ್‌ನಿಂದ ಮಾನ್ಯತೆ ಪಡೆದಿವೆ. ಈ ಮೂಲಕ ವಿವಿ ಸಂಪೂರ್ಣ ಸ್ವಾಯತ್ತತೆ ಪಡೆಯುವ ಅವಕಾಶ ಹೊಂದಿದೆ ಎಂದು ಹೇಳಿದರು.
4ರಲ್ಲಿ 3.75 ಅಂಕ: ಎ++ ಶ್ರೇಣಿ ಪಡೆಯಲು ನ್ಯಾಕ್ ನಿಗದಿ ಮಾಡಿದ್ದ ವಿವಿಧ 7 ಮಾನದಂಡಗಳಾದ ಪಠ್ಯಕ್ರಮ, ಬೋಧನೆ ಹಾಗೂ ಕಲಿಕೆ, ಮೌಲ್ಯಮಾಪನೆ, ಸಂಶೋಧನೆ, ಮೂಲಸೌಕರ್ಯ, ಕಲಿಕಾ ಸಂಪನ್ಮೂಲ, ವಿದ್ಯಾರ್ಥಿಗಳ ಪ್ರಗತಿ, ಆಡಳಿತ ಮತ್ತು ನಿರ್ವಹಣೆ, ಸಾಂಸ್ಥಿಕ ಮೌಲ್ಯಗಳು ಮತ್ತು ಉತ್ತಮ ಅಭ್ಯಾಸಗಳಲ್ಲಿ ವಿವಿಯು 4 ಅಂಕಗಳಲ್ಲಿ ಸರಾಸರಿ 3.75 ಅಂಕ ಗಳಿಸುವ ಮೂಲಕ ಅತ್ಯುತ್ತಮ ಸಾಧನೆಗೈದಿದೆ ಎಂದು ವಿವರಿಸಿದರು.
ಕಳೆದ 5 ವರ್ಷಗಳಲ್ಲಿ ಶೈಕ್ಷಣಿಕ ಮತ್ತು ಮೂಲ ಸೌಕರ್ಯದಲ್ಲಿ ವಿವಿಯು ಉತ್ಕೃಷ್ಟತೆ ಸಾಧಿಸಿದೆ. ಹಿಂದಿನ 2 ಆವೃತ್ತಿಗಳಲ್ಲಿ 3.16 ಸಿಜಿಪಿಎ ಅಂಕಗಳೊಂದಿಗೆ ಮಾನ್ಯತಾ ಮಂಡಳಿಯಿಂದ ‘ಎ’ ಶ್ರೇಣಿ ಪಡೆದಿತ್ತು. ಹಲವು ಆಯಾಮಗಳಲ್ಲಿ ತನ್ನ ಕಾರ್ಯದಕ್ಷತೆ ಹೆಚ್ಚಿಸಿಕೊಂಡಿರುವ ವಿವಿಯು ‘ಎ++’ ಶ್ರೇಣಿಯನ್ನು ಗಳಿಸಲು ಸಾಧ್ಯವಾಗಿದೆ ಎಂದರು.
ಡಿಜಿಟಲ್ ಮೌಲ್ಯಮಾಪನ ಕೇಂದ್ರ: ವಿವಿಯಲ್ಲಿರುವ ಡಿಜಿಟಲ್ ಮೌಲ್ಯಮಾಪನಾ ಕೇಂದ್ರವು ಸರ್ಕಾರಿ ವಿವಿಗಳ ಮಟ್ಟಿಗೆ ದೇಶದಲ್ಲಿಯೇ ಮೊದಲ ಡಿಜಿಟಲ್ ಮೌಲ್ಯಮಾಪನಾ ಕೇಂದ್ರವಾಗಿದೆ. ಇದರ ಜತೆಗೆ ಕಳೆದ 5 ವರ್ಷಗಳಲ್ಲಿ ಶೇ.83 ಪಠ್ಯಕ್ರಮವನ್ನು ಪರಷ್ಕರಣೆ ಮಾಡಲಾಗಿದೆ. 108 ಯುಜಿ ಮತ್ತು ಪಿಜಿ ಕೋರ್ಸ್‌ಗಳಿದ್ದು, ಇದರಲ್ಲಿ 32 ಕೋರ್ಸ್‌ಗಳನ್ನು ಹೊಸದಾಗಿ ಆರಂಭಿಸಲಾಗಿದೆ. 42 ಪಿಎಚ್.ಡಿ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ ಎಂದರು.
