ನವದೆಹಲಿ: ‘ಸಾಮಾಜಿಕ ಜಾಲತಾಣ ಟ್ವಿಟರ್ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಮತಿಸುತ್ತದೆ. ಆದರೆ, ಬೇಕಾಬಿಟ್ಟಿಯಾಗಿ ಮಾಡಿದ ಟ್ವೀಟ್‌ಗಳೆಲ್ಲವೂ ಮುಕ್ತವಾಗಿ ಬಳಕೆದಾರರನ್ನು ಇನ್ನುಮುಂದೆ ತಲುಪಲು ಅವಕಾಶವಿಲ್ಲ. ನಿಯಮಗಳನ್ನು ಉಲ್ಲಂಘಿಸುವ ಟ್ವೀಟ್‌ಗಳು ಟ್ವಿಟರ್ ತಾಣದಲ್ಲಿ ಗೋಚರಿಸದಂತೆ ನಿರ್ಬಂಧಿಸಲಾಗುತ್ತದೆ’ ಎಂದು ಕಂಪನಿಯು ತನ್ನ ಪರಿಷ್ಕೃತ ನೀತಿಯಲ್ಲಿ ಹೇಳಿದೆ.
ಆರಂಭದಲ್ಲಿ ದ್ವೇಷಪೂರಿತ ನಡವಳಿಕೆಯಂಥ ನಿಯಮಗಳ ಉಲ್ಲಂಘನೆಯ ಟ್ವೀಟ್‌ಗಳಿಗೆ ವಿಜಿಬಿಲಿಟಿ ಫಿಲ್ಟರ್ (ಗೋಚರ ಸೋಸುಕ) ಅಳವಡಿಸಿ, ನಂತರ ಅದನ್ನು ಇತರ ಡೊಮೇನ್‌ಗಳಿಗೂ ವಿಸ್ತರಿಸಲಿದೆ. ಟ್ವಿಟರ್ ಬಳಕೆದಾರರಿಗೆ ತಮ್ಮ ಅಭಿಪ್ರಾಯಗಳನ್ನು ಮತ್ತು ಆಲೋಚನೆಗಳನ್ನು ಸೆನ್ಸಾರ್‌ಶಿಪ್ ಭಯವಿಲ್ಲದೆ ವ್ಯಕ್ತಪಡಿಸುವ ಹಕ್ಕಿದೆ ಎಂದು ಸಂಸ್ಥೆ ತಿಳಿಸಿದೆ.
‘ನಿಯಮಗಳನ್ನು ಉಲ್ಲಂಘಿಸುವ ವಿಷಯದಿಂದ ಬಳಕೆದಾರರನ್ನು ನಮ್ಮ ಜಾಲತಾಣದಲ್ಲಿ ಸುರಕ್ಷಿತವಾಗಿರಿಸುವುದು ನಮ್ಮ ಜವಾಬ್ದಾರಿ ಮತ್ತು ನಂಬಿಕೆ. ಈ ನಂಬಿಕೆಗಳು ವಾಕ್ ಸ್ವಾತಂತ್ರ್ಯದ ಅಡಿಪಾಯವಾಗಿದೆ. ಹಾಗಂಥ, ನಿಯಮ ಉಲ್ಲಂಘಿಸಿದ ಟ್ವೀಟ್‌ಗಳಿಗೆ ಮುಕ್ತವಾಗಿ ಬಳಕೆದಾರರನ್ನು ತಲುಪುವ ಸ್ವಾತಂತ್ರ್ಯವಿದೆ ಎಂದಲ್ಲ. ನಮ್ಮ ನೀತಿಗಳನ್ನು ಉಲ್ಲಂಘಿಸುವ ಟ್ವೀಟ್‌ಗಳು ಗೋಚರಿಸದಂತೆ, ಅವು ತಲುಪುವ ವ್ಯಾಪ್ತಿಯನ್ನು ನಿರ್ಬಂಧಿಸುವುದು ನಮ್ಮ ತತ್ವಾದರ್ಶವಾಗಿದೆ’ ಎಂದು ಸಂಸ್ಥೆ ಹೇಳಿದೆ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…