ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ಪಕ್ಷಗಳ ನಾಯಕರು ಕೇಳುತ್ತಿರುವ ಪ್ರಶ್ನೆ ಇದು.
ಲೋಕಸಭೆ ಸದಸ್ಯತ್ವದಿಂದ ರಾಹುಲ್ ಗಾಂಧಿ ಅವರನ್ನು ಅಮಾನತು ಮಾಡಿದ ಆದೇಶ ಹೊರಬಿದ್ದ ಕೂಡಲೇ, ವಿವಿಧ ವಿರೋಧ ಪಕ್ಷಗಳ ನಾಯಕರು ಈ ಕ್ರಮವನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ. ಜತೆಗೆ, ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಲಲಿತ್ ಮೋದಿ ಮತ್ತು ನೀರವ್ ಮೋದಿ ಹೆಸರನ್ನು ಬಳಸಿ ಟ್ವೀಟ್ ಮತ್ತು ಪೋಸ್ಟ್ ಮಾಡುತ್ತಿದ್ದಾರೆ. ಎರಡೂ ಹೆಸರುಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ನಲ್ಲಿವೆ.
ನೀರವ್ ಮೋದಿ ಕಳ್ಳನಲ್ಲವೇ? ಲಲಿತ್ ಮೋದಿ ಕಳ್ಳನಲ್ಲವೇ? ಇವರನ್ನು ರಕ್ಷಿಸಲು ಬಿಜೆಪಿ ಮುಂದಾಗುತ್ತಿರುವುದೇಕೆ? ಕಳ್ಳರನ್ನು ಕಳ್ಳರು ಎಂದು ಕರೆಯಲು ಇವರ ಆಕ್ಷೇಪವೇಕೆ? ಅದಾನಿ ವಿಚಾರದಿಂದ ಗಮನ ಬೇರೆಡೆಗೆ ಸೆಳೆಯಲೆಂದೇ ಇದನ್ನೆಲ್ಲಾ ಮಾಡಲಾಗುತ್ತಿದೆ. ಆದರೆ ಅದು ಸಾಧ್ಯವಾಗುವುದಿಲ್ಲ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾತೆ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.
ರಾಹುಲ್ ಎಲ್ಲ ಮೋದಿಗಳೂ ಕಳ್ಳರು ಎಂದಿರಲಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ. ‘ರಾಹುಲ್ ಗಾಂಧಿ ಅವರು ನೀರವ್ ಮೋದಿ, ಲಲಿತ್ ಮೋದಿ, ಮೆಹುಲ್ ಚೋಕ್ಸಿಯನ್ನು ಕಳ್ಳರು ಎಂದಿದ್ದರು. ರಾಹುಲ್, ‘ಎಲ್ಲಾ ಕಳ್ಳರ ಹೆಸರಿನಲ್ಲಿ ಮೋದಿ ಉಪನಾಮ ಏಕೆ ಇದೆ’ ಎಂದು ಕೇಳಿದ್ದರು. ‘ಎಲ್ಲಾ ಮೋದಿಗಳೂ ಕಳ್ಳರು’ ಎಂದಿರಲಿಲ್ಲ. ಆದರೂ ಯಾವುದೋ ಮೋದಿಯ ಮಾನಕ್ಕೆ ಹಾನಿಯಾಗಿದೆ ಎಂದು ರಾಹುಲ್ ವಿರುದ್ಧ ದೂರು ನೀಡಲಾಗಿದೆ ಮತ್ತು ಎರಡು ವರ್ಷ ಜೈಲುಶಿಕ್ಷೆ ನೀಡಲಾಗಿದೆ. ಅವರ ಸಂಸದನ ಸ್ಥಾನವನ್ನೂ ತೆರವು ಮಾಡಲಾಗಿದೆ. ಇದು ಭಾರತದ ಪ್ರಜಾಪ್ರಭುತ್ವದ ಇಂದಿನ ಸ್ಥಿತಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ಮೋದಿ ಸರ್ಕಾರದ ಆತ್ಮೀಯ ಮೋದಿ ಸೋದರರಾದ ನೀರವ್ ಮೋದಿ–ಲಲಿತ್ ಮೋದಿ, ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ದೇಶದ ಬಡಜನರ ಹಣ ದೋಚಿ ವಿದೇಶಕ್ಕೆ ಓಡಿಹೋಗಿದ್ದಾರೆ. ತನಿಖಾ ಸಂಸ್ಥೆಗಳಿಗೆ ಈ ಜನರು ಕಾಣುವುದಿಲ್ಲ. ಸರ್ಕಾರವನ್ನು ಪ್ರಶ್ನಿಸುವವರಷ್ಟೇ ಈ ಸಂಸ್ಥೆಗಳಿಗೆ ಕಾಣುತ್ತಾರೆ’ ಎಂದು ಆರ್‌ಜೆಡಿ ಟ್ವೀಟ್ ಮಾಡಿದೆ.