53 ಪೇಟೆಂಟ್‌ಗಳು, ಶೇ.92 ಬೋಧನಾ ಸಿಬ್ಬಂದಿಯು ಪಿಎಚ್.ಡಿ ಪದವಿ ಹೊಂದಿದ್ದಾರೆ. ಕಳೆದ 20 ವರ್ಷಗಳಿಂದ ಕಾಯಂ ಸಿಬ್ಬಂದಿ ಬೋಧನೆ, 5 ವರ್ಷಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಪಿ.ಎಚ್.ಡಿ. ಮಂಡನೆಯಾಗಿವೆ ಎಂದು ಹೇಳಿದರು.
136 ಕೋಟಿ ರೂ. ಸಂಶೋಧನಾ ಅನುದಾನ: ವಿವಿಯಲ್ಲಿ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲು ದೇಶದ ಪ್ರತಿಷ್ಠಿತ ಸಂಸ್ಥೆಗಳಾದ ಐಸಿಎಂಆರ್, ಐಸಿಎಸ್‌ಆರ್ ಸೇರಿ ವಿವಿಧ ಸಂಸ್ಥೆಗಳಿಂದ 136 ಕೋಟಿ ರೂ. ಸಂಶೋಧನಾ ಅನುದಾನ ಬಂದಿದೆ. ವಿವಿಧ ನಾಗರಿಕ ಸೇವೆ ಮತ್ತು ಪರಿಸರಕ್ಕೆ ಸಂಬಂಧಿಸಿದ ಕಾರ್ಯಕ್ಕೆ 4 ಕೋಟಿ ರೂ. ಅನುದಾನ ಬಂದಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿವಿ ಕುಲಸಚಿವ ಡಾ.ಸಿ. ಶ್ರೀನಿವಾಸ್, ವಿತ್ತಾಧಿಕಾರಿ ಅಜಿತ್ ಕುಮಾರ್ ಹೆಗಡೆ ಉಪಸ್ಥಿತರಿದ್ದರು.
ಸಿದ್ದಾಪುರ :- ನಗರದಲ್ಲಿ ನಡೆದ ದರೋಡೆ ಪ್ರಕರಣ ಭೇದಿಸಲು ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ…
ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಸಮೀಪದ ಸೀರಗೊಡು ಗ್ರಾಮದ ಸೂಳಿಮೇಡು ಅರಣ್ಯ ಪ್ರದೇಶದಲ್ಲಿ ಸುಮಾರು ಆರು ತಿಂಗಳ ಚಿರತೆ ಮರಿಯನ್ನು ಗ್ರಾಮಸ್ಥರು…
ಹುಣಸೂರು : ಹುಣಸೂರು ಪಟ್ಟಣದಲ್ಲಿಂದು ಹಾಡಹಗಲೇ ಚಿನ್ನದಂಗಡಿ ದರೋಡೆ ನಡೆದಿದೆ. ಬಸ್ ನಿಲ್ದಾಣದ ಹಿಂಭಾಗದಲ್ಲಿ ಬೈಪಾಸ್ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್…
ಶ್ರೀರಂಗಪಟ್ಟಣ : ತಾಲ್ಲೂಕಿನ ಪಾಲಹಳ್ಳಿಯ ವರುಣಾ ನಾಲೆಯಲ್ಲಿ ಬಟ್ಟೆ ತೊಳೆಯಲು ಬಂದ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಮತಾ…
ಕರಾಚಿ : ಕಳೆದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ…
ಚೆನ್ನೈ : ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಡಿಸೆಂಬರ್ 27 ಮಲೇಷ್ಯಾನಲ್ಲಿ ಅದ್ಧೂರಿಯಾಗಿ…