ಜೆರುಸೇಲಂ: ಭೀಕರ ವಿಮಾನ ಅವಘಡವನ್ನು ತಪ್ಪಿಸಿ 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ…
ಮಂಡ್ಯ: ರಾಜ್ಯದ ಸಚಿವರಿಗೆ ಮುಜುಗರ ಉಂಟುಮಾಡಲು ಕೇಂದ್ರ ಸಚಿವರೊಬ್ಬರು ಹಾಗೂ ಕರ್ನಾಟಕದ ಬಿಜೆಪಿ ನಾಯಕರೊಬ್ಬರು ಸ್ಟಿಂಗ್ ಆಪರೇಷನ್‌ಗೆ ಸಂಚು ರೂಪಿಸಿದ್ದಾರೆ…
ಸಿದ್ದಾಪುರ: ಸಿದ್ದಾಪುರ ಮೈಸೂರು ಮುಖ್ಯ ರಸ್ತೆಯ ಘಟ್ಟತಳ ಹೇರೂರು ಎಸ್ಟೇಟ್ ಬಳಿ ಗುರುವಾರ ರಾತ್ರಿ ಹುಲಿ ಕಾಣಿಸಿಕೊಂಡಿದ್ದು ಬಳಿಕ ಸಮೀಪದ…
ಒಂದು ಕಾಲದಲ್ಲಿ (ಒಂದಾನೊಂದು ಕಾಲದಲ್ಲಿ ಎಂಬ ಮಾತಿನಂತೆ) ಎಟಿಎಂ ಯಂತ್ರಗಳಿಂದ ಹಣ ಡ್ರಾ ಮಾಡಿದಾಗ ಸಾಮಾನ್ಯವಾಗಿ ಹೊಸ ಗರಿಗರಿನೋಟುಗಳು ಬರುತ್ತಿದ್ದವು.…
ಮೈಸೂರು ನಗರವನ್ನು ಫ್ಲೆಕ್ಸ್ ಮುಕ್ತವಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೇ ಆಸಕ್ತಿ ವಹಿಸಿರುವುದು ಸ್ವಾಗತಾರ್ಹವಾಗಿದೆ. ದಸರಾ ಸಮಯದಲ್ಲಿ ಮೈಸೂರಿನಲ್ಲಿ ತಮ್ಮದೂ ಸೇರಿದಂತೆ ಯಾರ ಫ್ಲೆಕ್ಸ್ ಅಥವಾ…
ಖ್ಯಾತನಾಮರಿಗೆ ವೇದಿಕೆಯ ಕಾರ್ಯಕ್ರಮದಲ್ಲಿ ಸ್ವಲ್ಪ ಕಡಿಮೆ ಸಮಯ ದೊರೆತರೂ ಪರವಾಗಿಲ್ಲ. ಅರಳುವ ಪ್ರತಿಭೆಗಳಿಗೆ ಸಾಕಷ್ಟು ಸಮಯ ಸಿಗಬೇಕೆಂಬ ಆಶಯ ಇರಬೇಕೆಂದು…